Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ!
ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದ್ರಲ್ಲೂ ನೀವು ಸೇವಿಸುವ ಆಹಾರದ ಕಾರಣದಿಂದ ದೇಹದ ಉಷ್ಣತೆ ಬಹಳ ಹೆಚ್ಚಾಗಬಹುದು. ಹಾಗೆ ಹೆಚ್ಚು ಉಷ್ಣತೆಯಾದರೆ ಉರಿಯೂತ, ಜೀರ್ಣಕ್ರಿಯೆ ಸಮಸ್ಯೆ, ಕಣ್ಣುಉರಿ, ನಿದ್ರಾಹೀನತೆ ಸೇರಿದಂತೆ ನಿತ್ಯದ ಚಟುವಟಿಕೆಯಲ್ಲಿ ದೇಹವು ದಣಿಯುವುದು ನೋಡಬಹುದು.
ಹಾಗೆ ದೇಹಕ್ಕೆ ಈ ಬಿಸಲಿನ ಸಮಯದಲ್ಲಿ ತಂಪಾಗಿಡುವುದು ಮುಖ್ಯವಾಗುತ್ತೆ. ಸಾಮಾನ್ಯವಾಗಿ ದೇಹವನ್ನು ತಂಪಾಗಿಸಲು ನೀರು ಹೆಚ್ಚಾಗಿ ಕುಡಿಯುವುದು, ಜ್ಯೂಸ್‌ಗಳು, ತಂಪು ಪಾನಿಯದ ಮೊರೆ ಹೋಗುತ್ತೀರಿ. ಮನೆಯಲ್ಲೇ ಮಾಡುವ ಹಲವು ಪಾನಿಯಗಳು ನಿಮ್ಮ ದೇಹಕ್ಕೆ ತಂಪು ತರಲಿವೆ. ಅದೇ ರೀತಿ ನಿಮ್ಮ ದೇಹವು ತಂಪಾಗಿಡುವ ಹಲವು ರೀತಿಯ ಪಾನಿಯಗಳ ಮನೆಯಲ್ಲೇ ಮಾಡಿ ಸವಿದಿರುತ್ತೀರಿ.

ನಾವಿಂದು ಮನೆಯಲ್ಲೇ ಯಾವ ರೀತಿ ದೇಹವನ್ನು ತಂಪಾಗಿಡುವ ಬಾರ್ಲಿ ಜ್ಯೂಸ್ ಮಾಡುವ ಕುರಿತು ತಿಳಿಯೋಣ. ಈ ಬಾರ್ಲಿ ದೇಹಕ್ಕೆ ಬಹಳ ತಂಪು ತರುವ ವಸ್ತು. ಈ ಬಾರ್ಲಿಯ ನೀರು ದೇಹವನ್ನು ತಂಪಾಗಿಡಲಿದೆ. ಹಾಗೆ ಇದರಿಂದ ನಿಮ್ಮ ಆರೋಗ್ಯ ಸುಧಾರಿಸುವ ಜೊತೆಗೆ ತೂಕ ಇಳಿಸುವುದಕ್ಕೂ ಸಹಕಾರಿಯಾಗಿರಲಿದೆ. ಹಾಗಾದ್ರೆ ಮನೆಯಲ್ಲಿ ಬಾರ್ಲಿ ಜ್ಯೂಸ್ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಾರ್ಲಿ ಜ್ಯೂಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬೆಲ್ಲಾ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.
ಬಾರ್ಲಿ ಜ್ಯೂಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬಾರ್ಲಿ
- ಬೆಲ್ಲ
- ಏಲಕ್ಕಿ
- ಉಪ್ಪು
- ನಿಂಬೆ ಹಣ್ಣು
ಬಾರ್ಲಿ ಜ್ಯೂಸ್ ಮಾಡುವ ವಿಧಾನವೇನು?
ಮೊದಲಿಗೆ ಒಂದು ಬೌಲ್‌ಗೆ ಅಳತೆ ಕಪ್‌ನಲ್ಲಿ 1 ಕಪ್ ಬಾರ್ಲಿ ಹಾಕಿ. ಅದಕ್ಕೆ ನೀರು ಹಾಕಿಕೊಂಡು 2ರಿಂದ 3 ಬಾರಿ ತೊಳೆದುಕೊಳ್ಳಿ. ಅನಂತರ ಬಾರ್ಲಿಯನ್ನು ಕುಕ್ಕರ್‌ಗೆ ಹಾಕಿ ಅದಕ್ಕೆ 5ರಷ್ಟು ನೀರನ್ನು ಹಾಕಿ 2 ಕಪ್ ಬಾರ್ಲಿಗೆ 6ರಿಂದ 8 ಕಪ್ ನೀರು ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಕನಿಷ್ಠ 5 ಸೀಟಿ ಆದರೂ ಹೊಡೆಯಲು ಬಿಡಿ.
ಈಗ ಕುಕ್ಕರ್‌ನಿಂದ ಬಾರ್ಲಿ ಗಂಜಿಯನ್ನು ತೆಗೆದು ಜರಡಿ ಹಿಡಿದು ಗಂಜಿ ಹಾಗೂ ನೀರನ್ನು ಬೇರೆ ಮಾಡಿಕೊಳ್ಳಬೇಕು. ಈಗ ಈ ಬಾರ್ಲಿ ನೀರನ್ನು ಒಂದು ಗ್ಲಾಸ್‌ಗೆ ಹಾಕಿಕೊಳ್ಳಿ. ಅನಂತರ ಈ ಬಾರ್ಲಿ ನೀರಿಗೆ ಏಲಕ್ಕಿ, ಚೂರು ಬೆಲ್ಲ, ನಿಂಬೆ ಹಣ್ಣಿನ ರಸ ಸಹ ಹಾಕಿಕೊಳ್ಳಿ.
ಇದನ್ನು ಫ್ರಿಡ್ಜ್‌ನಲ್ಲಿ ಇಟ್ಟು ಇಲ್ಲವೆ ಹಾಗೆ ಬಿಸಿಯಾಗಿದ್ದಾಗಲು ಕುಡಿಯಬಹುದು. ಇದನ್ನು ಯಾರು ಬೇಕಾದರು ಕುಡಿಬಹುದು. ಬಿಪಿ, ಶುಗರ್ ಇದ್ದವರು ಸಹ ಹಾಗೆ ಮಕ್ಕಳಿಗೂ ಸಹ ಇದನ್ನು ಕುಡಿಯಲು ನೀಡಬಹುದು. ಇದು ನಿಮ್ಮ ದೇಹವನ್ನು ತಂಪಾಗಿಡಲಿದೆ. ಹಾಗೆ ತೂಕ ಇಳಿಸಿಕೊಳ್ಳಲು ಸಹ ಬಹಳ ಉತ್ತಮ ಆಯ್ಕೆಯಾಗಿರಲಿದೆ.
ಬಾರ್ಲಿಯ ಪ್ರಯೋಜನಗಳು
- ಬಾರ್ಲಿ ಒಂದು ಉತ್ತಮ ಮೂತ್ರವರ್ಧಕವಾಗಿದ್ದು ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಸಹಕರಿಸುತ್ತದೆ.
- ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ ಬಾರ್ಲಿಯ ಸೇವನೆಯಿಂದ ದೇಹದ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಹರಿಯಲು ನೆರವಾಗುತ್ತದೆ.
- ವಿಶೇಷವಾಗಿ ಬೇಸಿಗೆಯಲ್ಲಿ ಖಾರವಾದ ಊಟವನ್ನು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಉರಿಯುಂಟಾಗುವುದರಿಂದ ಬಾರ್ಲಿ ತಡೆಯುತ್ತದೆ.
- ಬಾರ್ಲಿ ನೀರಿನಲ್ಲಿ ಹೆಚ್ಚಿನ ನಾರು ಇರುವುದರಿಂದ ಪಚನಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ.
- ಅತಿಸಾರದಿಂದ ಬಳಲುತ್ತಿರುವವರಿಗೆ ತಕ್ಷಣವೇ ಒಂದು ಲೋಟ ಬಾರ್ಲಿ ನೀರನ್ನು ಕುಡಿಸುವ ಮೂಲಕ ಅತಿಸಾರವನ್ನು ನಿಲ್ಲಿಸಬಹುದು



Click it and Unblock the Notifications
