For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಗ್ಯಾಸ್ ಕಡಿಮೆ ಮಾಡಲು 7 ಉಪಾಯ

|

ಗ್ಯಾಸ್ಟ್ರಿಕ್ ಪ್ರಾಬ್ಲಮ್ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ನಮ್ಮ ಜೀವನ ಶೈಲಿ, ಆಹಾರಕ್ರಮ, ವ್ಯಾಯಾಮ ಇಲ್ಲದಿರುವುದು ಇವೆಲ್ಲಾ ಗ್ಯಾಸ್ಟ್ರಿಕ್ ಬರಲು ಮುಖ್ಯ ಕಾರಣವಾಗಿದೆ. ಹೊತ್ತಿಗೆ ಸರಿಯಾಗಿ ಊಟ ಮಾಡದೆ ಇದ್ದರೆ, ಅಧಿಕ ಗ್ಯಾಸ್ ಇರುವ ಆಹಾರಗಳನ್ನು ತಿನ್ನುವುದರಿಂದ ಈ ರೀತಿಯ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.

ಗ್ಯಾಸ್ ಸಮಸ್ಯೆ ಬಂದರೆ ಜನರ ಮಧ್ಯದಲ್ಲಿ ಹೊಟ್ಟೆಯ ಗ್ಯಾಸ್ ಹೋದರೆ ತುಂಬಾ ಸಂಕೋಚವಾಗುತ್ತದೆ. ಆದ್ದರಿಂದ ಗ್ಯಾಸ್ ಸಮಸ್ಯೆ ಬಂದರೆ ಹೊಟ್ಟೆಯಲ್ಲಿ ನೋವು ಕಂಡು ಬರುವುದಲ್ಲದೆ ನಮ್ಮನ್ನು ಸಂಕೋಚ ಪಡುವಂತೆ ಮಾಡುತ್ತದೆ.

ಇಲ್ಲಿ ಹೇಳಿರು ಸಲಹೆಗಳು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯನ್ನು ಕಡಿಮೆ ಮಾಡುವಲ್ಲಿ ತುಂಬಾ ಸಹಾಯಕಾರಿಯಾಗಿದೆ.

1. ತುತ್ತನ್ನು ಸ್ವಲ್ಪ-ಸ್ವಲ್ಪ ತಿನ್ನುವುದು

1. ತುತ್ತನ್ನು ಸ್ವಲ್ಪ-ಸ್ವಲ್ಪ ತಿನ್ನುವುದು

ಆಹಾರವನ್ನು ಸ್ವಲ್ಪ-ಸ್ವಲ್ಪವಾಗಿ ತಿನ್ನಬೇಕು. ಆಹಾರವನ್ನು ಬಾಯಿಗೆ ತುರುಕಿಕೊಂಡು ತಿನ್ನಬೇಡಿ. ಸ್ವಲ್ಪ ಆಹಾರವನ್ನು ಬಾಯಿಗೆ ಹಾಕಿ ನಿಧಾನಕ್ಕೆ ಜಗಿಯಬೇಕು. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುವುದು,ಇದರಿಂದಾಗಿ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಕಡಿಮೆಯಾಗುವುದು.

2. ಸೋಡಾ ಮತ್ತು ಜ್ಯೂಸ್

2. ಸೋಡಾ ಮತ್ತು ಜ್ಯೂಸ್

ನಾವು ಹೊಟ್ಟೆಯಲ್ಲಿರುವ ಗ್ಯಾಸ್ ಅನ್ನು ಸೋಡಾ ಹೊರಗೆ ಹಾಕಲು ಸಹಕಾರಿಯಾಗಿದೆ ಎಂದು ಸೋಡಾ ಕುಡಿಯುತ್ತೇವೆ ಅಲ್ಲವೇ? ಆದರೆ ಸೋಡಾದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಸಕ್ಕರೆ ಹಾಕಿದ ಹಣ್ಣಿನ ಜ್ಯೂಸ್ ಕುಡಿದರೆ ಕೂಡ ಗ್ಯಾಸ್ ಸಮಸ್ಯೆ ಕಂಡು ಬರುವುದು.

3. ಚ್ಯೂಯಿಂಗ್ ಗಮ್

3. ಚ್ಯೂಯಿಂಗ್ ಗಮ್

ಚ್ಯೂಯಿಂಗ್ ಗಮ್ ಅನ್ನು ಬಾಯಲ್ಲಿ ಹಾಕಿ ತುಂಬಾ ಹೊತ್ತು ಜಗಿಯುತ್ತಾ ಇರಬೇಡಿ. ಈ ರೀತಿ ಜಗಿಯುತ್ತಾ ಇದ್ದರೆ ಬಾಯಿಯ ಮುಖಾಂತರ ಗಾಳಿ ಹೊಟ್ಟೆಯನ್ನು ಸೇರಿ ಅಜೀರ್ಣ ಉಂಟಾಗುತ್ತದೆ ಹಾಗೂ ಗ್ಯಾಸ್ ಸಮಸ್ಯೆ ಹೆಚ್ಚಾಗುವುದು.

4. ನಡೆಯುವುದು

4. ನಡೆಯುವುದು

ಊಟದ ನಂತರ 10 ನಿಮಿಷ ನಡೆಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಂಡು ಬರುವುದಿಲ್ಲ. ಅಲ್ಲದೆ ಈ ರೀತಿ ಮಾಡಿದರೆ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ, ದೇಹದೆ ತೂಕ ಕೂಡ ಹೆಚ್ಚಾಗುವುದಿಲ್ಲ.

5. ಧೂಮಪಾನ

5. ಧೂಮಪಾನ

ಧೂಮಪಾನ ತರುವ ನಾನಾ ಆರೋಗ್ಯ ಸಮಸ್ಯೆಗಳಲ್ಲಿ ಗ್ಯಾಸ್ ಟ್ರಬಲ್ ಕೂಡ ಒಂದು, ಧೂಮಪಾನದಿಂದ ಗ್ಯಾಸ್ಟ್ರಿಕ್ ಉಂಟಾಗುತ್ತದೆ ಅನ್ನುವ ವಿಷಯ ತುಂಬಾ ಮಂದಿ ಧೂಮಪಾನಿಗಳಿಗೆ ಗೊತ್ತಿರುವುದೇ ಇಲ್ಲ.

6. ಮನೆಮದ್ದು

6. ಮನೆಮದ್ದು

ಊಟದ ನಂತರ ಸೋಂಪು ತಿನ್ನುವುದು, ನಕ್ಷತ್ರ ಮೊಗ್ಗು, ಚಕ್ಕೆ, ಲವಂಗ, ಏಲಕ್ಕಿ ಇವುಗಳನ್ನು ಆಹಾರ ತಯಾರಿಸುವಾಗ ಸೇರಿಸುವುದು ಒಳ್ಳೆಯದು.

7. ನೀರು

7. ನೀರು

ದಿನದಲ್ಲಿ 8-10 ಗ್ಲಾಸ್ ನೀರನ್ನು ಪ್ರತಿದಿನ ಕುಡಿಯಬೇಕು. ಇದರಿಂದ ಹೊಟ್ಟೆ ತುಂಬುತ್ತದೆ, ಆಗ ಗ್ಯಾಸ್ ಉತ್ಪತ್ತಿಯಾಗುವುದಿಲ್ಲ.

English summary

7 Ways To Reduce Stomach Gas | Tips For Health | ಹೊಟ್ಟೆಯ ಗ್ಯಾಸ್ ಕಡಿಮೆ ಮಾಡಲು 7 ವಿಧಾನ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

We all have stomach gas but few suffer more than the other. Bloating, belching, burps, stomach pain and farting are few symptoms of gas. It is very important to find out the reasons behind gastric problems.
X
Desktop Bottom Promotion