Latest Updates
-
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ!
ಜ್ಯೋತಿಷ್ಯದ ಪ್ರಕಾರ ಮಾರ್ಚ್ ತಿಂಗಳಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನ ಬದಲಾಯಿಸುತ್ತವೆ. ಇದು ಹಲವರ ಜೀವನದಲ್ಲಿ ಬದಲಾವಣೆಗಳ ತರುವುದು ನೋಡಬಹುದು. ಸಾಮಾನ್ಯವಾಗಿ ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ರಾಶಿಗಳ ಬದಲಾಯಿಸುತ್ತವೆ. ಎಲ್ಲಾ ಗ್ರಹಗಳು ತಮ್ಮ ಸ್ಥಾನಪಲ್ಲಟದ ಸಮಯದಲ್ಲಿ ಮತ್ತೊಂದು ಗ್ರಹದೊಂದಿಗೆ ಸಂಯೋಗವಾಗುವುದು ಸಹ ನೋಡಬಹುದು.
ಹಾಗೆ ಎಲ್ಲಾ ಗ್ರಹಗಳೊಂದಿಗೆ ನೆರಳಿನ ಗ್ರಹಗಳು ಎಂದು ಕರೆಯಲಾಗುವ ರಾಹು ಮತ್ತು ಕೇತು ಗ್ರಹಗಳು ಕೂಡ ತಮ್ಮ ಸ್ಥಾನ ಬದಲಾಯಿಸುವುದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ರಾಹು ಹಾಗೂ ಕೇತು ಸುಮಾರು 180 ಡಿಗ್ರಿಯ ಸ್ಥಾನದಲ್ಲಿ ಚಲಿಸುತ್ತಿವೆ. ಇದು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ.

ರಾಹು ಹಾಗೂ ಕೇತು 180 ಡಿಗ್ರಿ ಸ್ಥಾನದಲ್ಲಿ ಚಲಿಸುವಾಗ ಅಪರೂಪದ ಕಾಳಸರ್ಪ ಯೋಗವು ರೂಪುಗೊಳ್ಳಲಿದೆ. ಈ ಯೋಗ ರಾಹು ಮತ್ತು ಕೇತುವಿನಿಂದ ರೂಪಿಸಲ್ಪಟ್ಟಾಗ ಕೇಡು ತರಬಹುದು ಎಂದು ಹೇಳಲಾಗಿದೆ. ಪ್ರಸ್ತುತ ಕೇತು ಸಿಂಹ ರಾಶಿಯಲ್ಲಿ ಚಲಿಸಿದರೆ, ಮಂಗಳ, ಬುಧ, ಸೂರ್ಯ, ರಾಹು ಕುಂಭದಲ್ಲಿ ಮತ್ತು ಶನಿ ಮತ್ತು ಶುಕ್ರ ಮೀನ ರಾಶಿಯಲ್ಲಿ ಚಲಿಸುತ್ತಿದ್ದಾರೆ. ಈ ಗ್ರಹಗಳ ಸ್ಥಾನಗಳಿಂದಾಗಿ ರೂಪುಗೊಂಡ ಕಾಳಸರ್ಪ ಯೋಗದ ಪ್ರಭಾವವು ಎಲ್ಲಾ ರಾಶಿ ಜನರ ಜೀವನದಲ್ಲಿಯೂ ಕಂಡುಬರುತ್ತದೆ.
ಈ ಯೋಗದಿಂದ ಕೆಲ ರಾಶಿಗಳಲ್ಲಿ ಬದಲಾವಣೆಗಳು ಎದುರಾಗುತ್ತವೆ. ಅದ್ರಲ್ಲೂ ಕೆಲವು ರಾಶಿಗಳಿಗೆ ಶುಭವಾದರೆ ಮತ್ತೆ ಕೆಲ ರಾಶಿಗಳಿಗೆ ಇದು ಅಶುಭ ಕಾರಕ. ನಾವಿಂದು ರಾಹು ಕೇತುವಿನ ಈ ಸಂಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಶುಭಯೋಗವಿದೆ ಎಂಬುದನ್ನು ತಿಳಿದುಕೊಳ್ಳೋಣ.
ಧನು ರಾಶಿ
ಕಾಳಸರ್ಪ ಯೋಗವು ಧನು ರಾಶಿಯವರಿಗೆ ಕೆಲ ಸಮಸ್ಯೆಗಳಿಗೆ ಕಾರಣವಾಗಲಿದೆ. ಆದ್ರೆ ನಿಮ್ಮ ಜೀವನದಲ್ಲಿ ಹಲವು ಶುಭಗಳಿಗೆಗೂ ಇದು ಕಾರಣವಾಗಲಿದೆ. ನಿಮ್ಮ ವ್ಯಕ್ತಿತ್ವ ಸುಧಾರಿಸಲಿದೆ. ನಿಮ್ಮ ಜೀವನದ ಬಹುದೊಡ್ಡ ಗುರಿಯ ಕಡೆಗೆ ನೀವು ಚಲಿಸಬಹುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕೆಲಸಗಳನ್ನು ಮಾಡುವಿರಿ. ಅನೇಕರಲ್ಲಿ ಈ ಸಮಯ ವಿದೇಶ ಪ್ರಯಾಣದಂತಹ ದೊಡ್ಡ ಲಾಭಕ್ಕೆ ಕಾರಣವಾಗಲಿದೆ. ನಿಮ್ಮ ಮಾತುಗಳು ನಿಮ್ಮ ವ್ಯವಹಾರಕ್ಕೆ ಬೆಂಬಲ ನೀಡಲಿವೆ. ಬುದ್ದಿವಂತಿಕೆಯಿಂದ ಹಲವು ಕಾರ್ಯಗಳನ್ನು ಪೂರೈಸುವಿರಿ. ಹಣಕಾಸು ಅಡ್ಡಿಗಳು ನಿವಾರಣೆಯಾಗಲಿದೆ.
ಮೀನ ರಾಶಿ
ಕಾಳಸರ್ಪ ಯೋಗದಿಂದಾಗಿ ಕೆಲವು ಸಮಸ್ಯೆಗಳನ್ನು ಎದುರಿಸಿದರೂ, ಅವುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ವೃತ್ತಿ ಮತ್ತು ಅಧ್ಯಯನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವಿದೇಶಗಳಲ್ಲಿ ಕೆಲಸ ಮಾಡಲು ಅವಕಾಶಗಳು ಸಿಗುತ್ತವೆ. ಉದ್ಯಮಿಗಳಿಗೆ ಉತ್ತಮ ಲಾಭ ಗಳಿಸುವ ಅವಕಾಶಗಳು ಸಿಗುತ್ತವೆ. ಸೌಲಭ್ಯಗಳು ಮತ್ತು ಐಷಾರಾಮಿಗಳು ಹೆಚ್ಚಾಗುತ್ತವೆ. ಈ ಅವಧಿಯಲ್ಲಿ ಅವಿವಾಹಿತರಿಗೆ ಉತ್ತಮ ಸಂಬಂಧಗಳು ಹುಡುಕಿ ಬರಬಹುದು. ನಿರುದ್ಯೋಗಿಗಳು ಉದ್ಯೋಗ ಹುಡುಕುವಲ್ಲಿ ನಿರತರಾಗಿದ್ದರೆ ಈ ಸಮಯದಲ್ಲಿ ಶುಭ ಹಾಗೆ ನೀವು ಬಯಸಿದಂತಹ ಅವಕಾಶ ಪಡೆಯುವ ಸಾಧ್ಯತೆ ಇದೆ.
ತುಲಾ ರಾಶಿ
ಕಾಳಸರ್ಪ ಯೋಗದಿಂದಾಗಿ ತುಲಾ ರಾಶಿಯವರು ತಮ್ಮ ಜೀವನದ ಕೆಲವು ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಉನ್ನತ ಶಿಕ್ಷಣವನ್ನು ಪಡೆಯುವ ಬಯಕೆ ಈಡೇರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ವಾಹನ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಆರೋಗ್ಯದಲ್ಲೂ ಚೇತರಿಕೆ ನೋಡುವಿರಿ. ಬಹು ಸಮಯದಿಂದ ನೀವು ಹೊಸ ಆದಾಯ ಹುಡುಕುತ್ತಿದ್ದರೆ ಈ ಸಮಯದಲ್ಲಿ ಆ ಕುರಿತಾದ ವಿಚಾರದಲ್ಲಿ ಧನಾತ್ಮಕ ಸ್ಥಿತಿ ನೋಡುವಿರಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











