Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಹೊಟ್ಟೆ ನೋವನ್ನು ಶಮನಗೊಳಿಸುವ ಮದ್ದು ಇಲ್ಲಿದೆ ನೋಡಿ!
ಸಾಮಾನ್ಯವಾಗಿ ಎಲ್ಲ ವಯಸ್ಸಿನಲ್ಲೂ ವಿವಿಧ ಕಾರಣಗಳಿಂದ ಹೊಟ್ಟೆ ನೋವು ಕಂಡುಬರುವುದು ಸಹಜ. ಕೆಲವೊಮ್ಮೆ ನಾವು ಸೇವಿಸುವ ಆಹಾರ ಅಜೀರ್ಣವಾಗುವುದರಿಂದ, ನಮ್ಮಲ್ಲಿ ಅಲ್ಸರ್, ಮಲಬದ್ಧತೆ, ಹೊಟ್ಟೆಯ ವೈರಸ್, ಗ್ಯಾಸ್ ಹರ್ನಿಯಾ, ಅಂತಹ ಕಾಯಿಲೆಗಳು ಕಂಡುಬರುತ್ತದೆ. ಹೊಟ್ಟೆನೋವು ತೀವ್ರವಾಗಿದ್ದರೆ ಮತ್ತು ನಿರಂತರವಾಗಿದ್ದರೆ ಆಗ ವೈದ್ಯರನ್ನು ಭೇಟಿಯಾಗಬೇಕು.
ವಿವಿಧ ರೀತಿಯ ಹೊಟ್ಟೆಯ ಸಮಸ್ಯೆಗಳಾದ ಅತಿಸಾರ, ಮಲಬದ್ಧತೆ, ಗ್ಯಾಸ್, ಸೆಳೆತ ಮತ್ತು ಹೊಟ್ಟೆ ಉಬ್ಬುವುದಕ್ಕೆ ಕೆಲವೊಂದು ಮನೆಮದ್ದುಗಳು ಉತ್ತಮ ಚಿಕಿತ್ಸೆಯಾಗಿದೆ. ಹೊಟ್ಟೆನೋವಿನಿಂದ ಸ್ವಲ್ಪ ಮಟ್ಟಿನ ಆರಾಮ ನೀಡುವ ಕೆಲವೊಂದು ನೈಸರ್ಗಿಕ ಮನೆ ಮದ್ದುಗಳು ಇಲ್ಲಿ ನೀಡಲಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಟ್ಟೆ ಉಬ್ಬರಕ್ಕೆ ತಕ್ಷಣದ ಪರಿಹಾರ

ಪುದೀನಾ:
ಹೊಟ್ಟೆ ನೋವು ನಿವಾರಿಸಲು ಪುದೀನಾ ಒಳ್ಳೆಯ ಮದ್ದು. ಕೆಲವು ಪುದೀನಾ ಎಲೆಗಳನ್ನು ತೆಗೆದುಕೊಂಡು ಜಗಿಯಿರಿ. ಅದೇ ರೀತಿ ಪುದೀನಾ ಎಲೆಗಳನ್ನು ಹಾಕಿ ಒಂದು ಕಪ್ ಚಹಾ ಮಾಡಿ ಕುಡಿದರೆ ಹೊಟ್ಟೆ ನೋವು ಶಮನವಾಗುತ್ತದೆ. ಒಂದು ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ ಕೆಲವು ಪುದೀನಾ ಎಲೆಗಳನ್ನು ಹಾಕಿ ಕೆಲವು ಹೊತ್ತು ಕುದಿಸಿ, ಈ ನೀರನ್ನು ಕುಡಿಯಿರಿ. ಹಸಿವು ಇಲ್ಲದಿರುವುದನ್ನು ಇದು ನಿವಾರಿಸುತ್ತದೆ ಮತ್ತು ಋತುಚಕ್ರದ ವೇಳೆ ಆಗುವ ಹೊಟ್ಟೆನೋವಿಗೆ ಇದು ಒಳ್ಳೆಯ ಪರಿಹಾರ.

ಅಲೋವೆರಾ ಜ್ಯೂಸ್;
ಅಲೋವೆರಾದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವಂತಹ ಶಕ್ತಿಯಿದೆ. ಅಲೋವೆರಾದ ವೈದ್ಯಕೀಯ ಗುಣಗಳೆಂದರೆ ಅದು ನೋವಿಗೆ ಕಾರಣವಾಗುವ ಸೂಕ್ಷ್ಮಣುಗಳ ವಿರುದ್ಧ ಹೋರಾಡುತ್ತದೆ. ಅರ್ಧ ಕಪ್ ನಷ್ಟು ಅಲೋವೆರಾ ಜ್ಯೂಸ್ ಕುಡಿಯಿರಿ ಮತ್ತು ವಿವಿಧ ರೀತಿಯ ಕರುಳಿನ ಸಮಸ್ಯೆಗಳನ್ನು ಕಡಿಮೆ ಮಾಡಿ. ವಿವಿಧ ರೀತಿಯ ಹೊಟ್ಟೆಯ ಸಮಸ್ಯೆಗಳಾದ ಅತಿಸಾರ, ಮಲಬದ್ಧತೆ, ಗ್ಯಾಸ್, ಸೆಳೆತ ಮತ್ತು ಹೊಟ್ಟೆ ಉಬ್ಬುವುದಕ್ಕೆ ಇದು ಒಳ್ಳೆಯ ಚಿಕಿತ್ಸೆಯೆಂದು ಪರಿಗಣಿಸಲಾಗಿದೆ.

ನಿಂಬೆ ರಸ;
ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿದರೆ ಹೊಟ್ಟೆ ನೋವನ್ನು ನಿವಾರಿಸಬಹುದು. ಒಂದು ಗ್ಲಾಸ್ ಬಿಸಿ ನೀರಿಗೆ ಅರ್ಧ ನಿಂಬೆ ಹಿಂಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಕುಡಿಯಿರಿ. ನಿಂಬೆ ಇಲ್ಲದಿದ್ದರೆ ನಿಂಬೆರಸ ಕೂಡ ಕೆಲಸ ಮಾಡುತ್ತದೆ.

ಅಡುಗೆ ಸೋಡಾ:
ಅಡುಗೆ ಸೋಡಾ, ಒಣಶುಂಠಿ, ಜೀರಿಗೆ ಮತ್ತು ಸಕ್ಕರೆ ಪ್ರತಿಯೊಂದನ್ನೂ ಒಂದು ಟೀ ಚಮಚದಷ್ಟು ತೆಗೆದುಕೊಂಡು ಒಂದು ಚಮಚ ನಿಂಬೆರಸದೊಂದಿಗೆ ಮಿಶ್ರಮಾಡಿ. ಈ ಮಿಶ್ರಣಕ್ಕೆ ಒಂದು ಬಟ್ಟಲು ಬಿಸಿ ನೀರು ಸೇರಿಸಿ, ಚೆನ್ನಾಗಿ ಕಲಕಿ ಕುಡಿಯಿರಿ. ಅಡುಗೆ ಸೋಡಾದಲ್ಲಿ ಅಲ್ಕಾ-ಸೆಲ್ಟ್ಜರ್ ನಂತೆ ಕೆಲಸ ಮಾಡುತ್ತದೆ, ಜೊತೆಗೆ ಇದು ಎದೆ ಉರಿ ಮತ್ತು ಅಜೀರ್ಣ ತಡೆಯುತ್ತದೆ. ಅಥವಾ ಒಂದು ಚಮಚ ಅಡುಗೆ ಸೋಡಾವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿದರೆ ಕೂಡ ಹೊಟ್ಟೆ ನೋವಿನಿಂದ ತಕ್ಷಣ ಪರಿಹಾರ ಕಂಡು ಕೊಳ್ಳಬಹುದು.

ಶುಂಠಿ:
ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣ ಮತ್ತು ಇತರ ಆರೋಗ್ಯಕಾರಿ ಲಾಭಗಳಿವೆ. ಇದು ಜೀರ್ಣಕ್ರಿಯೆ ಸರಾಗವಾಗಿಸಿ ಹೊಟ್ಟೆ ನೋವು ಕಡಿಮೆ ಮಾಡುತ್ತದೆ. ಒಣಗಿದ ಶುಂಠಿಗಿಂತ ಹಸಿ ಶುಂಠಿ ಹೆಚ್ಚು ಪರಿಣಾಮಕಾರಿ. ನೀರಿಗೆ ಕೆಲವು ತುಂಡು ಶುಂಠಿ ಹಾಕಿ ಕುದಿಸಿ, ಬಳಿಕ ಅದರ ನೀರನ್ನು ಕುಡಿದರೆ ಹೊಟ್ಟೆ ನೋವಿನಿಂದ ಆರಾಮ ಪಡೆಯಬಹುದು.

ಬಿಸಿ ನೀರು :
ಬಿಸಿ ನೀರಿಗೆ ಜೇನು ತುಪ್ಪ ಬೆರೆಸಿ ಮುಂಜಾನೆ ಬರೀ ಹೊಟ್ಟೆಯಲ್ಲಿ ಸೇವಿಸಿದರೆ, ಹೊಟ್ಟೆ ನೋವಿನಿಂದ ಆರಾಮ ಪಡೆಯಬಹುದು. ಅಥವಾ ತುಳಸಿ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ವಾರದಲ್ಲಿ ಎರಡು ದಿನಕ್ಕೊಮ್ಮೆ ಒಂದು ಟೀ ಚಮಚದಷ್ಟು ಸೇವಿಸುವುದರಿಂದ, ಹೊಟ್ಟೆ ಉರಿ ಕಮ್ಮಿಯಾಗುವುದರ ಜೊತೆಗೆ, ಹೊಟ್ಟೆ ನೋವಿನಿಂದ ಮುಕ್ತಿ ಪಡೆಯಬಹುದು.



Click it and Unblock the Notifications
