Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 11 (March 11 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಅನುಕೂಲಕರ. ನಿಮ್ಮ ಹಲವು ಕೆಲಸಗಳನ್ನು ಸಮಯದೊಳಗೆ ಮಾಡಿ ಮುಗಿಸುವಿರಿ. ಹಣಕಾಸು ವಿಚಾರದಲ್ಲಿ ನಿಮಗೆ ಸಮಸ್ಯೆಗಳಿವೆ. ಆಪ್ತರೊಬ್ಬರಿಂದ ನಿಮಗೆ ದೊಡ್ಡ ವಿಚಾರಕ್ಕೆ ಕರೆ ಬರಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ. ಅನೇಕರು ಈ ದಿನ ಪ್ರಯಾಣ ಮಾಡಬೇಕಾಗುತ್ತದೆ. ದಾಂಪತ್ಯ ವಿಚಾರದಲ್ಲಿ ಮನಸ್ತಾಪಗಳಿವೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಮಿಶ್ರಫಲವಿದೆ. ಗೃಹಿಣಿಯರಿಗೆ ಈ ದಿನ ದೊಡ್ಡ ಸಮಸ್ಯೆಗಳಿವೆ. ಅದ್ರಲ್ಲೂ ಹಣಕಾಸು ಹಾಗೆ ವ್ಯವಹಾರ ಸಂಬಂಧಿತ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಹಿನ್ನಡೆಗೆ ಕಾರಣವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ದಿನವು ಅಪಾಯಕಾರಿ ದಿನ ಎನ್ನಬಹುದು. ನೀವು ಮಾಡಬೇಕಿದ್ದ ಹಲವು ಕೆಲಸವನ್ನು ಮುಂದೂಡುತ್ತೀರಿ. ಹಾಗೆ ವಾಹನ ಅಪಘಾತ ಅಥವಾ ದೈಹಿಕ ಗಾಯಕ್ಕೆ ತುತ್ತಾಗಬಹುದು. ವ್ಯಾಪಾರ ಸಂಬಂಧಿತ ಲಾಭ ನಿಮ್ಮ ದಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನ ಉತ್ತಮ ಫಲಿತಾಂಶವಿದೆ. ನಿಮ್ಮಿಂದ ಯಾರಿಗಾದರು ಹಣ ನೀಡುವುದು ಬಾಕಿ ಇದ್ದರೆ ಈ ಸಮಯದಲ್ಲಿ ನೀಡುವುದು ಉತ್ತಮ. ಬಹುದಿನದ ಕನಸುಗಳನ್ನು ಈಡೇರಿಸಿಕೊಳ್ಳಬಹುದು. ಪ್ರಮಾಣಿಕ ಕೆಲಸಕ್ಕೆ ಉತ್ತಮ ಫಲಿತಾಂಶವಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಲ್ಲಿ ಈ ದಿನವು ಮಿಶ್ರಫಲವಿದೆ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಈ ದಿನವು ಅದೃಷ್ಟ ತರಲಿದೆ. ವೇತನ ಹೆಚ್ಚಳ ಕುರಿತಾದ ವಿಚಾರದಲ್ಲಿ ಶುಭವಿದೆ. ಮನೆಯಲ್ಲಿ ಶುಭ ಕಾರ್ಯ ವಿಚಾರದಲ್ಲಿ ಮಾತುಕತೆಗಳು ನಡೆಯಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನ ಸಮಸ್ಯೆಗಳಿಂದ ತುಂಬಿದೆ. ನಿಮ್ಮ ಪ್ರಯಾಣಗಳಲ್ಲಿ ಅಶುಭವಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಹೊಸ ವಸ್ತು ಮನೆಗೆ ತರಬಹುದು. ಸಂಬಂಧಿಕರ ಭೇಟಿಯ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಲ್ಲಿ ಈ ದಿನ ಶ್ರಮದಾಯಕವಾಗುತ್ತಿದೆ. ನೀವು ಮಾಡುವ ಕೆಲಸದಲ್ಲಿ ನೀವು ಬಯಸಿದ ಫಲಿತಾಂಶ ಪಡೆಯದೆ ಇರಬಹುದು. ಅನೇಕ ಕೆಲಸಗಳಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಅಡ್ಡಿಯಾಗಬಹುದು. ಪ್ರಯಾಣ ಮಾಡುವಾಗ ಎಚ್ಚರ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಪ್ರಯಾಣದ ದಿನ. ನಿಮ್ಮದಲ್ಲದ ಕೆಲಸದ ಕಾರಣಕ್ಕೆ ನೀವು ಪ್ರಯಾಣ ಮಾಡುವಿರಿ. ಹೊಸ ಕೆಲಸಗಳಲ್ಲಿ ಭಾಗಿಯಾಗುವಿರಿ. ಹೊಸ ಸ್ನೇಹಿತರ ಸಂಪಾದಿಸುವ ಸಾಧ್ಯತೆ ಇದೆ. ಖರ್ಚುಗಳ ಮೇಲೆ ಹಿಡಿತವಿರಲಿ.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಉತ್ತಮ ದಿನ. ನಿಮ್ಮ ಹಣಕಾಸು ವಿಚಾರದಲ್ಲಿ ಇಂದು ನೀವು ಬಯಸಿದ ಫಲಿತಾಂಶವಿದೆ. ಬ್ಯಾಂಕಿಂಗ್ ವಿಚಾರವಾಗಿ ಶುಭವಿದೆ. ಹಳೆಯ ಅನಾರೋಗ್ಯವೊಂದು ನಿವಾರಣೆಯಾಗಲಿದೆ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಈ ದಿನ ಮಿಶ್ರಫಲ. ಓಡಾಟಗಳಲ್ಲಿ ಎಚ್ಚರವಿರಲಿ. ಗ್ಯಾಜೆಟ್ ವಿಚಾರಗಳಿಂದ ನೀವು ಹಣ ಪಡೆಯುವ ವಿಚಾರದಲ್ಲಿ ಹಿನ್ನಡೆ ಇದೆ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ದಿನವು ಆರಾಮದಾಯಕ. ನಿಮ್ಮ ಕೆಲಸದಲ್ಲಿ ಎಂದಿನಂತೆ ಸಾಮಾನ್ಯ ದಿನ. ದಾಂಪತ್ಯ ಅಥವಾ ಮನೆಯ ವಿಚಾರದಲ್ಲಿ ನಿಮ್ಮ ಮಾತುಗಳಿಗೆ ಬೆಂಬಲವಿದೆ. ಕೆಲಸದ ಸ್ಥಳದಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ.



Click it and Unblock the Notifications










