For Quick Alerts
ALLOW NOTIFICATIONS  
For Daily Alerts

ರಾತ್ರಿಯಲ್ಲಿ ಕೆಟ್ಟ ಕನಸ್ಸು ಬೀಳುತ್ತಿದೆಯೇ? ಹಾಗಾದರೆ ಈ ಆಹಾರಗಳನ್ನು ಸೇವಿಸದಿರಿ!

By Arshad
|

ಭಯಾನಕ ರಾಕ್ಷಸರು ನಿಮ್ಮ ಬೆನ್ನತ್ತಿದ್ದಾರೆಯೇ? ಇದಕ್ಕೆ ಕಾಡಿನ ಮಧ್ಯೆ ಇರುವ ಅಗತ್ಯವಿಲ್ಲ! ಪ್ರಪಾತದ ಅಂಚಿನಿಂದ ತಳದಲ್ಲಿರುವ ಕುದಿಯುವ ಲಾವಾರಸಕ್ಕೆ ಇನ್ನೇನು ಬೀಳಲಿದ್ದೀರಿ! ಆಗಲೇ ಎಚ್ಚರಾಗುತ್ತದೆ. ಇವೇ ದುಃಸ್ವಪ್ನಗಳು. ಇತ್ತೀಚೆಗೆ ನಿಮಗೆ ತಡರಾತ್ರಿಯಲ್ಲಿ ಇಂತಹ ದುಃಸ್ವಪ್ನಗಳು ಕಾಡುತ್ತಿದ್ದರೆ ಇದಕ್ಕೆ ನೀವು ರಾತ್ರಿ ಮಲಗುವ ಮುನ್ನ ಸೇವಿಸಿದ್ದ ಅಹಾರವನ್ನು ಧಾರಾಳವಾಗಿ ಹೊಣೆ ಯಾಗಿಸಬಹುದು.

ಈ ಮಾತನ್ನು ಸಂಶೋಧಕರು ಕೆಲವರು ಪ್ರಯೋಗಗಳ ಮೂಲಕ ರಾತ್ರಿಯ ಆಹಾರ ಹಾಗೂ ದುಃಸ್ವಪ್ನಗಳ ನಡುವಣ ಸಂಬಂಧವನ್ನು ಸಾಬೀತುಪಡಿಸಿದ್ದಾರೆ. ಅಧ್ಯಯನಗಳಲ್ಲಿ ಕಂಡುಕೊಂಡಂತೆ ಪಿಷ್ಟಭರಿತ ಹಾಗೂ ಸಿಹಿಯಾದ ಆಹಾರಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸಿದರೆ ನಿದ್ದೆಯಲ್ಲಿ ದುಃಸ್ವಪ್ನಗಳು ಬೀಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಅಹಾರಗಳನ್ನು ರಾತ್ರಿಯ ಊಟದಲ್ಲಿ ಸೇರಿಸಿ ಕೊಳ್ಳದಿರುವುದೇ ಉತ್ತಮ. ವಿಶೇಷವಾಗಿ ವಯಸ್ಕರಲ್ಲಿಯೇ ಈ ದುಃಸ್ವಪ್ನಗಳು ಹೆಚ್ಚಾಗಿ ಕಾಣಬರುತ್ತವೆ.

ಇಂತಹ ಪ್ರಾಣಿ-ಪಕ್ಷಿಗಳ ಕನಸ್ಸು ಬಿದ್ದರೆ 'ಶುಭ ಶಕುನ'ವಾಗಲಿದೆ!

ದುಃಸ್ವಪ್ನಗಳಿಗೆ ಕೆಲವಾರು ಕಾರಣಗಳಿವೆ. ಇದರಲ್ಲಿ ಸರಳವಾದ ಮತ್ತು ಪ್ರಮುಖವಾದ ಕಾರಣವೆಂದರೆ ರಾತ್ರಿ ಸೇವಿಸುವ ಆಹಾರಗಳು. ಒಂದು ವೇಳೆ ನಿಮಗೆ ದುಃಸ್ವಪ್ನ ಸತತವಾಗಿ ಕಾಡುತ್ತಿದ್ದರೆ ನಿಮ್ಮ ರಾತ್ರಿಯ ಆಹಾರಗಳ ಬಗ್ಗೆ ಅವಲೋಕನ ಅಗತ್ಯ. ರಾತ್ರಿ ಮಲಗುವ ಮುನ್ನ ಸೇವಿಸಬಾರದ ಈ ಆಹಾರಗಳು ಯಾವುವು? ನೋಡೋಣ...

ಐಸ್ ಕ್ರೀಂ

ಐಸ್ ಕ್ರೀಂ

ರಾತ್ರಿ ಮಲಗುವ ಮುನ್ನ ತಿನ್ನುವ ಐಸ್ ಕ್ರೀಮ್ ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಏರುಪೇರುಗೊಳಿಸಿ ನಿದ್ದೆಯ ಸಮಯದಲ್ಲಿ ಮೆದುಳಿನ ಚಟುವಟಿಕೆಯನ್ನೂ ಬಾಧೆಗೊಳಿಸುತ್ತದೆ. ಒಂದು ವೇಳೆ ಟೀ ಕಾಫಿ ಮೊದಲಾದ ಪೇಯಗಳೊಡನೆ ಐಸ್ ಕ್ರೀಂ ಸೇವಿಸಿದರೆ ಮೆದುಳಿನ ಚಟುವಟಿಕೆ ಅತಿ ಹೆಚ್ಚಾಗಿ ಏರುಪೇರುಗೊಳ್ಳುವ ಮೂಲಕ ದುಃಸ್ವಪ್ನ ಬೀಳಲು ಕಾರಣವಾಗುತ್ತದೆ.

ಚೀಸ್

ಚೀಸ್

ಹಾಲಿನ ಉತ್ಪನ್ನಗಳಲ್ಲಿ ಟ್ರಿಪ್ಟೋಫ್ಯಾನ್ ಎಂಬ ಪೋಷಕಾಶವಿದ್ದು ಇದು ನಿದ್ದೆಗೆ ಅಗತ್ಯವಾದ ಸೆರೋಟೋನಿನ್ ಎಂಬ ರಸದೂತಕ್ಕೆ ಮುನ್ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ರಾತ್ರಿ ಸಮಯದಲ್ಲಿ ಚೀಸ್ ತಿಂದರೆ ಗಾಢ ನಿದ್ದೆ ಆವರಿಸಿದರೂ ಇದರಲ್ಲಿ ದುಃಸ್ವಪ್ನಗಳಿರುವ ಸಂಭವ ಹೆಚ್ಚು.

ಸೆಲೆರಿ

ಸೆಲೆರಿ

ಇದು ನೈಸರ್ಗಿಕ ಮೂತ್ರವರ್ಧಕವಾಗಿದ್ದು ಇದು ಮೂತ್ರಕ್ಕೆ ಅವಸರವಾಗಿಸುವ ಸೂಚನೆಗಳನ್ನು ಸತತವಾಗಿ ಮೆದುಳಿಗೆ ನೀಡುವ ಮೂಲಕ ಮೆದುಳಿನ ಚಟುವಟಿಕೆ ಏರುಪೇರುಗೊಂಡು ಕೆಟ್ಟ ಕನಸುಗಳಿಗೆ ಕಾರಣವಾಗಬಹುದು.

ಖಾರವಾದ ಸಾಸ್

ಖಾರವಾದ ಸಾಸ್

ರಾತ್ರಿ ಮಲಗುವ ಮುನ್ನ ಖಾರವಾದ ಹಾಗೂ ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದರೂ ದುಃಸ್ವಪ್ನಗಳು ಕಾಡುವ ಸಂಭವ ಹೆಚ್ಚು. ಈ ಮಸಾಲೆಗಳು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಿ ಮೆದುಳಿನ ಚಟುವಟಿಕೆಯನ್ನೂ ಏರುಪೇರುಗೊಳಿವುಅ ಮೂಲಕ ದುಃಸ್ವಪ್ನಗಳಿಗೆ ಕಾರಣವಾಗುತ್ತವೆ.

ಮದ್ಯ

ಮದ್ಯ

ಆಲ್ಕೋಹಾಲ್ ಸೇವನೆಯ ಬಳಿಕ ಪವಡಿಸಿದಾಗ ರಾತ್ರಿ ದುಃಸ್ವಪ್ನ ಹಾಗೂ ಭಯಾನಕ ಕನಸುಗಳು ಕಾಡುವುದು ಖಚಿತ. ಅಲ್ಲದೇ ಇದು ತಡೆತಡೆದು ಎಚ್ಚರಾಗುವ sleep apnoea ಎಂಬ ತೊಂದರೆಗೂ ಕಾರಣವಾಗಬಹುದು.

ಕುಕ್ಕೀಸ್

ಕುಕ್ಕೀಸ್

ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ 31%ರಷ್ಟು ದುಃಸ್ವಪ್ನಗಳು ರಾತ್ರಿ ಮಲಗುವ ಮುನ್ನ ಸಕ್ಕರೆ ಹೆಚ್ಚಿರುವ ಕುಕ್ಕೀಸ್, ಕೇಕ್ ಮೊದಲಾದ ಆಹಾರಗಳನ್ನು ಸೇವಿಸಿದವರಲ್ಲಿ ಕಂಡುಬಂದಿದೆ.

ಪಿಜ್ಜಾ

ಪಿಜ್ಜಾ

ಪಿಜ್ಜಾ, ಅದರಲ್ಲೂ ಪದರಗಳ ನಡುವೆ ಚೀಸ್ ಸೇರಿಸಿ ಲಟ್ಟಿಸಿರುವ ರೊಟ್ಟಿಯಿಂದ ತಯಾರಿಸಿದ ಪಿಜ್ಜಾ ಸೇವನೆಯಿಂದ ರಾತ್ರಿ ದುಃಸ್ವಪ್ನಗಳು ಕಾಡುವುದು ಖಚಿತ. ಈ ಪಿಜ್ಜಾಗಳಲ್ಲಿ ಬಳಸಲಾಗಿರುವ ಡೈರಿ ಆಹಾರಗಳಲ್ಲಿರುವ ಟ್ರಿಫ್ಟೋಫ್ಯಾನ್ ಈ ದುಃಸ್ವಪ್ನಗಳಿಗೆ ಮೂಲವಾಗಿದೆ.

ಚಿಪ್ಸ್

ಚಿಪ್ಸ್

ಒಟ್ಟಾರೆ ಬಿದ್ದಿರುವ ದುಃಸ್ವಪ್ನಗಳಲ್ಲಿ 12.5% ರಷ್ಟು ಸ್ವಪ್ನಗಳು ರಾತ್ರಿ ಮಲಗುವ ಮುನ್ನ ಅನಾರೋಗ್ಯಕರ ಅಹಾರಗಳಾದ ಚಿಪ್ಸ್, ಕುರುಕು ತಿಂಡಿ ಮೊದಲಾದವುಗಳನ್ನು ಸೇವಿಸಿದವರಿಗೆ ಬಿದ್ದಿರುವುದನ್ನು ಒಂದು ಅಧ್ಯಯನ ತಿಳಿಸಿದೆ.

ಕೆಫೀನ್

ಕೆಫೀನ್

ಕಾಫಿ, ಎನರ್ಜಿ ಡ್ರಿಂಕ್ ಮೊದಲಾದ ಪೇಯಗಳಲ್ಲಿ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿದ್ದು ಇವುಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸಿದವರಿಗೆ ದುಃಸ್ವಪ್ನ ಕಾಡುವುದು ಅನಿವಾರ್ಯ.

ಬ್ರೆಡ್

ಬ್ರೆಡ್

ಪಿಷ್ಟ ಹೆಚ್ಚಿರುವ ಆಹಾರಗಳಾದ ಬ್ರೆಡ್, ಪಾಸ್ತಾ ಮೊದಲಾದವುಗಳನ್ನು ಸೇವಿಸಿದವರಿಗೂ ದುಃಸ್ವಪ್ನಗಳು ಕಾಡಿವೆ. ಇದಕ್ಕೆ ಕಾರಣವೇನೆಂದರೆ ರಾತ್ರಿಯ ಸಮಯದಲ್ಲಿ ಪಿಷ್ಟ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ ಹಾಗೂ ಸಕ್ಕರೆ ಹೆಚ್ಚಿರುವ ಆಹಾರಗಳಂತೆಯೇ ದುಃಸ್ವಪ್ನಗಳು ಕಾಡುತ್ತವೆ.

ಸೋಡಾ

ಸೋಡಾ

ರಾತ್ರಿ ಮಲಗುವ ಮುನ್ನ ಮಾತ್ರವಲ್ಲ, ದಿನದ ಅವಧಿಯಲ್ಲಿಯೂ ಸೋಡಾ ಸೇವಿಸಿದರೆ ರಾತ್ರಿ ದುಃಸ್ವಪ್ನಗಳು ಕಾಡುತ್ತವೆ. ಇದರಲ್ಲಿರುವ ಕೆಫೀನ್ ಹಾಗೂ ಸಕ್ಕರೆಯ ಪ್ರಮಾಣದಿಂದ ದುಃಸ್ವಪ್ನಗಳು ಬೀಳುತ್ತವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ರಕ್ತವನ್ನು ತಿಳಿಗೊಳಿಸುವ ಶಕ್ತಿಯಿದೆ. ಈ ತಿಳಿಯಾದ ರಕ್ತ ಹೆಚ್ಚಿನ ಪ್ರಮಾಣದಲ್ಲಿ ಮೆದುಳಿಗೆ ರಾತ್ರಿ ಸಮಯದಲ್ಲಿ ಲಭಿಸಿದರೆ ಕೆಲವು ಭಾಗಗಳು ಅಗತ್ಯಕ್ಕಿಂತ ಹೆಚ್ಚೇ ಪ್ರಚೋದನೆ ಪಡೆಯುತ್ತವೆ ಹಾಗೂ ದುಃಸ್ವಪ್ನಕ್ಕೆ ಕಾರಣವಾಗುತ್ತದೆ.

English summary

Having Bad Dreams Lately? Avoid These Foods Before Bed!

Nightmares can occur due to various reasons and one of the simplest explanations for this usually involves food. If you experience frequent nightmares, then you need to actually take a closer look at the kind of foods that you eat before hitting the bed. Here, we have listed some of the foods that cause bad dreams. So, read further to get an idea of the foods that cause nightmares in adults.
X
Desktop Bottom Promotion