ತೂಕ ಇಳಿಸಿಕೊಳ್ಳಬೇಕೇ? ಇಂತಹ ಆಹಾರಗಳಿಂದ ದೂರವಿರಿ

By: manu
Subscribe to Boldsky

ಸ್ಥೂಲಕಾಯ ಈಗಾಗಲೇ ಆವರಿಸಿದ್ದು ಇದರಿಂದ ಮುಕ್ತ ಪಡೆಯಲು ದೃಢಸಂಕಲ್ಪ ಮಾಡಿರುವ ವ್ಯಕ್ತಿಗಳು ನೀವಾಗಿದ್ದರೆ ನಿಮಗೆ ಕೆಲವೊಂದು ವಿಷಯಗಳನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ. ಮೊದಲನೆಯದಾಗಿ ವ್ಯಾಯಾಮ ಹೆಚ್ಚಿಸುವ ಮೂಲಕ ಆಆರಂಭದಲ್ಲಿ ತ್ಯಾಗ ಮತ್ತು ಆಹಾರದಲ್ಲಿ ಕೊಬ್ಬುಹೆಚ್ಚಿಸುವ ಆಹಾರಗಳನ್ನು ವರ್ಜಿಸುವ ಮೂಲಕ ಜಿಹ್ವಾಚಾಪಲ್ಯದ ತ್ಯಾಗ.

ಸ್ಥೂಲಕಾಯಕ್ಕೆ ಕೊಬ್ಬು ಪ್ರಮುಖ ಕಾರಣವಾಗಿದ್ದು ವ್ಯಾಯಾಮದ ಮೂಲಕ ಕೊಬ್ಬು ಕರಗಿದರೂ ಆಹಾರದ ಮೂಲಕ ತಕ್ಷಣವೇ ಇದು ಮತ್ತೆ ತುಂಬಿಕೊಳ್ಳುವ ಕಾರಣದಿಂದಲೇ ಸ್ಥೂಲಕಾಯ ಇಳಿಯಲು ಕಷ್ಟಕರವಾಗಿರುವುದು. ಆದ್ದರಿಂದ ಕೊಬ್ಬು ಹೆಚ್ಚಿಸುವ ಆಹಾರಗಳಿಂದ ದೂರವಿದ್ದಷ್ಟೂ ಉತ್ತಮ.  ತೂಕ ಇಳಿಸಿಕೊಳ್ಳಲು ಸಿಂಪಲ್ ಟ್ರಿಕ್ಸ್! ಪ್ರಯತ್ನಿಸಿ ನೋಡಿ...

ಎಷ್ಟೋ ಸಲ ಕೆಲವರು ಒಂದು ವಾರ ಸತತವಾಗಿ ವ್ಯಾಯಾಮ ಮಾಡಿ ಒಂದೆರಡು ಕೇಜಿ ಇಳಿಸಿಕೊಂಡು ಸಂಪ್ರೀತರಾಗಿದ್ದರೆ ಮುಂದಿನ ವಾರ ಅವರಿಗರಿವಿಲ್ಲದೇ ತಿಂದ ಕೆಲವು ಆಹಾರಗಳು ನಾಲ್ಕಾರು ಕೇಜಿ ಏರುವಂತೆ ಮಾಡಿಬಿಡುತ್ತವೆ. ಇದರಿಂದ ಪಟ್ಟ ಶ್ರಮ ವ್ಯರ್ಥವಾದ ಬೇಸರಕ್ಕಿಂತಲೂ ಹಿಂದಿಗಿಂತಲೂ ಈಗ ತೂಕ ಇನ್ನಷ್ಟು ಹೆಚ್ಚಿತು ಎಂಬ ಚಿಂತೆಯೂ ಆವರಿಸುತ್ತದೆ.  ದೇಹದ ಹೆಚ್ಚುವರಿ ತೂಕದ ನಿಯಂತ್ರಣಕ್ಕೆ ಜೇನಿನಲ್ಲಿದೆ ಪರಿಹಾರ

ಆದ್ದರಿಂದಲೇ ತೂಕ ಇಳಿಸುವವರಿಗೆ ದೃಢಸಂಕಲ್ಪ ಬೇಕು ಹಾಗೂ ಕೆಲ ಅವಧಿಯವರೆಗಾದರೂ ಕೊಬ್ಬು ಇಳಿಸುವ ಆಹಾರಗಳಿಂದ ದೂರವಿರಬೇಕು. ವ್ಯಾಯಾಮವನ್ನು ಒಂದು ವಾರದ ಮಟ್ಟಿಗೆ ಸೀಮಿತವಾಗಿರಿಸದೇ ನಿತ್ಯದ ಚಟುವಟಿಕೆಯ ಭಾಗವಾಗಿಸಬೇಕು. ಬನ್ನಿ, ಕೊಬ್ಬು ಹೆಚ್ಚಿಸುವ ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ....  

ಮೈಕ್ರೋವೇವ್ ನಲ್ಲಿ ಮಾಡಿದ ಪಾಪ್ ಕಾರ್ನ್

ಮೈಕ್ರೋವೇವ್ ನಲ್ಲಿ ಮಾಡಿದ ಪಾಪ್ ಕಾರ್ನ್

ಸಿನೆಮಾ ಗೃಹಗಳಲ್ಲಿ ಸಿನೆಮಾ ಟಿಕೆಟ್ಟಿಗಿಂಗಲೂ ದೊಡ್ಡ ಪೊಟ್ಟಣದಲ್ಲಿ ನೀಡುವ ಪಾಪ್ ಕಾರ್ನ್ ದುಬಾರಿಯಾಗಿರುತ್ತದೆ. ಇದು ಒಂದು ತರಹದ ಪ್ರತಿಷ್ಠೆಯ ಸಂಕೇತ. ತಿನ್ನದೇ ಇದ್ದವರನ್ನು ತಿನ್ನುತ್ತಿರುವವರು "ಪಾಪ! ಬಡವ, ಅಂಗಿಯಿಲ್ಲ, ಚಡ್ಡಿಯಿಲ್ಲ" ಎಂಬ ಭಾವನೆಯಿಂದ ನೋಡುತ್ತಾರೆ. ಈ ನೋಟವನ್ನು ಎದುರಿಸಲು ಸಾಧ್ಯವಾಗದೇ ಉಳಿದವರೂ ಪಾಪ್ ಕಾರ್ನ್ ತಿನ್ನುವ ಚಟಕ್ಕೆ ಬಲಿಯಾಗುತ್ತಾರೆ. ಮೈಕ್ರೋವೇವ್ ನಲ್ಲಿ ಪಾಪ್ ಕಾರ್ನ್ ಮಾಡುವಾಗ ಧಾರಾಳವಾಗಿ ಉಪ್ಪು ಮತ್ತು ಬೆಣ್ಣೆಯನ್ನು ಉಪಯೋಗಿಸಲಾಗಿರುತ್ತದೆ. ಇದು ನಿಮ್ಮ ತೂಕವನ್ನು ಕೊಂಚ ಮಟ್ಟಿಗೆ ಹೆಚ್ಚಿಸಲು ಕಾರಣವಾಗುತ್ತದೆ.

ಸ್ಮೂಥಿಗಳು

ಸ್ಮೂಥಿಗಳು

ಸ್ಮೂಥಿ ಎಂಬ ಹಣ್ಣುಗಳ ರಸ, ಹಾಲು ಸಕ್ಕರೆ ಬೆರೆಸಿ ಮಾಡಿದ ಪೇಯ ಕುಡಿಯಲು ರುಚಿಯಾಗಿದ್ದು ಇದನ್ನು ಯಾವುದೋ ಒಂದು ಹೊತ್ತಿನ ಊಟದ ಬದಲು ಕುಡಿಯುವುದರಿಂದ ತೊಂದರೆ ಇಲ್ಲ ಎಂದುಕೊಂಡಿದ್ದವರಿಗೆ ನಿರಾಶೆ ಕಾದಿದೆ. ಏಕೆಂದರೆ ಈ ಸ್ಮೂಥಿಯಲ್ಲಿ ತುಂಬಾ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಬಳಸಲಾಗಿದ್ದು ಇದು ತೂಕವನ್ನು ಹೆಚ್ಚಿಸಲು ನೇರವಾಗಿ ಕಾರಣವಾಗಿದೆ.

ಆಲ್ಕೋಹಾಲ್ ರಹಿತ ಪೇಯಗಳು

ಆಲ್ಕೋಹಾಲ್ ರಹಿತ ಪೇಯಗಳು

ಮದ್ಯಪಾನಿಗಳು ತಮ್ಮ ಮದ್ಯವ್ಯಸನವನ್ನು ಕಡಿಮೆಯಾಗಿಸಲು ಮದ್ಯ ತಯಾರಿಸುವ ಧಾನ್ಯದಿಂದಲೇ ತಯಾರಿಸಿದ ಆದರೆ ಆಲ್ಕೋಹಾಲ್ ಅಂಶವಿಲ್ಲದ ಪೇಯಗಳನ್ನು (Mocktails) ಸೇವಿಸುತ್ತಾರೆ. ಆದರೆ ಈ ಪೇಯಗಳಲ್ಲಿ ಧಾನ್ಯದ ಕಹಿರುಚಿಯನ್ನು ಮರೆಸಲು ತುಂಬಾ ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಬಳಸಲಾಗಿದ್ದು ಇದು ತೂಕ ಹೆಚ್ಚಿಸಲು ನೇರವಾಗಿ ಕಾರಣವಾಗುತ್ತದೆ.

ಶೀತಲ ಆಹಾರಗಳು

ಶೀತಲ ಆಹಾರಗಳು

ಇಂದು ಸಮಯವುಳಿಸಲು ಮಾರುಕಟ್ಟೆಯಲ್ಲಿ ಮಂಜುಗಟ್ಟಿಸಿದ ಸಿದ್ದ ಆಹಾರಗಳು ಭಾರೀ ಪ್ರಮಾಣದಲ್ಲಿ ಲಭ್ಯವಿವೆ. ಇದರಿಂದ ಸಮಯ ಉಳಿಸಲು ಸಾಧ್ಯವಾದರೂ ತೂಕ ಹೆಚ್ಚುವುದನ್ನು ಉಳಿಸಲು ಸಾಧ್ಯವಿಲ್ಲ. ಏಕೆಂದರೆ ಇವುಗಳನ್ನು ಕೆಡದಂತೆ ಉಳಿಸಲು ಬಳಸಿರುವ ಸಂರಕ್ಷಕಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಹೆಚ್ಚಲು ಕಾರಣವಾಗುತ್ತವೆ.

ಬಿಳಿಯ ಬ್ರೆಡ್

ಬಿಳಿಯ ಬ್ರೆಡ್

ಚಿಕ್ಕಂದಿನಿಂದಲೂ ತಿನ್ನುತ್ತಾ ಬಂದಿದ್ದೇವೆ, ಏನೂ ತೊಂದರೆ ಇಲ್ಲ ಎಂಬ ಭಾವನೆಯುಳ್ಳ ವ್ಯಕ್ತಿಗಳಿಗೆ ನಿರಾಶೆ ಕಾದಿದೆ. ಏಕೆಂದರೆ ಬಿಳಿ ಬ್ರೆಡ್ ನಲ್ಲಿಯೂ ಅನಾರೋಗ್ಯಕರ ಕೊಬ್ಬು ಮತ್ತು ಕ್ಯಾಲೋರಿಗಳಿದ್ದು ದೇಹದ ತೂಕ ಅನಾವಶ್ಯಕವಾಗಿ ಹೆಚ್ಚಲು ನೆರವಾಗುತ್ತವೆ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯನ್ನು ಜೊತೆಯಾಗಿಸಿ ನೂರಾರು ರೀತಿಯ ವ್ಯಂಜನಗಳನ್ನು ಮಾಡಬಹುದು. ಇದು ರುಚಿಕರವೂ, ಸುಲಭವಾಗಿ ಬೇಯುವ, ಅಗ್ಗವಾಗಿ ಸಿಗುವ ತರಕಾರಿಯಾದ ಕಾರಣ ಎಲ್ಲರ ನೆಚ್ಚಿನದ್ದಾಗಿದೆ. ಆದರೆ ಇದರಲ್ಲಿ ಅತಿ ಹೆಚ್ಚಿನ ಕೊಬ್ಬು ಮತ್ತು ಪಿಷ್ಟವಿರುವ ಕಾರಣ ತೂಕ ಹೆಚ್ಚಲು ಕಾರಣವಾಗುತ್ತದೆ.

ಹಂದಿಮಾಂಸ

ಹಂದಿಮಾಂಸ

ಮಾಂಸಗಳಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವ ಈ ಮಾಂಸದ ಸೇವನೆಯಿಂದ ತಕ್ಷಣವೇ ತೂಕ ಹೆಚ್ಚಲು ಕಾರಣವಾಗುತ್ತದೆ.

 
English summary

Foods You Must Never Touch, If You Are Trying To Lose Weight!

Losing weight is definitely not an easy feat. Following various diets, with no results, then binge-eating to find relief from the frustration can get frustrating at times, making us want to give up. One must make a conscious effort to lose weight the healthy way, by following a strict diet and exercise regime. So, have a look at the list of foods you must never touch, if you want to lose weight.
Please Wait while comments are loading...
Subscribe Newsletter