Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದ ಹೆಚ್ಚುವರಿ ತೂಕದ ನಿಯಂತ್ರಣಕ್ಕೆ ಜೇನಿನಲ್ಲಿದೆ ಪರಿಹಾರ
ಜೇನು ಒಂದು ಸ್ನಿಗ್ಧ ದ್ರವವಾಗಿರುವ ಕಾರಣ ಇದನ್ನು ಬಹುತೇಕ ಯಾವುದೇ ಆಹಾರದೊಡನೆ ಮಿಶ್ರಣ ಮಾಡಿಕೊಂಡು ಸೇವಿಸಬಹುದು. ಹಾಲಿನೊಂದಿಗೆ ಇದು ಬೆರೆಯುವ ಪರಿಯನ್ನು ಕಂಡೇ ಹಿರಿಯ ಕವಿಗಳು ಹಾಲು ಜೇನಿನಂತಹ ಸಂಸಾರ ಎಂದು ವರ್ಣಿಸಿದ್ದಾರೆ, ಮುಂದೆ ಓದಿ...
ನೀವು ಹೆಚ್ಚುವರಿ ತೂಕದ ಸಮಸ್ಯೆಯಿಂದ ಬಳಲುತ್ತಿದ್ದೀರಿ ಮತ್ತು ಮುಜುಗರವನ್ನು ಹೊಂದಿದ್ದೀರಿ ಎಂದಾದಲ್ಲಿ ನಮ್ಮಲ್ಲಿದೆ ಒಂದು ಸೂಪರ್ ಔಷಧ. ಅಧಿಕ ತೂಕ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಒಂದು ಕಾಯಿಲೆಯಾಗಿ ಮಾರ್ಪಡುತ್ತಿದೆ. ಹೆಚ್ಚುವರಿ ತೂಕವು ದೇಹ ಸೌಂದರ್ಯವನ್ನು ಹೇಗೆ ಕೆಡಿಸುತ್ತದೋ ಅಂತೆಯೇ ಹಲವಾರು ದೈಹಿಕ ಕಾಯಿಲೆಗಳಿಗೂ ಮುಖ್ಯ ಕಾರಣವಾಗಿ ಬಿಡುತ್ತವೆ....

ಹಾಗಿದ್ದರೆ ನಿಮ್ಮ ದೇಹ ತೂಕದ ಚಿಂತೆಯನ್ನು ನಿವಾರಿಸುವ ಪರಿಹಾರ ನಮ್ಮ ಬಳಿ ಇದೆ. ಜೇನನ್ನು ಬಳಸಿಕೊಂಡು ಅಧಿಕ ದೇಹತೂಕ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ದೇಹದ ಚಯಾಪಚಯ ಶಕ್ತಿಯನ್ನು ಜೇನು ವರ್ಧಿಸಲಿದ್ದು, ಜೇನು ಮತ್ತು ಲಿಂಬೆಯನ್ನು ಒಗ್ಗೂಡಿಸಿಕೊಂಡು ದೇಹದ ಬೊಜ್ಜಿನಿಂದ ನಿವಾರಣೆಯನ್ನು ಪಡೆದುಕೊಳ್ಳಬಹುದಾಗಿದೆ. ತೂಕ ಇಳಿಸಿಕೊಳ್ಳಲು ಒಂದು ಚಮಚದಷ್ಟು ಜೇನು ಸಾಕು!
ಜೇನು ಮತ್ತು ದಾಲ್ಚಿನ್ನಿಯನ್ನು ಬಳಸಿಕೊಂಡು ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನೇ ಇಂದಿಲ್ಲಿ ತಿಳಿಸುತ್ತಿದ್ದೇವೆ. ಹೆಚ್ಚಿನ ಬಳಕೆದಾರರು ಈ ವಿಧಾನವನ್ನು ಪಾಲಿಸಿ ದೇಹತೂಕದ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಈ ಹಂತಗಳು ಹೆಚ್ಚು ಸರಳವಾಗಿದೆ. ಆರೋಗ್ಯದ ಆಗರ ಸಿಹಿ ಜೇನಿನ ಮಹತ್ವ ಅರಿಯಿರಿ
ಒಂದು ಕಪ್ನಷ್ಟು ಬಿಸಿ ನೀರಿಗೆ ಅರ್ಧ ಚಮಚ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ. ದೊಡ್ಡ ದೊಡ್ಡ ಭಾಗಗಳಿದ್ದರೆ ಅದನ್ನು ಬೇರ್ಪಡಿಸಿ. ಇದಕ್ಕೆ ಒಂದು ಚಮಚ ಜೇನು ಸೇರಿಸಿ. ಖಾಲಿ ಹೊಟ್ಟೆಗೆ ಈ ದ್ರಾವಣವನ್ನು ಸೇವಿಸಿ ನಂತರ ಅರ್ಧಗಂಟೆಯ ಬಳಿಕ ಬೆಳಗ್ಗಿನ ಉಪಹಾರ ಸೇವಿಸಿ.
ರಾತ್ರಿ ವೇಳೆಯಲ್ಲಿ ಕೂಡ ಇದನ್ನು ಜ್ಯೂಸ್ನಂತೆ ನಿಮಗೆ ಸೇವಿಸಬಹುದಾಗಿದೆ. ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಲಿದ್ದು ಹೊಟ್ಟೆಯನ್ನು ಭರ್ತಿಮಾಡಲಿದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸಿ ಒತ್ತಡವನ್ನು ನಿವಾರಿಸಲಿದೆ. ಜಾಸ್ತಿ ತಿನ್ನುವ ಅಭ್ಯಾಸವಿದ್ದವರು ಇಲ್ಲವೇ ರಾತ್ರಿ ಚೆನ್ನಾಗಿ ತಿಂದು ಜೀರ್ಣಕ್ರಿಯೆ ಸಮಸ್ಯೆ ಎದುರಾಗಿದೆ ಎಂದಾದಲ್ಲಿ ಈ ಜೇನು ದ್ರಾವಣ ನಿಮಗೆ ಆರಾಮದಾಯಕವಾಗಿದೆ. ಇದು ನೇರ ಕಾರ್ಬೊಹೈಡ್ರೇಟ್ ಆಗಿದ್ದು ಇದರಲ್ಲಿರುವ ಜೀರ್ಣಕ್ರಿಯೆಗೆ ಸುಗಮವಾಗಿರುವ ಸಕ್ಕರೆಯನ್ನು ಒಳಗೊಂಡಿದೆ.
ತೂಕ ನಿವಾರಿಸುವಲ್ಲಿ ಸಕ್ಕರೆಯ ಬದಲಿಗೆ ಜೇನನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ. ಇಂತಹ ಸಕ್ಕರೆಯಲ್ಲಿ ವಿಟಮಿನ್ಗಳು ಕೊರತೆ ಇದ್ದು, ಮಿನರಲ್ಗಳು ಖಾಲಿ ಕ್ಯಾಲೋರಿಯನ್ನು ಒಳಗೊಂಡಿರುತ್ತವೆ. ಹೆಚ್ಚು ಸಕ್ಕರೆಯನ್ನು ಸೇವಿಸುವುದು ಅತ್ಯಧಿಕ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಾರಣವಾಗುತ್ತದೆ ಇದು ಅಂಗಾಂಶಗಳಲ್ಲಿ ಮತ್ತು ದೇಹದ ಭಾಗಗಳಲ್ಲಿ ಹೆಚ್ಚುವರಿ ಕೊಬ್ಬನ್ನು ಪೇರಿಸುತ್ತದೆ. ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



