For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಸಿಂಪಲ್ ಟ್ರಿಕ್ಸ್! ಪ್ರಯತ್ನಿಸಿ ನೋಡಿ...

By Manu
|

ಬೊಜ್ಜು ತುಂಬಿದ ದೇಹ, ಅತಿಯಾದ ತೂಕ ಇದೆಲ್ಲವೂ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿರುವಂತಹ ಸಮಸ್ಯೆಯಾಗಿದೆ. ದೇಹಕ್ಕೆ ಹೆಚ್ಚು ಶ್ರಮ ನೀಡದೆ ಮಾಡುವಂತಹ ಕೆಲಸಗಳಿಂದ ಇಂತಹ ಸಮಸ್ಯೆಗಳು ಬರುತ್ತದೆ. ಇಷ್ಟು ಮಾತ್ರವಲ್ಲದೆ ವ್ಯಾಯಾಮದ ಕೊರತೆ ಕೂಡ ಪ್ರಮುಖ ಕಾರಣವಾಗಿದೆ. ಒಂದು ಸಲ ದೇಹದ ತೂಕ ಹೆಚ್ಚಾದರೆ ಅದನ್ನು ಮತ್ತೆ ಇಳಿಸುವುದು ತುಂಬಾ ಕಷ್ಟದ ಕೆಲಸವಾಗುತ್ತದೆ.

ಆಹಾರ ಪಥ್ಯ, ಕಠಿಣ ವ್ಯಾಯಾಮ ಮತ್ತು ಸರಿಯಾದ ಜೀವನ ಕ್ರಮದಿಂದ ತೂಕವನ್ನು ಇಳಿಸಿಕೊಳ್ಳಬಹುದು. ಆದರೆ ಇದಕ್ಕೆ ಶ್ರದ್ಧೆ ತುಂಬಾ ಮುಖ್ಯ. ಒಂದು ದಿನ ಆಹಾರ ಕ್ರಮವನ್ನು ಪಾಲಿಸಿಕೊಂಡು ವ್ಯಾಯಾಮ ಮಾಡಿ ಮರುದಿನ ಮತ್ತೆ ಸಿಕ್ಕಿದೆಲ್ಲವನ್ನೂ ತಿಂದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ತೂಕ ಇಳಿಸಿಕೊಳ್ಳಲು ಉದಾಸೀನ ಬಿಟ್ಟು ಶ್ರಮ ವಹಿಸಬೇಕು.

weight loss

ತೂಕ ಹೆಚ್ಚಿಸಿಕೊಂಡಿರುವವರು ಈಗಾಗಲೇ ಹಲವಾರು ಸಲ ಇಂತಹ ಪ್ರಯತ್ನ ಮಾಡಿರಬಹುದು. ಫಲಿತಾಂಶ ಮಾತ್ರ ಶೂನ್ಯ. ಇದಕ್ಕಾಗಿ ಮನೆಯಲ್ಲಿಯೇ ತಯಾರಿಸುವ ರುಚಿಕರವಾದ ಬಾಳೆಹಣ್ಣಿನ ಜ್ಯೂಸ್ ಒಂದು ತಿಂಗಳಲ್ಲಿ ಐದು ಕೆ.ಜಿ. ತೂಕವನ್ನು ಕಡಿಮೆ ಮಾಡಬಹುದು.

ಅತಿಯಾದ ತೂಕವನ್ನು ಇಳಿಸಿಕೊಳ್ಳಲು ಈ ಜ್ಯೂಸ್ ನೊಂದಿಗೆ ವ್ಯಾಯಾಮ ಕೂಡ ಅತೀ ಅಗತ್ಯವಾಗಿದೆ. ವ್ಯಾಯಾಮವಿಲ್ಲದೆ ಈ ಜ್ಯೂಸ್ ಅನ್ನು ಕುಡಿದು ಯಾವುದೇ ಪ್ರಯೋಜನವಿಲ್ಲ. ಮನೆಯಲ್ಲಿ ಬಾಳೆಹಣ್ಣಿನ ಈ ಜ್ಯೂಸ್ ನ್ನು ತಯಾರಿಸಿಕೊಂಡು ಸೇವಿಸಿ ತೂಕ ಕಳೆದುಕೊಂಡರೆ ಇದರ ಬಗ್ಗೆ ಕಮೆಂಟ್ ಬಾಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿ....

banana

ಜ್ಯೂಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು

*ಹಣ್ಣಾಗಿರುವ ಬಾಳೆಹಣ್ಣು(ಸಿಪ್ಪೆ ತೆಗೆದಿರುವುದು) -1

*ಅಗಸೆ ಬೀಜ(ಫ್ಲ್ಯಾಕ್ಸ್ ಸೀಡ್ಸ್)- 1 ಚಮಚ

*ಸೋಯಾ ಹಾಲು-1/2 ಕಪ್

flaxed seeds

ಈ ಜ್ಯೂಸ್ ಅನ್ನು ನಿಯಮಿತವಾಗಿ ಒಂದು ತಿಂಗಳ ಕಾಲ ಕುಡಿದರೆ ಸುಮಾರು ಐದು ಕೆಜಿಯಷ್ಟು ತೂಕ ಕಳೆದುಕೊಳ್ಳಲು ಇದು ನೆರವಾಗುತ್ತದೆ. ಆರೋಗ್ಯಕರ ಆಹಾರ ತಿನ್ನದೆ ಎಣ್ಣೆಯುಕ್ತ ಆಹಾರ, ಕೊಬ್ಬಿನಾಂಶವಿರುವ ಆಹಾರ ತಿಂದು ಪ್ರತೀ ದಿನ ಸುಮಾರು 40 ನಿಮಿಷ ಕಾಲ ವ್ಯಾಯಾಮ ಮಾಡದೆ ಇದ್ದರೆ ಈ ಜ್ಯೂಸ್ ನಿಂದ ಯಾವುದೇ ಪ್ರಯೋಜನವಿಲ್ಲ.

ಬಾಳೆಹಣ್ಣಿನಲ್ಲಿರುವಂತಹ ಪೊಟಾಶೀಯಂ ಚಯಾಪಚಾಯ ಕ್ರಿಯೆಯನ್ನು ಉತ್ತಮಪಡಿಸಿ ದೇಹವು ಹೆಚ್ಚು ಕೊಬ್ಬು ದಹಿಸುವಂತೆ ಮಾಡುವುದು. ಅಗಸೆ ಬೀಜದಲ್ಲಿ ಸಮೃದ್ಧವಾಗಿರುವಂತಹ ಆ್ಯಂಟಿಆಕ್ಸಿಡೆಂಟ್ ಬಾಳೆಹಣ್ಣಿನ ಕೊಬ್ಬು ಕರಗಿಸುವ ಸಾಮರ್ಥ್ಯಕ್ಕೆ ನೆರವಾಗುವುದು. ಸೋಯಾ ಹಾಲಿನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇರುವುದರಿಂದ ತೂಕ ಕಳೆದುಕೊಳ್ಳುವ ಸಮಯದಲ್ಲಿ ಇದು ದೇಹದಲ್ಲಿ ಪ್ರೋಟೀನ್ ಸಮತೋಲನವನ್ನು ಕಾಪಾಡುವುದು.

soya milk

ಜ್ಯೂಸ್ ತಯಾರಿಸುವ ವಿಧಾನ

*ಒಂದು ಜ್ಯೂಸರ್ ಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿ.

*ಸರಿಯಾಗಿ ರುಬ್ಬಿಕೊಂಡು ಮಿಶ್ರಣ ಮಾಡಿ, ಜ್ಯೂಸ್ ಕುಡಿಯಲು ತಯಾರಾಗಿದೆ.

*ಈ ಜ್ಯೂಸ್ ಅನ್ನು ಒಂದು ತಿಂಗಳ ಕಾಲ ಬೆಳಿಗ್ಗೆ ಉಪಹಾರಕ್ಕೆ ಒಂದು ಕುಡಿಯಬೇಕು.

*ಸೋಯಾ ಹಾಲಿನ ಅಲರ್ಜಿ ಇದ್ದರೆ ಕಡಿಮೆ ಕೊಬ್ಬು ಇರುವ ಹಾಲನ್ನು ಬಳಸಬಹುದು.

English summary

Banana Drink for natural weight loss

You walk into a trendy clothing store and you find something you just love; however, when you try it on, even the largest size does not fit you, because of your weight issues. This can make a person feel extremely disappointed, right? then there is a yummy banana drink that can be prepared right at home, that can help you lose up to 5 kilos in a month!
Story first published: Wednesday, January 18, 2017, 23:45 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more