ಎಚ್ಚರ: ಪದೇ ಪದೇ ಈ ಆಹಾರ ಪದಾರ್ಥಗಳನ್ನು ಬಿಸಿ ಮಾಡಬೇಡಿ

By: Arshad
Subscribe to Boldsky

ಇಂದು ಸಮಯಕ್ಕೆ ಸರಿಯಾಗಿ ತಲುಪುವ ಧಾವಂತದಲ್ಲಿ ನಾವು ನಮ್ಮ ಆಹಾರಗಳನ್ನೂ ಆಹಾರಕ್ರಮವನ್ನೂ ಬದಲಿಸಿಬಿಟ್ಟಿದ್ದೇವೆ. ಆ ಸಮಯದ ಆಹಾರವನ್ನು ಆಗತಾನೇ ತಯಾರಿಸಿದ ತಾಜಾ ಆಹಾರ ಸಿಗುವುದು ಈಗ ತುಂಬಾ ಕಡಿಮೆಯಾಗಿದೆ. ನಾವೆಲ್ಲಾ ಒಂದು ಹೊತ್ತಿನ ಊಟವನ್ನು ತಯಾರಿಸಿ ಉಳಿದುದನ್ನು ಫ್ರಿಜ್ಜಿನಲ್ಲಿಟ್ಟು ಮುಂದಿನ ಸಮಯಕ್ಕೆ ಬಿಸಿಮಾಡಿ ತಿನ್ನುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇವೆ. ಏನಾಶ್ಚರ್ಯ! ಆಹಾರ ಬಿಸಿ ಮಾಡಿದ ಕೂಡಲೇ ವಿಷವಾಗುವುದೇ?

ಉದ್ಯೋಗಸ್ಥರಿಗೆ ಇದು ಅನಿವಾರ್ಯ ಸಹಾ. ಸಾಮಾನ್ಯವಾಗಿ ಫ್ರಿಜ್ಜಿನಲ್ಲಿಟ್ಟ ಆಹಾರ ಹಾಗೇ ಹೊರಗಿಟ್ಟು ತಂಪುತನವನ್ನು ತಾನಾಗಿಯೇ ಕಳೆದುಕೊಳ್ಳಲು ಸಾಕಷ್ಟು ಸಮಯ ಬೇಕಾಗುವುದರಿಂದ ಅಷ್ಟು ಹೊತ್ತು ಕಾಯುವ ವ್ಯವಧಾನವಿಲ್ಲದೇ ನಾವು ಮೈಕ್ರೋವೇವ್ ಬಳಸಿ ತಕ್ಷಣವೇ ಬಿಸಿ ಮಾಡಿಕೊಂಡುಬಿಡುತ್ತೇವೆ. ಆದರೆ ಈ ಪರಿಯ ಥಟ್ಟನೇ ಬಿಸಿಮಾಡುವುದು ಕೆಲ ರೀತಿಯಿಂದ ಆರೋಗ್ಯಕ್ಕೆ ಮಾರಕವಾಗಿವೆ.

ನಾವು ನಿತ್ಯವೂ ಸೇವಿಸುವ ಹೆಚ್ಚಿನ ಆಹಾರಗಳನ್ನು ಮತ್ತೊಮ್ಮೆ ಬಿಸಿಮಾಡಿ, ಅದರಲ್ಲೂ ಥಟ್ಟನೇ ಬಿಸಿಮಾಡಿ ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು, ಕೆಲವೊಂದು ಆಹಾರಗಳು ಕ್ಯಾನ್ಸರ್‌ಗೂ ಕಾರಣವಾಗಬಹುದು. ಕೆಲವು ಆಹಾರಗಳಲ್ಲಿರುವ ಪ್ರೋಟೀನುಗಳು ಹೀಗೆ ಬಿಸಿಮಾಡಿದಾಗ ರೂಪಾಂತರ ಹೊಂದಿ ಕ್ಯಾನ್ಸರ್ ಕಾರಕ ಕಣಗಳಾಗಿ ಪರಿವರ್ತಿತವಾಗುತ್ತವೆ.

ಆದರೆ ಕೆಲವು ಆಹಾರಗಳಲ್ಲಿ ಇಂತಹ ಪ್ರೋಟೀನುಗಳು ಇಲ್ಲದೇ ಇರುವ ಕಾರಣ ಇವುಗಳನ್ನು ಬಿಸಿ ಮಾಡಿದಾಗ ಹೆಚ್ಚಿನ ಅಪಾಯವಿಲ್ಲ. ಆದರೆ ಕೆಲವು ಆಹಾರಗಳಲ್ಲಿ ಈ ಅಂಶ ಅತಿ ಹೆಚ್ಚಾಗಿದ್ದು ಮರುಬಿಸಿಮಾಡಿದ ಬಳಿಕ ಇದು ಕ್ಯಾನ್ಸರ್ ಕಾರಕವಾಗುವ ಸಾಧ್ಯತೆ ಹೆಚ್ಚುತ್ತದೆ. ಅಲ್ಲದೇ ಮೈಕ್ರೋವೇವ್ ನಲ್ಲಿ ಬಿಸಿ ಮಾಡಿದ ಬಳಿಕ ಆಹಾರದ ಪೌಷ್ಟಿಕತೆ ಕಡಿಮೆಯಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಅಷ್ಟೇ ಏಕೆ, ಹೀಗೆ ಬಿಸಿಮಾಡಿದ ನೀರನ್ನು ಗಿಡಗಳಿಗೆ ಉಣಿಸಿದರೆ ಆ ಗಿಡಗಳೂ ಸೊರಗುವುದನ್ನು ಕಂಡುಕೊಳ್ಳಲಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು, ತರಕಾರಿಗಳಿವು...

ಆದ್ದರಿಂದ ಚಿಕ್ಕ ಪ್ರಮಾಣದಲ್ಲಿಯೇ ಸರಿ, ಅಗತ್ಯವಿದ್ದಷ್ಟು ಆಹಾರವನ್ನು ತಯಾರಿಸಿಕೊಂಡು ಸೇವಿಸುವುದು ಅತ್ಯಂತ ಆರೊಗ್ಯಕರ ವಿಧಾನ. ಆದರೆ ಹೀಗೆ ಮಾಡುವುದಕ್ಕೆ ಸಮಯಾವಕಾಶ ಎಲ್ಲರಿಗೂ ಇರುವುದಿಲ್ಲ. ಹಾಗಾಗಿ ತಂಗಳು ಬಿಸಿಮಾಡಿ ಉಣ್ಣುವುದು ಅನಿವಾರ್ಯವಾಗುತ್ತದೆ. ಹಾಗಾದರೆ ಯಾವ ಆಹಾರವನ್ನು ಬಿಸಿ ಮಾಡಬಹುದು, ಯಾವುದನ್ನು ಬಿಸಿ ಮಾಡಬಾರದು ಎಂದು ಕಂಡುಕೊಳ್ಳುವುದು ಹೇಗೆ? ಬನ್ನಿ, ಈ ದ್ವಂದ್ವವನ್ನು ಕೆಳಗೆ ನೀಡಿರುವ ವಿವರಗಳ ಮೂಲಕ ಪರಿಹರಿಸಿಕೊಳ್ಳೋಣ. ಕೆಳಗಿನ ಪಟ್ಟಿಯಲ್ಲಿ ಸರ್ವಥಾ ಬಿಸಿ ಮಾಡಲೇಬಾರದ ಆಹಾರಗಳನ್ನು ವಿವರಿಸಲಾಗಿದೆ..... 

ಕೋಳಿ ಮಾಂಸ

ಕೋಳಿ ಮಾಂಸ

ಕೋಳಿ ಮಾಂಸವನ್ನು ತಯಾರಿಸಿದ ಬಳಿಕ ಬಿಸಿ ಇರುವಂತೆಯೇ ಸೇವಿಸಿದಾಗ ಆರೋಗ್ಯಕರ. ಆದರೆ ಇದನ್ನು ತಣಿಸಿ ಮತ್ತೆ ಬಿಸಿಮಾಡಿದರೆ ಇದರಲ್ಲಿರುವ ಪ್ರೋಟೀನುಗಳು ಪರವರ್ತನೆ ಹೊಂದಿ ಜೀರ್ಣಶಕ್ತಿಗೆ ಸವಾಲೆಸೆಯುತ್ತವೆ. ಆದ್ದರಿಂದ ತಾಜಾ ಕೋಳಿ ಮಾಂಸವನ್ನು ಅಗತ್ಯವಿದ್ದಾಗಲೇ ತಯಾರಿಸಿ ಅದೇ ದಿನ ಖಾಲಿ ಮಾಡಿಬಿಡಬೇಕು. ನಾಳೆಗೆ ಸರ್ವಥಾ ಇಡಬಾರದು. ಆದರೆ ಅನಿವಾರ್ಯವಾಗಿ ಫ್ರಿಜ್ಜಿನಲ್ಲಿಡಲೇಬೇಕಿದ್ದರೆ ಇದರ ಪರಿಣಾಮವನ್ನು ಕನಿಷ್ಟಗೊಳಿಸಲು ಫ್ರಿಜ್ಜಿನಿಂದ ಹೊರತೆಗೆದ ಬಳಿಕ ತನ್ನಿಂತಾನೇ ಸಾಮಾನ್ಯ ತಾಪಮಾನಕ್ಕೆ ಬಂದ ಬಳಿಕವೇ ಹೆಚ್ಚು ಬಿಸಿಮಾಡದೇ ಸೇವಿಸಬೇಕು. ಫಾರಂ ಕೋಳಿಗಳ ಮಾಂಸ ವಿಷದಷ್ಟೇ ಅಪಾಯಕಾರಿ...!

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾನದ ಪಿಷ್ಟವಿರುವ ಕಾರಣ ಪೌಷ್ಟಿಕವೂ ಹೆಚ್ಚು ಕಾಲ ಹಸಿವನ್ನು ತಣಿಸುವಂತಹ ತರಕಾರಿಯೂ ಆಗಿದೆ. ಆದರೆ ಆಲೂಗಡ್ಡೆಯ ಖಾದ್ಯಗಳನ್ನು ತಯಾರಿಸಿ ಬಿಸಿಬಿಸಿ ಇದ್ದಾಗಲೇ ಸೇವಿಸಬೇಕು. ತಡವಾದಷ್ಟೂ ಇದರ ಪೋಷಕಾಂಶಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಲ್ಲದೇ ಒಮ್ಮೆ ತಣಿದ ಬಳಿಕ ಮತ್ತೊಮ್ಮೆ ಬಿಸಿ ಮಾಡಿ ಸೇವಿಸಿದರೆ ಈ ಆಹಾರ ಜೀರ್ಣಕ್ರಿಯೆಯಲ್ಲಿ ತೊಂದರೆಯುಂಟುಮಾಡಬಹುದು.

ಬೀಟ್ರೂಟ್

ಬೀಟ್ರೂಟ್

ಬೀಟ್ರೂಟ್‌ನಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟುಗಳಿವೆ. ಆದರೆ ಈ ಖಾದ್ಯವನ್ನು ಬಿಸಿಯಾಗಿದ್ದಾಗ ತಿಂದರೆ ಮಾತ್ರ ಇದರ ಪೂರ್ಣ ಪ್ರಯೋಜನವನ್ನು ಪಡೆಯಬಹುದು. ಆದರೆ ತಣಿದಿರುವ ಖಾದ್ಯವನ್ನು ತಕ್ಷಣ ಬಿಸಿಮಾಡಿದರೆ ಇದು ಅಪಾಯಕಾರಿಯಾಬಹುದು. ಆದ್ದರಿಂದ ಈ ಖಾದ್ಯವನ್ನು ತಿನ್ನುವ ಎರಡು ಘಂಟೆಗೂ ಮುನ್ನ ಫ್ರಿಜ್ಜಿನಿಂದ ಹೊರತೆಗೆದಿಟ್ಟು ಬಳಿಕ ಹಾಗೇ ತಿನ್ನುವುದು ಲೇಸು. ಬಿಸಿ ಮಾಡಿದರೆ ಇದು ವಿಷಕಾರಿಯಾಗಬಹುದು.

ಅಣಬೆ

ಅಣಬೆ

ಅಣಬೆಯನ್ನು ಸದಾ ಆಗತಾನೇ ತಯಾರಿಸಿದ ರೂಪದಲ್ಲಿ ಮಾತ್ರ ಸೇವಿಸಬೇಕೇ ಹೊರತು ಇದನ್ನು ಸರ್ವಥಾ ಬಿಸಿಮಾಡುವಂತಿಲ್ಲ. ಏಕೆಂದರೆ ಇದರಲ್ಲಿರುವ ಪ್ರೋಟೀನ್ ಅಂಶಗಳು ಬಿಸಿಮಾಡಿದ ತಕ್ಷಣ ಬದಲಾಗಿ ವಿಷಕಾರಿ ಕಣಗಳಾಗಿ ಬದಲಾಗುತ್ತವೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿನ ಪ್ರೋಟೀನುಗಳು ಪ್ರಥಮವಾಗಿ ಬಿಸಿಮಾಡಿದಾಗ ಪರಿವರ್ತನೆ ಹೊಂದಿ ತಿನ್ನಲು ಯೋಗ್ಯವಾಗಿರುತ್ತವೆ. ಆದರೆ ಮರುಬಿಸಿ ಮಾಡಿದರೆ ಮಾತ್ರ ಇದು ವಿಷಕಾರಿಯಾರಿ ಪರಿವರ್ತಿತವಾಗುತ್ತದೆ. ಆದ್ದರಿಂದ ಮೊಟ್ಟೆಯನ್ನು ಒಮ್ಮೆ ಆಮ್ಲೆಟ್ ಅಥವಾ ಬೇಯಿಸಿ ಸಿದ್ಧಪಡಿಸಿದ ಬಳಿಕ ಮುಗಿಯಿತು ಇದನ್ನು ಸರ್ವಥಾ ಮತ್ತೊಮ್ಮೆ ಬಿಸಿಮಾಡಬಾರದು.

 
English summary

Foods That Should Not Be Reheated

Foods That Should Not Be Reheated,It is common thing in our house holds to reheat the left over food after being inside fridge for a long time.
Please Wait while comments are loading...
Subscribe Newsletter