For Quick Alerts
ALLOW NOTIFICATIONS  
For Daily Alerts

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣು, ತರಕಾರಿಗಳಿವು...

By Arshad
|

ನಮ್ಮ ನಿತ್ಯದ ಆಹಾರಗಳಲ್ಲಿ ಹಣ್ಣು ಮತ್ತು ತರಕಾರಿಗಳ ಪಾತ್ರ ಮಹತ್ತರವಾದುದಾಗಿದೆ. ವಿವಿಧ ಬಣ್ಣಗಳ, ವಿವಿಧ ರುಚಿ ಹೊಂದಿರುವ ಪ್ರತಿ ಹಣ್ಣು ಮತ್ತು ತರಕಾರಿಯಲ್ಲಿ ಒಂದಲ್ಲಾ ಒಂದು ಭಿನ್ನವಾದ ಪೋಷಕಾಂಶವಿದ್ದು ತನ್ನದೇ ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೇ ಪ್ರತಿ ಋತುಮಾನಕ್ಕೆ ತಕ್ಕಂತೆ ಭಿನ್ನವಾದ ಹಣ್ಣು ಮತ್ತು ತರಕಾರಿಗಳು ಲಭ್ಯವಿದ್ದು ವಿವಿಧ ಪೋಷಕಾಂಶಗಳ ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ

ಕೆಲವು ಹಣ್ಣು ಮತ್ತು ತರಕಾರಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ವಿಶೇಷವಾಗಿ ಬೇಸಿಗೆಯಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ. ನಮ್ಮ ಆರೋಗ್ಯಕ್ಕೆ ಹಲವು ತರಹದ ಆಹಾರಗಳ ಅಗತ್ಯವಿದೆ. ಆದರೆ ಎಲ್ಲವನ್ನೂ ಒಮ್ಮೆಲೇ ಸೇವಿಸಲು ಅಸಾಧ್ಯವಾದುದರಿಂದ ಪ್ರತಿದಿನವೂ ಬೇರೆ ಬೇರೆ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ಹೆಚ್ಚಿನ ಎಲ್ಲಾ ಪ್ರಕಾರದ ಅಗತ್ಯ ಪೋಷಕಾಂಶಗಳನ್ನು ಪಡೆಯಬಹುದು. ಒಂದು ವೇಳೆ ಸೂಕ್ತ ಪ್ರಮಾಣದಲ್ಲಿ ಇವನ್ನು ಸೇವಿಸದೇ ಇದ್ದರೆ ಅಥವಾ ಕೇವಲ ಒಂದೆರಡು ಬಗೆಯ ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ಸೇವಿಸುತ್ತಿದ್ದರೆ ಕೆಲವು ಪೋಷಕಾಂಶಗಳು ಸಿಗದೇ ಅಥವಾ ಅಗತ್ಯಪ್ರಮಾಣದಲ್ಲಿ ಸಿಗದೇ ದೇಹ ಸೊರಗುತ್ತದೆ. ನಿಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಆಹಾರಗಳು

ಇದರ ಪರಿಣಾಮವನ್ನು ಮಾತ್ರ ನಮ್ಮ ಚರ್ಮ ಅತಿಹೆಚ್ಚಾಗಿ ಅನುಭವಿಸುತ್ತದೆ. ಚರ್ಮ ಸೆಳೆತ ಕಳೆದುಕೊಳ್ಳುವ ಮೂಲಕ ನೆರಿಗೆಗಳು ಮೂಡುವುದು, ಚರ್ಮ ಜೋತುಬೀಳುವುದು, ಕಾಂತಿ ಕಳೆದುಕೊಳ್ಳುವುದು ಮತ್ತು ಕುರೂಪವನ್ನು ಪಡೆಯುತ್ತದೆ. ಅಲ್ಲದೇ ಇಂದಿನ ದಿನದಲ್ಲಿ ಹೆಚ್ಚಾಗಿರುವ ಮಾನಸಿಕ ಒತ್ತಡವನ್ನು ನಿರ್ವಹಿಸಲೂ ವಿವಿಧ ಹಣ್ಣು ಮತ್ತು ತರಕಾರಿಗಳ ಅಗತ್ಯವಿದೆ. ಹೆಚ್ಚಿನ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಸಿ ಹೆಚ್ಚಿನ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಂಟಿ ಆಕ್ಸಿಡೆಂಟುಗಳಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿದಷ್ಟೂ ಶರೀರ ತಾಪಮಾನ ಮತ್ತು ಪ್ರತಿಕ್ಷಣವೂ ಎಗರುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಯಿಂದ ಸೋಂಕಿಗೆ ಒಳಗಾಗದಿರಲು ಸಾಧ್ಯವಾಗುತ್ತದೆ.

ಆರೋಗ್ಯ ಉಳಿಸಿಕೊಳ್ಳಬೇಕಾದರೆ ನಮ್ಮ ರೋಗ ನಿರೋಧಕ ವ್ಯವಸ್ಥೆ ಸುಸ್ಥಿತಿಯಲ್ಲಿರಬೇಕಾಗಿರುವುದು ಅಗತ್ಯ. ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಉತ್ತಮ ಮಟ್ಟದಲ್ಲಿ ಉಳಿಸಿಕೊಳ್ಳುವ ಪೋಷಕಾಂಶಗಳನ್ನು ಹೊಂದಿರುವ ಹಣ್ಣು ಮತ್ತು ತರಕಾರಿಗಳನ್ನು ನಿತ್ಯವೂ ಸೇವಿಸುವುದು ಅಗತ್ಯವಾಗಿದೆ. ಆದರೆ ಯಾವ ಹಣ್ಣು ತರಕಾರಿಗಳನ್ನು ಸೇವಿಸುವುದು ಎಂಬ ಪ್ರಶ್ನೆಗೆ ಕೆಳಗಿನ ಸ್ಲೈಡ್ ಶೋ ಸಮರ್ಪಕ ಉತ್ತರ ನೀಡಲಿದೆ ಮುಂದೆ ಓದಿ...

ಗೆಣಸು

ಗೆಣಸು

ಗೆಣಸಿನಲ್ಲಿ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿದ್ದು ಇವು ಒಂದು ಪ್ರಬಲ ಆಂಟಿ ಆಕ್ಸಿಡೆಂಟುಗಳಾಗಿವೆ. ದೇಹದಲ್ಲಿ ಇದು ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುವ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗೆಣಸು ಬಿಳಿ ಮತ್ತು ಕೆಂಪುಬಣ್ಣದ ಸಿಪ್ಪೆಯಲ್ಲಿ ಲಭ್ಯವಿದ್ದು ಎರಡೂ ಪ್ರಬೇಧಗಳನ್ನು ಹಸಿಯಾಗಿಯೂ ಬೇಯಿಸಿ ಅಥವಾ ಹುರಿದು ತಿನ್ನಬಹುದು. ಆದರೆ ಇದು ವಾಯುಪ್ರಕೋಪವನ್ನು ಕೊಂಚ ಹೆಚ್ಚಿಸುವ ಕಾರಣ ನಿತ್ಯದ ಪ್ರಮಾಣ ಮಿತವಾಗಿರುವುದು ಅವಶ್ಯ. ವರ್ಷವಿಡೀ ಗೆಣಸು ಲಭ್ಯವಿದ್ದು ನಿತ್ಯದ ಆಹಾರದಲ್ಲಿ ಕೊಂಚ ಪ್ರಮಾಣದಲ್ಲಿ ಸೇರಿಸಿಕೊಳ್ಳಬೇಕು.

ವಿವಿಧ ಬೆರ್ರಿ ಹಣ್ಣುಗಳು

ವಿವಿಧ ಬೆರ್ರಿ ಹಣ್ಣುಗಳು

ಸ್ಟ್ರಾಬೆರಿ, ರಾಸ್ಪ್ಬೆರಿ, ಕ್ರ್ಯಾನ್ಬ್ರೆರಿ ಮೊದಲಾದ ಬೆರ್ರಿ ಹಣ್ಣುಗಳು ಹಲವು ವಿಟಮಿನ್ನುಗಳನ್ನು ಹೊಂದಿದ್ದು ಪ್ರತಿದಿನ ಕನಿಷ್ಠ ಒಂದು ಬಗೆಯ ಹಣ್ಣನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಇವುಗಳಲ್ಲಿರುವ ವಿಟಮಿನ್ ಇ, ಸಿ ಮತ್ತು ಇತರ ಪೋಷಕಾಂಶಗಳು ರೋಗ ನಿರೋಧಕ ಶಕ್ತಿಯನ್ನು ಬೇಗನೇ ಹೆಚ್ಚಿಸಲು ನೆರವಾಗುತ್ತವೆ. ಈ ವಿಟಮಿನ್ನುಗಳ ಕಾರಣದಿಂದ ಈ ಎಲ್ಲಾ ಹಣ್ಣುಗಳು ಕೊಂಚ ಹುಳಿರುಚಿಯನ್ನು ಹೊಂದಿವೆ.

ಅಣಬೆ

ಅಣಬೆ

ಸುರಕ್ಷಿತವಾಗಿ ಸೇವಿಸಬಹುದಾದ ಬಿಳಿಯ ಬಟನ್ ಅಣಬೆ (White button mushroom)ಯನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯ. ಅದರಲ್ಲೂ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಅಣಬೆ ಅತಿ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಮಿನ್ನುಗಳು ಫ್ಲೂ ಮತ್ತು ವೈರಸ್ ಸೋಂಕುಗಳನ್ನು ಎದುರಿಸಲೂ ಸಕ್ಷಮವಾಗಿವೆ.

ಕ್ಯಾರೆಟ್

ಕ್ಯಾರೆಟ್

ಕೇಸರಿ ಬಣ್ಣದ ಕ್ಯಾರೆಟ್ ಅನ್ನು ಹಸಿಯಾಗಿ, ಸಾಲಾಡ್ ರೂಪದಲ್ಲಿ, ಬೇಯಿಸಿ, ಹುರಿದು, ತುರಿದು, ಅರೆಬೇಯಿಸಿ ಒಟ್ಟಾರೆ ಯಾವ ರೂಪದಲ್ಲಿ ಬೇಕಾದರೂ ಸೇವಿಸಬಹುದು. ಇದರಲ್ಲಿಯೂ ಬೀಟಾ ಕ್ಯಾರೋಟಿನ್ ಎಂಬ ವಿಟಮಿನ್ ಉತ್ತಮ ಪ್ರಮಾಣದಲ್ಲಿದೆ. ನಿತ್ಯವೂ ಕ್ಯಾರೆಟ್ ಸೇವಿಸುವ ಮೂಲಕ ಹೊಟ್ಟೆಯ ಸೋಂಕುಗಳನ್ನು ಸಮರ್ಥವಾಗಿ ಎದುರಿಸಬಹುದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶತಮಾನಗಳಿಂದ ಬೆಳ್ಳುಳ್ಳಿಯನ್ನು ಮಸಾಲೆ ಸಾಮಾಗ್ರಿಗಿಂತ ಹೆಚ್ಚಾಗಿ ಔಷಧೀಯ ರೂಪದಲ್ಲಿ ಬಳಸಲಾಗುತ್ತಾ ಬರಲಾಗಿದೆ. ಇದು ತೂಕವನ್ನು ಇಳಿಸಲು ನೆರವಾಗುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಪ್ರತಿದಿನವೂ ಒಂದೆರಡು ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ಜಜ್ಜಿ ಊಟದೊಂದಿಗೆ ಸೇವಿಸುವ ಮೂಲಕ ಅಜೀರ್ಣದ ತೊಂದರೆಗಳನ್ನು ಎದುರಿಸಬಹುದು. ಮಸಾಲೆ, ಒಗ್ಗರಣೆಯ ಮೂಲಕವೂ ಬೆಳ್ಳುಳ್ಳಿಯನ್ನು ನಿತ್ಯದ ಅಡುಗೆಯಲ್ಲಿ ಬಳಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

English summary

Fruits & Vegetables That Are Good For The Immune System

Fruits & vegetables should be a part of your diet every day as they help to boost the bodys immunity. Take a look at the foods you must eat.
X
Desktop Bottom Promotion