For Quick Alerts
ALLOW NOTIFICATIONS  
For Daily Alerts

ಗಂಟಲ ಬೇನೆಯನ್ನು ತಕ್ಷಣವೇ ಕಡಿಮೆಗೊಳಿಸಲು ಅತ್ಯುತ್ತಮ ಆಹಾರಗಳು

By Arshad
|

ಗಂಟಲ ಬೇನೆ, ಗಂಟಲಲ್ಲಿ ಕಿರಿಕಿರಿ, ಕೆಮ್ಮು ಮೊದಲಾದ ತೊಂದರೆಗಳು ಹೆಚ್ಚಿನ ಜನರಿಗೆ ಕಾಡುವ ಸಮಾನ್ಯ ತೊಂದರೆಯಾಗಿದೆ. ಇದು ಸರಳ ತೊಂದರೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಇದರ ಪರಿಹಾರ ಮಾತ್ರ ಸರಳವಲ್ಲ. ಗಂಟಳ ಈ ತೊಂದರೆಗಳಿಗೆ ಪ್ರಮುಖ ಕಾರಣವೆಂದರೆ ಗಂಟಲ ಒಳಗಣ ತೇವ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಹರಡಿರುವ ಸೋಂಕು. ಈ ಸೋಂಕಿನಿಂದ ಫ್ಲೂ ತರಹದ ಸೂಚನೆಗಳು, ಜ್ವರ, ಮೈ ಕೈ ನೋವು ಮೊದಲಾದವು ಎದುರಾಗುವುದು ಅನಿವಾರ್ಯ.

ಅದರಲ್ಲೂ ಚಳಿಗಾಲದ ಸಮಯದಲ್ಲಿ ಗಂಟಲ ಕಿರಿಕಿರಿ ಹೆಚ್ಚು ಜನರನ್ನು ಹೆಚ್ಚು ಹೊತ್ತು ಕಾಡುತ್ತದೆ. ಅದರಲ್ಲೂ ತಣ್ಣನೆಯ, ಪ್ರದೂಶಿತ ಗಾಳಿಯನ್ನು ಉಸಿರಾಡಿ ಮನೆಗೆ ಬಂದಾಗ ಈ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು ಹಲವು ರೀತಿಯ ಅಲರ್ಜಿಗಳನ್ನು ಉಂಟು ಮಾಡಬಹುದು. ಗಂಟಲಲ್ಲಿ ಉಂಟಾಗಿರುವ ಸೋಂಕು ಆಹಾರವನ್ನು ನುಂಗಲು ಹಾಗೂ ರಾತ್ರಿ ನಿದ್ದೆ ಆವರಿಸಲೂ ತೊಂದರೆ ಕೊಡುತ್ತದೆ. ಗಂಟಲ ಬೇನೆಗೆ ಕಾರಣವೇನೇ ಇರಲಿ, ಇದನ್ನು ತಕ್ಷಣವೇ ಗುಣಪಡಿಸುವುದು ಅಗತ್ಯವಾಗಿದ್ದು ಕೆಳಗೆ ವಿವರಿಸಿರುವ ಹತ್ತು ಆಹಾರಗಳು ತಕ್ಷಣವೇ ಗುಣಪಡಿಸಲು ನೆರವಾಗುತ್ತವೆ....

ಬಾಳೆಹಣ್ಣು

ಬಾಳೆಹಣ್ಣು

ವರ್ಷದ ಎಲ್ಲಾ ಸಮಯ ದೊರಕುವ ಈ ಹಣ್ಣು ಆಮ್ಲೀಯವಲ್ಲದ ಹಾಗೂ ಸುಲಭವಾಗಿ ಜೀರ್ಣವಾಗುವ ಮೃದುವಾದ ಫಲವಾಗಿದ್ದು ಗಂಟಲ ಬೇನೆಯನ್ನು ಕಡಿಮೆ ಮಾಡಲೂ ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ನುಗಳು ಹಾಗೂ ಖನಿಜಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಗಂಟಲ ಬೇನೆಯನ್ನು ಶೀಘ್ರವಾಗಿ ಕಡಿಮೆ ಮಾಡಲು ನೆರವಾಗುತ್ತದೆ.

ಚಿಕನ್ ಸೂಪ್

ಚಿಕನ್ ಸೂಪ್

ಗಂಟಲ ಬೇನೆಯನ್ನು ಶೀಘ್ರವಾಗಿ ಗುಣಪಡಿಸಲು ಚಿಕನ್ ಸೂಪ್ ಸಹಾ ಪರಿಣಾಮಕಾರಿಯಾಗಿದೆ. ಇದರ ಮಧ್ಯಮ ಪ್ರಾಬಲ್ಯದ ಉರಿಯೂತ ನಿವಾರಕ ಗುಣ ಗಂಟಲ ಬೇನೆಗೆ ಕಾರಣವಾದ ಕಫವನ್ನು ನಿಧಾನವಾಗಿ ನಿವಾರಿಸಿ ಇದರ ಸಂಪರ್ಕಕ್ಕೆ ವೈರಸ್ಸುಗಳನ್ನು ನಿಯಂತ್ರಿಸುವ ಮೂಲಕ ತೊಂದರೆಯನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ. ಗಂಟಲ ಬೇನೆ ಎದುರಾದ ತಕ್ಷಣ ಒಂದು ದೊಡ್ಡ ಬೋಗುಣಿಯಷ್ಟು ಬಿಸಿಬಿಸಿಯಾದ ಚಿಕನ್ ಸೂಪ್ ಹೀರುವುದರಿಂದ ಉತ್ತಮ ಪರಿಹಾರ ಪಡೆಯಬಹುದು.

 ಜೇನು ಮತ್ತು ಲಿಂಬೆ

ಜೇನು ಮತ್ತು ಲಿಂಬೆ

ಸಮ ಪ್ರಮಾಣದಲ್ಲಿ ಜೇನು ಮತ್ತು ಲಿಂಬೆಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದಲೂ ಗಂಟಲ ಬೇನೆ ಶೀಘ್ರವಾಗಿ ಗುಣವಾಗುತ್ತದೆ. ಇದಕ್ಕಾಗಿ ಒಂದು ಲೋಟ ನೀರನ್ನು ಬಿಸಿಮಾಡಿ ತಲಾ ಒಂದು ಚಿಕ್ಕ ಚಮಚ ಜೇನು ಮತ್ತು ಲಿಂಬೆರಸವನ್ನು ಬೆರೆಸಿ ಬಿಸಿಬಿಸಿಯಾಗಿ ಸೇವಿಸುವ ಮೂಲಕ ಗಂಟಲ ತೊಂದರೆ ಹಾಗೂ ಇದರಿಂದಾಗಿ ಎದುರಾಗಿದ್ದ ನೋವು ಕಡಿಮೆಯಾಗುತ್ತದೆ.

ಹಸಿಶುಂಠಿ

ಹಸಿಶುಂಠಿ

ಹಸಿಶುಂಠಿಯನ್ನು ಹಲವಾರು ಕಾಯಿಲೆಗಳಿಗೆ ಔಷಧಿಯಾಗಿ ಬಳಸಬಹುದು. ಗಂಟಲ ಬೇನೆಯ ವಿಷಯ ಬಂದಾಗ ಇದರ ಬಳಿ ಹಲವಾರು ಪ್ರಬಲ ಗುಣಪಡಿಸುವ ಅಂಶಗಳಿಗೆ. ವಿಶೇಷವಾಗಿ ಗಂಟಲ ಬೇನೆಯ ಮೂಲಕ ಎದುರಾಗಿದ್ದ ಕುಹರದ ಸೋಂಕು (sinus infection) ನಿವಾರಣೆಯಾಗುತ್ತದೆ ಹಾಗೂ ಕಫ ಸಡಿಲಗೊಂಡು ಕಟ್ಟಿಕೊಂಡಿದ್ದ ಮೂಗು ಗಂಟಲು ತೆರವಾಗುತ್ತವೆ. ಇದರ ಜೊತೆಗೇ ಹಸಿಶುಂಠಿಯ ಉರಿಯೂತ ನಿವಾರಕ ಗುಣ ಗಂಟಲ ಭಾಗದಲ್ಲಿ ಎದುರಾಗಿದ್ದ ಉರಿಯುತವನ್ನು ನಿವಾರಿಸಲೂ ನೆರವಾಗುತ್ತದೆ.

ಓಟ್ಸ್ ರವೆ

ಓಟ್ಸ್ ರವೆ

ಓಟ್ಸ್ ರವೆಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗುವ ನಾರು ಇದೆ ಹಾಗೂ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಲು ನೆರವಾಗುತ್ತದೆ. ಗಂಟಲ ಬೇನೆಯಿಂದ ಬಳಲುತ್ತಿದ್ದಾಗ ಒಂದು ಬೋಗುಣಿಯಷ್ಟು ಓಟ್ಸ್ ರವೆಯನ್ನು ಬಿಸಿ ಹಾಲಿನಲ್ಲಿ ಕೊಂಚ ಹೊತ್ತು ಕುದಿಸಿ ಇದಕ್ಕೆ ಕೊಂಚ ಜೇನು ಹಾಗೂ ಬಾಳೆಹಣ್ಣನ್ನು ಬೆರೆಸಿ ತಿನ್ನುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಇದರಿಂದ ಗಂಟಲ ಉರಿ ತಕ್ಷಣವೇ ಕಡಿಮೆಯಾಗುತ್ತದೆ.

ಅರಿದಾಳ (Sage)

ಅರಿದಾಳ (Sage)

ಈ ಎಲೆಗಳಲ್ಲಿನ ಗುಣಪಡಿಸುವ, ಸೋಂಕುನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣದ ಕಾರಣ ಗಂಟಲ ಬೇನೆ ತಕ್ಷಣ ಗುಣವಾಗಲು ಸಾಧ್ಯವಾಗುತ್ತದೆ. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಟೀ ಯನ್ನು ಹೀರುವ ಮೂಲಕ ಅಥವಾ ಬಿಸಿಯಾದ ಸೂಪ್ ನಲ್ಲಿ ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು.

ಕ್ಯಾರೆಟ್ ಸೂಪ್

ಕ್ಯಾರೆಟ್ ಸೂಪ್

ಗಂಟಲಲ್ಲಿ ಬೇನೆ ಇದ್ದಾಗ ಹೆಲವು ಹಸಿ ಕ್ಯಾರೆಟ್ಟುಗಳನ್ನು ಜಗಿದು ನುಂಗುವುದು ಉತ್ತಮವಾದರೂ ಇದನ್ನು ನುಂಗುವಾಗ ಗಂಟಲಿಗೆ ನೋವಾದರೆ ಕ್ಯಾರೆಟ್ ಸೂಪ್ ತಯಾರಿಸಿ ತಿನ್ನುವುದೇ ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ವಿಟಮಿನ್ ಎ, ಸಿ ಹಾಗೂ ಪೊಟ್ಯಾಶಿಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಗಂಟಲ ಬೇನೆಯನ್ನು ತಕ್ಷಣವೇ ಕಡಿಮೆಗೊಳಿಸಲು ನೆರವಾಗುತ್ತದೆ.

ಲವಂಗ

ಲವಂಗ

ಗಂಟಲ ಬೇನೆಯನ್ನು ಕಡಿಮೆಗೊಳಿಸಲು ಲವಂಗವೂ ಉತ್ತಮ ಪರಿಹಾರ ಒದಗಿಸುತ್ತದೆ. ಇದರಲ್ಲಿರುವ ಶಿಲೀಂಧ್ರ ನಿವಾರಕ ಹಾಗೂ ಅರವಳಿಕಾ ಗುಣ ಗಂಟಲಿನಲ್ಲಿ ಎದುರಾಗುವ ಕಿರಿಕಿರಿ, ತುರಿಕೆಗಳನ್ನು ನಿವರಿಸಲು ನೆರವಾಗುತ್ತದೆ.

ಕ್ಯಾಮೋಮೈಲ್ ಟೀ

ಕ್ಯಾಮೋಮೈಲ್ ಟೀ

ಈ ಟೀ ಸಹಾ ಗಂಟಲ ಬೇನೆಯನ್ನು ನಿವಾರಿಸಲು ಸಮರ್ಥವಾಗಿರುವ ಇನ್ನೊಂದು ಅದ್ಭುತ ಮೂಲಿಕೆಯಾಗಿದ್ದು ಒಂದು ನೈಸರ್ಗಿಕ ನೋವುನಿವಾರಕವೂ ಆಗಿದೆ. ಈ ಟೀ ಯಲ್ಲಿರುವ ಕಫ ನಿವಾರಕ ಗುಣ ಗಂಟಲ ಒಳಭಾಗದಲ್ಲಿ ಸಂಗ್ರಹವಾಗಿದ್ದ ಕಫವನ್ನು ನಿವಾರಿಸಿ ಗಂಟಲಬೇನೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ಬರೀ ಅಡುಗೆಗೆ ಮಾತ್ರವಲ್ಲ! ನೋವಿರುವ ಗಂಟಲಿನ ಉಪಶಮನವನ್ನು ಕೂಡ ಇದು ಮಾಡುತ್ತದೆ. ಬೆಳ್ಳುಳ್ಳಿಯ ಬ್ಯಾಕ್ಟಿರಿಯಾ ನಿರೋಧಕ ಮತ್ತು ನಂಜುನಿರೋಧಕ ಅಂಶಗಳು ನೋವಿರುವ ಗಂಟಲಿನಿಂದ ತ್ವರಿತ ಉಪಶಮನವನ್ನು ನೀಡುತ್ತದೆ. ತಾಜಾ ಬೆಳ್ಳುಳ್ಳಿಯನ್ನು ತುಂಡುಗಳನ್ನಾಗಿ ಮಾಡಿಕೊಳ್ಳಿ. ನಿಮ್ಮ ಹಲ್ಲನ್ನು ಬಳಸಿಕೊಂಡು ಇದನ್ನು ನೀವು ಬೇರ್ಪಡಿಸಬಹುದು. ಗಂಟಲು ನೋವಿಗೆ ಕಾರಣವಾಗಿರುವ ರಾಸಾಯನಿಕ ಅಲಿಸಿನ್ ಅನ್ನುಇದು ಕೊಲ್ಲುತ್ತದೆ. ಬೆಳ್ಳುಳ್ಳಿ ಎಣ್ಣೆಯನ್ನು ಕೂಡ ನೀವು ಬಳಸಬಹುದು. 1/4 ಕಪ್ ನೀರಿಗೆ ಬೆಳ್ಳುಳ್ಳಿ ಎಣ್ಣೆಯನ್ನು ಹಾಕಿ. ನಿಯಮಿತವಾಗಿ ಗಂಟಲಿನ ಮೇಲೆ ಇದನ್ನು ಬಳಸಿಕೊಳ್ಳಿ. ಹಸಿ ಮತ್ತು ಬೇಯಿಸಿದ ಬೆಳ್ಳುಳ್ಳಿಯನ್ನು ತಿನ್ನಿ. ಬೆಳ್ಳುಳ್ಳಿಯ ರುಚಿ ನಿಮಗೆ ಇಷ್ಟವಾಗದಿದ್ದರೆ ಬೆಳ್ಳುಳ್ಳಿ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳಬಹುದು.

English summary

Foods To Cure Sore Throat To Bring In An Instant Relief

During the winter season, sore throat is common and affects most of the people. Sore throat is the first symptom to strike when your body is going to catch a cold. A sore throat can also be the result of smoking, inhaling polluted air and various types of allergies. It gets even worse because it becomes difficult to swallow food and prevents you from getting a good night's sleep. Whatever may be the cause of your sore throat, it is necessary to take the right steps by including these 10 foods to cure sore throat to get an instant relief.
X
Desktop Bottom Promotion