For Quick Alerts
ALLOW NOTIFICATIONS  
For Daily Alerts

  ಹರಳೆಣ್ಣೆಯ ಆರೋಗ್ಯಕಾರಿ ಉಪಯೋಗಗಳು, ಒಂದೇ ಎರಡೇ?

  By Arshad
  |

  ಅಡುಗೆಗೆ ಬಳಸುವ ಎಣ್ಣೆಗಳಲ್ಲಿಯೇ ಅತಿ ಹೆಚ್ಚು ಸ್ನಿಗ್ಧವಾದ ಹರಳೆಣ್ಣೆ ಹಿಂದಿನ ದಿನಗಳಲ್ಲಿ ಅಡುಗೆ, ಸೌಂದರ್ಯ ಹಾಗೂ ಔಷಧಿಯ ರೂಪದ ಜೊತೆಗೇ ಬಂಡಿಗಳ ಗಾಲಿಗಳಿಗೆ ಗ್ರೀಸ್ ಬದಲಿಗೆ ಉಪಯೋಗಿಸಲಾಗುತ್ತಿತ್ತು. ಹರಳೆಣ್ಣೆ ಹಲವಾರು ತೊಂದರೆಗಳಿಗೆ ಔಷಧಿಯಾಗಿದೆ. ಇದು ಚರ್ಮ ಕೂದಲುಗಳ ಜೊತೆಗೇ ಹೊಟ್ಟೆಯ ತೊಂದರೆಗಳು, ವಿವಿಧ ನೋವುಗಳಿಗೂ ಉತ್ತಮ ಪರಿಹಾರ ಒದಗಿಸುತ್ತದೆ. ಈ ಎಣ್ಣೆಯಲ್ಲಿ ಪ್ರಮುಖವಾಗಿ ರಿಸಿನೋಲಿಕ್ ಆಮ್ಲ ಎಂಬ ಪೋಷಕಾಂಶವಾಗಿದ್ದು ಎಣ್ಣೆಯ 85%-95%ರಷ್ಟು ಭಾಗವನ್ನು ಆಕ್ರಮಿಸಿಕೊಂಡಿದೆ.

  ಉಳಿದಂತೆ ಇದರಲ್ಲಿ ಓಲಿಕ್ ಆಮ್ಲ, ಲಿನೋಲಿ ಆಮ್ಲ ಮೊದಲಾದ ಪೋಷಕಾಂಶಗಳಿವೆ. ಈ ಅಮ್ಲ ಅತಿ ಹೆಚ್ಚಿನ ಸಾಂದ್ರತೆಯಲ್ಲಿರುವುದೇ ಈ ಎಣ್ಣೆಯ ಪ್ರಾಮುಖ್ಯತೆಯಾಗಿದೆ. ಇದು ಸುಲಭವಾಗಿ ಬೆಳೆಯಲಾಗುವ ಮರಗಳ ಬೀಜದಿಂದ ಸಾಂಪ್ರಾದಾಯಿಕ ವಿಧಾನದಲ್ಲಿಯೂ ಹಿಂಡಿ ತೆಗೆಯಬಹುದಾದುದರಿಂದ ಅಗ್ಗವೂ ಆಗಿದೆ.

  ಹರಳೆಣ್ಣೆಯಿಂದ ಸಾಕಷ್ಟು ಲಾಭಗಳಿವೆ, ಇದನ್ನು ನಿರ್ಲಕ್ಷಿಸಬೇಡಿ

  ಆದರೆ ಈ ಎಣ್ಣೆಯ ಬಳಕೆಯಿಂದ ಪಡೆಯಬಹುದಾದ ಲಾಭವನ್ನು ಪರಿಗಣಿಸಿದರೆ ಈ ಎಣ್ಣೆಗೆ ನೀಡುವ ಬೆಲೆ ಅತ್ಯಲ್ಪ ಎಂದು ಮನವರಿಕೆಯಾಗುತ್ತದೆ. ಇದು ತ್ವಚೆಯ ಹೊಳಪಿಗೆ, ಕೂದಲ ಕಾಂತಿಗೆ ಮಾತ್ರವಲ್ಲ ಮೂಳೆಗಳ ಸಂದುಗಳಲ್ಲಿ ನೋವು ಅಥವಾ ಸಂಧಿವಾತಕ್ಕೂ ಉತ್ತಮ ಔಷಧಿಯಾಗಿದೆ. ಬನ್ನಿ, ಈ ಅದ್ಭುತ ಎಣ್ಣೆಯ ಕೆಲವು ಪ್ರಯೋಜನಗಳ ಬಗ್ಗೆ ಅರಿಯೋಣ... 

  ಸಂಧಿವಾತ ಗುಣಪಡಿಸಲು ನೆರವಾಗುತ್ತದೆ

  ಸಂಧಿವಾತ ಗುಣಪಡಿಸಲು ನೆರವಾಗುತ್ತದೆ

  ಈ ಎಣ್ಣೆಯಲ್ಲಿ ಹೆಚ್ಚಿನ ಸಾಂದ್ರತೆಯಲ್ಲಿರುವ ರಿಸಿನೋಲಿಕ್ ಆಮ್ಲ, ಓಲಿಕ್, ಲಿನೋಲಿಕ್ ಆಮ್ಲಗಳು ಹಾಗೂ ಇತರ ಕೊಬ್ಬಿನ ಆಮ್ಲಗಳು ಸಂಧಿವಾತ ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲರೆ ರ್‍ಯೂಮಾಟಿಕ್ ನೋವು ಹಾಗೂ ಗಂಟುಗಳು ಊದಿಕೊಳ್ಳುವುದನ್ನೂ ಕಡಿಮೆ ಮಾಡುತ್ತದೆ. ಈ ತೊಂದರೆಗಳು ಇರುವ ಯಾವುದೇ ವಯೋಮಾನದ ವ್ಯಕ್ತಿಗಳಿಗೂ ಹರಳೆಣ್ಣೆಯನ್ನು ಸುರಕ್ಷಿತವಾಗಿ ಬಳಸಬಹುದು.

  ಸಂಧಿವಾತ ಗುಣಪಡಿಸಲು ನೆರವಾಗುತ್ತದೆ

  ಸಂಧಿವಾತ ಗುಣಪಡಿಸಲು ನೆರವಾಗುತ್ತದೆ

  ಹರಳೆಣ್ಣೆಯನ್ನು ಕೊಂಚವೇ ಬಿಸಿಮಾಡಿ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡರೆ ಇದು ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಇಳಿದು ನೋವಿಗೆ ಕಾರಣವಾದ ಅಂಶಗಳನ್ನು ನಿವಾರಿಸಿ ನೋವು ಕಡಿಮೆ ಮಾಡುತ್ತದೆ. ಇನ್ನೂ ಉತ್ತಮ ಪರಿಣಾಮ ಪಡೆಯಲು ಹರಳೆಣ್ಣೆಯೊಂದಿಗೆ ಬೇರೆ ಔಷಧಿಗಳನ್ನು ಬೆರೆಸಿಯೂ ಬಳಸಬಹುದು.

  ಗರ್ಭನಿರೋಧಕವಾಗಿ ಬಳಕೆಯಾಗುತ್ತದೆ

  ಗರ್ಭನಿರೋಧಕವಾಗಿ ಬಳಕೆಯಾಗುತ್ತದೆ

  ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ಹಲವು ಮಹಿಳೆಯರು ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ. ಆದರೆ ಈ ಮಾತ್ರೆಗಳು ಅಡ್ಡಪರಿಣಾಮದಿಂದ ಹೊರತಾಗಿರದ ಕಾರಣ ಬೇರೆ ತೊಂದರೆ ಎದುರಾಗುತ್ತದೆ. ಆದ್ದರಿಂದ ಮಹಿಳೆಯರು ಈ ಮಾತ್ರೆಗಳ ಬದಲಿಗೆ ಹರಳೆಣ್ಣೆಯನ್ನು ಬಳಸಬಹುದು. ಈ ಎಣ್ಣೆಯಲ್ಲಿರುವ ರಿಸಿನ್ ಎಂಬ ಪ್ರೋಟೀನುಗಳು, ಒಂದು ವೇಳೆ ಕಡಿಮೆ ಪ್ರಮಾಣದಲ್ಲಿ ಬಳಕೆಯಾದರೆ ಇದು ರೋಗಾಣುಹಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದೇಕಾರಣಕ್ಕೆ ಕೆಲವಾರು ಗರ್ಭನಿರೋಧಕ ಜೆಲ್ ಹಾಗೂ ಲೋಷನ್ ಗಳಲ್ಲಿ ಬಳಸಲಾಗುತ್ತದೆ.

  ಗರ್ಭನಿರೋಧಕವಾಗಿ ಬಳಕೆಯಾಗುತ್ತದೆ

  ಗರ್ಭನಿರೋಧಕವಾಗಿ ಬಳಕೆಯಾಗುತ್ತದೆ

  ಒಂದು ವೇಳೆ ಪ್ರಾರಂಭಿಕ ಹಂತದ ಗರ್ಭವತಿಯಾಗಿರುವ ಮಹಿಳೆ ಹರಳೆಣ್ಣೆಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಇದು ಬಲವಂತವಾಗಿ ಗರ್ಭಪಾತಕ್ಕೆ ಕಾರಣವಾಗುತ್ತದೆ. ಆದರೆ ಇದು ಅಪಾಯಕಾರಿಯಾದ ಕ್ರಮವಾಗಿದೆ ಹಾಗೂ ಇನ್ನೂ ಹುಟ್ಟದೇ ಇರುವ ಜೀವವೊಂದನ್ನು ಭೂಮಿಗೆ ಬರುವ ಮುನ್ನವೇ ಕೊಂದ ಪಾಪಭಾವನೆಯೂ ಎದುರಾಗುತ್ತದೆ.

  ಮಾಸಿಕ ದಿನಗಳ ಏರುಪೇರನ್ನು ಸರಿಪಡಿಸುತ್ತದೆ

  ಮಾಸಿಕ ದಿನಗಳ ಏರುಪೇರನ್ನು ಸರಿಪಡಿಸುತ್ತದೆ

  ಇಂದು ಎಷ್ಟೋ ಮಹಿಳೆಯರು ತಮ್ಮ ಮಾಸಿಕ ದಿನಗಳು ಕ್ರಮಬದ್ದವಾಗಿಲ್ಲ ಎಂಬ ತೊಂದರೆಯನ್ನು ಹೇಳಿಕೊಳ್ಳುತ್ತಾರೆ. ಇದರಿಂದ ಮನೋಭಾವನೆಯಲ್ಲಿ ಏರುಪೇರು, ಅನಿಯಂತ್ರಿತ ರಕ್ತಸ್ರಾವ ಹಾಗೂ ಕೆಳಹೊಟ್ಟೆಯಲ್ಲಿ ನೋವು ಹಾಗೂ ಸೆಡೆತ ಕಾಣಿಸಿಕೊಳ್ಳುತ್ತದೆ. ಈ ತೊಂದರೆಗಳನ್ನು ನಿವಾರಿಸಲು ಹರಳೆಣ್ಣೆ ನೆರವಾಗುತ್ತದೆ. ಇದರಲ್ಲಿರುವ ರಿಸಿನೋಲಿಕ್ ಆಮ್ಲ ಮಾಸಿಕ ಸ್ರಾವದ ಪ್ರಮಾಣವನ್ನು ಹೆಚ್ಚಿಸುವ ಗುಣ ಹೊಂದಿದೆ. ಈ ಸ್ರಾವ ಹೊರಬರದೇ ಸಂಗ್ರಹವಾಗಿರುವ ಮೂಲಕವೇ ಹೊಟ್ಟೆನೋವಿನ ಸಹಿತ ಇತರ ತೊಂದರೆಗಳು ಎದುರಾಗಿರುತ್ತವೆ. ಯಾವಾಗ ಈ ಸ್ರಾವ ಹೊರಹೋಯಿತೋ ಈ ಮೂಲಕ ಎದುರಾಗಿದ್ದ ತೊಂದರೆಗಳೆಲ್ಲಾ ಸರಿಯಾಗುತ್ತವೆ.

  ತ್ವಚೆಯ ಆರೈಕೆಗೆ ನೆರವಾಗುತ್ತದೆ

  ತ್ವಚೆಯ ಆರೈಕೆಗೆ ನೆರವಾಗುತ್ತದೆ

  ಹೊಳಪುಳ್ಳ, ಕಲೆಯಿಲ್ಲದ ಹಾಗೂ ನುಣುಪಾದ ತ್ವಚೆಗಾಗಿ ಹರಳೆಣ್ಣೆಯನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಾ ಬರಲಾಗಿದೆ. ಇದರಲ್ಲಿರುವ ಅಂಡಿಸೈಲೆನಿಕ್ ಆಮ್ಲ ತ್ವಚೆಯ ತೊಂದರೆಗಳನ್ನು ಸರಿಪಡಿಸುವ ಕ್ಷಮತೆ ಹೊಂದಿದ್ದು ವಿಶೇಷವಾಗಿ ಚರ್ಮದಲ್ಲಿ ಉಂಟಾಗಿರುವ ಕೀವು ಹಾಗೂ ಸೋಂಕುಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಹಾಗೂ ಶಿಲೀಂಧ್ರ ನಿವಾರಕ ಗುಣಗಳು ತ್ವಚೆಯ ಆರೈಕೆಯಲ್ಲಿ ನೆರವಾಗುತ್ತವೆ.

  ಮಲಬದ್ಧತೆಯಿಂದ ರಕ್ಷಿಸುತ್ತದೆ

  ಮಲಬದ್ಧತೆಯಿಂದ ರಕ್ಷಿಸುತ್ತದೆ

  'ಹರಳೆಣ್ಣೆ ಕುಡಿದವರಂತೆ ಆಡುತ್ತಾನೆ' ಎಂಬ ಕನ್ನಡದ ನುಡಿಗಟ್ಟಿಗೆ ಇದರ ವಿರೇಚಲ ಗುಣವೇ ಕಾರಣವಾಗಿದೆ. ಹರಳೆಣ್ಣೆಯನ್ನು ನೇರವಾಗಿ ಕುಡಿಯುವ ಮೂಲಕ ಜೀರ್ಣಾಂಗಗಳಲ್ಲಿದ್ದ ಕಲ್ಮಶಗಳನ್ನು ಬಲವಂತವಾಗಿ ಹೊರಹಾಕಲು ಸಾಧ್ಯವಾಗುವ ಮೂಲಕ ಜೀರ್ಣಾಂಗಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಮಲಬದ್ದತೆಯಿಂದ ನರಳುತ್ತಿರುವ ರೋಗಿಗಳಿಗೆ ದುಬಾರಿ ಔಷಧಿಯಿಂದಲೂ ಆಗದೇ ಇರುವ ಕಾರ್ಯ ಹರಳೆಣ್ಣೆ ಸುಲಭವಾಗಿ ನಿರ್ವಹಿಸುತ್ತದೆ.

  ಎದೆಹಾಲನ್ನು ಹೆಚ್ಚಿಸುತ್ತದೆ

  ಎದೆಹಾಲನ್ನು ಹೆಚ್ಚಿಸುತ್ತದೆ

  ಬಾಣಂತಿಯರ ದೇಹದಲ್ಲಿ ಹೆಚ್ಚಿನ ಹಾಲು ಉತ್ಪತ್ತಿಯಾಗಲು ಹರಳೆಣ್ಣೆ ಸಹಕರಿಸುತ್ತದೆ. ಅಲ್ಲದೇ ಹೆಚ್ಚಿನ ಪ್ರಮಾಣದ ಹಾಲು ಸುಲಭವಾಗಿ ಮಗುವಿಗೆ ಲಭ್ಯವಾಗುವ ಮೂಲಕ ಮಗುವಿನ ಆರೋಗ್ಯವೂ ಉತ್ತಮವಾಗಲು ನೆರವಾಗುತ್ತದೆ. ಆದರೆ ಹರಳೆಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಅಗತ್ಯ. ಏಕೆಂದರೆ ಹರಳೆಣ್ಣೆಯ ಪ್ರಮಾಣ ಹೆಚ್ಚಾದರೆ ಹಾಲಿನ ಗುಣಮಟ್ಟವೂ ಕೊಂಚ ಬದಲಾಗಬಹುದು ಹಾಗೂ ಮಗುವಿನ ಆರೋಗ್ಯವನ್ನು ಬಾಧಿಸಬಹುದು. ಇದುವರೆಗೆ ಹರಳೆಣ್ಣೆಯ ಪ್ರಯೋಜನಗಳ ಬಗ್ಗೆ ಅರಿತೆವು. ಈಗ ಸಂಧಿವಾತಕ್ಕೆ ಹರಳೆಣ್ಣೆಯನ್ನು ಹೇಗೆ ಬಳಸುವುದು ಎಂಬುದನ್ನು ನೋಡೋಣ:

  ಈ ಎಣ್ಣೆಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಅಗತ್ಯವಿರುವ ಸಾಮಾಗ್ರಿಗಳೆಂದರೆ:

  * ಸಾಂಪ್ರಾದಾಯಿಕ ವಿಧಾನದಲ್ಲಿ ಹಿಂಡಿ ತಗೆದ ಹರಳೆಣ್ಣೆ (ಅಥವಾ ತಣ್ಣನೆಯ ವಿಧಾನ)

  * ಎಣ್ಣೆ ಬಿಸಿಮಾಡಲು ದಪ್ಪತಳದ ಪಾತ್ರೆ

  * ಗಂಟುಗಳಿಗೆ ಸುತ್ತಲು ಪ್ಲಾಸ್ಟಿಕ್ ಹಾಳೆ

  * ಒಂದು ದೊಡ್ಡ ಸ್ನಾನದ ಟವೆಲ್

  * ಉಣ್ಣೆಯ ಬಟ್ಟೆ, ಅಥವಾ ಹತ್ತಿಯ ದಪ್ಪನೆಯ ಬಟ್ಟೆ ಸುಮಾರು ಒಂದು ಚದರಡಿಯಷ್ಟು.

  ವಿಧಾನ

  ವಿಧಾನ

  ಪಾತ್ರೆಯಲ್ಲಿ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಉಣ್ಣೆಯ ಅಥವಾ ಹತ್ತಿಯ ಬಟ್ಟೆಯನ್ನು ಇದರಲ್ಲಿ ಮುಳುಗಿಸಿ ಚೆನ್ನಾಗಿ ಹೀರಿಕೊಳ್ಳುವಂತೆ ಮಾಡಿ.

  ನೋವಿರುವ ಭಾಗಕ್ಕೆ ಬೆಚ್ಚನೆಯ ಎಣ್ಣೆಯಿಂದ ಕೊಂಚ ಹೊತ್ತು ಮಸಾಜ್ ಮಾಡಿ

  ಬಳಿಕ ಎಣ್ಣೆಯಲ್ಲಿ ತೋಯ್ದಿರುವ ಬಟ್ಟೆಯನ್ನು ಗಂಟು ಆವರಿಸುವಂತೆ ಇರಿಸಿ ಪ್ಲಾಸ್ಟಿಕ್ ಹಾಳೆಯನ್ನು ಸುತ್ತಿಬಿಗಿಯಾಗಿಸಿ.

  ವಿಧಾನ

  ವಿಧಾನ

  ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಅನುಸರಿಸಿ ಈ ಭಾಗದ ಮೇಲೆ ದಪ್ಪನೆಯ ಟವೆಲ್ ಹಾಕಿ ರಾತ್ರಿಯಿಡೀ ಹಾಗೇ ಇರಿಸಿ. ಮರುದಿನ ಬೆಳಿಗ್ಗೆ ಎಲ್ಲವನ್ನೂ ಬಿಚ್ಚಿ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ನೋವಿನ ಪ್ರಮಾಣವನ್ನು ಅನುಸರಿಸಿ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಪುನರಾವರ್ತಿಸಬೇಕು.

  English summary

  castor-oil-benefits-for-arthritis-skin-menstrual-disorder

  Castor oil is derived from the extract of the castor plant and is a vegetable oil used for skin and hair. But its benefits don't limit there. This pale yellow coloured oil has far more medicinal properties that can be beneficial for your health as well. The composition of castor oil makes it even more worth using. Castor oil is made up of ricinoleic acid, which is present in abundance (almost 85%-95%). Among the other ingredient, this oil contains oleic acid, linoleic acid, etc.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more