ಫಟಾಫಟ್ ರೆಡಿಯಾಗುವ ಇನ್‌ಸ್ಟೆಂಟ್ ನೂಡಲ್ಸ್ ತುಂಬಾನೇ ಡೇಂಜರ್!

Posted By: Arshad
Subscribe to Boldsky

ಥಟ್ಟನೆ ತಯಾರಾಗುತ್ತದೆ ಎಂಬ ಒಂದೇ ಕಾರಣದಿಂದ ಇಂದು ನೂಡಲ್ಸ್ ಎಂಬ ಸಿದ್ಧ ಆಹಾರ ಎಲ್ಲ ವಯೋಮಾನದವರಿಗೆ ಇಷ್ಟವಾದ ಆಹಾರವಾಗಿದ್ದರೂ ಇದು ಅನಾರೋಗ್ಯಕರ ಆಹಾರವೇ ಆಗಿದೆ. ಕೆಲವರಂತೂ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ತಿಂಡಿ, ರಾತ್ರಿಯ ಊಟ ಎಲ್ಲಕ್ಕೂ ಈ ನೂಡಲ್ಸ್‌ಗಳನ್ನೇ ನೆಚ್ಚಿಕೊಂಡಿರುತ್ತಾರೆ. ಇದು ಅನಾರೋಗ್ಯಕರವೇಕೆ ಎಂಬ ಪ್ರಶ್ನೆಗೆ ಸರಳ ಉತ್ತರ ನೀಡಿದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟುಗಳಿದ್ದು ಜೀರ್ಣಕ್ರಿಯೆಯಲ್ಲಿ ಸಕ್ಕರೆಯಾಗಿ ಪರಿವರ್ತನೆಯಾಗುತ್ತದೆ. ಇದನ್ನು ಬಳಸಿಕೊಳ್ಳಬೇಕಾದರೆ ಕಠಿಣ ವ್ಯಾಯಾಮ ಆಗತ್ಯ. 

ಈ ವ್ಯಾಯಾಮವನ್ನೇನೂ ನಾವು ಮಾಡದೇ ಇರುವ ಕಾರಣ ಇವು ಸುಲಭವಾಗಿ ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಸಂಗ್ರಹಗೊಳ್ಳುತ್ತವೆ. ಅಲ್ಲದೇ ಇದರಲ್ಲಿ ಪೋಷಕಾಂಶಗಳು ಅತಿ ಕಡಿಮೆಯಾಗಿದ್ದು ಇದನ್ನು ಪ್ರಮುಖ ಆಹಾರವನ್ನಾಗಿ ಸೇವಿಸಲು ಸಾಧ್ಯವೇ ಇಲ್ಲ! ಅಲ್ಲದೇ ದಿನದಲ್ಲಿ ಕೆಲವು ಬಾರಿಯಾದರೂ ಸೇವಿಸಿದರೆ ಇದರಿಂದ ದೇಹ ಪೋಷಕಾಂಶಗಳ ಕೊರತೆ ಎದುರಿಸುತ್ತದೆ ಹಾಗೂ ಇನ್ನೊಂದೆಡೆ ಅನಾರೋಗ್ಯಕರ ಕೊಬ್ಬು ಹೆಚ್ಚುವ ಮೂಲಕ ಸ್ಥೂಲಕಾಯ, ಅಧಿಕ ರಕ್ತದೊತ್ತಡ ಮೊದಲಾದ ಲಕ್ಷಣಗಳೂ ಕಾಣಿಸತೊಡಗುತ್ತವೆ. ಸಾಮಾನ್ಯವಾಗಿ ಈ ಸಿದ್ಧ ಆಹಾರಗಳನ್ನು ಹೆಚ್ಚು ಕಾಲ ಕೆಡದಂತೆ ರಕ್ಷಿಸಲು ಇವುಗಳಿಗೆ ಹಲವಾರು ಸಂರಕ್ಷಕಗಳನ್ನು ಸೇರಿಸಿ ಸಂಸ್ಕರಿಸಲಾಗುತ್ತದೆ.

ಈ ಸಂರಕ್ಷಕಗಳಲ್ಲಿ ಅತಿ ಹೆಚ್ಚಿನ ಸೋಡಿಯಂ ಲವಣವಿದೆ ಹಾಗೂ ಕೊಬ್ಬು ಹೆಚ್ಚಲು ನೆರವಾಗುತ್ತದೆ. ಅಲ್ಲದೇ ರುಚಿ ಹೆಚ್ಚಿಸಲು ಸೇರಿಸಲಾಗುವ ಕೆಲವಾರು ಲವಣಗಳು ಸಹಾ ಆರೋಗ್ಯವನ್ನು ಕೆಲವು ಬಗೆಯಲ್ಲಿ ಕೆಡಿಸುತ್ತವೆ. ಈ ನೂಡಲ್ಸ್ ಅಗ್ಗವೂ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಸಿದ್ಧಗೊಳಿಸಲು ಸಾಧ್ಯವೆಂದು ಜನರು ಹೆಚ್ಚು ಇಷ್ಟಪಟ್ಟರೂ ಆರೋಗ್ಯದ ದೃಷ್ಟಿಯಿಂದ ಇದು ಸರ್ವಥಾ ಉತ್ತಮ ಆಯ್ಕೆಯಲ್ಲ. ಇದನ್ನು ಖಚಿತ ಪಡಿಸಲು ಇಲ್ಲಿವೆ ಹನ್ನೊಂದು ಕಾರಣಗಳು....  

ಅತಿ ಕಡಿಮೆ ನಾರು

ಅತಿ ಕಡಿಮೆ ನಾರು

ಇದರಲ್ಲಿ ಅತಿ ಕಡಿಮೆ ಅಥವಾ ಇಲ್ಲವೇ ಇಲ್ಲವೆನ್ನುವಷ್ಟು ಕರಗದ ನಾರು ಇದೆ ಹಾಗೂ ಪ್ರೋಟೀನುಗಳು ಸಹಾ ಅತಿ ಕಡಿಮೆ ಇರುತ್ತದೆ. ಹೀಗೆ ಸಂಸ್ಕರಿಸಿದ ನೂಡಲ್ಸ್ ಗಳಲ್ಲಿ ಕೊಬ್ಬು ಹೆಚ್ಚಿದ್ದು ದೇಹದ ತೂಕ ಹೆಚ್ಚಲು ನೆರವಾಗುತ್ತದೆ. ನಾರು ಮತ್ತು ಪ್ರೋಟೀನ್ ಇಲ್ಲದೇ ಇರುವ ಕಾರಣ ಹೊಟ್ಟೆ ತುಂಬಿದರೂ ಪೋಷಕಾಂಶಗಳು ಬೇಕು ಎಂದು ಜೀರ್ಣಾಂಗಗಳು ಮೆದುಳಿಗೆ ಸೂಚನೆ ನೀಡುವ ಮೂಲಕ ಇವುಗಳನ್ನು ಸೇವಿಸಿದರೂ ಹಸಿವೆ ಕಡಿಮೆಯಾಗದೇ ಇನ್ನಷ್ಟು ತಿನ್ನಲು ಹಾಗೂ ತನ್ಮೂಲಕ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಸ್ಥೂಲಕಾಯದ ಲಕ್ಷಣ (Metabolic Syndrome) ಗಳಿಗೆ ಕಾರಣವಾಗುತ್ತದೆ

ಸ್ಥೂಲಕಾಯದ ಲಕ್ಷಣ (Metabolic Syndrome) ಗಳಿಗೆ ಕಾರಣವಾಗುತ್ತದೆ

ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ವಾರದಲ್ಲಿ ಎರಡು ಬಾರಿ ನೂಡಲ್ಸ್ ಸೇವಿಸಿದ ಮಹಿಳೆಯರಲ್ಲಿ ಸ್ಥೂಲಕಾಯ ಆವರಿಸುವ ಸಾಧ್ಯತೆ ಇತರರಿಗಿಂತ ಹೆಚ್ಚಿರುತ್ತದೆ. ಈ ಮಹಿಳೆಯರು ತಮ್ಮ ಸಾಂಪ್ರಾದಾಯಿಕ ಆಹಾರ ಸೇವಿಸಿದರೂ ಅಥವಾ ಬೇರೆ ಸಿದ್ಧ ಆಹಾರಗಳನ್ನು ಸೇವಿಸುತ್ತಾ ಬಂದಿದ್ದರೂ ನೂಡಲ್ಸ್ ಸೇವನೆಯಿಂದ ಸ್ಥೂಲಕಾಯ ಹೆಚ್ಚುವುದು ಖಚಿತವಾಗಿದೆ.

ಇದರಲ್ಲಿ ಮೈದಾ ಹೆಚ್ಚಾಗಿಯೇ ಇದೆ

ಇದರಲ್ಲಿ ಮೈದಾ ಹೆಚ್ಚಾಗಿಯೇ ಇದೆ

ಮೈದಾ ಹಿಟ್ಟು ಎಂದರೆ ಗೋಧಿಯ ಹೊರಕವಚ ಹಾಗೂ ಬೇರು ಮೂಡುವ ಭಾಗವನ್ನು ನಿವಾರಿಸಿ ಕೇವಲ ಒಳಗಣ ಹಿಟ್ಟಿನ ಭಾಗವನ್ನು ಬೇರ್ಪಡಿಸಿದ ಆಹಾರವಾಗಿದೆ. ಈ ಕವಚದಲ್ಲಿ ಅಮೂಲ್ಯವಾದ ಕರಗದ ನಾರು ಇದ್ದು ಇವುಗಳಿಲ್ಲದೇ ಇರುವ ಮೈದಾ ಅತ್ಯಂತ ಅನಾರೋಗ್ಯಕರ ಆಹಾರವಾಗಿದೆ. ಅಲ್ಲದೇ ಮೈದಾ ಸಂಸ್ಕರಿಸುವಾಗ ಪೋಷಕಾಂಶಗಳೂ ನಷ್ಟಗೊಳ್ಳುವುದರಿಂದ ಇದು ರುಚಿಯಾಗಿದ್ದರೂ ಆರೋಗ್ಯಕರವಲ್ಲ. ಈ ಹಿಟ್ಟಿನಿಂದಲೇ ನೂಡಲ್ಸ್ ಗಳನ್ನೂ ತಯಾರಿಸುವ ಕಾರಣ ಹಾಗೂ ರುಚಿಗಾಗಿ ಕೆಲವಾರು ಪ್ರಬಲ ರಾಸಾಯನಿಕಗಳನ್ನು ಬಳಸುವ ಕಾರಣ ಈ ಆಹಾರ ರುಚಿಕರವಾಗಿದ್ದರೂ ಅಪೌಷ್ಟಿಕವಾದ ಆಹಾರವಾಗಿದೆ.

 ನೂಡಲ್ಸ್‌ಗಳಲ್ಲಿದೆ ಕೆಟ್ಟ ಕೊಬ್ಬು

ನೂಡಲ್ಸ್‌ಗಳಲ್ಲಿದೆ ಕೆಟ್ಟ ಕೊಬ್ಬು

ಸಂಸ್ಕರಿಸಿದ ಆಹಾರಗಳ ಪಟ್ಟಿಯಲ್ಲಿ ಅತಿ ಅನಾರೋಗ್ಯಕರ ಆಹಾರವಾಗಿರುವ ನೂಡಲ್ಸ್ ಗಳಿಗೆ ಈ ಪಟ್ಟ ಪಡೆಯಲು ಪರ್ಯಾಪ್ತ ಕೊಬ್ಬಿನ ಆಮ್ಲ ಅಥವಾ ಟ್ರಾನ್ಸ್ ಫ್ಯಾಟ್‌ಗಳೇ ಕಾರಣ. ಇವುಗಳಲ್ಲಿ ಸಸ್ಯಜನ್ಯ ತೈಲ, ಸಕ್ಕರೆ, ಸಕ್ಕರೆಯ ಪಾಕ, ರುಚಿಕಾರಕ ಹಾಗೂ ಇನ್ನಿತರ ರಾಸಾಯನಿಕಗಳಿದ್ದು ಇವು ಆರೋಗ್ಯಕ್ಕೆ ಸರ್ವಥಾ ಒಳ್ಳೆಯದಲ್ಲ.

ಇದರಲ್ಲಿದೆ ಮೋನೋಸೋಡಿಯಂ ಗ್ಲುಟಮೇಟ್

ಇದರಲ್ಲಿದೆ ಮೋನೋಸೋಡಿಯಂ ಗ್ಲುಟಮೇಟ್

ಎಂ ಎಸ್ ಜಿ ಅಥವಾ ಮೋನೋಸೋಡಿಯಂ ಗ್ಲುಟಮೇಟ್ ಎಂಬ ರುಚಿಕಾರಕ ಇದನ್ನು ತಯಾರಿಸುವ ಅಜಿನೋಮೋಟೋ ಎಂಬ ಸಂಸ್ಥೆಯ ಹೆಸರಿನಿಂದಲೇ ಹೆಚ್ಚು ಪ್ರಸಿದ್ಧವಾಗಿದೆ. ಇದರ ಸೇವನೆಯಿಂದ ರಕ್ತದೊತ್ತಡ ಹೆಚ್ಚುತ್ತದೆ,ಅಲ್ಲದೇ ತಲೆನೋವು, ವಾಕರಿಕೆ ಮೊದಲಾದ ತೊಂದರೆಗಳೂ ಎದುರಾಗಬಹುದು.

ಇದರ ಸೇವನೆಯಿಂದ ಪೌಷ್ಟಿಕ ಆಹಾರ ಸೇವಿಸದೇ ಹೋಗುತ್ತೇವೆ

ಇದರ ಸೇವನೆಯಿಂದ ಪೌಷ್ಟಿಕ ಆಹಾರ ಸೇವಿಸದೇ ಹೋಗುತ್ತೇವೆ

ಇದರಲ್ಲಿ ಒಟ್ಟಾರೆ ಪೋಷಕಾಂಶಗಳ ಮಟ್ಟ ಅತ್ಯಂತ ಕಡಿಮೆ ಇರುತ್ತದೆ. ಆದರೆ ಕೇವಲ ರುಚಿಯಾಗಿರುವ ಕಾರಣದಿಂದ ಹೆಚ್ಚು ಹೆಚ್ಚು ನೂಡಲ್ಸ್ ತಿನ್ನುವ ಜನರು ನಿಜವಾದ ಪೌಷ್ಟಿಕ ಆಹಾರಸೇವನೆಯಿಂದ ಪಡೆಯಬೇಕಾಗಿದ್ದ ಪೋಷಕಾಂಶಗಳನ್ನು ಪಡೆಯದೇ ಹೋಗುತ್ತಾರೆ. ವಿಶೇಷವಾಗಿ ನಿತ್ಯದ ಅಗತ್ಯಗಳಿಗೆ ಬೇಕಾದ ವಿಟಮಿನ್ ಎ, ಸಿ, ಡಿ, ಕ್ಯಾಲ್ಸಿಯಂ, ಗಂಧಕ ಹಾಗೂ ಕಬ್ಬಿಣದ ಕೊರತೆಯನ್ನು ದೇಹ ಅನುಭವಿಸುತ್ತದೆ.

 ನೂಡಲ್ಸ್ ನಲ್ಲಿದೆ ಅತಿ ಹೆಚ್ಚಿನ ಸೋಡಿಯಂ

ನೂಡಲ್ಸ್ ನಲ್ಲಿದೆ ಅತಿ ಹೆಚ್ಚಿನ ಸೋಡಿಯಂ

ನೂಡಲ್ಸ್ ಗಳಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇದ್ದು ವಿಶೇಷವಾಗಿ ಉಪ್ಪಿಗೆ ಸೂಕ್ಷ್ಮಸಂವೇದಿಯಾಗಿರುವ ವ್ಯಕ್ತಿಗಳಿಗೆ ಅತ್ಯಂತ ಕೆಟ್ಟ ಆಯ್ಕೆಯಾಗಿದೆ. ಉಳಿದವರಿಗೂ ಅತಿ ಹೆಚ್ಚಿನ ಸೋಡಿಯಂ ಸೇವನೆ ಒಳ್ಳೆಯದಲ್ಲ. ಏಕೆಂದರೆ ಹೆಚ್ಚಿನ ಸೋಡಿಯಂ ದೇಹದಲ್ಲಿದ್ದರೆ ಇದು ಹೃದಯದೊತ್ತಡವನ್ನು ಹೆಚ್ಚಿಸುತ್ತದೆ ಹಾಗೂ ಈ ಮೂಲಕ ಹೃದಯ ಸಂಬಂಧಿ ತೊಂದರೆಗಳನ್ನೂ ಹುಟ್ಟುಹಾಕುತ್ತದೆ.

ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಕೊರತೆ

ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಕೊರತೆ

ನೂಡಲ್ಸ್ ಪ್ರೇಮಿಗಳು ಹೆಚ್ಚು ಹೆಚ್ಚಾಗಿ ನೂಡಲ್ಸ್ ಸೇವಿಸುತ್ತಿದ್ದಂತೆಯೇ ದೇಹ ಇತರ ಅಹಾರಗಳಿಂದಲೂ ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ಷಮತೆಯನ್ನು ಕಡಿಮೆಯಾಗಿಸುತ್ತಾ ಹೋಗುತ್ತದೆ. ನೂಡಲ್ಸ್ ಗಳನ್ನೇ ಮುಖ್ಯ ಆಹಾರವಾಗಿ ಸೇವಿಸಿದ ಮಕ್ಕಳು ಇತರ ಆಹಾರಗಳ ಪೋಷಕಾಂಶಗಳನ್ನು ಪಡೆದುಕೊಳ್ಳಲು ವಿಫಲರಾಗಿರುವುದನ್ನು ಸಂಶೋಧನೆಗಳು ಖಚಿತಪಡಿಸಿವೆ.

ಗರ್ಭಾಪಾತಕ್ಕೂ ಕಾರಣವಾಗಬಹುದು

ಗರ್ಭಾಪಾತಕ್ಕೂ ಕಾರಣವಾಗಬಹುದು

ಗರ್ಭಿಣಿಯರಿಗೆ ಸಂಸ್ಕರಿತ ಯಾವುದೇ ಆಹಾರ ಒಳ್ಳೆಯದೇ ಅಲ್ಲ! ಅದರಲ್ಲೂ ನೂಡಲ್ಸ್ ಸರ್ವಥಾ ಬೇಡವೇ ಬೇಡ. ಒಂದು ವೇಳೆ ಗರ್ಭಿಣಿಯರಿಗೆ ನೂಡಲ್ಸ್ ಇಷ್ಟವಾದ ಆಹಾರವಾಗಿದ್ದರೂ ಈ ಸಮಯದಲ್ಲಿ ಇದನ್ನು ಬಿಟ್ಟು ಬಿಡುವುದೇ ಒಳ್ಳೆಯದು. ಏಕೆಂದರೆ ಇದರ ಸೇವನೆಯಿಂದ ಗರ್ಭಾಪಾತವಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಅಲ್ಲದೇ ಇದರ ರಾಸಾಯನಿಕಗಳು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೂ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ.

ಸ್ಥೂಲಕಾಯ

ಸ್ಥೂಲಕಾಯ

ಈ ಸಿದ್ಧ ಆಹಾರಗಳ ಸೇವನೆ ಸ್ಥೂಲಕಾಲಕ್ಕೆ ಮೂಲವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸೋಡಿಯಂ ದೇಹದಲ್ಲಿ ನೀರನ್ನು ಉಳಿಸಿಕೊಳ್ಳಲು ಕಾರಣವಾಗುತ್ತದೆ. ನಿತ್ಯವೂ ನೂಡಲ್ಸ್ ಸೇವಿಸುತ್ತಾ ಬಂದರೆ ತೂಕವೂ ಶೀಘ್ರವಾಗಿಯೇ ಏರುತ್ತದೆ.

ಇದರಲ್ಲಿದೆ ಪ್ರೋಪೈಲಿನ್ ಗ್ಲೈಕಾಲ್ (Propylene Glycol)

ಇದರಲ್ಲಿದೆ ಪ್ರೋಪೈಲಿನ್ ಗ್ಲೈಕಾಲ್ (Propylene Glycol)

ಸಾಮಾನ್ಯವಾಗಿ ನೀರು ಬೆರೆಸಿ ಅಹಾರವಸ್ತುಗಳನ್ನು ಹಾಗೇ ಬಿಟ್ಟರೆ ಕೊಂಚ ಹೊತ್ತಿನ ಬಳಿಕ ಒಣಗಲು ತೊಡಗುತ್ತದೆ. ಆಹಾರದಲ್ಲಿರುವ ನೀರಿನಂಶ ಕಡಿಮೆಯಾಗುವುದೇ ಇದಕ್ಕೆ ಕಾರಣ. ಹೀಗೆ ಆಗದಿರಲು ನೀರನ್ನು ಒಣಗಳು ಬಿಡದ ಕಣಗಳನ್ನು (anti-freeze ingredient) ಸೇರಿಸಲಾಗುತ್ತದೆ. ಇದರಿಂದ ಸೂಡಲ್ಸ್ ನ ಶ್ಯಾವಿಗೆಗಳಿಂದ ನೀರಿನಂಶ ಬಹಳ ಕಾಲದವರೆಗೆ ನೀರಿನಂಶವನ್ನು ಬಿಟ್ಟುಕೊಡದೇ ಒಣಗದಿರಲು ನೆರವಾಗುತ್ತದೆ. ಪ್ರೋಪೈಲಿನ್ ಗ್ಲೈಕಾಲ್ ಇಂತಹ ಒಂದು ಪ್ರಬಲ ರಾಸಾಯನಿಕವಾಗಿದೆ. ಇದರ ಕೆಲಸ ಇಷ್ಟೇ ಆಗಿದ್ದರೆ ಒಳ್ಳೆಯದಿತ್ತು. ಆದರೆ ಇದು ನೂಡಲ್ಸ್ ಸೇವನೆಯ ಬಳಿಕ ಹೊಟ್ಟೆ ಸೇರಿದ ಬಳಿಕ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತದೆ. ಹೃದಯ, ಮೂತ್ರಪಿಂಡ, ಯಕೃತ್ ಮೊದಲಾದ ಅಂಗಗಳ ಒಳಗಿನ ಭಾಗಗಳಲ್ಲಿ ಗೋಂದಿನಂತೆ ಅಂಟಿಕೊಂಡು ಈ ಪ್ರಮುಖ ಅಂಗಗಳ ಕ್ಷಮತೆಯನ್ನು ಉಡುಗಿಸುವುದು ಮಾತ್ರವಲ್ಲ, ರೋಗ ನಿರೋಧಕ ಶಕ್ತಿಯನ್ನೂ ಕುಂದಿಸುತ್ತದೆ. ಈ ಮಾಹಿತಿಗಳನ್ನು ಅರಿತ ಮೇಲಾದರೂ ನೂಡಲ್ಸ್ ಮೇಲಿನ ವ್ಯಾಮೋಹವನ್ನು ತ್ಯಜಿಸಿ ಆರೋಗ್ಯಕರ ಆಹಾರಗಳತ್ತ ತೋರುವಿರಲ್ಲ?

English summary

11 Reasons Why Noodles Are Not Good For Health

Noodles are very low in nutrients and it is advisable to not be eaten as a staple diet. Frequent consumption of noodles is linked to a poor diet quality and an increased risk of metabolic syndrome. To give the instant noodles a longer shelf life, they are highly processed. The noodles are high in fat content, calories and sodium and are laced with artificial flavours, preservatives, additives and flavourings. Though they are inexpensive and easy to prepare, they have adverse effects on our health. Read on to know about the 11 reasons on why noodles are not good for health.