For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆದ್ದ ತಕ್ಷಣ ಒಂದು ಲೋಟ ನೀರು ಕುಡಿಯಲು ಮರೆಯದಿರಿ!

ಬೆಳಿಗ್ಗೆದ್ದ ಬಳಿಕ ಕೆಲವೇ ನಿಮಿಷಗಳ ಒಳಗೆ ಒಂದು ದೊಡ್ಡ ಲೋಟ ನೀರು ಕುಡಿಯುವುದರಿಂದ ಹಲವಾರು ರೀತಿಯಲ್ಲಿ ಆರೋಗ್ಯಕಾರಿ ಪ್ರಯೋಜನಗಳಿವೆ.....

By Arshad
|

ಉತ್ತಮ ಆರೋಗ್ಯಕ್ಕೆ ದಿನವಿಡೀ ನೀರು ಕುಡಿಯುತ್ತಿರುವುದು ಅಗತ್ಯವಾಗಿದೆ. ನೀರು ಕುಡಿಯುವ ಮಹತ್ವವನ್ನು ಅರಿತ ನಮ್ಮ ಹಿರಿಯರು ಕಿರಿಯರಿಗೆ ನೀರು ಕುಡಿಯುವಂತೆ ಬಲವಂತಪಡಿಸುತ್ತಾರೆ. ಅದರಲ್ಲೂ ಬೆಳಿಗ್ಗೆದ್ದ ತಕ್ಷಣ ನೀರು ಕುಡಿಯಲು ಹೇಳುವುದು ಕಿರಿಯರಿಗೆ ಒಂದು ಶಿಕ್ಷೆಯಂತೆಯೇ ಭಾಸವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ದಿನದ ನಿಗದಿತ ಅವಧಿಗಳಲ್ಲಿ ನೀರು ಕುಡಿಯುವ ಮೂಲಕ ಇದರ ಗರಿಷ್ಠ ಪ್ರಯೋಜನವನ್ನು ಪಡೆಯಬಹುದು. ಅದರಲ್ಲೂ ಬೆಳಿಗ್ಗೆದ್ದ ಬಳಿಕ ಕೆಲವೇ ನಿಮಿಷಗಳ ಒಳಗೆ ಒಂದು ದೊಡ್ಡ ಲೋಟ ನೀರು ಕುಡಿಯುವುದು ಅತ್ಯುತ್ತಮವಾಗಿದೆ. ಬನ್ನಿ, ಬೆಳಗ್ಗಿನ ನೀರು ಕುಡಿಯುವ ಮೂಲಕ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ: ಏನೇ ಆಗಲಿ ದಿನನಿತ್ಯ ಎಂಟು ಲೋಟಗಳಷ್ಟು ನೀರು ಕುಡಿಯಿರಿ

ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತದೆ

ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತದೆ

ರಾತ್ರಿ ಮಲಗಿದ ಬಳಿಕ ಹಲವಾರು ಅನೈಚ್ಛಿಕ ಕಾರ್ಯಗಳು ನಡೆಯುತ್ತವೆ. ಇವುಗಳಿಗೆಲ್ಲಾ ನಿನ್ನೆ ಸೇವಿಸಿದ್ದ ನೀರು ಬಳಕೆಯಾಗುತ್ತದೆ. ಬೆಳಗ್ಗಿನ ಹೊತ್ತಿನಲ್ಲಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಬೆಳಿಗ್ಗೆದ್ದ ತಕ್ಷಣ ನೀರು ಕುಡಿಯುವ ಮೂಲಕ ಈ ಕೊರತೆ ತುಂಬುತ್ತದೆ ಹಾಗೂ ದೇಹದಕ್ಕೆ ಅವಶ್ಯಕವಾದ ಶಕ್ತಿ ದೊರಕುತ್ತದೆ.

ತ್ಯಾಜ್ಯಗಳನ್ನು ವಿಸರ್ಜಿಸಲು ನೆರವಾಗುತ್ತದೆ

ತ್ಯಾಜ್ಯಗಳನ್ನು ವಿಸರ್ಜಿಸಲು ನೆರವಾಗುತ್ತದೆ

ರಾತ್ರಿಯ ಅನೈಚ್ಛಿಕ ಕಾರ್ಯಗಳಲ್ಲಿ ವಿಷಕಾರಿ ವಸ್ತುಗಳು, ಕಲ್ಮಶಗಳು ಮತ್ತು ತ್ಯಾಜ್ಯಗಳನ್ನು ಸಂಗ್ರಹಿಸುವುದೂ ಒಂದು. ಇವೆಲ್ಲವನ್ನೂ ದೇಹದಿಂದ ಹೊರಹಾಕುವುದು ಅವಶ್ಯವಾಗಿದ್ದು ಇದಕ್ಕೂ ನೀರಿನ ಅಗತ್ಯವಿದೆ. ಬೆಳಗ್ಗೆದ್ದು ನೀರು ಕುಡಿಯುವ ಮೂಲಕ ತ್ಯಾಜ್ಯಗಳ ವಿಸರ್ಜನೆ ಸುಲಭವಾಗುತ್ತದೆ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ

ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ

ಮಲಬದ್ಧತೆಗೆ ಪ್ರಮುಖ ಕಾರಣ ನೀರಿನ ಕೊರತೆ ಹಾಗೂ ಆಹಾರದಲ್ಲಿ ನಾರು ಇಲ್ಲದಿರುವುದು. ಬೆಳಿಗ್ಗೆದ್ದ ತಕ್ಷಣ ನೀರು ಕುಡಿಯುವ ಮೂಲಕ ಮಲಬದ್ಧತೆಯಾಗದಂತೆ ನೋಡಿಕೊಳ್ಳಬಹುದು. ಹಾಗೂ ವಿಸರ್ಜನೆಗೂ ಸುಲಲಿತವಾಗುತ್ತದೆ.

ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ

ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ

ಜೀವರಾಸಾಯನಿಕ ಕ್ರಿಯೆಗೆ ನೀರು ಅತಿ ಅವಶ್ಯವಾಗಿದೆ. ಬೆಳಗ್ಗೆದ್ದ ತಕ್ಷಣ ನೀರು ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಇಡಿಯ ದಿನದ ಚಟುವಟಿಕೆ ಸುಲಭವಾಗಿ ಪೂರೈಸಲು ನೆರವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಬೆಳಿಗ್ಗೆದ್ದ ತಕ್ಷಣ ನೀರು ಕುಡಿಯುವ ಮೂಲಕ ತೂಕ ಇಳಿಸುವ ಪ್ರಯತ್ನಗಳಿಗೆ ಅತಿ ಹೆಚ್ಚಿನ ನೆರವು ದೊರಕುತ್ತದೆ. ಇದರಿಂದ ತೂಕ ಇಳಿಯುವಿಕೆ ಶೀಘ್ರವಾಗುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ

ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ

ಜೀರ್ಣಕ್ರಿಯೆ ಸರಿಯಾಗದೇ ಇರಲು ನೀರಿನ ಕೊರತೆ ಪ್ರಮುಖ ಕಾರಣವಾಗಿದೆ. ಖಾಲಿಹೊಟ್ಟೆಯಲ್ಲಿ ನೀರನ್ನು ಕುಡಿಯುವ ಮೂಲಕ ನಂತರ ಸೇವಿಸುವ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಜೀರ್ಣರಸಗಳು ಸರಿಯಾದ ಆಮ್ಲೀಯತೆ ಹೊಂದಿದ್ದು ಜೀರ್ಣಕ್ರಿಯೆ ಸುಲಭವಾಗುತ್ತದೆ.

ಎದೆಯುರಿ ಬರದಂತೆ ತಡೆಯುತ್ತದೆ

ಎದೆಯುರಿ ಬರದಂತೆ ತಡೆಯುತ್ತದೆ

ಎದ್ದ ತಕ್ಷಣ ನೀರು ಕುಡಿಯುವ ಮೂಲಕ ಹೊಟ್ಟೆಯಲ್ಲಿ ಆಮ್ಲೀಯತೆ ಕಡಿಮೆಯಾಗುತ್ತದೆ. ಇದರಿಂದ ಎದೆಯುರಿ, ಹುಳಿತೇಗು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.

ಮೆದುಳಿನ ಕ್ಷಮತೆ ಹೆಚ್ಚುತ್ತದೆ

ಮೆದುಳಿನ ಕ್ಷಮತೆ ಹೆಚ್ಚುತ್ತದೆ

ದೇಹದಲ್ಲಿ ನೀರಿನ ಕೊರತೆಯುಂಟಾದಾಗ ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ. ಬೆಳಿಗ್ಗೆದ್ದ ತಕ್ಷಣ ನೀರು ಕುಡಿಯುವ ಮೂಲಕ ಮೆದುಳಿಗೂ ಉತ್ತಮ ಪ್ರಮಾಣದ ರಕ್ತ ಮತ್ತು ನೀರು ದೊರಕುವ ಮೂಲಕ ಮೆದುಳು ಚುರುಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ, ದಿನನಿತ್ಯ ಬಿಸಿ ನೀರು ಸೇವಿಸಿ

English summary

Why drink water as soon as you wake up

Drinking a glass of water within minutes of waking up in the morning is highly beneficial for one's health. In This article points out the reasons why drinking water as soon as you wake up is helpful. Take a look.
X
Desktop Bottom Promotion