For Quick Alerts
ALLOW NOTIFICATIONS  
For Daily Alerts

ಪ್ರಯಾಣದ ಅವಧಿಯಲ್ಲಿ ವಾಕರಿಕೆ ಸಮಸ್ಯೆಯೇ? ಇಲ್ಲಿದೆ ಸಿಂಪಲ್ ಟಿಪ್ಸ್

By Arshad
|

ಕೆಲವರಿಗೆ ಪ್ರಯಾಣದ ಅವಧಿಯಲ್ಲಿ ಕೊಂಚ ಕುಲುಕಾಟವಾದರೂ ಕಡ್ಡಾಯವೆಂಬಂತೆ ವಾಂತಿಯಾಗುತ್ತದೆ. ಇನ್ನೂ ಕೆಲವರಿಗೆ ಕುಲುಕಾಟವಿಲ್ಲದಿದ್ದರೂ ವಾಹದಲ್ಲಿರುವ ಇಂಧನದ ವಾಸನೆ, ಬಸ್ಸಿನೊಳಗಿನ ಅಸ್ವಚ್ಛ ಪರಿಸರ ಕಂಡಾಕ್ಷಣ ವಾಕರಿಕೆ ಬಂದು ವಾಂತಿಯಾಗುತ್ತದೆ. ಇನ್ನೂ ಕೆಲವರಿಗೆ ಚಲಿಸುತ್ತಿದ್ದೇವೆ ಎಂಬ ಭಯವೂ ವಾಂತಿಗೆ ಕಾರಣವಾಗಬಹುದು. ಹಡಗಿನಲ್ಲಿದ್ದಾಗ ಓಲಾಟದಿಂದಲೂ ವಾಂತಿಯಾಗಬಹುದು.

ಕಡಿಮೆ ಅಲುಗಾಟವಿರುವ ಕಾರು ರೈಲುಗಳಲ್ಲಿಯೂ ವಾಂತಿ ಮಾಡಿಕೊಳ್ಳುವವರಿದ್ದಾರೆ. ಒಂದು ವೇಳೆ ನಿಮಗೂ ಈ ತೊಂದರೆ ಇದ್ದು ಪ್ರಯಾಣ ಸುಖಕರವಾಗಿರಬೇಕಾದರೆ ಹಾಗೂ ವಾಂತಿಯಿಂದ ನಿಮ್ಮ ಹಾಗೂ ನಿಮ್ಮ ಸಹಪ್ರಯಾಣಿಕರ ಪ್ರವಾಸದ ಸಂತೋಷವನ್ನೇ ಕಸಿದುಕೊಳ್ಳಬಾರದೆಂದಿದ್ದರೆ ಈ ಕೆಳಗಿನ ಮಾಹಿತಿಗಳು ನಿಮ್ಮ ನೆರವಿಗೆ ಬರಬಲ್ಲವು...

ಆದರೆ ಇದೇನೂ ನಿಯಂತ್ರಣಕ್ಕೆ ಬಾರದೇ ಇರುವ ತೊಂದರೆಯಂತೂ ಅಲ್ಲ. ಇಂದು ಈ ತೊಂದರೆಗೆ ಸಿಲುಕದಿರಲು ಸಹಾಯ ಮಾಡುವ ಹಲವರು ಔಷಧಿಗಳಿವೆ. ಆದರೆ ಸಾಮಾನ್ಯವಾಗಿ ಈ ತೊಂದರೆ ಇರುವವರು ಪ್ರಾರಂಭದಲ್ಲಿಯೇ ಮನಸ್ಥೈರ್ಯ ಕಳೆದುಕೊಳ್ಳುವುದರಿಂದಲೇ ಹೆಚ್ಚಿನ ಸಂದರ್ಭಗಳಲ್ಲಿ ವಾಕರಿಕೆ ಬೇಡವೆಂದರೂ ಬಂದೇ ಬರುತ್ತದೆ.

Ways To Prevent Motion Sickness

ಹಿಂದಿನ ದಿನಗಳಲ್ಲಿ ಎತ್ತಿನ ಗಾಡಿಯಲ್ಲಿ ಸಂಚರಿಸುತ್ತಿದ್ದಾಗ ಲಿಂಬೆಹಣ್ಣನ್ನು ಮೂಸುತ್ತಿರುವಂತೆ ಸೂಚಿಸಲಾಗುತ್ತಿತ್ತು. ವೈದ್ಯರು ವಿವರಿಸುವ ಪ್ರಕಾರ ಈ ತೊಂದರೆಗೆ ಮನಸ್ಸು ಮತ್ತು ದೇಹದ ನಡುವಣ ಸಂವಹನ ಮತ್ತು ಕುಲುಕಾಟದಿಂದ ಕಡ್ಡಾಯವಾಗಿ ವಾಕರಿಕೆಯಾಗಲೇಬೇಕು ಎಂಬ ಪೂರ್ವಗ್ರಹ. ಉದಾಹರಣೆಗೆ ಚಲಿಸುವ ವಾಹನವೊಂದರಲ್ಲಿ ನೀವು ಏನೊಂದನ್ನು ಓದುತ್ತಿರುವಾಗ ಮಗ್ನರಾಗಿ ವಾಹನ ಚಲಿಸುತ್ತಿರುವಾಗ ಕಣ್ಣುಗಳು ಚಲನೆಯನ್ನು ಗಮನಿಸದಿದ್ದರೂ ದೇಹ ಕುಲುಕಾಟವನ್ನು ಗಮನಿಸಿ ಮೆದುಳಿಗೆ ವಾಕರಿಕೆಯ ಸೂಚನೆಯನ್ನು ನೀಡುತ್ತದೆ. ಪ್ರಯಾಣದ ವೇಳೆಯಲ್ಲಿ ವಾಂತಿಯ ಸಮಸ್ಯೆಗೆ ಪರಿಹಾರವೇನು?

ನಮ್ಮ ಮೆದುಳು ಹಲವಾರು ಇಂದ್ರಿಯಗಳಿಂದ ಸತತವಾಗಿ ಸೂಚನೆಗಳನ್ನು ಗ್ರಹಿಸುತ್ತಲೇ ಇದ್ದು ಪ್ರತಿಕ್ರಿಯೆಯನ್ನು ನೀಡುತ್ತಲೇ ಇರುತ್ತದೆ. ಒಂದು ವೇಳೆ ಪೂರ್ವಾಗ್ರಹದಿಂದ ಎರಡು ಅಥವಾ ಹೆಚ್ಚಿನ ಸೂಚನೆಗಳಲ್ಲಿ ವೈರುಧ್ಯ ಕಂಡುಬಂದರೆ ಇದು ವಾಕರಿಕೆಗೆ ಕಾರಣವಾಗುತ್ತದೆ. ಇದು ಪ್ರಯಾಣದ ಅವಧಿಯಲ್ಲಿ ಹೆಚ್ಚಾಗಿ ಕಂಡುಬರುವ ಕಾರಣದಿಂದ ಇದಕ್ಕೆ ಪ್ರಯಾಣದ ವಾಕರಿಕೆ ಎಂದು ಕರೆಯಲಾಗುತ್ತದೆ.

ಈ ಸಂದರ್ಭದಲ್ಲಿ ಖಿನ್ನತೆ, ಸುಸ್ತು, ನೆಟ್ಟಗೆ ನಿಲ್ಲಲು ಸಾಧ್ಯವಾಗದಿರುವುದು, ಶರೀರ ತಣ್ಣಗಿದ್ದೂ ಬೆವರುವುದು ಮತ್ತು ಸ್ವಾಭಾವಿಕವಾಗಿ ವಾಂತಿಯಾಗುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಈ ತೊಂದರೆ ಕಂಡುಬರುತ್ತದೆ.

ಲಿಂಬೆಹಣ್ಣನ್ನು ಮೂಸುವ ಹೊರತಾಗಿ ಇಂದು ಈ ತೊಂದರೆಯ ನಿವಾರಣೆಗೆ ಇನ್ನೂ ಹಲವಾರು ವಿಧಾನಗಳಿವೆ. ಒಂದು ವೇಳೆ ನಿಮಗೆ ಈ ತೊಂದರೆ ಇದ್ದರೆ ಈ ತೊಂದರೆ ಹೆಚ್ಚುವ ಸಂಭವವಿರುವ ಸ್ಥಳಗಳಿಂದ ಸಾಧ್ಯವಾದಷ್ಟು ದೂರವಿರಿ. ಹೊಗೆ ಈ ತೊಂದರೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇತರ ವಾಹನಗಳ ಹೊಗೆ ಬಾಧಿಸದಂತೆ ಕ್ರಮ ಕೈಗೊಳ್ಳಿ. ವಾಹನದ ಇಂಧನದ ವಾಸನೆ ಬರದಿರುವ ಸ್ಥಳದಲ್ಲಿ ಕುಳಿತುಕೊಳ್ಳಿ.

ಬಟ್ಟೆಗಳು ಆದಷ್ಟು ಸಡಿಲವಾಗಿರಲಿ. ಬೆಲ್ಟ್ ಮತ್ತು ಟೈ ಧರಿಸಿದ್ದರೆ ಸಡಿಲಿಸಿ. ಪ್ರಯಾಣ ದೀರ್ಘವಾಗಿದ್ದರೆ ಸಾಧ್ಯವಾದಷ್ಟು ಕಡೆ ನಿಲ್ಲಿಸಿ ನಡುನಡುವೆ ನಡೆದಾಡಿ. ಈ ಸಂದರ್ಭದಲ್ಲಿ ಸಿದ್ಧ ಆಹಾರಗಳನ್ನು, ಬುರುಗುಬರುವ ಪಾನೀಯ, ಅತಿ ಹೆಚ್ಚಿನ ಸಕ್ಕರೆ ಇರುವ ಆಹಾರಗಳನ್ನು ಸೇವಿಸಲೇಬೇಡಿ. ಪ್ರಯಾಣದ ಅವಧಿಯಲ್ಲಿ ಸಾಧ್ಯವಾದಷ್ಟು ನಿಮ್ಮ ನೆಚ್ಚಿನ ಪುಸ್ತಕಗಳು, ಅಥವಾ ಮೊಬೈಲ್ ಆಟಗಳಲ್ಲಿ ಮಗ್ನರಾಗಿ. ವಾಕರಿಕೆಯನ್ನು ಗುಣಪಡಿಸಲು ನೈಸರ್ಗಿಕ ಪರಿಹಾರ

ವಾಕರಿಕೆ ತಡೆಯಲು ಕೆಲವು ನೈಸರ್ಗಿಕ ಸಾಮಾಗ್ರಿಗಳಿವೆ. ಉದಾಹರಣೆಗೆ ಶುಂಠಿ. ಪ್ರಯಾಣಕ್ಕೂ ಅರ್ಧ ಗಂಟೆ ಮುನ್ನ ಒಂದು ಲೋಟದಲ್ಲಿ ಉಗುರುಬೆಚ್ಚನಯೆ ನೀರಿಗೆ ಕೊಂಚ ಹಸಿಶುಂಠಿಯ ರಸವನ್ನು ಬೆರೆಸಿ ಕುಡಿಯಿರಿ. ಬಳಿಕ ಇನ್ನೂ ಕೊಂಚ ಪ್ರಮಾಣವನ್ನು ನೀರಿನ ಬಾಟಲಿಯಲ್ಲಿ ತುಂಬಿಸಿಕೊಂಡು ಪ್ರತಿ ಅರ್ಧಗಂಟೆಗೊಮ್ಮೆ ಕೊಂಚ ಕೊಂಚವಾಗಿ ಗುಟುಕರಿಸುತ್ತಾ ಪ್ರಯಾಣದ ಅವಧಿಯನ್ನು ಕಳೆದರೆ ಒಮ್ಮೆಯೂ ವಾಕರಿಕೆಯಾಗದ ಸಂಭವ ಬಹಳಷ್ಟು ಹೆಚ್ಚುತ್ತದೆ. ಮುಂಜಾನೆ ಎದ್ದು ಶುಂಠಿ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಇನ್ನೂ ಕೆಲವರು ಆಕ್ಯುಪ್ರೆಶರ್ ಅಥವಾ ಒತ್ತಡದ ಮುದ್ರೆಯನ್ನು ಅನುಸರಿಸಿ ಫಲ ಕಂಡಿದ್ದಾರೆ. ಪೂರ್ಣವಾಗಿ ಉಸಿರೆಳೆದು ಕೊಂಚ ಕಾಲ ಹಿಡಿದಿಟ್ಟು ನಿಧಾನವಾಗಿ ಪೂರ್ಣವಾಗಿ ಹೊರಬಿಡುವ ಉಸಿರಾಟದ ವಿಧಾನವೂ ಹಲವರಿಗೆ ಪ್ರಯೋಜನಕಾರಿಯಾಗಿದೆ. ಈ ವಿಧಾನಗಳಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವ ಕಾರಣ ಈ ವಿಧಾನಗಳನ್ನು ಖಂಡಿಯಾ ಪ್ರಯತ್ನಿಸಿ.

English summary

Ways To Prevent Motion Sickness

For many families the idea of travel is marred by encounters of motion sickness. While many people grow out of the condition, a lot of people have to deal with this problem on a long term basis. In certain cases, people can take days to completely recover from this. However, there are certain ways in which one can prevent motion sickness, have a look
X
Desktop Bottom Promotion