For Quick Alerts
ALLOW NOTIFICATIONS  
For Daily Alerts

ವಾಕರಿಕೆಯನ್ನು ಗುಣಪಡಿಸಲು ನೈಸರ್ಗಿಕ ಪರಿಹಾರ

|

ವಾಕರಿಕೆಯಿಂದ ಹೆಚ್ಚಿನ ಜನರು ಬಳಲುತ್ತಿದ್ದು ಇದಕ್ಕೆ ಹಲವಾರು ಕಾರಣಗಳಿವೆ. ಆಹಾರ ಅಲರ್ಜಿಗಳು, ಲ್ಯಾಕ್ಟೋಸ್‌ನ ಅಸಹನೆ ಮತ್ತು ಸೋಂಕುಗಳು ಮುಂತಾದುವು ವಾಕರಿಕೆ ಉಂಟಾಗಲು ಪ್ರಮುಖವಾಗಿವೆ. ನಿಮಗೆ ವಾಕರಿಕೆಯುಂಟಾದಾಗ, ಯಾವುದೂ ನಿಮಗೆ ಹಿತವೆನ್ನಿಸದು, ಉತ್ತಮ ಸುವಾಸನೆ ಕೂಡ ನಿಮಗೆ ಕಿರಿಕಿರಿಯನ್ನುಂಟು ಮಾಡಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಣಂತಿಯಲ್ಲಿ ವಾಕರಿಕೆ ಬರಲು ಕಾರಣಗಳು

ಎಲ್ಲಾ ಉತ್ತಮ ಆಹಾರ ಪಾನೀಯಗಳು ನಿಮಗೆ ಬೇಡವೆನ್ನಿಸಬಹುದು ಮತ್ತು ನಿಮ್ಮ ದೇಹ ನಡುಗಬಹುದು. ಕಡಿಮೆ ಅಥವಾ ಹೆಚ್ಚಿನ ಮಟ್ಟಿನ ವಾಕರಿಕೆಯು ಜೀವನವನ್ನು ದುಸ್ಥರಗೊಳಿಸಬಹುದು ಮತ್ತು ಸಂಭಾಳಿಸಲು ತೊಂದರೆಯಾಗಬಹುದು. ಗರ್ಭಿಣಿ ಸ್ತ್ರೀಯರಲ್ಲಿ ಮಾತ್ರ ವಾಕರಿಕೆ ಸಾಮಾನ್ಯವಾಗಿರುವುದಿಲ್ಲ.

ಮಲಬದ್ಧತೆ, ಹೊಟ್ಟೆಯ ಸಂಕಟ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳು ವಾಕರಿಕೆಯನ್ನು ಉಂಟುಮಾಡುತ್ತದೆ. ನೈಸರ್ಗಿಕ ವಿಧಾನದಿಂದ ವಾಕರಿಕೆಯನ್ನು ಪರಿಹರಿಸಕೊಳ್ಳಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಟ್ಟೆ ಉಬ್ಬುವಿಕೆಗೆ ಕಾರಣ ತಿಳಿದುಕೊಳ್ಳಿ

ಉದಾಹರಣೆಗೆ, ವಾಕರಿಕೆಯನ್ನು ತಡೆಗಟ್ಟಲು ಒಂದು ಉತ್ತಮವಾದ ಮನೆಮದ್ದೆಂದರೆ ಶುಂಠಿಯಾಗಿದೆ. ಅಲ್ಲದೆ, ವಾಕರಿಕೆಯನ್ನು ಪರಿಹರಿಸಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ದೂರಮಾಡಲು ಸಕ್ಕರೆ ಒಳಗೊಂಡಿರುವ ಪಾನೀಯಗಳನ್ನು ಸೇವಿಸುವುದು ಪರಿಣಾಮಕಾರಿ ಮನೆಮದ್ದಾಗಿದೆ.

ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ವಾಕರಿಕೆಯನ್ನು ದೂರಮಾಡುತ್ತದೆ ಮತ್ತು ನಿಮ್ಮ ಮನಸ್ಸನ್ನು ತಹಬಂದಿಗೆ ತರುತ್ತದೆ. ನಿಮಗೆ ಇದರಿಂದ ಸ್ವಲ್ಪ ಉಲ್ಲಾಸ ಉಂಟಾಗಬಹುದು ಇಲ್ಲವೇ ಸುಸ್ತು ಹಾಗೆಯೇ ಇರಬಹುದು ಆದರೆ ಅನುಭವಿಸುವುದಕ್ಕಿಂತ ಇದು ಉತ್ತಮ.

ನೀವು ವಾಕರಿಕೆಯಿಂದ ಬಳಲುತ್ತಿದ್ದರೆ, ನಿಮ್ಮನ್ನು ಇದು ಉದ್ರೇಕಕ್ಕೆ ಒಳಪಡಿಸುತ್ತದೆ. ವಾಕರಿಕೆಯನ್ನು ತಡೆಗಟ್ಟುವ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದ್ದು ನಿಮಗೆ ಇದರಿಂದ ಸಮಾಧಾನ ಸಿಗಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜ್ವರದ ಚಿಕಿತ್ಸೆಗೆ ಹತ್ತು ಆಹಾರಗಳು

ಶುಂಠಿ:

ಶುಂಠಿ:

ವಾಕರಿಕೆಯನ್ನು ಉಪಶಮನ ಮಾಡಲು ಇದೊಂದು ನೈಸರ್ಗಿಕ ಮನೆ ಮದ್ದಾಗಿದೆ. ಶುಂಠಿಯ ಸಣ್ಣ ತುಂಡನ್ನು ಜಗಿಯಿರಿ. ಇದೊಂದು ಸುಗಂಧ ಪೂರಿತ ಮಸಾಲೆಯಾಗಿದ್ದು ವಾಕರಿಕೆ ಅನುಭವವನ್ನು ದೂಮಾಡುತ್ತದೆ. ನೀವು ಶುಂಠಿ ಚಹಾವನ್ನು ಕೂಡ ಸೇವಿಸಬಹುದು.

ಸ್ನಾನ ಉತ್ತಮ ಪರಿಹಾರ:

ಸ್ನಾನ ಉತ್ತಮ ಪರಿಹಾರ:

ತಂಪಾದ ನೀರಿನಲ್ಲಿ ಸ್ನಾನ ಮಾಡುವುದು ನಿಮ್ಮನ್ನು ಉಲ್ಲಾಸಗೊಳಿಸುವುದು ಮಾತ್ರವಲ್ಲ, ವಾಕರಿಕೆ ಅನುಭವವನ್ನು ಪರಿಹರಿಸುತ್ತದೆ. ವಾಕರಿಕೆ ಹೆಚ್ಚಾಗುವುದನ್ನು ತಂಪಾದ ನೀರಿನ ಸ್ನಾನ ಹೋಗಲಾಡಿಸುತ್ತದೆ.

ದೀರ್ಘ ಉಸಿರಾಟ:

ದೀರ್ಘ ಉಸಿರಾಟ:

ದೀರ್ಘ ಉಸಿರಾಟವು ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡಿ ನಿಮ್ಮನ್ನು ಮಾನಸಿಕವಾಗಿ ವಿಶ್ರಾಂತಿಗೊಳಿಸುತ್ತದೆ.

ವಾಸನೆ ಹೊರದಬ್ಬುವ ಆಲ್ಕೋಹಾಲ್:

ವಾಸನೆ ಹೊರದಬ್ಬುವ ಆಲ್ಕೋಹಾಲ್:

ನಿಮ್ಮ ಮೆಚ್ಚಿನ ಆಹಾರ, ಸುಗಂಧದ್ರವ್ಯ ಅಥವಾ ರೂಮ್ ಫ್ರೆಶ್ನರ್‌ನ ಪರಿಮಳ ನಿಮಗೆ ಸಹ್ಯವಾಗದಿದ್ದರೆ ವಾಸನೆ ಹೊರಹೋಗಿಸುವ ಆಲ್ಕೋಹಾಲ್ ಅಥವಾ ನೈಲ್‌ಪಾಲೀಶ್ ರಿಮೂವರ್ ಅನ್ನು ವಾಕರಿಕೆ ತಡೆಗಟ್ಟಲು ಬಳಸಬಹುದು.

ವಿಶ್ರಾಂತಿ:

ವಿಶ್ರಾಂತಿ:

ವಾಕರಿಕೆಯಿಂದ ನಿಮಗೆ ಪರಿಹಾರ ಲಭಿಸಲು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ನಿಮಗೆ ಚೇತೋಹಾರಿಯಾಗಬಹುದು.

ನಡಿಗೆ:

ನಡಿಗೆ:

ನಿಮಗೆ ನಡಿಯುವ ಸಾಮರ್ಥ್ಯವಿದ್ದರೆ ಸ್ವಲ್ಪ ದೂರ ಸುಮ್ಮನೆ ನಡೆಯಿರಿ. ಇದು ವಾಕರಿಕೆಯನ್ನು ತಡೆಗಟ್ಟುವಲ್ಲಿ ಉಪಕಾರಿಯಾಗಿದೆ.

ಗಾಳಿಗೆ ಮುಖವೊಡ್ಡಿ:

ಗಾಳಿಗೆ ಮುಖವೊಡ್ಡಿ:

ಇದೊಂದು ಸರಳ ಮನೆಮದ್ದಾಗಿದ್ದು ವಾಕರಿಕೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ನಿಮ್ಮ ಮುಖವನ್ನು ತಣ್ಣೀರಿನಲ್ಲಿ ತೊಳೆದುಕೊಂಡು ಫ್ಯಾನ್ ಅಡಿಯಲ್ಲಿ ಕುಳಿತುಕೊಳ್ಳಿ. ತಂಪಾದ ಅನುಭವ ನಿಮ್ಮನ್ನು ಸಂಪೂರ್ಣವಾಗಿ ತಾಜಾಗೊಳಿಸುತ್ತದೆ.

ಸಕ್ಕರೆ ಮತ್ತು ನೀರು:

ಸಕ್ಕರೆ ಮತ್ತು ನೀರು:

ಸಕ್ಕರೆ ಬೆರೆತ ಪಾನೀಯ ಸೇವನೆ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಮತ್ತು ದೇಹದಲ್ಲಿ ಎನರ್ಜಿ ಮಟ್ಟವನ್ನು ಹೆಚ್ಚಿಸುತ್ತದೆ.

English summary

Natural Remedies To Cure Nausea

Nausea is one of the most common conditions people suffer from. It can be due to many reasons. You can feel nauseated due to various causes like food allergies, lactose intolerance, infections to name a few.
Story first published: Saturday, February 15, 2014, 10:45 [IST]
X
Desktop Bottom Promotion