Latest Updates
-
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ?
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ!
ಅಡುಗೆ ಮನೆಯಲ್ಲಿ ನಿತ್ಯ ಹತ್ತಾರು ಕೆಲಸ ಮಾಡುವ ನೀವು ಹಲವು ಬಾರಿ ಅಡುಗೆ ವಸ್ತುಗಳನ್ನು ನೆಲದ ಮೇಲೆ ಬೀಳಿಸುವುದು, ವ್ಯರ್ಥ ಮಾಡುವುದು ಸಾಮಾನ್ಯ. ಅದ್ರಲ್ಲೂ ಹಲವು ವಸ್ತುಗಳು ಖಾಲಿಯಾದಾಗ ಅದನ್ನು ಮತ್ತೊಮ್ಮೆ ತುಂಬಿಸುವಾಗ ಕೆಳಗೆ ಬೀಳಿಸುವುದು ಕಾಮನ್. ಅದ್ರಲ್ಲೂ ಗಡಿಬಿಡಿಯಲ್ಲಿದ್ದಾಗ ಯಾವುದೇ ವಸ್ತುವನ್ನು ಬಾಟಲಿಯಲ್ಲಿ ಜಾರ್‌ನಲ್ಲಿ ತುಂಬಿಸುವಾಗ ಕೆಳಗೆ ಬೀಳುತ್ತಲೇ ಇರುತ್ತದೆ.
ಸಾಮಾನ್ಯವಾಗಿ ಈ ಹಬ್ಬದ ಸಮಯದಲ್ಲಿ ಅಡುಗೆಗೆ ಬಳಸುವ ಹಲವು ವಸ್ತುಗಳನ್ನು ತುಂಬಿಸಿಡುತ್ತೀರಿ. ಹಬ್ಬದ ಅಡುಗೆಗೆ ಬೇಕಾಗುವ ಎಲ್ಲಾ ಪದಾರ್ಥಗಳನ್ನು ಮನೆಯಲ್ಲಿ ರೀಫಿಲ್ ಮಾಡುವಾಗ ಬೀಳಿಸುವುದು ನೋಡಬಹುದು. ಅದ್ರಲ್ಲೂ ಅಡುಗೆ ಎಣ್ಣೆಯನ್ನು ಬಾಟಲಿಗೆ ತುಂಬಿಸುವಾಗ ಕೆಳಗೆ ಬೀಳಿಸುವುದು ದೊಡ್ಡ ತಲೆನೋವು. ಏಕೆಂದರೆ ಕೆಳಗೆ ಬಿದ್ದ ಎಣ್ಣೆಯನ್ನು ಸ್ವಚ್ಛ ಮಾಡುವುದು ಸಹ ಮತ್ತೊಂದು ಕೆಲಸಕ್ಕೆ ಕಾರಣವಾಗಲಿದೆ.

ಬಹುತೇಕ ಸಮಯದಲ್ಲಿ ನಾವು ಕೂಡ ಅಡುಗೆ ಎಣ್ಣೆಯನ್ನು ಬಾಟಲಿಗೆ ಫಿಲ್ ಮಾಡುವಾಗ ಕೆಳಗೆ ಬೀಳುವುದು ಸಾಮಾನ್ಯ ಸಮಸ್ಯೆ. ಎಷ್ಟೇ ನಿಗಾ ಇಟ್ಟು ಈ ಕೆಲಸ ಮಾಡಲು ಮುಂದಾದರು ಒಂದಿಷ್ಟು ಹನಿ ಎಣ್ಣೆ ಕೆಳಗೆ ಚೆಲ್ಲುತ್ತದೆ. 1 ಲೀಟರ್ ಪ್ಲಾಸ್ಟಿಕ್‌ನ ಅಡುಗೆ ಎಣ್ಣೆಯನ್ನು ಬಾಟಲಿಗೆ ಹಾಕುವುದು ದೊಡ್ಡ ಕೆಲಸವಾಗಿ ಕಾಣಿಸಬಹುದು.
ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಇಂದು ಹನಿ ಎಣ್ಣೆಯನ್ನು ಕೆಳಗೆ ಚೆಲ್ಲದೆ ಸುಲವಾಗಿ ಬಾಟಲಿಯ ಒಳಗೆ ಹೇಗೆ ಹಾಕಬೇಕು ಎಂಬುದನ್ನು ವಿವರಿಸುವುದು ನೋಡಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರಿಗೂ ಅಚ್ಚರಿ ತರಿಸಿದೆ. ಏಕೆಂದರೆ ಇಷ್ಟು ದಿನಗಳಿಂದ ಕೆಳಗೆ ಬೀಳಿಸಿ, ಇಲ್ಲವೆ ಕೈ ಮೇಲೆ ಹಾಕಿಕೊಂಡು ಎಣ್ಣೆಯನ್ನು ಬಾಟಲಿಗೆ ತುಂಬುತ್ತಿದ್ದರು. ಆದ್ರೆ ಈ ವಿಡಿಯೋ ನೋಡಿ ಇಷ್ಟೊಂದು ಸುಲಭದ ವಿಧಾನದಲ್ಲಿ ಎಣ್ಣೆಯನ್ನು ಬಾಟಲಿಗೆ ಹಾಕಬಹುದು ಎಂದು ತಿಳಿದು ಅಚ್ಚರಿಗೆ ಒಳಗಾಗಿದ್ದಾರೆ.
ಈ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿ ಇಬ್ಬರು ಮಹಿಳೆಯರು ಅಡುಗೆಮನೆಯಲ್ಲಿ ಎಣ್ಣೆ ಪ್ಯಾಕೆಟ್‌ನಿಂದ ಬಾಟಲಿಗೆ ಎಣ್ಣೆಯನ್ನು ಸುರಿಯಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಮೊದಲಿಗೆ ಎಣ್ಣೆಯನ್ನು ಬಾಟಲಿಗೆ ಹಾಕುವಾಗ ಕೆಳಗೆ ಚೆಲ್ಲುವುದನ್ನು ನೋಡಬಹುದು. ಬಳಿಕ ಮತ್ತೊಬ್ಬ ಮಹಿಳೆ ಆಕೆಯನ್ನು ತಡೆದು ಸುಲಭದ ಉಪಾಯವನ್ನು ಹೇಳುವುದು ನೋಡಬಹುದು.
ಮೊದಲಿಗೆ ಅದೇ ಎಣ್ಣೆಯ ಪ್ಯಾಕ್‌ನ ಒಂದು ತುದಿಯಲ್ಲಿ ಕತ್ತರಿಸಿ ಅದನ್ನೇ ಕೊಳವೆಯಂತೆ ರಚಿಸಿ ಪ್ಲಾಸ್ಟಿಕ್ ಬಾಟಲಿ ಮೇಲೆ ಇಟ್ಟು ಅದರ ಮೇಲೆ ಎಣ್ಣೆ ಹಾಕುವುದು ನೋಡಬಹುದು, ಈ ಇದು ಒಂದೇ ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಹಾಗೆ ಕೈಗೆ ತಾಕದೆ ನೇರವಾಗಿ ಬಾಟಲಿಯ ಒಳಗೆ ಇಳಿಯುವುದು ನೋಡಬಹುದು. ಈ ಸುಲಭದ ಉಪಾಯವು ಹಲವರಿಗೆ ಅಚ್ಚರಿ ತರಿಸಿದೆ.
ಇಷ್ಟ ದಿನಗಳಿಂದ ಎಣ್ಣೆಯನ್ನು ಬಾಟಲಿಗೆ ಹಾಕುವಾಗ ಎರಡೆರಡು ಬಾರಿಯ ಪ್ರಯತ್ನದಲ್ಲು ಕೆಳಗೆ ಚೆಲ್ಲುವುದು, ಕೈಗೆ ಹಿಡಿಸಿಕೊಳ್ಳುವುದು ಹೀಗೆ ಹಲವು ರೀತಿಯ ಸಮಸ್ಯೆ ಎದುರಿಸಿದ್ದ ಮಂದಿ ಈ ಸುಲದ ಉಪಾಯ ಕಂಡು ನಿಬ್ಬೆರಗಾಗಿದ್ದಾರೆ. ಹಲವರು ಈ ವಿಡಿಯೋದ ಕೆಳಗೆ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ನಾನು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ಯಾಕೆಟ್‌ಗಳಿಂದ ಎಣ್ಣೆಯನ್ನು ಸಣ್ಣ ಕ್ಯಾಪ್ ಬಾಟಲಿಗಳಿಗೆ ಸುರಿಯುತ್ತಿದ್ದೇನೆ. ಈ ಸೂಪರ್ ಹ್ಯಾಕ್ ಎಂದಿಗೂ ತಿಳಿದಿರಲಿಲ್ಲ. ಮುಂದಿನ ಬಾರಿ ಇದನ್ನು ಪ್ರಯತ್ನಿಸುತ್ತೇನೆ' ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ. ಹಾಗೆ ಮತ್ತೆ ಕೆಲವರು ಈ ರೀತಿ ಮಾಡಬೇಡಿ ಎಂದು ಕೂಡ ಹೇಳಿದ್ದಾರೆ. ಪ್ಲಾಸ್ಟಿಕ್‌ನ ಸಣ್ಣ ಭಾಗವು ಕಸದಿಂದ ಬೇರ್ಪಡುವ ಕಾರಣ ಅದನ್ನು ಮರಬಳಕೆ ಮಾಡಲು ಆಗುವುದಿಲ್ಲ. ಅಥವಾ ಆ ಸಣ್ಣ ಭಾಗ ಮಾಲಿನ್ಯಕ್ಕೆ ಕಾರಣವಾಗುತ್ತೆ. ಇದಕ್ಕಿಂತ ಮಾರುಕಟ್ಟೆಯಲ್ಲಿ 10 ರೂಪಾಯಿಗೆ ಸಿಗುವ ಫನಲ್ ಕ್ಯಾಪ್ ಖರೀದಿಸಿ ಎಂದು ಮತ್ತೊಬ್ಬರು ಹೇಳಿದ್ದಾರೆ.



Click it and Unblock the Notifications
