Latest Updates
-
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು! -
ಇಂದಿನ ಪೆಟ್ರೋಲ್ ದರ ಸ್ಥಿರ: ಪ್ರಯಾಣದ ವೆಚ್ಚ ಉಳಿಸಲು ಈ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: ಆರೋಗ್ಯ ಕಾಪಾಡಿಕೊಳ್ಳಲು 12 ನಿಮಿಷದ ವರ್ಕೌಟ್ ಮತ್ತು ಸುರಕ್ಷತಾ ಟಿಪ್ಸ್
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ
ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯು ಹಲವು ರೀತಿಯಲ್ಲಿ ಶುಭದಾಯಕ ಎಂಬುದಾಗಿ ವಿವರಿಸಲಾಗಿದೆ. ಅದ್ರಲ್ಲೂ ಹಲವು ಗ್ರಹಗಳ ಚಲನೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುವುದು ನೋಡಬಹುದು. ಅದ್ರಲ್ಲೂ ಎಲ್ಲಾ ವ್ಯಕ್ತಿಗಳ ಜೀವನದಲ್ಲಿ ಇದು ಶುಭ ಹಾಗೂ ಅಶುಭ ಯೋಗಕ್ಕೂ ಕಾರಣಾಗುವುದು ನೋಡಬಹುದು. ಹಾಗೆ ಏಪ್ರಿಲ್ ತಿಂಗಳಲ್ಲಿ ಹಲವು ರೀತಿಯ ಗ್ರಹಗತಿಗಳ ಬದಲಾವಣೆಯು ಹಲವರಲ್ಲಿ ದೊಡ್ಡ ಶುಭಗಳಿಗೆ ಕಾರಣವಾಗುವುದು ನೋಡಬಹುದು.
ಏಪ್ರಿಲ್ 11 2026 ರಂದು ಬುಧಾದಿತ್ಯ ಯೋಗವು ರೂಪುಗೊಳ್ಳಲಿದೆ. ಸೂರ್ಯ ಮತ್ತು ಬುಧನ ಸಂಯೋಗದ ಕಾರಣದಿಂದ ಈ ಅಪರೂಪದ ಯೋಗವು ರೂಪುಗೊಳ್ಳಲಿದೆ. ಸೂರ್ಯ ಹಾಗೂ ಬುಧ ಮೀನ ರಾಶಿಯಲ್ಲಿ ಸಂಯೋಗವಾದಾಗ ಈ ಯೋಗ ರೂಪುಗೊಳ್ಳಲಿದೆ. ಇದು ಹಲವರಿಗೆ ಲಾಭದಾಯಕವಾಗುತ್ತದೆ. ಬುಧನು ಬುದ್ದಿವಂತಿಗೆ, ಆಸ್ತಿ, ಸಂಬಂಧ, ಆರೋಗ್ಯ ಸಂಬಂಧಿಸಿದ ಗ್ರಹವೆಂದು ಕರೆಯಲಾಗುತ್ತದೆ.

ಸೂರ್ಯನನ್ನು ಧೈರ್ಯ, ಶಕ್ತಿ, ವ್ಯವಹಾರ, ಹೊಸ ಆರಂಭಗಳಿಗೆ ಕಾರಣವಾಗುವ ಅಂಶ ಎಂದು ಪರಿಗಣಿಸಲಾಗಿದೆ. ಇದು ವ್ಯಕ್ತಿಯ ಜೀವನದಲ್ಲಿ ಸಂಪತ್ತು, ವೃತ್ತಿ ಮತ್ತು ಪ್ರತಿಷ್ಠೆಯಲ್ಲಿ ಪ್ರಗತಿಗೆ ಬಲವಾದ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಏಪ್ರಿಲ್‌ನಲ್ಲಿ ರೂಪುಗೊಳ್ಳುವ ಈ ಯೋಗದಿಂದ ಹಲವು ರಾಶಿಗಳಿಗೆ ಶುಭವಾಗುತ್ತಿದೆ. ಆರ್ಥಿಕ ಲಾಭಗಳು ಮತ್ತು ತ್ವರಿತ ವೃತ್ತಿ ಪ್ರಗತಿಯನ್ನು ತರಬಹುದು. ವ್ಯವಹಾರ, ಮಾಧ್ಯಮ, ಶಿಕ್ಷಣ, ಬರವಣಿಗೆ ಮತ್ತು ಆಡಳಿತದಲ್ಲಿ ತೊಡಗಿರುವವರಿಗೆ ಈ ಯೋಗವು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ವಿಶೇಷ ಯೋಗದಿಂದ ಯಾರಿಗೆಲ್ಲಾ ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಬುಧಾದಿತ್ಯ ಯೋಗವು ವೃಷಭ ರಾಶಿಯ ಜನರಿಗೆ ಸಕಾರಾತ್ಮಕವೆಂದು ಸಾಬೀತುಪಡಿಸಬಹುದು. ಈ ಯೋಗವು ವೃಷಭ ರಾಶಿಯವರಿಗೆ ಲಾಭದ ಮನೆಯಲ್ಲಿ ರೂಪುಗೊಳ್ಳುವುದರಿಂದ ನಿಮ್ಮ ಹಣಕಾಸು ಸ್ಥಿತಿ ಸುಧಾರಿಸುವ ಜೊತೆಗೆ ನಿಮ್ಮ ಹಲವು ಪ್ರಯತ್ನಗಳಲ್ಲಿ ಧನಾತ್ಮಕ ಫಲಿತಾಂಶಗಳ ಪಡೆಯಲು ನೆರವಾಗಲಿದೆ. ನೀವು ಬಹು ಸಮಯದಿಂದ ಪಿತ್ರಾರ್ಜಿತ ಆಸ್ತಿ ಕುರಿತಾದ ವಿಚಾರದಲ್ಲಿ ಸಮಸ್ಯೆಗಳ ಎದುರಿಸಿದ್ದರೆ ಈ ಸಮಯದಲ್ಲಿ ಶುಭವಾಗುವುದು ನೋಡಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಬುಧಾದಿತ್ಯ ಯೋಗವು ವೃತ್ತಿ ಮತ್ತು ವ್ಯವಹಾರಕ್ಕೆ ಶುಭವೆಂದು ಸಾಬೀತುಪಡಿಸಬಹುದು. ಈ ಯೋಗವು ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಇದು ನಿಮಗೆ ಹಲವು ರೀತಿಯ ಶುಭ ವಿಚಾರಗಳ ತರಲಿದೆ. ನಿಮಗೆ ನಿರ್ಧಾರ ತೆಗೆದುಕೊಳ್ಳುವ ಮನೋಸ್ಥೈರ್ಯವನ್ನು ಹೆಚ್ಚಿಸಲಿದೆ. ಇದರಿಂದ ಕಠಿಣ ಪರಿಸ್ಥಿತಿಯಲ್ಲೂ ನೀವು ಅಚಲರಾಗಿ ನಿಲ್ಲುತ್ತೀರಿ. ನಿಮ್ಮ ನಾಯಕತ್ವ ಕೌಶಲ್ಯ ವೃದ್ಧಿಯಾಗಲಿದೆ. ವ್ಯಾಪಾರ, ವ್ಯವಹಾರ ಸಂಬಂಧಿತ ವಿಚಾರವಾಗಿ ನಿಮಗೆ ಶುಭವಿದೆ. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಲಾಭದಾಯಕ ಸಮಯಗಳಿವೆ.
ಮೀನ ರಾಶಿ
ಮೀನ ರಾಶಿಗೆ ಈ ಯೋಗವು ಬಹಳ ಪ್ರಯೋಜನ ತರಲಿದೆ. ನಿಮ್ಮ ರಾಶಿಯ ಲಗ್ನ ಮನೆಯಲ್ಲಿ ರೂಪುಗೊಳ್ಳುತ್ತಿದ್ದು, ಇದು ನಿಮ್ಮ ವ್ಯಕ್ತಿತ್ವದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ ಸೂರ್ಯನು ಲಗ್ನದಲ್ಲಿದ್ದಾಗ, ಅದು ವ್ಯಕ್ತಿಯ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ನಾಯಕತ್ವದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ದಾಂಪತ್ಯ ವಿಚಾರವಾಗಿ ನೀವು ಬಹಳ ಸಮಯದಿಂದ ಅನುಭವಿಸಿದ್ದ ಸಮಸ್ಯೆಯೊಂದು ಬಗೆಹರಿಯುವ ಸಮಯವಿದು. ಅದರಲ್ಲೂ ನ್ಯಾಯಾಲಯ ಸಂಬಂಧಿತ ವಿಚಾರವಾಗಿ ನಿಮಗೆ ಗೆಲುವಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications