For Quick Alerts
ALLOW NOTIFICATIONS  
For Daily Alerts

ನೆನಪಿಡಿ: 'ಮಧ್ಯಾಹ್ನದ ಊಟ' ಇದುವೇ ಆರೋಗ್ಯದ ಕೀಲಿಕೈ

ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಪ್ರತಿಯೊಬ್ಬರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಬೇಕು.... ಇದರಲ್ಲಿ ಒಂದನ್ನು ತ್ಯಜಿಸಿದರೂ ದೇಹದ ಮೇಲೆ ಕೆಲವೊಂದು ಅಡ್ಡ ಪರಿಣಾಮಗಳಾಗಬಹುದು.

By Manu
|

ಮಧ್ಯಾಹ್ನದ ಊಟದ ಸಮಯ ಯಾವುದು ಎಂಬ ಪ್ರಶ್ನೆಗೆ ಆಯುರ್ವೇದದಲ್ಲಿ ಸೂರ್ಯ ನೆತ್ತಿಗೆ ಬಂದಾಗ ಎಂಬ ಉತ್ತರ ಸಿಗುತ್ತದೆ. ಅಂದರೆ ಸುಮಾರು ಮಧ್ಯಾಹ್ನದ ಹನ್ನೆರಡರಿಂದ ಒಂದೂವರೆಯ ನಡುವೆ. ಆದರೆ ಈ ಸಮಯದಲ್ಲಿಯೇ ಎಲ್ಲರೂ ಊಟ ಮಾಡುತ್ತಾರೆಯೇ? ಹೆಚ್ಚಿನವರಿಗೆ ಕೆಲಸದ ಬಾಹುಳ್ಯದಿಂದ ಸರಿಯಾದ ಸಮಯಕ್ಕೆ ಊಟ ಮಾಡಲು ಸಾಧ್ಯವಾಗುವುದಿಲ್ಲ.

ಕೆಲವರು ತಮ್ಮ ಕೆಲಸದ ಸ್ಥಳದಲ್ಲಿಯೇ ಗಡಿಬಿಡಿಯಿಂದ ತಿನ್ನುತ್ತಾರೆ. ಕೆಲವು ಕೆಲಸದ ಹುಚ್ಚು ಹಚ್ಚಿಕೊಂಡಿದ್ದವರಂತೂ ಕೆಲಸ ಮಾಡುತ್ತಲೇ ಊಟವನ್ನೂ ಮಾಡುತ್ತಾರೆ. ಇನ್ನೂ ಕೆಲವರು ಕೆಲಸಕ್ಕೇ ಹೆಚ್ಚಿನ ಮಹತ್ವ ನೀಡಿ ಮಧ್ಯಾಹ್ನದ ಊಟವನ್ನೇ ಬಿಟ್ಟು ಬಿಡುತ್ತಾರೆ. ಪ್ರತಿದಿನವು ಒಪ್ಪೊತ್ತಿನ ಊಟ ತ್ಯಜಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!

ನಮ್ಮ ದೇಹಕ್ಕೆ ಕಾಲಕಾಲಕ್ಕೆ ಆಹಾರ ಒದಗುತ್ತಿರಬೇಕು. ಇದಕ್ಕೂ ಯಾವುದೇ ಒತ್ತಡ ಅಥವಾ ಕೆಲಸದ ಮಹತ್ವಕ್ಕೂ ಸಂಬಂಧವಿಲ್ಲ. ಒಂದು ಸುಭಾಷಿತದಂತೆ ನೀವು ಏನನ್ನು ಸೇವಿಸುತ್ತೀರೋ ಅದರ ಪರಿಣಾಮವೇ ನಿಮ್ಮ ಆರೋಗ್ಯ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಕನ್ನಡದ ಗಾದೆ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಅಂದರೆ ಯಾವ ಹೊತ್ತಿನಲ್ಲಿ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವುದನ್ನು ಸೇವಿಸಬಾರದು ಎಂಬ ಮಾಹಿತಿ ಇದ್ದವರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಲ್ಲರು. ಮಧ್ಯಾಹ್ನ ಊಟದ ಜೊತೆ, ಒಂದು ಮೊಟ್ಟೆಯೂ ಇರಲಿ!

ದಿನದ ಚಟುವಟಿಕೆಗೆ ಮಧ್ಯಾಹ್ನದ ಊಟ ಅತಿ ಪ್ರಮುಖವಾಗಿದ್ದು ಇದನ್ನು ಬಿಡುವುದು ಅಥವಾ ತಡವಾಗಿಸುವುದು ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ಸೇವಿಸಬಾರದು ಎಂಬ ಮಹತ್ವದ ಮಾಹಿತಿಯನ್ನು ಇಂದು ಸಂಗ್ರಹಿಸಿ ನಿಮ್ಮ ಮುಂದಿಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ.... ಮುಂದೆ ಓದಿ....

ಸಲಹೆ #1

ಸಲಹೆ #1

ನಿಮ್ಮ ಆಫೀಸ್ ಅಥವಾ ಕೆಲಸದ ಸ್ಥಳದಲ್ಲಿ ಎಷ್ಟೇ ಒತ್ತಡವಿರಲಿ, ಊಟದ ಸಮಯ ಬಂದಾಗ ಮಾತ್ರ ಎಲ್ಲವನ್ನೂ ಬದಿಗಿಟ್ಟು ಕನಿಷ್ಠ ಹದಿನೈದು ನಿಮಿಷ ಊಟಕ್ಕಾಗಿ ಮೀಸಲಿಡಿ. ಈ ಹೊತ್ತಿನಲ್ಲಿ ಊಟದ ಹೊರತಾಗಿ ಬೇರೆ ಕೆಲಸ ಬೇಡ. ಸತತವಾಗಿ ಕಂಪ್ಯೂಟರ್ ಪರದೆಯನ್ನು ನೋಡಿ ಸುಸ್ತಾಗಿರುವ ನಿಮ್ಮ ಕಣ್ಣುಗಳು ಮತ್ತು ದೇಹಕ್ಕೆ ಸಹಾ ಕೊಂಚ ವಿಶ್ರಾಂತಿಯ ಅಗತ್ಯವಿದೆ.

ಸಲಹೆ #2

ಸಲಹೆ #2

ನಿಮ್ಮ ಕೆಲಸದ ಸ್ಥಳದಲ್ಲಿ ಸರ್ವಥಾ ಊಟ ಮಾಡಬೇಡಿ. ಏಕೆಂದರೆ ಊಟದ ಸಮಯದಲ್ಲಿ ನಿಮ್ಮ ಗಮನ ಕೆಲಸದತ್ತ ಹೊರಳುತ್ತದೆ ಹಾಗೂ ಊಟದ ನೆಪದಿಂದಲಾದರೂ ಆಗಬಹುದಾಗಿದ್ದ ವ್ಯಾಯಾಮಕ್ಕೂ ಕಲ್ಲು ಬೀಳುತ್ತದೆ. ಪರಿಣಾಮವಾಗಿ ಸೊಂಟ ವಿಸ್ತಾರವಾಗುತ್ತಾ ಹೋಗುತ್ತದೆ...!

ಸಲಹೆ #3

ಸಲಹೆ #3

ಮನೆಯ ಊಟವನ್ನೇ ತನ್ನಿ. ಮಧ್ಯಾಹ್ನದ ಊಟ ಕೊಂಚ ತಣ್ಣಗಿದ್ದರೂ ಪರವಾಗಿಲ್ಲ, ಮನೆಯ ಊಟವೇ ಅತ್ಯುತ್ತಮ. ಏಕೆಂದರೆ ಪ್ರತಿಬಾರಿ ಹೊರಗಿನ ಊಟ ತರಿಸಿದರೆ ಇದು ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ಮಾರಕವಾಗಿ ಪರಿಣಮಿಸಬಹುದು.

ಸಲಹೆ #4

ಸಲಹೆ #4

ಒಂದು ವೇಳೆ ಮನೆಯಿಂದ ಊಟ ತರಲು ಸಾಧ್ಯವಾಗದಿದ್ದರೆ ಮಧ್ಯಾಹ್ನದ ಊಟವನ್ನು ಹೋಟೆಲಿನ ಭಾರೀ ಖಾದ್ಯಗಳನ್ನು ಸೇವಿಸುವ ಬದಲು ಆರೋಗ್ಯಕರ ಸಾಲಾಡ್ ಅಥವಾ ಮನೆಯಲ್ಲಿಯೇ ಒಂದು ಸ್ಯಾಂಡ್ ವಿಚ್ ಮಾಡಿ ಪ್ರಿಜ್ಜಿನಲ್ಲಿಟ್ಟು ಮರುದಿನ ಕೆಲಸಕ್ಕೆ ಕೊಂಡು ತರುವುದೇ ಉತ್ತಮ.

ಸಲಹೆ #5

ಸಲಹೆ #5

ಮನೆಯಿಂದ ಕೊಂಡು ಹೋಗಲು ಅಸಾಧ್ಯವಾದರೆ ಮತ್ತು ಹೊರಗಿನ ಊಟವೇ ಅನಿವಾರ್ಯವಾದಾಗ ಮಾತ್ರ ಹೋಟೆಲಿನಿಂದ ಎಣ್ಣೆಯಿಲ್ಲದ ಆಹಾರಗಳಿಗೆ ಆದ್ಯತೆ ನೀಡಿ. ರೋಟಿ ಸಬ್ಜಿ ಅಥವಾ ಕಡಿಮೆ ಕ್ಯಾಲೋರಿಗಳ ಸ್ಯಾಂಡ್ ವಿಚ್ ತರಿಸಿ.

ಸಲಹೆ #6

ಸಲಹೆ #6

ಲವಲವಿಕೆಯ ಜೀವನ ಶೈಲಿಗೆ ಪ್ರೋಟೀನ್‌ಯುಕ್ತ ಆಹಾರಗಳು...

ಸಲಹೆ #7

ಸಲಹೆ #7

ಒಂದು ವೇಳೆ ಹೋಟೆಲಿನ ಊಟವೇ ಅನಿವಾರ್ಯವಾದರೆ ಹೋಟೆಲಿನಿಂದ ತರಿಸುವ ಬದಲು ನೀವೇ ಸಮೀಪದ ಹೋಟೆಲಿಗೆ ನಡೆದೇಹೋಗಿ. ಇದರಿಂದ ಕೆಲಸದಿಂದ ಕೊಂಚ ವಿರಾಮ ಸಿಕ್ಕಿದಂತೆಯೂ ಆಯಿತು, ವ್ಯಾಯಮವೂ ಲಭ್ಯವಾದಂತಾಯಿತು.

English summary

seven healthy lunch time habits to follow

Do you work in an office and hardly find time to take proper lunch breaks? Do you often end up eating in a hurry, at your desk? Well, it is the same case with numerous people out there who work in demanding jobs these days. They get so caught up in their work pressure and deadlines that they forget to follow healthy food habits.
X
Desktop Bottom Promotion