For Quick Alerts
ALLOW NOTIFICATIONS  
For Daily Alerts

ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವ 'ಬ್ರಹ್ಮ ಮುದ್ರೆ'

By Arshad
|

ಯಾವುದೇ ಕೆಲಸದಲ್ಲಿ ಉತ್ಕೃಷ್ಟತೆ ಸಾಧಿಸಬೇಕಾದರೆ ಏಕಾಗ್ರತೆ ಅಗತ್ಯ. ಆದರೆ ನಮ್ಮನ್ನು ಸುತ್ತುವರೆದಿರುವ ನಮ್ಮ ಸಮಸ್ಯೆಗಳು ಏಕಾಗ್ರತೆ ಪಡೆಯಲು ಅಡ್ಡಿಯಾಗುತ್ತವೆ. ಈ ತೊಂದರೆಯನ್ನು ಬಹಳ ಹಿಂದೆಯೇ ಕೆಲವು ಮುದ್ರೆಗಳನ್ನು ಹಾಕುವ ಮೂಲಕ ಎದುರಿಸಬಹುದು ಎಂದು ಬಹಳ ಹಿಂದೆಯೇ ಯೋಗಪಟುಗಳು ಕಂಡುಕೊಂಡಿದ್ದರು. ಇದರಲ್ಲಿ ಮುಖ್ಯವಾದುದುದು ಬ್ರಹ್ಮ ಮುದ್ರೆ.

ಇದನ್ನು ಅನುಸರಿಸುವ ಮೂಲಕ ತಕ್ಷಣವೇ ಮಾನಸಿಕವಾಗಿ ಹೆಚ್ಚಿನ ಶಕ್ತಿಯನ್ನು ಪಡೆದುಕೊಂಡು ನಿಮ್ಮ ಕೆಲಸದಲ್ಲಿ ಹೆಚ್ಚಿನ ಏಕಾಗ್ರತೆ ಸಾಧಿಸಬಹುದು. ಈ ಮುದ್ರೆಗೆ ಪೂರ್ಣ ಮುದ್ರೆ ಎಂದೂ ಕರೆಯಲಾಗುತ್ತದೆ.

brahma mudra

ನಮ್ಮ ಋಣಾತ್ಮಕ ಚಿಂತನೆಗಳ ಪರಿಣಾಮವಾಗಿ ನಮ್ಮ ಮನಸ್ಸಿನಲ್ಲಿರುವ ಧನಾತ್ಮಕ ಚಿಂತನೆಯ ಲಹರಿ ಒಂದೆಡೆ ಕಟ್ಟೆ ಕಟ್ಟಿಕೊಂಡಿರುತ್ತದೆ. ಈ ಮುದ್ರೆಯ ಮೂಲಕ ಇಡಿಯ ಶರೀರದಲ್ಲಿ ಶಕ್ತಿಯೊಂದು ಪ್ರವಹನೆಯಾಗಿ ಮೆದುಳಿಗೆ ಧನಾತ್ಮಕ ಚಿಂತನೆಯ ಲಹರಿಗಳು ಧಾವಿಸುತ್ತವೆ.

ಇದು ಮೆದುಳಿನಲ್ಲಿ ನಿರಾಳ ಭಾವನೆ ಮತ್ತು ಒತ್ತಡದಿಂದ ಮುದುಡಿದ್ದ ಮನವನ್ನು ಸಡಿಲಿಸಲು ನೆರವಾಗುತ್ತದೆ. ಅಲ್ಲದೇ ಋಣಾತ್ಮಕ ಶಕ್ತಿಯ ಕಾರಣ ದೇಹದಲ್ಲಿ ಸಂಗ್ರಹವಾಗಿದ್ದ ಋಣಾತ್ಮಕ ಚಿಂತನೆಗಳೂ, ರಕ್ತದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ನೆರವಾಗುತ್ತದೆ. ಏಕಾಗ್ರತೆಯನ್ನು ಹೆಚ್ಚಿಸಲು 20 ಮಾರ್ಗಗಳು

ಈ ಮುದ್ರೆಯನ್ನು ಅನುಸರಿಸುವುದು ಹೇಗೆ?
ಪೂರ್ಣಮುದ್ರೆಯನ್ನು ಅನುಸರಿಸಲು ಮೊದಲು ಎರಡೂ ಹಸ್ತಗಳನ್ನು ಮುಷ್ಟಿಗಟ್ಟಬೇಕು. ಅಂದರೆ ಹೆಬ್ಬರಳು ಒಳಗಿದ್ದು ಉಳಿದ ನಾಲ್ಕೂ ಬೆರಳುಗಳು ಹೆಬ್ಬೆರಳನ್ನು ಸುತ್ತುವರೆಯುವಂತಿರಬೇಕು. ಪದ್ಮಾಸನದಲ್ಲಿ ಕುಳಿತು ಈ ಎರಡೂ ಮುಷ್ಟಿಗಳನ್ನು ಒಂದಕ್ಕೊಂದು ತಾಕಿಸಿ ಹೊಟ್ಟೆಯ ಭಾಗದಲ್ಲಿ ಇರಿಸಿ.

ಅಂದರೆ ಒಂದು ವೇಳೆ ಎರಡೂ ಕೈಗಳಲ್ಲಿ ಉಂಗುರುಗಳಿದ್ದರೆ ಉಂಗುರಗಳು ಒಂದಕ್ಕೊಂದು ತಾಕುವ ಹಾಗೆ. ಈಗ ಹಸ್ತ ಮೇಲೆ ಕಾಣುವಂತಿರುತ್ತದೆ. ಒಂದು ವೇಳೆ ಪದ್ಮಾಸನ ಹಾಕಲು ಕಷ್ಟವಾದರೆ ಸುಖಾಸನ ಅಥವಾ ಕಷ್ಟವಿಲ್ಲದ ಚಕ್ಕಲೆ ಮಕ್ಕಲೆಯಾಗಿಯೂ ಕುಳಿತುಕೊಳ್ಳಬಹುದು. ಏಕಾಗ್ರತೆ-ಜ್ಞಾಪಕಶಕ್ತಿ ಹೆಚ್ಚಿಸುವ ಆಕ್ಯುಪ್ರೆಷರ್ ಚಿಕಿತ್ಸೆ

ಈಗ ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಂಡು ಮುಷ್ಟಿಗಳನ್ನು ಪರಸ್ಪರ ಢಿಕ್ಕಿಕೊಡುವಂತೆ ನಯವಾಗಿ ಒತ್ತಿ. ಈ ಹಂತದಲ್ಲಿ ಹಸ್ತಗಳು ಹೊಕ್ಕುಳ ಭಾಗದಲ್ಲಿರಬೇಕು. ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಒತ್ತಡವನ್ನು ಇರಿಸಿ. ಬಳಿಕ ನಿಧಾನವಾಗಿ ಉಸಿರು ಬಿಟ್ಟು ಒತ್ತಡ ಬಿಡದೇ ಇನ್ನೊಂದು ಬಾರಿ ಉಸಿರೆಳೆದುಕೊಳ್ಳಿ.


ನಿಮ್ಮ ಸಾಮರ್ಥಕ್ಕೆ ಅನುಸಾರವಾಗಿ ಒಂದೆರಡು ನಿಮಿಷಗಳಿಂದ ಕೆಲವಾರು ನಿಮಿಷಗಳವೆರೆಗೂ ಅನುಸರಿಸಬಹುದು. ಬಳಿಕ ನಿಧಾನವಾಗಿ ಉಸಿರು ಬಿಟ್ಟು ಒತ್ತಡ ಇಲ್ಲವಾಗಿಸಿ ಹಸ್ತವನ್ನು ಬಿಚ್ಚಿ ಬೆರಳುಗಳನ್ನು ನೇರವಾಗಿಸಿ. ತಕ್ಷಣದಲ್ಲಿಯೇ ನಿಮ್ಮ ಶರೀರದಲ್ಲಿ ಶಕ್ತಿ ಪ್ರವಹನೆಯಾಗುವುದನ್ನು ಗಮನಿಸಬಹುದು. ಅಚ್ಚರಿಗೆ ತಳ್ಳುವ ಕೈ ಬೆರಳಿನ ಮೂಲಕ ಮಾಡುವ ಚಿಕಿತ್ಸೆ!

ಈ ಮುದ್ರೆಯನ್ನು ದಿನದ ಯಾವುದೇ ಹೊತ್ತಿನಲ್ಲಿ ಅನುಸರಿಸಬಹುದು. ಇದನ್ನು ಅನುಸರಿಸುವವರು ಯೋಗಪಟುಗಳೇ ಆಗಬೇಕೆಂದಿಲ್ಲ. ಅಥವಾ ಇಂಥ ಸ್ಥಳದಲ್ಲಿಯೇ ಎನ್ನುವ ಕಟ್ಟುಪಾಡಿಲ್ಲ. ಆದರೆ ಪ್ರತಿದಿನ ಬೆಳಿಗ್ಗೆ ಒಮ್ಮೆಯಾದರೂ ಅಭ್ಯಸಿಸುವುದು ಉತ್ತಮ. ನಿತ್ಯದ ಕ್ರಮದಂತೆ ನಲವತ್ತು ದಿನ ಅನುಸರಿಸಿದರೆ ಉತ್ತಮ ಫಲ ಕಂಡುಬರುತ್ತದೆ. ಈ ಮುದ್ರೆಯನ್ನು ಬೆಳಗ್ಗಿನ ಅಭ್ಯಾಸವಾಗಿ ಅನುಸರಿಸಿದರೆ ಮನದಲ್ಲಿ ಶಾಂತಿ ಮತ್ತು ಪ್ರಸನ್ನತೆ ಮೂಡುತ್ತದೆ. ವಿಶೇಷವಾಗಿ ಧ್ಯಾನದ ಸಮಯದಲ್ಲಿ ಈ ಮುದ್ರೆ ಇನ್ನಷ್ಟು ಪ್ರಯೋಜನಕಾರಿಯಾಗಿದೆ.

English summary

Practise brahma mudra to improve your concentration

Brahma mudra also known as purna mudra is an easy hand gesture will help release the energy blocked within your body directing its reflexes and flow to the brain. Brahma mudra is said to help you calm your mind and help you relax. It releases pent up negative energies and toxins from the body.
X
Desktop Bottom Promotion