Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏಕಾಗ್ರತೆ-ಜ್ಞಾಪಕಶಕ್ತಿ ಹೆಚ್ಚಿಸುವ ಆಕ್ಯುಪ್ರೆಷರ್ ಚಿಕಿತ್ಸೆ
ಆಕ್ಯುಪ್ರೆಷರ್ ಚಿಕಿತ್ಸೆ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದುಕೊಂಡು ದೇಹದಲ್ಲಿನ ಕೆಲವೊಂದು ನೋವುಗಳನ್ನು ನಿವಾರಣೆ ಮಾಡಲು ಹಾಗೂ ರೋಗಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.
ದೇಹದಲ್ಲಿನ ಒಂದು ಭಾಗವನ್ನು ಕೇಂದ್ರವಾಗಿರಿಸಿಕೊಂಡು ಅದರ ಮೇಲೆ ಒತ್ತಡ ಹಾಕಿದಾಗ ರಕ್ತ ಪರಿಚಲನೆ ಸರಾಗವಾಗಿ, ನೋವು ನಿವಾರಣೆಯಾಗುತ್ತದೆ. ಅದರಲ್ಲೂ ಆಕ್ಯುಪಂಕ್ಚರ್‌ನಲ್ಲಿ ಸೂಜಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಆದರೆ ಆಕ್ಯುಪ್ರೆಷರ್‌ನಲ್ಲಿ ಕೈಬೆರಳಿನಲ್ಲೇ ಒತ್ತಡ ಹಾಕಿ ಚಿಕಿತ್ಸೆ ಮಾಡಲಾಗುವುದು.

ಆಕ್ಯುಪಂಕ್ಚರ್‌ಗೆ ಹೋಲಿಸಿದರೆ ಆಕ್ಯುಪ್ರೆಷರ್‌ನಲ್ಲಿ ನೋವು ತುಂಬಾ ಕಡಿಮೆ. ಈ ಚಿಕಿತ್ಸೆಯು ಮಾನವ ದೇಹವು ತನಗೆ ತಾನೇ ಚಿಕಿತ್ಸೆ ಮಾಡಿಕೊಳ್ಳಬಲ್ಲದು ಎನ್ನುವುದನ್ನು ತಿಳಿಸಿಕೊಡುತ್ತದೆ. ದೇಹವು ಯಾವುದೇ ಔಷಧಿ ಅಥವಾ ಮದ್ದಿನ ನೆರವಿಲ್ಲದೆ ಸುಧಾರಿಸಿಕೊಳ್ಳಬಲ್ಲದು. ಇದು ಶತಮಾನಗಳಿಂದ ಪಾಲಿಸಿಕೊಂಡು ಬಂದಿರುವಂತಹ ಚಿಕಿತ್ಸಾ ಪದ್ಧತಿಯಾಗಿದೆ. ಏಕಾಗ್ರತೆಯನ್ನು ಹೆಚ್ಚಿಸಲು 20 ಮಾರ್ಗಗಳು
ಇದರಿಂದ ದೇಹಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಈ ಲೇಖನದಲ್ಲಿ ಎರಡು ಆಕ್ಯುಪ್ರೆಷರ್ ಬಿಂದುಗಳನ್ನು ತಿಳಿಸಿಕೊಡಲಾಗುವುದು. ಇದರಿಂದ ನಿಮ್ಮ ಏಕಾಗ್ರತೆ ಹಾಗೂ ನೆನಪಿನ ಶಕ್ತಿ ಹೆಚ್ಚಾಗುವುದು. ಒತ್ತಡ ಹಾಕಬೇಕಾದ ಬಿಂದುಗಳು ಎಲ್ಲಿದೆ ಎಂದು ತಿಳಿದುಕೊಳ್ಳಲು ಮುಂದಕ್ಕೆ ಓದಿ ಮತ್ತು ನಿಮ್ಮ ಚಿಕಿತ್ಸೆ ಮಾಡಿಕೊಳ್ಳಿ.
ದೊಡ್ಡ ಗಮನದ ಬಿಂದು
ದೊಡ್ಡ ಗಮನ ಬಿಂದು ಹೆಬ್ಬೆರಳು ಮತ್ತು ಎರಡನೇ ಬೆರಳನ್ನು ಸಂಧಿಸುವ ಎಲುಬು ಜೋಡಿಸಲ್ಪಟ್ಟಿರುವ ಸ್ಥಳ. ಈ ಸ್ಥಳದಲ್ಲಿ ನಿಮ್ಮ ಬೆರಳನ್ನಿಟ್ಟು 3-4 ನಿಮಿಷ ಒತ್ತಡ ಹಾಕಬೇಕು. ಇದರ ಬಳಿಕ ಬೆರಳನ್ನು ತೆಗೆಯಿರಿ.
ದಿನದಲ್ಲಿ ಮೂರರಿಂದ ನಾಲ್ಕು ಸಲ ಹೀಗೆ ಮಾಡಿ. ನಿಯಮಿತವಾಗಿ ಇದನ್ನು ಮಾಡುವುದರಿಂದ ನಿಮ್ಮ ಏಕಾಗ್ರತೆ ಮತ್ತು ಯಾವುದೇ ವಿಷಯವನ್ನು ತಿಳಿದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುವುದು. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ 18 ಅದ್ಭುತ ಆಹಾರಗಳು
ಸೂರ್ಯನ ಬಿಂದು
ನಿಮ್ಮ ಹುಬ್ಬಿನಿಂದ ಕೆಲವೇ ಇಂಚಿನ ದೂರದಲ್ಲಿ ಈ ಎರಡನೇ ಬಿಂದುವನ್ನು ನೀವು ಗುರುತಿಸಬಹುದು. ಎರಡನೇ ಬಿಂದುವಿನ ಮೇಲೆ 3 ನಿಮಿಷಗಳ ಕಾಲ ಒತ್ತಡ ಹಾಕಿ. ಈ ಪ್ರಕ್ರಿಯೆಯನ್ನು ದಿನದಲ್ಲಿ ನಾಲ್ಕರಿಂದ ಐದು ಸಲ ಮಾಡಿ.
ಇದರಿಂದ ನಿಮ್ಮ ಏಕಾಗ್ರತೆ ಹೆಚ್ಚಾಗುವುದು ಮಾತ್ರವಲ್ಲದೆ, ಮನಸ್ಸು ಹಾಗೂ ದೇಹವನ್ನು ಒತ್ತಡದಿಂದ ಮುಕ್ತವಾಗಿಸುತ್ತದೆ.
ಸೂಚನೆ: ಕ್ರಮಬದ್ಧವಾಗಿ ಮತ್ತು ನಿಯಮಿತವಾಗಿ ಮಾಡಿದರೆ ನಿಮಗೆ ಕೆಲವೇ ದಿನಗಳಲ್ಲಿ ಇದರ ಫಲಿತಾಂಶ ಕಂಡುಬರುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು, ಇದೋ ಇಲ್ಲಿದೆ ಸರಳ ಟ್ರಿಕ್ಸ್...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


