For Quick Alerts
ALLOW NOTIFICATIONS  
For Daily Alerts

ಏಕಾಗ್ರತೆಯನ್ನು ಹೆಚ್ಚಿಸಲು 20 ಮಾರ್ಗಗಳು

By Super
|

ಗೊಂದಲಮಯ ಜೀವನದ ಜೊತೆ ಕೆಲಸದಲ್ಲಿ ಏಕಾಗ್ರತೆ ಹೊಂದುವುದು ಬಹಳ ಕಷ್ಟ. ಮನುಷ್ಯನ ಮನಸ್ಸು ಸುತ್ತಮುತ್ತಲಿನ ಗೊಂದಲಗಳಿಗೆ ಬೇಗ ಗಮನ ಕೊಡುವುದರಿಂದ ಏಕಾಗ್ರತೆ ಕಷ್ಟವಾಗುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದು ಅಷ್ಟು ಸುಲಭವಲ್ಲದಿದ್ದರೂ,ಅಸಾಧ್ಯವಾದುದಲ್ಲ. ದೃಢ ಮತ್ತು ಅವಿರತ ಪ್ರಯತ್ನ ಏಕಾಗ್ರತೆ ಹೆಚ್ಚಿಸಲು ಬಹಳ ಮುಖ್ಯ.ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದಾದ ಟಾಪ್ 20 ಮಾರ್ಗಗಳು ಇಲ್ಲಿವೆ.

1.ಉತ್ತಮ ಪರಿಸರ ಅಥವಾ ವಾತಾವರಣವನ್ನು ಆಯ್ದುಕೊಳ್ಳಿ

1.ಉತ್ತಮ ಪರಿಸರ ಅಥವಾ ವಾತಾವರಣವನ್ನು ಆಯ್ದುಕೊಳ್ಳಿ

ನೀವು ಕೆಲಸ ಮಾಡುವ ವಾತಾವರಣ ನಿಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ.

ಆರಾಮದಾಯಕವಾದ ಮತ್ತು ನಿಮಗೆ ಇಷ್ಟವಾದ ವಾತಾವರಣ ನಿಮ್ಮ ಕೆಲಸದಲ್ಲಿ ಸಂಪೂರ್ಣ ಏಕಾಗ್ರತೆಯನ್ನು ನೀಡಲು ಸಹಕರಿಸುತ್ತವೆ.

2.ನಿಮ್ಮ ಆಲೋಚನೆಯಲ್ಲಿ ನಿಯಂತ್ರಣವಿರಲಿ

2.ನಿಮ್ಮ ಆಲೋಚನೆಯಲ್ಲಿ ನಿಯಂತ್ರಣವಿರಲಿ

ಸಣ್ಣ ಪುಟ್ಟ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ವಿಕ್ಷೇಪಗೊಳಿಸಿಕೊಳ್ಳದಿರುವುದು ಏಕಾಗ್ರತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರವಾಗುತ್ತದೆ. ಬೇಡದ ಆಲೋಚನೆಗಳು ಮನಸ್ಸಿನಲ್ಲಿ ನುಗ್ಗಿದಾಗ ಅದರ ಬಗ್ಗೆ ಗಮನ ಕೊಡಬೇಡಿ ಮತ್ತು ಸಕ್ರಿಯವಾಗಿ ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಿ.

3.ಒಂದು ಬಾರಿ ಯೋಜನೆ ಮಾಡಿ (ಸಮಯ ಹೊಂದಿಸಿಕೊಳ್ಳಿ)

3.ಒಂದು ಬಾರಿ ಯೋಜನೆ ಮಾಡಿ (ಸಮಯ ಹೊಂದಿಸಿಕೊಳ್ಳಿ)

ಕೆಲಸ ಮುಗಿಸಲು ಸರಿಯಾದ ವೆಳಾಪಟ್ಟಿ ನಿರ್ಮಿಸಿಕೊಳ್ಳಿ.ಮನಸ್ಸಿನ ಸಮತೋಲನ ಕಾಪಾಡಲು ಗಂಭೀರ ಕೆಲಸಗಳಿಗೆ ಮತ್ತು ವಿರಾಮಕ್ಕೆ ಸಮಯ ನಿಗಧಿಪಡಿಸಿಕೊಳ್ಳಿ. ಇದು ನೀವು ಹೆಚ್ಚು ಲವಲವಿಕೆಯಿಂದಿರಲು ಮತ್ತು ದುರ್ಬಲ ಆಲೋಚನೆ ಕಡೆಗೆ ಕಡಿಮೆ ಗಮನ ಹರಿಸಲು ಸಹಕಾರಿಯಾಗುತ್ತದೆ.

4.ಋಣಾತ್ಮಕವಾಗಿರಬೇಡಿ

4.ಋಣಾತ್ಮಕವಾಗಿರಬೇಡಿ

ನಿಮಗೆ ನೀವು ಏಕಾಗ್ರತೆ ಹೊಂದಲು ಆಗುತ್ತಿಲ್ಲ ಎಂದು ಹೇಳಿಕೊಳ್ಳಬೇಡಿ ಇದು ನಿಮ್ಮ ಮನಸ್ಸನ್ನು ಕೇಂದ್ರೀಕರಿಸುವಲ್ಲಿ ತಡೆ ಒಡ್ಡುತ್ತದೆ. ಏಕೆಂದರೆ ಇದು ನಿಮ್ಮ ಮನಸ್ಸಿನ ಏಕಾಗ್ರತೆ ಮತ್ತು ಗಮನವನ್ನು ಕಡಿಮೆಯಾಗುವಂತೆ ಒತ್ತಾಯಿಸುತ್ತದೆ.

5.ಬಹುಕಾರ್ಯಕ(ಇಬ್ಬಗೆಯ ಕೆಲಸ)ತಪ್ಪಿಸಿ

5.ಬಹುಕಾರ್ಯಕ(ಇಬ್ಬಗೆಯ ಕೆಲಸ)ತಪ್ಪಿಸಿ

ನಮ್ಮ ಎದುರು ತುಂಬಾ ಕೆಲಸಗಳಿದ್ದಲ್ಲಿ ನಾವು ಯಾವುದೇ ಒಂದು ಕೆಲಸದ ಬಗ್ಗೆ ಏಕಾಗ್ರತೆ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ಕೆಲಸಕ್ಕೆ ಹೋಗುವ ಮೊದಲು ಒಂದು ಕೆಲಸದ ಬಗ್ಗೆ ಏಕಾಗ್ರತೆ ನೀಡಿ.

6. ಶಬ್ದಗಳಿರದಂತೆ ನೋಡಿಕೊಳ್ಳಿ

6. ಶಬ್ದಗಳಿರದಂತೆ ನೋಡಿಕೊಳ್ಳಿ

ಶಬ್ದಗಳು ಏಕಾಗ್ರತೆಗೆ ಕುಂದು ತರುವುದರಿಂದ ನಿಶಬ್ದತೆ ಇರುವಂತೆ ನೋಡಿಕೊಳ್ಳಿ. ಇಮೇಲ್, ಬಿಬಿಎಂ ಅಥವಾ ವಾಟ್ಸ್ಆಪ್ ಮೆಸೇಜ್ ಇವುಗಳು ನಿಮ್ಮನ್ನು ಆಕರ್ಷಿಸಿದರೂ ಅಂತಿಮವಾಗಿ ಇವು ನಿಮ್ಮ ಏಕಾಗ್ರತೆಯನ್ನು ದಿಕ್ಕುಗೆಡಿಸುತ್ತವೆ.

7. ಆಹಾರ ಮತ್ತು ವ್ಯಾಯಾಮ

7. ಆಹಾರ ಮತ್ತು ವ್ಯಾಯಾಮ

ಸಮತೋಲನ ಆಹಾರ ಮತ್ತು ವ್ಯಾಯಾಮ ಏಕಾಗ್ರತೆ ಹೆಚ್ಚಿಸುವಲ್ಲಿ ಮುಖ್ಯ ಪರಿಣಾಮ ಬೀರುತ್ತದೆ. ಅಗತ್ಯ ಪೋಷಕಾಂಶಗಳ ಕೊರತೆ ದಣಿವು ಮತ್ತು ಆಲಸ್ಯಕ್ಕೆ ಕಾರಣವಾಗಬಹುದು.ವಿಟಮಿನ್ ಇ ಇರುವ ಹಣ್ಣುಗಳು ಮತ್ತು ನಟ್ಸ್ ತಿನ್ನುವುದರ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಿ ಮತ್ತು ಆರೋಗ್ಯಕರ ವ್ಯಾಯಾಮಗಳನ್ನು ರೂಡಿಸಿಕೊಳ್ಳಿ.

8.ಟಾಸ್ಕ್ ಅನ್ನು ಅರ್ಥಮಾಡಿಕೊಳ್ಳಿ

8.ಟಾಸ್ಕ್ ಅನ್ನು ಅರ್ಥಮಾಡಿಕೊಳ್ಳಿ

ಕೆಲಸ ಗೊಂದಲಮಯವಾಗಿದ್ದರೆ ಅಥವಾ ಕೆಲಸದ ಬಗ್ಗೆ ಸಂದೇಹವಿದ್ದರೆ ಏಕಾಗ್ರತೆ ವಹಿಸುವುದು ಕಷ್ಟವಾಗುತ್ತದೆ. ಕೆಲಸವು ಕಷ್ಟದ್ದಾಗಿದ್ದರೆ ಸುಲಭವಾದುದನ್ನು ಹುಡುಕುತ್ತೇವೆ. ಆದ್ದರಿಂದ ಒಂದು ಸಾಮಾನ್ಯ ಅವಲೋಕನ ಮಾಡಲು ಪ್ರಯತ್ನಿಸಿ ಮತ್ತು ಕೆಲಸ ಪ್ರಾರಂಭಿಸುವ ಮೊದಲು ಮೂಲ ಪರಿಕಲ್ಪನೆ ಮತ್ತು ಫ್ರೇಮ್ ವರ್ಕ್ ಅನ್ನು ಅಭಿವೃದ್ದಿಪಡಿಸಿಕೊಳ್ಳಿ.

9.ವಿಳಂಬ ಪ್ರವೃತ್ತಿಯನ್ನು ಬಿಟ್ಟುಬಿಡಿ

9.ವಿಳಂಬ ಪ್ರವೃತ್ತಿಯನ್ನು ಬಿಟ್ಟುಬಿಡಿ

ಏಕಾಗ್ರತೆವಹಿಸಲು ಆಗುತ್ತಿಲ್ಲವೇ?ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬಯಸುತ್ತೀರಾ?ಇದೇ ವಿಳಂಬಪ್ರವೃತ್ತಿ. ಕೆಲಸವನ್ನು ಮುಂದೂಡಬೇಡಿ,ಎಷ್ಟೇ ಕಷ್ಟವಾದರೂ ಕೆಲಸ ಮುಗಿಯುವವರೆಗೆ ಕುಳಿತಲ್ಲಿಂದ ಏಳುವುದಿಲ್ಲ ಎಂದು ನಿರ್ಧರಿಸಿ.

10.ನಿಮ್ಮ ಪೀಕ್ ಸಮಯವನ್ನು ನೋಡಿಕೊಳ್ಳಿ

10.ನಿಮ್ಮ ಪೀಕ್ ಸಮಯವನ್ನು ನೋಡಿಕೊಳ್ಳಿ

24 ಗಂಟೆಗಳ ಚಕ್ರದಲ್ಲಿ ಪ್ರತಿಯೊಬ್ಬರಿಗೂ ಪೀಕ್ ಸಮಯವೆಂಬುದಿರುತ್ತದೆ.ಆದರೂ ಇದು ಎಲ್ಲರಿಗು ಒಂದೇ ಸಮಯವಾಗಿರುವುದಿಲ್ಲ. ನೀವು ಅದನ್ನು ಕಂಡುಹಿಡಿದುಕೊಂಡು ಹೆಚ್ಚು ಟ್ರಿಕ್ಕಿ ಮತ್ತು ಆರಾಮದಾಯಕವಾಗಿರುವ ಕೆಲಸಗಳಿಗಾಗಿ ಬಳಸಿ.

11.ಧನಾತ್ಮಕವಾಗಿರಿ

11.ಧನಾತ್ಮಕವಾಗಿರಿ

ಯಾವಾಗ ಹೆಚ್ಚು ಗಮನದ ಅಗತ್ಯವಿದೆಯೋ ಆಗ ನಿಮಗೆ ನೀವೇ ಹೆಚ್ಚು ಏಕಾಗ್ರತೆ ನೀಡುವಂತೆ ಹೇಳಿಕೊಳ್ಳಿ ಇದು ನಿಮಗೆ ಧನಾತ್ಮಕವಾಗಿರುವಲ್ಲಿ ಸಹಾಯ ಮಾಡುತ್ತದೆ.

12.ಕೆಲಸವನ್ನು ಹಂಚಿಕೊಳ್ಳಿ

12.ಕೆಲಸವನ್ನು ಹಂಚಿಕೊಳ್ಳಿ

ಸರಿಯಾಗಿ ಪ್ರಾರಂಭಿಸದ ಅಥವಾ ಸರಿಯಾದ ಕೊನೆಯಿಲ್ಲದ ಕೆಲಸ ನಿಮ್ಮ ಗಮನವನ್ನು ನಾಶಪಡಿಸುತ್ತದೆ.ನಿಮ್ಮದು ದೊಡ್ಡ ಯೋಜನೆಯ ಕೆಲಸವಾಗಿದ್ದಲ್ಲಿ ಹೇಗೆ ಮಾಡಬೇಕು ಎಂದುದನ್ನು ಮೊದಲೇ ನಿರ್ಧರಿಸಿಕೊಳ್ಳಿ.

13.ಏಕಾಗ್ರತೆ ಹೆಚ್ಚಿಸಲು ವ್ಯಾಯಾಮ

13.ಏಕಾಗ್ರತೆ ಹೆಚ್ಚಿಸಲು ವ್ಯಾಯಾಮ

ದೇಹ ಮತ್ತು ಮನಸ್ಸಿನ ಸಮನ್ವಯವನ್ನು ಸುಧಾರಿಸುವಲ್ಲಿ ವ್ಯಾಯಾಮ ಗಮನವನ್ನು ಹಿಂದಿರುಗಿಸುವಲ್ಲಿ ಸಹಕರಿಸುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸುವ ಅಥವಾ ಸಂರಕ್ಷಿಸುವ ಕಾಯಿನ್ ಟ್ರಿಕ್, ಚೇರ್ ಟ್ರಿಕ್ ಗಳಂತ ವ್ಯಾಯಾಮಗಳಿಗೆ ಹೆಚ್ಚು ಒಟ್ಟು ಕೊಡಿ ಇದು ಏಕಾಗ್ರತೆಯನ್ನು ಹೆಚ್ಚಿಸುತ್ತವೆ.

14.ಧ್ಯಾನ

14.ಧ್ಯಾನ

ಧ್ಯಾನ ಮದ್ದಲ್ಲ;ಆದರೆ ಇದನ್ನು ಪ್ರಾಮಾಣಿಕವಾಗಿ ಅಭ್ಯಾಸ ಮಾಡಿದರೆ ಮತ್ತು ಮನಸ್ಸನ್ನು ಹಿಡಿತದಲ್ಲಿಡಲು ಕಲಿತರೆ ನಿಧಾನವಾಗಿ ಬದಲಾವಣೆಯಾಗುವುದನ್ನು ಮತ್ತು ಏಕಾಗ್ರತೆ ಹೆಚ್ಚುವುದನ್ನು ಗಮನಿಸಬಹುದು.

15.ನಿಧಾನವಾಗಿ ಪ್ರಾರಂಭಿಸಿ

15.ನಿಧಾನವಾಗಿ ಪ್ರಾರಂಭಿಸಿ

ಪರಿಣಾಮಕಾರಿ ಬಳಕೆಗೆ ಹೆಚ್ಚು ಸಮಯ ಮತ್ತು ಶಿಸ್ತು ಮುಖ್ಯ. ಆದ್ದರಿಂದ ಸಣ್ಣದರಿಂದ ಪ್ರಾರಂಭಿಸಿ ಮತ್ತು ನಿಮಗೆ ಏಕಾಗ್ರತೆ ಸಾಧ್ಯವಾಗದಿದ್ದಲ್ಲಿ ಇದನ್ನೇ ಮುಂದುವರೆಸಿ.

16.ನಿಮ್ಮ ಮೆದುಳಿಗೆ ತರಬೇತಿ ನೀಡಿ

16.ನಿಮ್ಮ ಮೆದುಳಿಗೆ ತರಬೇತಿ ನೀಡಿ

ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಲು ನೀವು ಮೆದುಳಿಗೆ ತರಬೇತಿ ನೀಡಬೇಕಾಗುತ್ತದೆ. ನಿಮಗೆ ಒಂದು ವಿಷಯದ ಬಗ್ಗೆ ಸ್ವಲ್ಪ ಹೊತ್ತಿಗಿಂತ ಜಾಸ್ತಿ ನಿಗಾವಹಿಸಲು ಆಗುವುದಿಲ್ಲ ಎನಿಸಿದರೂ ನೀವು ಮನಸ್ಸು ಮಾಡಿದಲ್ಲಿ ನಿಮ್ಮ ಮನಸ್ಸನ್ನು ಹೆಚ್ಚಿನ ಸಮಯ ಸ್ಥಿರವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.

17.ಗಡವು ಹೊಂದಿಸಿಕೊಳ್ಳಿ

17.ಗಡವು ಹೊಂದಿಸಿಕೊಳ್ಳಿ

ಗಡವು/ ಡೆಡ್ಲೈನ್ ಹೊಂದಿಸಿಕೊಳ್ಳುವುದರಿಂದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಡೆಡ್ ಲೈನ್ ಅನವಶ್ಯಕ ಚಿಂತೆಗಳನ್ನು ಮರೆಯಲು ಸುಲಭ ಮಾರ್ಗ ಮತ್ತು ನಿಮ್ಮ ಕೆಲಸದ ಸಮಯವನ್ನು ಹೆಚ್ಚಿಸುತ್ತದೆ.

18.ಸಾಕಷ್ಟು ನಿದ್ದೆ ಮಾಡಿ

18.ಸಾಕಷ್ಟು ನಿದ್ದೆ ಮಾಡಿ

ನಿಯಮಿತವಾದ ಮಲಗುವ ವೇಳೆಯನ್ನು ನಿಗದಿಪಡಿಸಿಕೊಳ್ಳಿ.ಸುಸ್ತು,ಬಳಲಿಕೆ ಮತ್ತು ರಾತ್ರಿ ನಿದ್ದೆ ಇಲ್ಲದಿರುವುದು ಇದು ಏಕಾಗ್ರತೆ ಕಡಿಮೆ ಆಗಲು ಮುಖ್ಯ ಕಾರಣ.

19.ಸ್ಥಿರ ಪ್ರಗತಿ

19.ಸ್ಥಿರ ಪ್ರಗತಿ

ನಿಮಗೆ ನಿಮ್ಮ ಏಕಾಗ್ರತೆ ತುಂಬಾ ಕೆಟ್ಟದಾಗಿದೆ ಎನ್ನಿಸಿದರೆ ಪ್ರತಿ ವಾರ ಸ್ವಲ್ಪ ಸ್ವಲ್ಪ ಹೆಚ್ಚಿಸಿಕೊಳ್ಳುವಲ್ಲಿ ಗಮನ ಹರಿಸಿ. ನೀವು ಹೆಚ್ಚು ಚಂಚಲ ಮನಸ್ಸಿನವರಾಗಿದ್ದರೆ ಪ್ರತಿ ವಾರ ಸ್ವಲ್ಪ ಸ್ವಲ್ಪ ನಿಮ್ಮ ಚಂಚಲತೆಯನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.

20. ನಿಮ್ಮ ಮನಸ್ಸು ಮತ್ತು ಹೃದಯ ಒಂದಾಗಿರಲಿ

20. ನಿಮ್ಮ ಮನಸ್ಸು ಮತ್ತು ಹೃದಯ ಒಂದಾಗಿರಲಿ

ಪ್ರತಿ ಕೆಲಸ ಪ್ರಾರಂಭಿಸುವಲ್ಲಿ ಅವಶ್ಯತೆಗಳ ವ್ಯವಸ್ಥೆ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.ಇದು ನಿಮಗೆ ಅನವಶ್ಯಕ ಚಿಂತನೆಗಳಿಂದ ದೂರ ಮಾಡಿ ಸುಮನಸ್ಥಿತಿಯಲ್ಲಿ ಕೆಲಸ ಮಾಡಲು ಸಹಾಯವಾಗುತ್ತದೆ.

ನಿಮ್ಮ ಕೆಲಸದಲ್ಲಿ ಮನಸ್ಸಿಡುವುದು ಮುಖ್ಯ ಅದರೊಂದಿಗೆ ಸಕಾರಾತ್ಮಕ ಧೋರಣೆ ಸೇರಿಸಿಕೊಂಡರೆ ನಿಮ್ಮಲಾಗುವ ವ್ಯತ್ಯಾಸ ಕಾಣಬಹುದು. ನಿಮ್ಮ ಕೆಲಸದಲ್ಲಿ ನಿಮಗೆ ಸಂತೋಷವಿದ್ದರೆ ಅದರ ಮೇಲೆ ನಿಮ್ಮ ಏಕಾಗ್ರತೆ ವೇಗವಾಗಿ ಮತ್ತು ಉತ್ತಮವಾಗಿ ಬೆಳೆಯುತ್ತದೆ.

English summary

Top 20 ways to improve your concentration

Even though it is difficult to improve concentration, it is not entirely impossible. Perseverance is important in improving your concentration power. Here are the top 20 ways with which you can improve your concentration.
X
Desktop Bottom Promotion