For Quick Alerts
ALLOW NOTIFICATIONS  
For Daily Alerts

ಅಚ್ಚರಿಗೆ ತಳ್ಳುವ ಕೈ ಬೆರಳಿನ ಮೂಲಕ ಮಾಡುವ ಚಿಕಿತ್ಸೆ!

By Super
|

ವೈದ್ಯರು ಹೆಚ್ಚಾದಂತೆ ರೋಗಿಗಳೂ ಹೆಚ್ಚುತ್ತಾರೆ ಎಂಬ ಕುಹಕ ಪ್ರಚಲಿತವಾಗಿದೆ. ನಮ್ಮಲ್ಲೊಂದು ನೈಸರ್ಗಿಕ ಗುಣವಿದೆ. ಅದೆಂದರೆ ಸೌಲಭ್ಯವಿದೆ ಎಂದಾಕ್ಷಣ ಅಗತ್ಯವಿಲ್ಲದೆಯೂ ಪಡೆದುಕೊಳ್ಳಲು ಬಯಸುವುದು. ಉದಾಹರಣೆಗೆ ಹತ್ತೇ ನಿಮಿಷದಲ್ಲಿ ನಡೆದು ಹೋಗಬಹುದಾಗುವ ದೂರಕ್ಕೂ ವಾಹನವನ್ನು ಅವಲಂಬಿಸುವುದು. ಅಂತೆಯೇ ಚಿಕ್ಕ ಪುಟ್ಟ ರೋಗ ಬಂದರೂ ಔಷಧಿ, ಇಂಜೆಕ್ಷನ್‌ಗಳಿಲ್ಲದೇ ನಿರ್ವಾಹವಿಲ್ಲ ಎಂಬ ಮನಃಸ್ಥಿತಿಗೆ ನಾವು ಯಾವಾಗಲೋ ಬಂದಾಗಿದೆ.

ಹಳ್ಳಿ ಕಡೆಯಲ್ಲಿ ಇಂದಿಗೂ ಇಂಜೆಕ್ಷನ್ ಇಲ್ಲದೇ ರೋಗ ಗುಣವಾಗುವುದಿಲ್ಲ ಎಂಬ ನಂಬಿಕೆ ಇದೆ. ಇದನ್ನು ನಗದೀಕರಿಸಿಕೊಳ್ಳಲು ಹಲವು ವೈದ್ಯರು ಭಟ್ಟಿ ಇಳಿಸಿದ ನೀರನ್ನೇ ಇಂಜೆಕ್ಷನ್ ಮೂಲಕ ನೀಡಿ ಹಣ ಗಳಿಸಿಕೊಳ್ಳುವುದೂ ಇದೆ. ತಕ್ಷಣಕ್ಕೆ ಮಾತ್ರೆ ಇಂಜೆಕ್ಷನ್‌ಗಳಿಂದ ರೋಗ ಗುಣವಾದರೂ ಪದೇಪದೇ ಅನುಸರಿಸುವುದರಿಂದ ಆರೋಗ್ಯವನ್ನು ಇನ್ನಷ್ಟು ಕೆಡಿಸಬಹುದು. ಆದರೆ ಇದಕ್ಕೆ ಬದಲಾಗಿ ಸುಲಭವಾಗಿ ಆಚರಿಸಬಹುದಾದ ಮುದ್ರೆಗಳು ಆರೋಗ್ಯವನ್ನು ವೃದ್ಧಿಸುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಿ ಹಲವು ರೋಗಗಳಿಂದ ರಕ್ಷಿಸುತ್ತದೆ.

ಇತ್ತೀಚಿನ ಸಂಶೋಧನೆಯ ಪ್ರಕಾರ ನಮ್ಮ ಪ್ರತಿ ಕೈಬೆರಳುಗಳೇ ದೇಹದ ಒಂದೊಂದು ಭಾಗಕ್ಕೆ ನರಗಳ ಸಂಪರ್ಕ ಹೊಂದಿದ್ದು ಈ ಬೆರಳುಗಳನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ಮಡಚುವ ಅಥವಾ ಒತ್ತಡ ನೀಡುವ ಮೂಲಕ ಆ ಆಂಗಗಳ ಮೇಲೆ ಪ್ರಭಾವ ಬೀರಬಹುದಾಗಿದೆ. ಆಯಾ ಅಂಗಗಳ ನೋವಿಗೆ ಅದಕ್ಕೆ ಸಂಬಂಧಪಟ್ಟ ಬೆರಳಿಗೆ ಮುದ್ರೆ ನೀಡುವ ಅಥವಾ ಮಸಾಜ್ ನೀಡುವ ಮೂಲಕ ಆರೈಕೆ ನೀಡಬಹುದು. ಪರಿಣಾಮವಾಗಿ ಹೆಚ್ಚಿನ ತೊಂದರೆ ಅಥವಾ ಅನಾವಶ್ಯಕವಾಗಿ ಔಷಧಿಗಳನ್ನು ಸೇವಿಸುವುದರಿಂದ ತಡೆಯಬಹುದು.

ಈ ಮುದ್ರೆಗಳಿಗೆ ಸಾವಿರಾರು ವರ್ಷದ ಇತಿಹಾಸವಿದ್ದು ವಿವಿಧ ಅಂಗದ ನೋವು ಮತ್ತು ಭಾವನೆಗಳನ್ನು ನಿಯಂತ್ರಿಸಲು ಉಪಯೋಗಿಸಲ್ಪಡುತ್ತಾ ಬಂದಿದೆ. ಆದರೆ ಈ ಮುದ್ರೆಗಳು ರೋಗವನ್ನು ಒಂದು ಹಂತದವರೆಗೆ ಮಾತ್ರ ಗುಣಪಡಿಸಬಲ್ಲವೇ ಹೊರತು ಉಲ್ಬಣಿಸಿದ ಸ್ಥಿತಿಗೆ ಉತ್ತಮವಲ್ಲ. ಯಾವುದಕ್ಕೂ ಯಾವುದಾದರೂ ಅಂಗ ಹೆಚ್ಚಿನ ನೋವು ನೀಡುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಅಗತ್ಯವಾಗಿದೆ.

ಕೆಳಗಿನ ಸ್ಲೈಡ್ ಶೋ ಮೂಲಕ ನೀಡಾಲಾಗಿರುವ ಈ ಮುದ್ರೆಗಳು ಸಾಮಾನ್ಯ ತೊಂದರೆಗಳಿಗೆ ಸುಲಭ ಪರಿಹಾರವಾಗಿದ್ದು ಅನಗತ್ಯವಾಗಿ ನೋವು ನಿವಾರಕಗಳನ್ನು ಸೇವಿಸುವ ಕಾಟದಿಂದ ತಪ್ಪಿಸುತ್ತದೆ. ಜೊತೆಗೇ ಇವು ಭಯ, ರೇಗುವಿಕೆ, ಅಸುರಕ್ಷಿತ ಭಾವನೆ ಮತ್ತು ತಲ್ಲಣ ಮೊದಲಾದ ಭಾವನೆಗಳಿಂದ ರಕ್ಷಣೆ ನೀಡುತ್ತದೆ. ಈ ಮುದ್ರೆಗಳಿಗೆ ಅಂಗಮರ್ದನ ಎಂಬ ಹೆಸರಿದ್ದು ಕೈಗಳ ಪ್ರತಿವರ್ತನ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ರೋಗವನ್ನು ಹತೋಟಿಗೆ ತರಬಹುದು.

ಹೆಬ್ಬೆರಳು: ತಲೆನೋವು ಮತ್ತು ಒತ್ತಡ

ಹೆಬ್ಬೆರಳು: ತಲೆನೋವು ಮತ್ತು ಒತ್ತಡ

ಹೆಬ್ಬೆರಳು ನಮ್ಮ ಗುಲ್ಮ (spleen) ಅಂಗದೊಡನೆ ನೇರ ಸಂಪರ್ಕ ಹೊಂದಿದ್ದು ಮನಸ್ಸಿನ ಭಾವನೆಗಳನ್ನೂ ನಿಯಂತ್ರಿಸುತ್ತದೆ. ಒಂದು ವೇಳೆ ತಲೆನೋವು, ಅಥವಾ ಭಯ, ಮಂಕಾಗಿರುವ ಸ್ಥಿತಿಯಿದ್ದರೆ ಹೆಬ್ಬೆರಳನ್ನು ಹಿಡಿದು ಕೊಂಚವೇ ಒತ್ತಡ ಹೇರಿ. ಜೊತೆಗೇ ನಯವಾಗಿ ಮಸಾಜ್ ಮಾಡುವ ಮೂಲಕವೂ ನೋವು ಕಡಿಮೆಯಾಗುತ್ತದೆ. ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಈ ವಿಧಾನ ಅನುಸರಿಸುವುದರಿಂದ ತಲೆನೋವು ಮತ್ತು ಇತರ ಹೆದರಿಕೆಗಳಿಂದ ಹೊರಬರಬಹುದು.

ತೋರುಬೆರಳು: ದೇಹದ ವಿವಿಧ ಸ್ನಾಯುಗಳ ನೋವು ಮತ್ತು ಹತಾಶೆಗೆ

ತೋರುಬೆರಳು: ದೇಹದ ವಿವಿಧ ಸ್ನಾಯುಗಳ ನೋವು ಮತ್ತು ಹತಾಶೆಗೆ

ಭಯ, ಗೊಂದಲ ಮತ್ತು ಮೂತ್ರಪಿಂಡಗಳಿಗೆ ತೋರುಬೆರಳು ನೇರ ಸಂಪರ್ಕ ಹೊಂದಿದೆ. ಇತ್ತೀಚಿನ ಸಂಶೋಧನೆಯಲ್ಲಿ ಮೂತ್ರಪಿಂಡದ ತೊಂದರೆ ಇರುವವರು ತಮ್ಮ ತೋರುಬೆರಳುಗಳಿಗೆ ಒತ್ತಡ ನೀಡುವ ಮೂಲಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ತೋರುಬೆರಳಿಗೆ ನಯವಾಗಿ ಮಸಾಜ್ ಮಾಡುವ ಮೂಲಕ ಬೆನ್ನುನೋವು, ಸ್ನಾಯು ಸೆಳೆತ, ಕಾಲು ಮತ್ತು ಕೈಗಳ ಸ್ನಾಯುಗಳು ಶಕ್ತಿರಹಿತವಾಗುವುದು ಮೊದಲಾದ ತೊಂದರೆಗಳಿಗೆ ಉತ್ತಮ ಪರಿಹಾರ ಪಡೆಯಬಹುದು.

ನಡುಬೆರಳು: ಸುಸ್ತು ಮತ್ತು ಸಿಟ್ಟು ನಿವಾರಿಸಲು, ರಕ್ತಪರಿಚಲನೆಗೆ

ನಡುಬೆರಳು: ಸುಸ್ತು ಮತ್ತು ಸಿಟ್ಟು ನಿವಾರಿಸಲು, ರಕ್ತಪರಿಚಲನೆಗೆ

ನಡುಬೆರಳಿಗೆ ಒತ್ತಡ ನೀಡುವ ಮೂಲಕ ದೇಹದ ನೋವು, ಉರಿಯೂತ, ಯಕೃತ್‌ನ ತೊಂದರೆಗಳು ಮತ್ತು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ನಯವಾಗಿ ಮಸಾಜ್ ಮಾಡುವ ಸಿಟ್ಟಿನ ಸಮಯದಲ್ಲಿ ತಾಳ್ಮೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ರಕ್ತದ ಒತ್ತಡ ಸಾಮಾನ್ಯ ಸ್ಥಿತಿಯಲ್ಲಿರಲು ನೆರವಾಗುತ್ತದೆ.

ಉಂಗುರ ಬೆರಳು: ಋಣಾತ್ಮಕ ಚಿಂತನೆ ಮತ್ತು ಜೀರ್ಣಕ್ರಿಯೆ

ಉಂಗುರ ಬೆರಳು: ಋಣಾತ್ಮಕ ಚಿಂತನೆ ಮತ್ತು ಜೀರ್ಣಕ್ರಿಯೆ

ಉಂಗುರ ಬೆರಳಿಗೆ ಕೊಂಚ ಒತ್ತಡ ನೀಡುವ ಮೂಲಕ ಎದೆಯಲ್ಲಿ ಉಂಟಾಗಿದ್ದ ನೋವು ಮತ್ತು ಶ್ವಾಸಸಂಭಂಧಿ ತೊಂದರೆಗಳು ದೂರವಾಗುತ್ತವೆ. ನಯವಾದ ಮಸಾಜ್‌ ನಿಂದ ಋಣಾತ್ಮದ ಚಿಂತನೆಗಳು, ದ್ವಂದ್ವದಲ್ಲಿದ್ದ ಮನ ಮತ್ತು ಜೀರ್ಣಕ್ರಿಯೆಯಲ್ಲಿದ್ದ ತೊಂದರೆಗಳು ದೂರವಾಗುತ್ತವೆ. ಈ ಮಸಾಜ್ ಮಾಡಲು ನೀವು ಆರಾಮಾವಾಗಿ ಮಲಗಿ ಒತ್ತಡರಹಿತರಾಗಿ ಆಳವಾದ ಉಸಿರೆಳೆದುಕೊಳ್ಳಬೇಕು.

ಕಿರುಬೆರಳು: ಸ್ವಾಭಿಮಾನದ ಕೊರತೆ, ಭಯ ಮತ್ತು ನಡುಕ

ಕಿರುಬೆರಳು: ಸ್ವಾಭಿಮಾನದ ಕೊರತೆ, ಭಯ ಮತ್ತು ನಡುಕ

ಅತಿ ಸೂಕ್ಷ್ಮ ಪ್ರವೃತ್ತಿಯ ಜನರು ಅತಿಯಾಗಿ ಯೋಚಿಸುತ್ತಿದ್ದು ಇದರ ಪರಿಣಾಮವಾಗಿ ಭಯ ಮತ್ತು ಆತಂಕದಲ್ಲಿದ್ದರೆ ಕಿರುಬೆರಳಿಗೆ ನಯವಾಗಿ ಮಸಾಜ್ ಮಾಡುವ ಮೂಲಕ ಅವರನ್ನು ಸಂತೈಸಬಹುದು. ಸಾಮಾನ್ಯವಾಗಿ ಈ ಯೋಚನೆಗಳು ಋಣಾತ್ಮಕವಾಗಿದ್ದು ಶರೀರಕ್ಕೆ ಆಗಮಿಸುವ ಋಣಾತ್ಮಕ ಶಕ್ತಿಗಳ ಪ್ರಭಾವವಾಗಿದೆ. ಉದಾಹರಣೆಗೆ ಯಾರಾದರೂ ಇಲ್ಲಸಲ್ಲದ್ದನ್ನು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸುವುದು. ಈ ಅಂತೆಕಂತೆಗಳಿಂದ ದೂರಾಗಲು ಕಿರುಬೆರಳಿಗೆ ನೀಡುವ ಮಸಾಜ್ ಪರಿಣಾಮಕಾರಿಯಾಗಿದೆ. ಇದು ಸ್ವಾಭಿಮಾನವನ್ನು ಎತ್ತಿ ಹಿಡಿಯಲೂ ನೆರವಾಗುತ್ತದೆ.

ಹಸ್ತ: ವಾಕರಿಕೆ, ಅತಿಸಾರ ಮತ್ತು ಮಲಬದ್ಧತೆ

ಹಸ್ತ: ವಾಕರಿಕೆ, ಅತಿಸಾರ ಮತ್ತು ಮಲಬದ್ಧತೆ

ನಿಮ್ಮ ಬಲಹಸ್ತವನ್ನು ಎಡಗೈಯ ಬೆರಳಿನಿಂದಲೂ, ಬಲಗೈ ಹಸ್ತವನ್ನು ಎಡಗೈ ಬೆರಳಿನಿಂದಲೂ ವೃತ್ತಾಕಾರವಾಗಿ ಮಸಾನ್ ಮಾಡಿ. ಜೊತೆಗೇ ಹಸ್ತದ ನಡುವಿನ ಭಾಗಕ್ಕೆ ಕೊಂಚ ಒತ್ತಡ ನೀಡಿ ಸುಮಾರು ಮೂರು ದೀರ್ಘ ಶ್ವಾಸಗಳನ್ನು ಎಳೆದುಕೊಳ್ಳಿ. ಎರಡೂ ಕೈಗಳಿಗೆ ಪ್ರತ್ಯೇಕವಾಗಿ ಉಸಿರೆಳೆದುಕೊಳ್ಳಿ. ಇದರಿಂದ ವಾಕರಿಕೆ, ಅತಿಸಾರ, ಮಲಬದ್ಧತೆ ಮತ್ತು ನಡುಕ ಮೊದಲಾದ ತೊಂದರೆಗಳು ದೂರವಾಗುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಿಗಳಿಗೆ ಈ ವಿಧ ಅತ್ಯಂತ ಫಲಪ್ರದವಾಗಿದೆ.

ಕೈ: ಶಕ್ತಿ ಮತ್ತು ರಕ್ತಪರಿಚಲನೆ

ಕೈ: ಶಕ್ತಿ ಮತ್ತು ರಕ್ತಪರಿಚಲನೆ

ಕೈ ಮುಗಿಯುವ ಭಂಗಿಯಲ್ಲಿ ಎರಡೂ ಕೈಗಳ ಮೇಲೆ ಕೊಂಚ ಒತ್ತಡ ನೀಡುವ ಮೂಲಕ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಮೂತ್ರಪಿಂಡ ಮತ್ತು ಕರುಳುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಒತ್ತಡವಿರುವ ಹೊತ್ತಿನಲ್ಲಿ ದೀರ್ಘಶ್ವಾಸಗಳನ್ನು ಎಳೆದುಕೊಳ್ಳಬೇಕು. ಹಸ್ತ ಎದೆಮಟ್ಟಕ್ಕಿರುವಂತೆ, ತಲೆ ಮೇಲಿರುವಂತೆ ಮತ್ತು ಸಾಧ್ಯವಾದಷ್ಟು ಮುಂದೆ ಚಾಚಿರುವಂತೆ ಒತ್ತಡ ಹಾಕುವ ಮೂಲಕ ಈ ವ್ಯಾಯಮ ವಿವಿಧ ಅಂಗಗಳಿಗೆ ಹೆಚ್ಚು ರಕ್ತ ತಲುಪಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯ, ದೈಹಿಕ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

English summary

Simple Hand Exercises To Relieve Pain And Fear

It is very common to reach out to medicines when we are tired, stressed out or in any sort of body pain. Taking medicines frequently for these conditions can deteriorate our health in a longer run. But how wonderful it would be if there are some harmless practices to alleviate your overall health issues.
Story first published: Friday, November 6, 2015, 16:27 [IST]
X
Desktop Bottom Promotion