For Quick Alerts
ALLOW NOTIFICATIONS  
For Daily Alerts

ಅದ್ಭುತ ಆರೋಗ್ಯ ಗುಣ ಹೊಂದಿರುವ ಹಣ್ಣಿನ ಸಿಪ್ಪೆಗಳು

By Manu
|

ಹಣ್ಣುಗಳನ್ನು ತಿನ್ನುವುದರಿಂದ ಪಡೆಯುವ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಆದರೆ ಕೆಲವು ಹಣ್ಣುಗಳ ಸಿಪ್ಪೆಗಳನ್ನು ನಾವು ತಿನ್ನಲು ಸಾಧ್ಯವಾದರೂ ತಿನ್ನದೇ ಸಿಪ್ಪೆ ಸುಲಿದು ಎಸೆಯುತ್ತೇವೆ. ವಾಸ್ತವದಲ್ಲಿ ಈ ಸಿಪ್ಪೆಗಳಲ್ಲಿಯೂ ಹಲವಾರು ಆರೋಗ್ಯಕಾರಿ ಗುಣಗಳಿವೆ. ಅಷ್ಟಕ್ಕೂ ಹಣ್ಣಿನಲ್ಲಿ ತಿರುಳು ತುಂಬುವ ಮುನ್ನ ಸಿಪ್ಪೆಯೇ ರೂಪುಗೊಂಡಿದ್ದು ಹೆಚ್ಚಿನ ಪೋಷಕಾಂಶಗಳನ್ನೂ ನಾರನ್ನೂ ಒಳಗೊಂಡಿರುತ್ತದೆ. ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯೂ ಆರೋಗ್ಯದ ಕೀಲಿ ಕೈ

ಈ ನಾರು ಇರುವ ಗುಣದಿಂದಲೇ ಹೆಚ್ಚಿನವರು ಇದನ್ನು ನಿವಾರಿಸಿ ಒಳಗಿನ ತಿರುಳನ್ನು ಮಾತ್ರವೇ ತಿನ್ನುತ್ತಾರೆ. ಈ ನಾರು ಒಳಗಿನ ತಿರುಳಿನಷ್ಟು ರುಚಿಯಾಗಿರದೇ ಇರುವುದೂ ಇನ್ನೊಂದು ಕಾರಣ. ಆದರೆ ಈ ಸಿಪ್ಪೆಗಳಲ್ಲಿಯೂ ನಾರಿನ ಹೊರತಾಗಿ ಇನ್ನೂ ಹಲವಾರು ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಬನ್ನಿ, ಕೆಲವು ಹಣ್ಣುಗಳ ಸಿಪ್ಪೆಗಳನ್ನು ಎಸೆಯುವ ಬದಲು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ನೋಡೋಣ...

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆ

ಕಿತ್ತಳೆ ರಸದಲ್ಲಿರುವಂತೆಯೇ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿಯೂ ಉತ್ತಮ ಪ್ರಮಾನದ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಇವು ವಿಶೇಷವಾಗಿ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ದಹಿಸಲು ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ನಾರು ಮಲಬದ್ಧತೆಗೆ ಸೂಕ್ತ ಉತ್ತರವಾಗಿದೆ. ಕೆಲವು ಶ್ವಾಸಕೋಶ ಸಂಬಂಧಿ ತೊಂದರೆಗಳಿಗೂ ಕಿತ್ತಳೆ ಸಿಪ್ಪೆಯ ಸೇವನೆ ಉತ್ತಮ ಪರಿಹಾರ ಒದಗಿಸುತ್ತದೆ. ಈ ಸಿಪ್ಪೆಯನ್ನು ನೇರವಾಗಿ ಸೇವಿಸಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ಚಿಕ್ಕದಾಗಿ ಹೆಚ್ಚಿ ಬೇಯಿಸಿ ಇತರ ಖಾದ್ಯಗಳ ರೂಪದಲ್ಲಿ ಸೇವಿಸಬಹುದು. ಸರ್ವ ವಿಧದಲ್ಲೂ ಪ್ರಯೋಜನಕಾರಿಯಾಗಿರುವ ಕಿತ್ತಳೆ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ ಎಂದಾಕ್ಷಣ ಇದರ ಮೇಲೆ ಕಾಲಿಟ್ಟು ಜಾರಿ ಬಿದ್ದ ಜಾಣರೇ ನೆನಪಾಗುತ್ತಾರೆ. ಆದರೆ ಈ ಸಿಪ್ಪೆಯ ಒಳಭಾಗದಿಂದ ಹಲ್ಲುಗಳನ್ನು ಉಜ್ಜಿಕೊಂಡರೆ ಯಾವುದೇ ಟೂಥ್ ಪೇಸ್ಟ್‌ಗೆ ಕಡಿಮೆಯಿಲ್ಲದಂತೆ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ.

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣಿನ ಸಿಪ್ಪೆಯ ಚಮತ್ಕಾರಿಕ ಪ್ರಯೋಜನ ಅರಿಯಿರಿ!

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆಯಲ್ಲಿಯೂ ಕೆಲವಾರು ವಿಟಮಿನ್ ಮತ್ತು ಪೋಷಕಾಂಶಗಳಿವೆ. ಇವು ಗಂಟಲಬೇನೆಯನ್ನು ತಕ್ಷಣ ಕಡಿಮೆಗೊಳಿಸಲು ಕ್ಷಮತೆ ಹೊಂದಿದೆ. ಅಲ್ಲದೇ ಮೂಳೆಗಳು ಗಟ್ಟಿಯಾಗಲು ನೆರವಾಗುತ್ತದೆ.

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆ

ದಾಳಿಂಬೆ ಸಿಪ್ಪೆ ಬಳಸಿ, ಬಾಯಿಯ ದುರ್ವಾಸನೆ ಹೋಗಲಾಡಿಸಿ!

ಕಲ್ಲಂಗಡಿ ಸಿಪ್ಪೆ

ಕಲ್ಲಂಗಡಿ ಸಿಪ್ಪೆ

ದಾಹ ತಣಿಸುವ, ಕಲ್ಲಂಗಡಿ ಜ್ಯೂಸ್‌+ಕಾಳುಮೆಣಸಿನ ಪುಡಿ!

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ಇದು ಮಲಬದ್ದತೆಯಾಗದಂತೆ ತಡೆಯುವ ಶಕ್ತಿ ಹೊಂದಿದೆ. ಅಲ್ಲದೇ ಈ ಸಿಪ್ಪೆಯನ್ನು ಸೇವಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಕೆಲವು ಬಗೆಯ ಕ್ಯಾನ್ಸರ್ ಗಳನ್ನೂ ತಡೆಯಲು ಸಾಧ್ಯವಾಗುತ್ತದೆ.

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಉಪಕಾರಿ ಕಣ್ರೀ

ಪಪ್ಪಾಯಿ ಹಣ್ಣಿನ ಸಿಪ್ಪೆ

ಪಪ್ಪಾಯಿ ಹಣ್ಣಿನ ಸಿಪ್ಪೆ

ತಿನ್ನಲು ಅತ್ಯಂತ ಕಹಿಯಾಗಿರುವ ಪೊಪ್ಪಾಯಿ ಸಿಪ್ಪೆಯಲ್ಲಿ ನಮ್ಮ ಕರುಳುಗಳನ್ನು ಒಳಗಿನಿಂದ ಸ್ವಚ್ಛಗೊಳಿಸುವ ಕೆಲವು ರಾಸಾಯನಿಕಗಳಿವೆ. ಒಂದು ವೇಳೆ ಅಜೀರ್ಣ, ಮಲಬದ್ಧತೆ ಮೊದಲಾದ ತೊಂದರೆಗಳು ಎದುರಾದರೆ ಪಪ್ಪಾಯಿಯ ಸಿಪ್ಪೆಯನ್ನು ನುಣ್ಣಗೆ ಅರೆದು ಮಜ್ಜಿಗೆಯೊಂದಿಗೆ ಬೆರೆಸಿ ಒಂದು ಲೋಟ ಕುಡಿದರೆ ಮರುದಿನ ಹೊಟ್ಟೆ ಶುದ್ಧೀಕರಣವಾಗುತ್ತದೆ. ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ

English summary

Health benefits Of fruits peel

Most of us love eating fruits and we are aware that fruits come with great health benefits; however, did you know the peel of certain fruits also come with astonishing health benefits? Normally, we tend to throw away the fruit peel, and not many of us feel that the fruit peel can also be healthy. Today, let us learn about some of the health benefits of fruit peels, so that we can try to consume them too, have a look!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X