Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾಳೆಹಣ್ಣಿನ ಸಿಪ್ಪೆಯ ಚಮತ್ಕಾರಿಕ ಪ್ರಯೋಜನ ಅರಿಯಿರಿ!
ನಮಗೆಲ್ಲ ತಿಳಿದಿರುವಂತೆ ಬಾಳೆಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್, ಖನಿಜಾಂಶಗಳು, ಪೊಟಾಶಿಯಂ ಮತ್ತು ಮೆಗ್ನಿಶಿಯಂ ಇತ್ಯಾದಿಗಳು ಇರುತ್ತವೆ. ಈ ಬಾಳೆಹಣ್ಣಿನ ಸಿಪ್ಪೆಯಿಂದ ದೊರೆಯುವ ಹಲವಾರು ಪ್ರಯೋಜನಗಳನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ.
ಬಾಳೆಹಣ್ಣಿನ ಸಿಪ್ಪೆಗಳನ್ನು ತ್ವಚೆಗೆ ಲೇಪಿಸಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಬಾಳೆಹಣ್ಣನ್ನು ಪೇಸ್ಟ್ ರೀತಿ ಮಾಡಿಕೊಂಡು ಸಹ ನೀವು ತ್ವಚೆಗೆ ಲೇಪಿಸಬಹುದು.
ಬಾಳೆಹಣ್ಣಿನ ಸಿಪ್ಪೆ ನಿಮ್ಮ ತ್ವಚೆಯನ್ನು ಬೆಳ್ಳಗೆ ಮಾಡುತ್ತದೆ, ಕಲೆಗಳನ್ನು ನಿವಾರಿಸುತ್ತದೆ, ತ್ವಚೆಗೆ ತೇವಾಂಶವನ್ನು ಒದಗಿಸುತ್ತದೆ ಮತ್ತು ಅವಧಿ ಪೂರ್ವ ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಬಾಳೆಹಣ್ಣನ್ನು ತ್ವಚೆಗೆ ಹೇಗೆ ಬಳಸಿಕೊಳ್ಳುವುದು? ಬೋಲ್ಡ್‌ಸ್ಕೈ ಆ ವಿಚಾರಗಳನ್ನು ನಿಮಗಾಗಿ ತಿಳಿಸಿಕೊಡುತ್ತಿದೆ ಮುಂದೆ ಓದಿ...

ಸುಕ್ಕಿನ ಸಮಸ್ಯೆಯನ್ನು ನಿವಾರಿಸುತ್ತದೆ
ಬಾಳೆಹಣ್ಣಿನ ಸಿಪ್ಪೆಯು ತ್ವಚೆಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿಕೊಳ್ಳಿ ಮತ್ತು ಅದಕ್ಕೆ ಮೊಟ್ಟೆಯ ಹಳದಿ ಭಾಗವನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ತೊಳೆಯಿರಿ. ಈ ಪ್ಯಾಕ್ ನಿಮ್ಮ ಮುಖದಲ್ಲಿರುವ ಕಲೆಗಳನ್ನು ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ.

ಮೊಡವೆ ಸಮಸ್ಯೆ
ಪ್ರತಿ ನಿತ್ಯ ಬಾಳೆಹಣ್ಣಿನ ಸಿಪ್ಪೆಯಿಂದ ನಿಮ್ಮ ಮುಖದಲ್ಲಿರುವ ಮೊಡವೆಗಳನ್ನು ಮೃದುವಾಗಿ ಮಸಾಜ್ ಮಾಡಿ. ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಕಿಣ್ವಗಳು ಮೊಡವೆಗಳನ್ನು ನಿವಾರಿಸುತ್ತದೆ ಮತ್ತು ಅದರ ಇನ್‍ಫೆಕ್ಷನ್‌ಗಳನ್ನು ಕೊಲ್ಲುತ್ತದೆ. ಇದು ಬಾಳೆಹಣ್ಣಿನಿಂದ ನಮಗೆ ದೊರೆಯುವ ಒಂದು ಉತ್ತಮ ಪ್ರಯೋಜನವಾಗಿದೆ.

ಅಪಾಯಕಾರಿ ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ
ಬಾಳೆಹಣ್ಣಿನ ಸಿಪ್ಪೆಯು ಅಪಾಯಕಾರಿ ಸೂರ್ಯನ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯನ್ನು 10 ನಿಮಿಷ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ. ಅದನ್ನು ನಿಮ್ಮ ತ್ವಚೆಗೆ ಸಹ ಲೇಪಿಸಿಕೊಳ್ಳಿ. ಇದು ಸಹ ಬಾಳೆಹಣ್ಣಿನಿಂದ ದೊರೆಯುವ ಒಂದು ಅದ್ಭುತವಾದ ಉಪಯೋಗವಾಗಿರುತ್ತದೆ.

ತ್ವಚೆಯನ್ನು ಬೆಳ್ಳಗೆ ಮಾಡುತ್ತದೆ
ಬಾಳೆಹಣ್ಣಿನ ಒಳಗಿನ ಸಿಪ್ಪೆಯನ್ನು ಮೃದುವಾಗಿ ನಿಮ್ಮ ತ್ವಚೆಯ ಮೇಲೆ ಐದು ನಿಮಿಷಗಳ ಕಾಲ ಉಜ್ಜಿ. ಇದು ನಿಮ್ಮ ತ್ವಚೆಯನ್ನು ಬೆಳ್ಳಗೆ ಮಾಡುತ್ತದೆ. ಇದು ಸಹ ಬಾಳೆಹಣ್ಣಿನಿಂದ ನಿಮಗೆ ದೊರೆಯುವ ಒಂದು ಒಳ್ಳೆಯ ಪ್ರಯೋಜನವಾಗಿದೆ.

ಕಣ್ಣುಗಳಿಗೆ ಆರಾಮ ನೀಡಲು
ಕಣ್ಣುಗಳು ಕೆಲಸ ಮತ್ತು ಒತ್ತಡದಿಂದ ಆಯಾಸಗೊಂಡಿವೆಯೇ? ಹಾಗಾದರೆ ಅವುಗಳ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಇಡಿ. ಇದು ನಿಮ್ಮ ಕಣ್ಣುಗಳಿಗೆ ಆರಾಮವನ್ನು ಒದಗಿಸುತ್ತದೆ ಮತ್ತು ಆಹ್ಲಾದಕತೆಯನ್ನು ನೀಡುತ್ತದೆ.



Click it and Unblock the Notifications
