ಸರ್ವ ವಿಧದಲ್ಲೂ ಪ್ರಯೋಜನಕಾರಿಯಾಗಿರುವ ಕಿತ್ತಳೆ ಸಿಪ್ಪೆ

By Super
Subscribe to Boldsky

ಒಮ್ಮೆ ವೈದ್ಯರು ತಮ್ಮ ರೋಗಿಗೆ ಹಣ್ಣನ್ನು ಸಿಪ್ಪೆ ಸಹಿತ ತಿನ್ನಲು ಸಲಹೆ ಮಾಡಿದರಂತೆ. ಆಗ ರೋಗಿ ಅದು ಸಾಧ್ಯವಿಲ್ಲ, ಏಕೆಂದರೆ ತನಗೆ ತುಂಬಾ ಇಷ್ಟವಾದುದು ಹಲಸಿನ ಹಣ್ಣು ಎಂದನಂತೆ! ವಾಸ್ತವವಾಗಿ ಎಲ್ಲಾ ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಲು ಸಾಧ್ಯವಿಲ್ಲ. ಬಾಳೆಹಣ್ಣು, ದಾಳಿಂಬೆ, ಸೀತಾಫಲ, ಮೂಸಂಬಿ, ಕಿತ್ತಳೆ, ಚಕ್ಕೋತ ಮೊದಲಾದವುಗಳ ತಿರುಳನ್ನು ತಿಂದು ಸಿಪ್ಪೆಯನ್ನು ತ್ಯಜಿಸುತ್ತೇವೆ. ವಾಣಿಜ್ಯವಾಗಿ ಕಿತ್ತಳೆ ಹಣ್ಣುಗಳ ರಸವನ್ನು ಸಂಸ್ಕರಿಸುವಾಗ ಸಿಗುವ ಅಪಾರ ಪ್ರಮಾಣದ ಸಿಪ್ಪೆಯನ್ನು ಬಿಸುಡದೇ ಜಾಮ್ (orange marmalde) ಮಾಡಲು ಉಪಯೋಗಿಸಲಾಗುತ್ತದೆ.

ಆದರೆ ಮನೆಯಲ್ಲಿ ಅಲ್ಪ ಪ್ರಮಾಣದಲ್ಲಿ ಕಿತ್ತಳೆ ಹಣ್ಣುಗಳನ್ನು ಸೇವಿಸಿದಾಗ ಸಿಪ್ಪೆಯನ್ನು ಹಾಗೇ ತಿಪ್ಪೆಗೆಸೆಯುತ್ತೇವೆ. ಆದರೆ ಈ ಸಿಪ್ಪೆಗಳಲ್ಲಿಯೂ ಅತ್ಯುತ್ತಮವಾದ ಪೋಷಕಾಂಶಗಳಿರುವುದರಿಂದ ಇವುಗಳನ್ನು ಬಿಸಾಡದೇ ಉಪಯೋಗಿಸುವ ಮೂಲಕ ಉತ್ತಮ ಉಪಯೋಗ ಪಡೆಯಬಹುದು.

ಇದರ ಉಪಯೋಗದಲ್ಲಿ ಅತ್ಯುತ್ತಮವಾದ ಹನ್ನೆರಡು ಉಪಯೋಗಗಳನ್ನು ಇಲ್ಲಿ ವಿವರಿಸಲಾಗಿದೆ. ಆದರೆ ಸಿಪ್ಪೆಗಳನ್ನು ಆರಿಸುವಾಗ ಇದರ ಮೇಲೆ ತೆಳುವಾದ ಕೀಟನಾಶಕದ ಪದರ ಇದೆಯೇ ಎಂದು ನೋಡಿಕೊಳ್ಳಿ. ಒಂದು ವೇಳೆ ತೆಳುವಾಗಿ ಪೌಡರ್ ಅಂಟಿಸಿದಂತೆ ಪದರವೇನಾದರೂ ಇದ್ದರೆ ಈ ಸಿಪ್ಪೆಗಳನ್ನು ಬಳಸಬೇಡಿ. (ಹಣ್ಣುಗಳನ್ನು ಕೊಳ್ಳುವಾಗಲೇ ಇದನ್ನು ಗಮನಿಸಿ ಕೊಳ್ಳದೇ ಇರುವುದು ಮೇಲು). ಈ ಕೀಟನಾಶಕ ಸಿಪ್ಪೆಯ ಆಳಕ್ಕೆ ಇಳಿದಿರುವುದರಿಂದ ಇವುಗಳ ಬಳಕೆ ಒಳ್ಳೆಯದಲ್ಲ. ಕಿತ್ತಳೆ ಹಣ್ಣುಗಳಲ್ಲಿ ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳಿವೆಯೇ?

ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುತ್ತದೆ

ಕಿತ್ತಳೆ ಸಿಪ್ಪೆಗಳನ್ನು ತೆಳುವಾಗಿ ಹೆಚ್ಚಿ ನಿಮ್ಮ ಖಾದ್ಯಗಳಲ್ಲಿ ಕೊಂಚ ಪ್ರಮಾಣದಲ್ಲಿ ಸೇರಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL-Low Density Lipoprotein) ಅನ್ನು ಕಡಿಮೆಗೊಳಿಸಬಹುದು.

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ

ದೇಹವನ್ನು ಪ್ರವೇಶಿಸಿರುವ ಕ್ಯಾನ್ಸರ್ ಕಾರಕ ಕಣಗಳು (free radical) ನಮ್ಮ ರಕ್ತದಲ್ಲಿನ ಆಮ್ಲಜನಕವನ್ನು ಕದಿಯುತ್ತವೆ. ಕಿತ್ತಳೆ ಸಿಪ್ಪೆಯಲ್ಲಿನ limonene ಎಂಬ ಪೋಷಕಾಂಶ ಈ ಕಣಗಳೊಂದಿಗೆ ಮಿಳಿತಗೊಂಡು ದೇಹದಿಂದ ವಿಸರ್ಜಿಸಲ್ಪಡುವುದರಿಂದ ಕ್ಯಾನ್ಸರ್ ಬರುವುದರಿಂದ ರಕ್ಷಣೆ ಪಡೆದಂತಾಗುತ್ತದೆ.

ಹೊಟ್ಟೆಯುರಿ, ಹುಳಿತೇಗು ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ

ಹೊಟ್ಟೆಯುರಿ, ಹುಳಿತೇಗು ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ

ಕೆಲವೊಮ್ಮೆ ಹೊಟ್ಟೆಯ ಆಮ್ಲ ತಿನಿಸುಗೊಳವೆ (oesophagus) ಗೆ ಹಿಂದಿರುಗಿದಾಗ ಭಾರೀ ಉರಿ ಉಂಟಾಗುತ್ತದೆ. ಇದನ್ನೇ ಹೊಟ್ಟೆಯುರಿ ಅಥವಾ ಹುಳಿತೇಗು ಎನ್ನುತ್ತೇವೆ. ಕಿತ್ತಳೆ ಸಿಪ್ಪೆಯಲ್ಲಿನ d-limonene ಎಂಬ ಪೋಷಕಾಂಶವು ಈ ಆಮ್ಲದೊಡನೆ ಸಂಯೋಜನೆಗೊಂಡು ಹುಳಿ ತೇಗು ಆಗುವುದರಿಂದ ತಡೆಯುತ್ತದೆ. ಕಿತ್ತಳೆ ಸಿಪ್ಪೆಯ ಪಲ್ಯವನ್ನು ಸುಮಾರು ಇಪ್ಪತ್ತು ದಿನಗಳವರೆಗೆ ಸೇವಿಸುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಅಜೀರ್ಣದ ತೊಂದರೆಯನ್ನು ನಿವಾರಿಸಿತ್ತದೆ

ಅಜೀರ್ಣದ ತೊಂದರೆಯನ್ನು ನಿವಾರಿಸಿತ್ತದೆ

ಕಿತ್ತಳೆಯ ಸಿಪ್ಪೆಯಲ್ಲಿ ಸುಮಾರು ಶೇಖಡಾ ಹನ್ನೊಂದರಷ್ಟು ಕರಗದ ನಾರು ಇದೆ. ಇದು ಮಲಬದ್ದತೆಯಾಗುವುದನ್ನು ತಡೆಯುತ್ತದೆ. ಸುಲಲಿತ ಮಲವಿಸರ್ಜನೆ, ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಕಿತ್ತಳೆ ಸಿಪ್ಪೆಗಳನ್ನು ಸೇರಿಸಿ ತಯಾರಿಸಿದ ಟೀ ಸಹಾ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ನೆರವಾಗುತ್ತದೆ.

ಉಸಿರಾಟವನ್ನು ಸರಾಗಗೊಳಿಸುತ್ತದೆ

ಉಸಿರಾಟವನ್ನು ಸರಾಗಗೊಳಿಸುತ್ತದೆ

ಕಿತ್ತಳೆ ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ವಿಶೇಷವಾಗಿ ಉಸಿರಾಟದ ತೊಂದರೆಗಳಾದ ಅಸ್ತಮಾ, ಬ್ರಾಂಕೈಟಿಸ್ ಮೊದಲಾದ ಉಸಿರು ಸಂಬಂಧಿ ರೋಗಗಳಿಂದ ರಕ್ಷಣೆ ಪಡೆಯಬಹುದು. ತನ್ಮೂಲಕ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯಬಹುದು. ಶೀತ, ಫ್ಲೂ ಮೊದಲಾದ ತೊಂದರೆಗಳಿಂದಲೂ ಕಿತ್ತಳೆ ಸಿಪ್ಪೆ ರಕ್ಷಣೆ ನೀಡುತ್ತದೆ.

ಅಜೀರ್ಣತೆಯಿಂದ ಮುಕ್ತಿ ನೀಡುತ್ತದೆ

ಅಜೀರ್ಣತೆಯಿಂದ ಮುಕ್ತಿ ನೀಡುತ್ತದೆ

ಅಜೀರ್ಣಕ್ಕೆ ಕಿತ್ತಳೆ ಸಿಪ್ಪೆ ರಾಮಬಾಣ ಎಂಬುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಇದರಲ್ಲಿರುವ d-limonene ಪೋಷಕಾಂಶವೇ ಕರುಳಿನಲ್ಲಿ ಪಚನಕ್ರಿಯೆಗೆ ಸಹಕರಿಸುತ್ತದೆ. ಇದರಲ್ಲಿರುವ ಕರಗದ ನಾರು ಮಲಬದ್ದತೆಯಾಗುವುದನ್ನು ತಡೆಯುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆ ಸರಾಗವಾಗಿ ನಡೆದು ಅಜೀರ್ಣತೆಯ ತೊಂದರೆಯಿಂದ ಮುಕ್ತಿ ದೊರಕಿದಂತಾಗುತ್ತದೆ.

ಕಿತ್ತಳೆ ಸಿಪ್ಪೆಯ ಇತರ ಉಪಯೋಗಗಳು

ಕಿತ್ತಳೆ ಸಿಪ್ಪೆಯ ಇತರ ಉಪಯೋಗಗಳು

ಕಿತ್ತಳೆ ಸಿಪ್ಪೆಯನ್ನು ಸೇವಿಸುವುದರಿಂದ ದೊರಕುವ ಉಪಯೋಗಗಳ ಹೊರತಾಗಿಯೂ ಇನ್ನೂ ಹಲವು ಉಪಯೋಗಗಳಿವೆ. ಇವುಗಳ ಬಗ್ಗೆ ಕಲವು ಉಪಯೋಗಕಾರಿ ವಿವರಗಳನ್ನು ನೋಡೋಣ

ಗಾಳಿಯನ್ನು ತಾಜಾಗೊಳಿಸಲು ನೆರವಾಗುತ್ತದೆ

ಗಾಳಿಯನ್ನು ತಾಜಾಗೊಳಿಸಲು ನೆರವಾಗುತ್ತದೆ

ಮನೆಯ ಗಾಳಿಯಲ್ಲಿ ಸುಗಂಧ ತೇಲಿ ಬರುತ್ತಿದ್ದರೆ ಹವಾ ತಾಜಾಗೊಳ್ಳುತ್ತದೆ. ಇದಕ್ಕಾಗಿ ತೆಳುವಾಗಿ ಹೆಚ್ಚಿದ ಕಿತ್ತಳೆ ಸಿಪ್ಪೆಯನ್ನು ಇತರ ಸುಗಂಧ ಬೀರುವ ವಸ್ತುಗಳಾದ ಶ್ರೀಗಂಧ, ಲವಂಗ ಮೊದಲಾದವುಗಳ ಜೊತೆಗೆ ಸೇರಿಸಿ ಒಂದು ಬೋಗುಣಿಯಲ್ಲಿ ಕೋಣೆಯ ಮಧ್ಯೆ ಇಡುವ ಮೂಲಕ ದಿನವಿಡೀ ಸುವಾಸನೆಯನ್ನು ಪಡೆಯಬಹುದು.

ಹಲ್ಲುಗಳನ್ನು ಬಿಳಿಯದಾಗಿಸಲು ನೆರವಾಗುತ್ತದೆ

ಹಲ್ಲುಗಳನ್ನು ಬಿಳಿಯದಾಗಿಸಲು ನೆರವಾಗುತ್ತದೆ

ಹಲ್ಲುಗಳು ಹಳದಿಯಾಗಿದ್ದರೆ ಕಿತ್ತಳೆ ಸಿಪ್ಪೆಯನ್ನು ಅರೆದು ಮಾಡಿದ ಮಿಶ್ರಣವನ್ನು ಉಪಯೋಗಿಸಿ ಹಲ್ಲುಗಳಿಗೆ ಹಚ್ಚುವ ಮೂಲಕ ಹಳದಿ ಬಣ್ಣವನ್ನು ತೊಡೆಯಲು ಸಾಧ್ಯವಾಗುತ್ತದೆ. ಬದಲಿಗೆ ಕಿತ್ತಳೆ ಸಿಪ್ಪೆಯ ಒಳಭಾಗವನ್ನು (ಬಿಳಿಯ ಭಾಗ) ಉಪಯೋಗಿಸಿ ಹಲ್ಲುಗಳನ್ನು ಉಜ್ಜಬಹುದು. ಕಿತ್ತಳೆಯ ಸಿಪ್ಪೆಯನ್ನು ಉಜ್ಜುವುದರಿಂದ ಒಸಡುಗಳು ಹೆಚ್ಚು ಸಂವೇದಿಯಾಗುತ್ತವೆ ಮತ್ತು ತಣ್ಣನೆಯ ಅಥವಾ ಬಿಸಿಯನ್ನು ತಿನ್ನಲು ಸಾಧ್ಯವಾಗುವುದಿಲ್ಲ ಎಂದು ಕೆಲವರು ಭಾವಿಸುತ್ತಾರೆ. ಆದರೆ ನಿಜವಾಗಿ ಹಲ್ಲುಗಳ ಸಂವೇದನೆಯನ್ನು ಕಿತ್ತಳೆ ಸಿಪ್ಪೆ ಕಡಿಮೆಗೊಳಿಸುತ್ತದೆ.

ಮನೆಯ ಸಿಂಕ್‌ಗಳನ್ನು ಸ್ವಚ್ಛಗೊಳಿಸಬಹುದು

ಮನೆಯ ಸಿಂಕ್‌ಗಳನ್ನು ಸ್ವಚ್ಛಗೊಳಿಸಬಹುದು

ಕಿತ್ತಳೆಸಿಪ್ಪೆಯ ಒಳಭಾಗವನ್ನು ಉಪಯೋಗಿಸಿ ಸಿಂಕ್ ಗಳ ಒಳಭಾಗವನ್ನು ಉಜ್ಜಿ ಸ್ವಚ್ಛಗೊಳಿಸಬಹುದು. ಇದರಿಂದ ಕಠಿಣವಾದ ಜಿಡ್ದು ತೊಲಗಿ ಸ್ವಚ್ಛವಾದ ಮೇಲ್ಮೈ ಫಳಫಳನೇ ಹೊಳೆಯುತ್ತದೆ.

ಹೂಗಿಡಗಳಿಗೆ ಉತ್ತಮ ಗೊಬ್ಬರವಾಗುತ್ತದೆ

ಹೂಗಿಡಗಳಿಗೆ ಉತ್ತಮ ಗೊಬ್ಬರವಾಗುತ್ತದೆ

ಕಿತ್ತಳೆ ಸಿಪ್ಪೆಗಳನ್ನು ಮಣ್ಣಿನಲ್ಲಿ ಕೊಳೆಸುವುದರಿಂದ ಉತ್ತಮ ಪ್ರಮಾಣದ ಸಾರಜನಕ ಬೇರುಗಳಿಗೆ ಲಭ್ಯವಾಗಿ ಗಿಡಗಳ ಬೆಳವಣಿಗೆಯನ್ನು ಉತ್ತಮಗೊಳಿಸುತ್ತದೆ. ಆದರೆ ಇದರಲ್ಲಿರುವ ಸಾರಜನಕ ಅಪಾರ ಪ್ರಮಾಣದಲ್ಲಿರುವುದರಿಂದ ಹೆಚ್ಚಿನ ಸಿಪ್ಪೆಗಳು ಗಿಡವನ್ನು ಸುಟ್ಟುಬಿಡಬಹುದು. ಆದ್ದರಿಂದ ಒಂದು ಹೂಗಿಡಕ್ಕೆ ಒಂದು ಕಿತ್ತಳೆಹಣ್ಣಿನ ಸಿಪ್ಪೆಯ ಅರ್ಧದಷ್ಟು ಮಾತ್ರ ಉಪಯೋಗಿಸಿ.

ಚರ್ಮವನ್ನು ಬೆಳ್ಳಗಾಗಿಸಲು ಉಪಯೋಗಿಸಬಹುದು

ಚರ್ಮವನ್ನು ಬೆಳ್ಳಗಾಗಿಸಲು ಉಪಯೋಗಿಸಬಹುದು

ಬಿಸಿಲಿನ ಕಾರಣದಿಂದ ಚರ್ಮ ಕಪ್ಪಗಾಗಿದ್ದರೆ ಆ ಸ್ಥಳದಲ್ಲಿ ಕಿತ್ತಳೆ ಸಿಪ್ಪೆಯನ್ನು ಅರೆದು ತಯಾರಿಸಿದ ಲೇಪನವನ್ನು ಹಚ್ಚುವ ಮೂಲಕ ಉತ್ತಮ ಪರಿಣಾಮಗಳನ್ನು ಪಡೆಯಬಹುದು. ಹಳೆಯಗಾಯದ ಕಲೆ, ಸುಟ್ಟಕಲೆ ಮೊದಲಾದವುಗಳನ್ನು ನಿಧಾನವಾಗಿ ತೊಡೆಯಬಹುದು. ಆದರೆ ಈ ಲೇಪನ ತೆಳುವಾಗಿರಬೇಕು ಹಾಗೂ ಒಂದೆರಡು ಘಂಟೆ ಕಾಲ ಮಾತ್ರ ಹಚ್ಚಬೇಕು. ಅಲ್ಲದೇ ಸೂರ್ಯನ ಹಾನಿಕಾರಕ ಅಲ್ಟ್ರಾವಯೋಲೆಟ್ ಕಿರಣಗಳಿಂದಲೂ ರಕ್ಷಣೆ ಪಡೆಯಬಹುದು. ಈ ಲೇಪನವನ್ನು ಮುಖಕ್ಕೂ ತೆಳುವಾಗಿ ಹಚ್ಚಿ ಕೂಡಲೇ ತೊಳೆದುಕೊಳ್ಳುವುದರಿಂದ ಸೂಕ್ಷ್ಮರಂಧ್ರಗಳಲ್ಲಿರುವ ಕೊಳೆಯನ್ನೂ ನಿವಾರಿಸಬಹುದು.

ನಿಮ್ಮ ಅಡುಗೆ ಮನೆಯನ್ನು ಅಲಂಕರಿಸಲು

ನಿಮ್ಮ ಅಡುಗೆ ಮನೆಯನ್ನು ಅಲಂಕರಿಸಲು

ಕಿತ್ತಳೆ ಸಿಪ್ಪೆಗಳನ್ನು ಕಲಾತ್ಮಕವಾಗಿ ಕತ್ತರಿಸಿ ನಿಮ್ಮ ವಿಶೇಷ ಅಡುಗೆಗಳಿಗೆ ವಿಶೇಷವಾದ ಅಲಂಕಾರವನ್ನು ನೀಡಲು ಉಪಯೋಗಿಸಬಹುದು. ಅಲ್ಲದೇ ತೆಳುವಾಗಿ ಹೆಚ್ಚಿದ ಸಿಪ್ಪೆಯನ್ನು ಸಾಲಾಡ್ ಜೊತೆಗೆ ಮತ್ತು ಕೊಂಚ ಹುಳಿ ಸ್ವಾದ ಹೆಚ್ಚಿಸಲೂ ಉಪಯೋಗಿಸಬಹುದು.

ಕೀಟನಾಶಕವಾಗಿ ಬಳಸಬಹುದು

ಕೀಟನಾಶಕವಾಗಿ ಬಳಸಬಹುದು

ಇರುವೆ, ಜಿರಲೆಗಳು ಓಡಾಡುವ ಜಾಗದಲ್ಲಿ ಕಿತ್ತಳೆ ಸಿಪ್ಪೆಯನ್ನು ಹಿಸುಕಿ ರಸವನ್ನು ಚಿಮುಕಿಸುವ ಮೂಲಕ ಇವುಗಳನ್ನು ನಿಗ್ರಹಿಸಬಹುದು. ಕಿತ್ತಳೆ ಸಿಪ್ಪೆಗಳನ್ನು ಹಸಿಯಾಗಿರುವಂತೆಯೇ ಕೀಟಗಳು ಹೆಚ್ಚಾಗಿ ಕಾಣಿಸಿಕೊಳ್ಳುವೆಡೆ ಇರಿಸುವುದರಿಂದ ಕೀಟಗಳು ಬರದಂತೆ ತಡೆಯಬಹುದು. ಅಲ್ಲದೇ ಕಿತ್ತಳೆ ಸಿಪ್ಪೆಯನ್ನು ಕಿವುಚಿ ಅದರ ಸುವಾಸನೆ ಕೋಣೆಯಲ್ಲಿ ಹರಡುವಂತೆ ಮಾಡುವ ಮೂಲಕ ನೊಣ ಮತ್ತು ಸೊಳ್ಳೆಗಳನ್ನೂ ದೂರ ಓಡಿಸಬಹುದು.

For Quick Alerts
ALLOW NOTIFICATIONS
For Daily Alerts

    English summary

    Top health Benefits of Orange Peels

    Orange peels are the thick finely-textured and orange coloured skin of oranges. Since ancient times, orange peels have been valued for their curative properties. In this hub we are going to take a look at more than 12 versatile benefits of orange peels.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more