For Quick Alerts
ALLOW NOTIFICATIONS  
For Daily Alerts

ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ

By Deepak
|

ಪಪ್ಪಾಯಿ ಹಣ್ಣಿನಲ್ಲಿರುವ ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ ಮತ್ತು ಉತ್ಕೃಷ್ಟ ರಚನೆ ಇವುಗಳನ್ನು ಕಂಡುಕೊಂಡ ಕ್ರಿಸ್ಟೋಫರ್ ಕೊಲಂಬಸ್ ಈ ಹಣ್ಣಿಗೆ "ದೇವತೆಗಳ ಹಣ್ಣು - ಫ್ರೂಟ್ಸ್ ಆಫ್ ಏಂಜೆಲ್ಸ್" ಎಂದು ಅಡ್ಡ ಹೆಸರಿಟ್ಟನು. ಪಪ್ಪಾಯಿಹಣ್ಣು ಒಳ್ಳೆಯ ಕಾರಣಕ್ಕಾಗಿ ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ.

ಈ ಹಣ್ಣಿನಲ್ಲಿ ಅಧಿಕವಾಗಿ ವಿಟಮಿನ್ ಎ, ಸಿ, ಇ ಮತ್ತು ಕೆ ಇವೆ ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ಇವೆ. ಹಾಗೂ ಇದರಲ್ಲಿ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್, ನಾರಿನಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪಪೈನ್ ಎಂಬ ಕಿಣ್ವವಿರುತ್ತವೆ, ಅಲ್ಲದೆ ಅದರ ಬೀಜದಲ್ಲಿಯೂ ಕೂಡ ಹಲವು ಆರೋಗ್ಯ ಲಾಭಗಳಿವೆ ಎಂದು ಆರೋಗ್ಯ ತಜ್ಞರು ಈಗಾಗಲೇ ಖಚಿತಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಪಪ್ಪಾಯಿ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುವುದರ ಜೊತೆಗೆ ಕೆರೋಟಿನ್‌ಗಳು, ವಿಟಮಿನ್ ಸಿ ಮತ್ತು ಫ್ಲಾವೊನಾಯ್ಡ್‌ಗಳಂತಹ ಪೋಷಕಾಂಶಗಳು ಸಹ ಅಧಿಕ ಪ್ರಮಾಣದಲ್ಲಿರುವುದರಿಂದ, ಇದು ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳನ್ನು ದೇಹಕ್ಕೆ ನೀಡುವಲ್ಲಿ ಪ್ರಮುಖ ಪಾತ್ರವಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಹಣ್ಣಿನ ತಿರುಳನ್ನು ಮುಖಕ್ಕೆ ಫೇಶಿಯಲ್ ಆಗಿ ಮತ್ತು ಕ್ರೀಮ್ ಆಗಿ ಹಾಗು ವಿವಿಧ ಬಗೆಯ ಶಾಂಪೂವಾಗಿ ಸಹ ಬಳಸಲಾಗುತ್ತಿದೆ. ಬನ್ನಿ ಪಪ್ಪಾಯಿ ಹಣ್ಣಿನಿಂದ ನಮ್ಮ ಸೌಂದರ್ಯವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದನ್ನು ಮುಂದೆ ವಿವರಿಸಿದ್ದೇವೆ ನೋಡಿ...

ತ್ವಚೆಗೆ ಪೋಷಣೆಯನ್ನು ಒದಗಿಸುತ್ತದೆ

ತ್ವಚೆಗೆ ಪೋಷಣೆಯನ್ನು ಒದಗಿಸುತ್ತದೆ

ಈ ಹಣ್ಣು ತ್ವಚೆಗೆ ಅವಶ್ಯಕವಾದಂತಹ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ, ತ್ವಚೆಯಲ್ಲಿರುವ ನಿರ್ಜೀವ ಜೀವ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ತ್ವಚೆಗೆ ತಕ್ಷಣ ತಾಜಾತನವನ್ನು ನೀಡುತ್ತದೆ. ಅಲ್ಲದೆ, ಇದರಲ್ಲಿರುವ ಶುದ್ಧೀಕರಣ ಗುಣಗಳಿಂದ ನಿಮ್ಮ ಚರ್ಮದಲ್ಲಿರುವ ಕಲ್ಮಶಗಳನ್ನು ತೆರವುಗೊಳಿಸಲು ಸಹಾಯಮಾಡುತ್ತದೆ, ಹಾಗೂ ಇದರಲ್ಲಿರುವ ವಿಟಮಿನ್ ಸಿ ಚರ್ಮದ ಜೀವಕೋಶಗಳನ್ನು ಬಿಸಿಲಿನ ಹೊಡೆತದಿಂದ ರಕ್ಷಿಸುತ್ತದೆ.

ಕಲೆಗಳನ್ನು ನಿವಾರಿಸುತ್ತದೆ

ಕಲೆಗಳನ್ನು ನಿವಾರಿಸುತ್ತದೆ

ಪಪ್ಪಾಯಿ ಹಣ್ಣಿನ ನುಣ್ಣನೆಯ ಪೇಸ್ಟನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಇದನ್ನು 20 ನಿಮಿಷಗಳ ಕಾಲ ಬಿಟ್ಟು, ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ಒಂದು ವಾರದ ತನಕ ಪುನರಾವರ್ತಿಸಿ. ಆಗ ನಿಮ್ಮ ಮುಖದಲ್ಲಿರುವ ಕಲೆಗಳು ಮಾಯವಾಗಿರುವುದನ್ನು ನೀವೇ ನೋಡುವಿರಿ.

ಮತ್ತೊಂದು ವಿಧಾನವೆಂದರೆ:ಅರ್ಧ ಕಪ್ ಮಾಗಿದ ಮತ್ತು ಹಿಸುಕಿದ ಹಣ್ಣಿನ ಜೊತೆ ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ ಒಂದು ಫೇಸ್ ಪ್ಯಾಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿ. 30 ನಿಮಿಷಗಳ ಸಮಯ ಹಾಗೆಯೇ ಬಿಟ್ಟು ತಣ್ಣಗಿರುವ ನೀರಿನಿಂದ ತೊಳೆದುಕೊಳ್ಳಿ. ಹೀಗೆ ವಾರಕೊಮ್ಮೆ ಮಾಡಿಕೊಳ್ಳಿ.

ಒಡೆದ ಚರ್ಮಕ್ಕೆ ಪರಿಹಾರ

ಒಡೆದ ಚರ್ಮಕ್ಕೆ ಪರಿಹಾರ

ಒಂದು ವೇಳೆ ನೀವು ಕಾಲುಗಳ ಹಿಮ್ಮಡಿ ಒಡೆಯುವ ಸಮಸ್ಯೆಯನ್ನು ಎದುರಿಸುತ್ತಿದ್ದಲ್ಲಿ, ಪಪ್ಪಾಯಿ ಹಣ್ಣಿನ ಪೇಸ್ಟನ್ನು ಹಚ್ಚಿಕೊಳ್ಳಿ. ಇದರಿಂದ ಒಡೆದ ಹಿಮ್ಮಡಿಗೆ ತಕ್ಷಣ ಆರಾಮವನ್ನು ನೀಡಬಹುದು.

ರಿಂಗ್‌ವರ್ಮ್ ಉರಿಯೂತವನ್ನು ಕಡಿಮೆಮಾಡುತ್ತದೆ

ರಿಂಗ್‌ವರ್ಮ್ ಉರಿಯೂತವನ್ನು ಕಡಿಮೆಮಾಡುತ್ತದೆ

ನಿಮ್ಮ ತ್ವಚೆಯ ಮೇಲೆ ಎಲ್ಲಿ ರಿಂಗ್‌ವರ್ಮ್ ಕಂಡು ಬರುತ್ತದೆಯೋ ಅಲ್ಲಿ ಪಪ್ಪಾಯಿ ಹಣ್ಣನ್ನು ಉಜ್ಜಿ. ಇದರಿಂದ ಈ ಉರಿಯೂತವು ಕಡಿಮೆಯಾಗುವುದರ, ಜೊತೆಗೆ ಇದರ ಕೆಂಪಾಗುವಿಕೆಯು ಸಹ ತಗ್ಗುತ್ತದೆ.

ವಯಸ್ಸಾಗುವಿಕೆಯ ಚಿಹ್ನೆಗಳನ್ನು ತಗ್ಗಿಸುತ್ತದೆ

ವಯಸ್ಸಾಗುವಿಕೆಯ ಚಿಹ್ನೆಗಳನ್ನು ತಗ್ಗಿಸುತ್ತದೆ

ಈ ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ. ಅಲ್ಲದೆ ಹಣ್ಣಿನಲ್ಲಿರುವ ಆಲ್ಫಾ ಹೈಡ್ರಾಕ್ಸಿಲ್ ಆಮ್ಲಗಳು ವಯಸ್ಸಾಗುವ ಚಿಹ್ನೆಗಳನ್ನು, ಉದಾಹರಣೆಗೆ ಚರ್ಮದ ಸುಕ್ಕುಗಳು ಮತ್ತು ಗೆರೆಗಳು ಇವುಗಳನ್ನು ತಡೆಯಲು ಸತ್ತ ಚರ್ಮದ ಜೀವಕೋಶಗಳನ್ನು ಕರಗಿಸಲು ಸಹಾಯಮಾಡುತ್ತದೆ.


English summary

Best Beauty Benefits Of Papaya

Papaya is one of the very few fruits that are available throughout the year. There are numerous benefits of this pear shaped fruit. It not only improves your health but it also helps in many beauty remedies. Did you know that papaya is the major ingredient in some chewing gums? Well, yes it is. So, let's not deviate from the beauty benefits of papaya in this article today.
X
Desktop Bottom Promotion