For Quick Alerts
ALLOW NOTIFICATIONS  
For Daily Alerts

ತ್ವಚೆಯಲ್ಲಿ ದುರ್ವಾಸನೆಯೇ? ಇಂತಹ ಆಹಾರಗಳ ಬಗ್ಗೆ ಗಮನವಿರಲಿ!

By Arshad
|

ಕೆಲವರು ಸಾರ್ವಜನಿಕ ಸಾರಿಗೆಗಳನ್ನು ಇಷ್ಟಪಡುವುದಿಲ್ಲ. ಅನಿವಾರ್ಯವಾದ ಹೊರತು ಉಪಯೋಗಿಸುವುದೂ ಇಲ್ಲ. ಇದಕ್ಕೆ ಮುಖ್ಯ ಕಾರಣ ಬಸ್, ರೈಲು ಮೊದಲಾದ ಸ್ಥಳಗಳಲ್ಲಿ ಸಾರ್ವಜನಿಕರಲ್ಲಿ ಕೆಲವರ ಮೈಯಿಂದ ಹೊರಡುವ ದುರ್ವಾಸನೆ! ಶುಚಿತ್ವವನ್ನು ಕಾಪಾಡದವರಲ್ಲಿ ಈ ದುರ್ವಾಸನೆ ಸರಿ ಎನಿಸಿದರೂ ದಿನವೂ ಸ್ನಾನ ಮಾಡಿ ಸ್ವಚ್ಛತೆಯನ್ನು ಕಾಯ್ದುಕೊಂಡಿರುವವರ ಮೈಯಲ್ಲೂ ಕೆಲವೊಮ್ಮೆ ದುರ್ವಾಸನೆ ಹೊರಡುವುದು ಸೋಜಿಗ ತರಿಸುತ್ತದೆ.

ಇದಕ್ಕೆ ಹೀಗೇ ಎಂದು ಬೊಟ್ಟು ಮಾಡಿ ತೋರಿಸಲು ಒಂದೇ ಕಾರಣವಿಲ್ಲ. ಹಲವು ಕಾರಣಗಳ, ಕೆಲವೊಮ್ಮೆ ಅಡ್ಡಪರಿಣಾಮಗಳಿಂದಾಗಿ ಮೈಯಲ್ಲಿ ಹೆಚ್ಚಿನ ಬೆವರು ಮತ್ತು ದುರ್ವಾಸನೆ ಸೂಸುತ್ತದೆ. ಇಂತಹವರ ಸಾಮೀಪ್ಯದಿಂದ ದೂರ ಹೋಗಲು ಮನ ತವಕಿಸುತ್ತದೆ. ನಿಮ್ಮ ದೇಹದ ದುರ್ಗಂಧವನ್ನು ಹೋಗಲಾಡಿಸುವುದು ಹೇಗೆ?

ಒಂದು ವೇಳೆ ನಿಮ್ಮ ಮೈಯಿಂದಲೇ ಈ ದುರ್ವಾಸನೆ ಹೊರಡುತ್ತಿದ್ದು ನಿಮ್ಮ ಆಪ್ತರು ನಿಮ್ಮಿಂದ ದೂರ ಸರಿಯಲು ಯತ್ನಿಸುತ್ತಿದ್ದರೆ ಈ ಪರಿಸ್ಥಿತಿ ಖಂಡಿತಾ ಮುಜುಗರ ತರಿಸುತ್ತದೆ. ಏಕೆಂದರೆ ಈ ಬಗ್ಗೆ ನಿಮ್ಮ ಸುತ್ತಮುತ್ತಲಿನವರು ನೇರವಾಗಿ ಹೇಳದೇ ನಿಮ್ಮನ್ನು ದೂರವಿಡಲು ಪ್ರಯತ್ನಿಸುವುದು ನಿಮಗೂ ಇಷ್ಟವಾಗುವುದಿಲ್ಲ. ಸಾಮಾಜಿಕವಾಗಿ ನಾಲ್ಕು ಜನರ ನಡುವೆ ಬೆರೆಯಲು ದೈಹಿಕ ಸ್ವಚ್ಛತೆ ತುಂಬಾ ಅಗತ್ಯವಾಗಿದೆ. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ ಜನರೊಂದಿಗೆ ಮುಕ್ತವಾಗಿ ಬೆರೆಯಲು ನೆರವಾಗುತ್ತದೆ.

ನಿಮ್ಮ ಮೈವಾಸನೆ ಇನ್ನೊಬ್ಬರಿಗೆ ಹರಡದಿರಲು ಇಂದು ಸುವಾಸನೆ ನೀಡುವ ಹಲವು ಉಪಕರಣಗಳು ಲಭ್ಯವಿದ್ದರೂ ನಿಮ್ಮ ಮೈಯಲ್ಲಿನ ದುರ್ವಾಸನೆಗೆ ಏನು ಕಾರಣ ಎಂದು ಕಂಡುಹಿಡಿಯುವುದು ಮುಖ್ಯವಾಗಿದೆ. ಬೆವರಿನಿಂದ ದುರ್ವಾಸನೆ ಬರುತ್ತದೆ ಎಂಬುದು ನಾವೆಲ್ಲರೂ ನಂಬಿರುವ ಸತ್ಯ. ಆದರೆ ಈ ಸತ್ಯ ಕೇವಲ ಹತ್ತು ಶೇಖಡಾ ಮಾತ್ರ. ಇನ್ನುಳಿದ ತೊಂಭತ್ತು ಭಾಗ ನಾವು ಸೇವಿಸುವ ಆಹಾರದಲ್ಲಿಯೇ ಇದೆ! ಹೇಗೆಂದು ತಿಳಿಯುವ ಕುತೂಹಲವೇ? ಮುಂದೆ ಓದಿ.

ಬ್ರೋಕೋಲಿ, ಎಲೆಕೋಸು ಮತ್ತು ಹೂಕೋಸು

ಬ್ರೋಕೋಲಿ, ಎಲೆಕೋಸು ಮತ್ತು ಹೂಕೋಸು

ಈ ಮೂರೂ ಕೋಸುಗಳಲ್ಲಿರುವ ಗಂಧಕ ಅಹಾರದಲ್ಲಿ ಪಚನಗೊಂಡು ಚಿಕ್ಕ ಕಣಗಳಾಗಿ ರಕ್ತದ ಮೂಲಕ ದೇಹದ ವಿವಿಧ ಭಾಗಗಳಿಗೆ ರವಾನೆಯಾಗಿ ಬೆವರಿನ ಮೂಲಕ ಹೊರಬಂದಾಗ ನಸುವಾದ ಗಂಧಕದ ವಾಸನೆಯನ್ನು ಹೊಂದಿರುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ ಈ ವಾಸನೆ ಗಮನಕ್ಕೆ ಬಾರದು. ಆದರೆ ಹೆಚ್ಚು ಬೆವರುವ ಮೂಲಕ ಹೆಚ್ಚು ಗಂಧಕದ ಕಣಗಳು ಒಮ್ಮೆಲೇ ಹೊರಬರುವುದರಿಂದ ದುರ್ವಾಸನೆಯೂ ಹೆಚ್ಚುತ್ತದೆ. ಆದ್ದರಿಂದ ಈ ಆಹಾರಗಳನ್ನು ಅತಿ ಹೆಚ್ಚಾಗಿ ಸೇವಿಸದಿರಿ.

ಕೆಂಪು ಮಾಂಸಗಳು

ಕೆಂಪು ಮಾಂಸಗಳು

ಮಾಂಸಾಹಾರದಲ್ಲಿ ಬಿಳಿ ಮಾಂಸ (ಕೋಳಿ, ಮೀನು, ಸಾಗರೋತ್ಪನ್ನಗಳು) ಆರೋಗ್ಯಕ್ಕೆ ಉತ್ತಮವಾಗಿವೆ. ಆದರೆ ಕೆಂಪು ಮಾಂಸದಲ್ಲಿ (ಕುರಿಮಾಂಸ ಮೊದಲಾದವು) ಹೆಚ್ಚಿನ ಅಮೈನೋ ಆಮ್ಲಗಳಿರುತ್ತವೆ. ಈ ಆಮ್ಲ ಕರುಳಿನಲ್ಲಿ ಪಚನಗೊಂಡಾದ ಅತಿ ಚಿಕ್ಕ ಕಣಗಳಾಗಿ ಒಡೆದು ರಕ್ತದಲ್ಲಿ ಮಿಳಿತಗೊಳ್ಳುತ್ತದೆ. ಈ ಕಣಗಳು ಬೆವರಿನ ಮೂಲಕ ಹೊರಬಂದಾಗ ದುರ್ವಾಸನೆ ಹೊಂದಿರುತ್ತದೆ. ಬೆವರಿನ ಪ್ರಮಾಣ ಹೆಚ್ಚಿದ್ದಷ್ಟೂ ದುರ್ವಾಸನೆಯೂ ಅಧಿಕವಾಗಿರುತ್ತದೆ. ಆದ್ದರಿಂದ ನೀವು ಹೆಚ್ಚು ಬೆವರುವವರಾದರೆ ಕೆಂಪು ಮಾಂಸದ ಸೇವನೆಯ ಪ್ರಮಾಣವನ್ನು ತಗ್ಗಿಸಿಬಿಡಿ.

ಸಂಸ್ಕರಿಸಿದ ಅಥವಾ ಸಿದ್ಧ ಆಹಾರಗಳು

ಸಂಸ್ಕರಿಸಿದ ಅಥವಾ ಸಿದ್ಧ ಆಹಾರಗಳು

ಇಂದು ಪ್ರತಿಷ್ಠೆಯ ವಿಷಯವಾಗಿರುವ ಪಾಶ್ಚಾತ್ಯ ಸಿದ್ಧ ಆಹಾರಗಳು ನೋಡಲು ತುಂಬಾ ಆಕರ್ಷಕವಾಗಿರುತ್ತವೆ. ರುಚಿಯಲ್ಲಿಯೂ ಒಂದು ಕೈ ಮೇಲೆಯೇ. ಆದರೆ ಆರೋಗ್ಯದ ವಿಷಯ ಬಂದಾಗ ಮಾತ್ರ ಇವು ಅತಿ ಅಪಾಯಕಾರಿಯಾಗಿವೆ. ಇವುಗಳಿಗೆ ಬಣ್ಣ ಮತ್ತು ರುಚಿ ನೀಡಲು ಸಕ್ಕರೆಯನ್ನು ಸಂಸ್ಕರಿಸಲಾಗುತ್ತದೆ. ಈ ಸಂಸ್ಕರಿಸಿದ ಸಕ್ಕರೆ ದುರ್ವಾಸನೆಯ ಆಗರವಾಗಿದೆ. ಸಿದ್ದ ಆಹಾರಗಳನ್ನು ಸೇವಿಸಿ ಬೆವರು ಸುರಿಯುವವರ ಬಳಿ ಸುಳಿಯಲೂ ಅಸಾಧ್ಯವಾದಷ್ಟು ಮಟ್ಟಿಗೆ ಈ ವಾಸನೆ ದಟ್ಟವಾಗಿರುತ್ತದೆ.

ಮೀನು

ಮೀನು

ಎಲ್ಲಾ ಮೀನುಗಳಿಂದ ಮೈಯಲ್ಲಿ ದುರ್ವಾಸನೆ ಬರುವುದಿಲ್ಲ. ಆದರೆ ಕೋಲಿನ್ (choline) ಎಂಬ ಪೋಷಕಾಂಶವಿರುವ ಸಾಲ್ಮನ್, ಟ್ಯೂನಾಗಳಂತಹ ಮೀನುಗಳನ್ನು ಸೇವಿಸುವ ಮೂಲಕ ಮೈಯಲ್ಲಿ ದುರ್ವಾಸನೆ ಮೂಡುತ್ತದೆ. ಸೋಜಿಗವೆಂದರೆ ಮೀನಿನ ಮೂಲಕ ಸೇವಿಸಲ್ಪಟ್ಟ ಕೋಲಿನ್ ನಿಧಾನವಾಗಿ ಜೀರ್ಣವಾಗುವ ಸ್ವಭಾವ ಹೊಂದಿದ್ದು ಕೆಲವರಲ್ಲಿ ಎರಡು ದಿನಗಳವರೆಗೆ ಈ ವಾಸನೆ ಹೊಮ್ಮುತ್ತಿರುತ್ತದೆ.

ತೂಕ ಕಡಿಮೆ ಮಾಡುವ ಆಹಾರಗಳು

ತೂಕ ಕಡಿಮೆ ಮಾಡುವ ಆಹಾರಗಳು

ತೂಕ ಕಡಿಮೆ ಮಾಡುವ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಹಲವು ಆಹಾರಗಳು ಲಭ್ಯವಿವೆ. ಇವುಗಳಲ್ಲಿ ಕಾರ್ಬೋಹೈಡ್ರೇಟುಗಳು ಅತಿ ಕಡಿಮೆ ಪ್ರಮಾಣದಲ್ಲಿದ್ದು ಜೀವರಾಸಾಯನಿಕ ಕ್ರಿಯೆಗಳಿಗೆ ದೇಶ ಅನಿವಾರ್ಯವಾಗಿ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ.(ಈ ಆಹಾರಗಳ ಉದ್ದೇಶವೂ ಅದೇ). ಆದರೆ ಇದರ ಪರಿಣಾಮವಾಗಿ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗಿ ಬೆವರಿನ ಮೂಲಕ ಹೊರಬರುತ್ತವೆ.ಈ ರಾಸಾಯನಿಕಗಳು ಕೊಂಚ ಕಟುವಾದ ವಾಸನೆ ಹೊಂದಿದ್ದು ಸುತ್ತಲಿನವರಿಗೆ ಮುಜುಗರ ತರಿಸುತ್ತದೆ.

ಮಸಾಲೆಯುಕ್ತ ಆಹಾರಗಳು

ಮಸಾಲೆಯುಕ್ತ ಆಹಾರಗಳು

ನಮ್ಮ ಆಹಾರದಲ್ಲಿ ಸಾಂಬಾರ ಪದಾರ್ಥಗಳು ಹೆಚ್ಚಿದಷ್ಟೂ ಬೆವರಿನ ವಾಸನೆಯ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಇವುಗಳಲ್ಲಿ ಕೆಲವು ಪದಾರ್ಥಗಳಲ್ಲಿರುವ ಸೂಕ್ಷ್ಮ ಕಣಗಳು ಚರ್ಮದ ಸೂಕ್ಷ್ಮ ರಂಧ್ರದ ವ್ಯಾಸದಷ್ಟೇ ಗಾತ್ರ ಇರುವುದರಿಂದ ಚರ್ಮದಲ್ಲಿ ಸಿಕ್ಕಿಹಾಕಿಕೊಂಡು ಹೊರಬರದೇ ಸತತವಾಗಿ ದುರ್ವಾಸನೆ ಮೂಡಿಸುತ್ತಾ ಹೋಗುತ್ತದೆ. ಅಲ್ಲದೇ ಬೆವರಿನ ರಂಧ್ರ ಮುಚ್ಚಿರುವುದರಿಂದ ಒಳಗೆ ಬೆವರು ಗಂಟುಕಟ್ಟಿ ಒತ್ತಡ ಹೆಚ್ಚಾದಾಗ ಒಮ್ಮೆಯೇ ಸಿಡಿದಂತೆ ಹೊರಬಂದು ಯಾವುದೋ ಸಂದರ್ಭದಲ್ಲಿ ಅಪಾರವಾದ ದುರ್ವಾಸನೆಯನ್ನು ಮೂಡಿಸುತ್ತದೆ. (ಪ್ರತಿದಿನ ಸ್ನಾನ ಮಾಡದವರಲ್ಲಿ ಈ ಸಾಧ್ಯತೆ ಹೆಚ್ಚು)

ಶತಾವರಿ

ಶತಾವರಿ

ಆರೋಗ್ಯಕ್ಕೆ ಉತ್ತಮವಾದ ಶತಾವರಿ ಕೆಲವರ ಮೈಯಲ್ಲಿ ಕೊಳೆತ ವಾಸನೆಯನ್ನು ತಂದೊಡ್ಡಬಹುದು. ಇದಕ್ಕೆ ಅನುವಂಶೀಯವಾದ ಕಾರಣವಿರಬಹುದು. ಆದರೆ ಎಲ್ಲರಲ್ಲಿಯೂ ಈ ವಾಸನೆ ಬರುವುದಿಲ್ಲ. ಆದ್ದರಿಂದ ಶತಾವರಿ ಸೇವಿಸಿದ ಮರುದಿನ ನಿಮ್ಮ ಮೈಯಿಂದ ಕೊಳೆತ ವಾಸನೆ ಬಂದಿದ್ದಲ್ಲಿ ಶತಾವರಿಯ ಸೇವನೆಯನ್ನು ಶಾಶ್ವತವಾಗಿ ಮರೆಯುವುದು ಉತ್ತಮ.

ಕೆಲವು ಡೈರಿ ಉತ್ಪನ್ನಗಳು

ಕೆಲವು ಡೈರಿ ಉತ್ಪನ್ನಗಳು

ಅವರಿಗೇನು, ಹಾಲು ಮೊಸರು ಯಥೇಚ್ಛವಾಗಿದೆ, ತಿಂದು ಕೊಬ್ಬಿದ್ದಾರೆ ಎಂದು ಕೆಲವರು ತಮ್ಮ ಮತ್ಸರವನ್ನು ಹೊರಗೆಡವುದನ್ನು ನೋಡಬಹುದು. ಆದರೆ ವಾಸ್ತವವಾಗಿ ಹಾಲು, ಮೊಸರು, ಮಜ್ಜಿಗೆ, ಪೇಡಾಗಳಂತಹ ಡೈರಿ ಉತ್ಪನ್ನಗಳನ್ನು ಒಂದು ಮಿತಿಯಲ್ಲಿಯೇ ಸೇವಿಸಬೇಕು. ಈ ಮಿತಿ ಹೆಚ್ಚಿದರೆ ದೇಹದಲ್ಲಿ hydrogen sulfide ಮತ್ತು methyl mercaptan ಎಂಬ ಎರಡು ರಾಸಾಯನಿಕಗಳ ಪ್ರಮಾಣ ಹೆಚ್ಚುತ್ತದೆ. ಇವು ಬೆವರಿನ ಮೂಲಕ ಹೊರಬಂದಾಗ ಅತಿಯಾದ ದುರ್ವಾಸನೆ ಹೊಂದಿರುತ್ತವೆ. ಆದ್ದರಿಂದ ನಿಮ್ಮ ವೈದ್ಯರು ನಿಗದಿಪಡಿಸಿದ ಪ್ರಮಾಣವನ್ನು ಮೀರದಂತೆ ಡೈರಿ ಉತ್ಪನ್ನಗಳನ್ನು ಸೇವಿಸಿ.

English summary

Foods That Cause Body Odour

Body odour is a problem faced by many and after doing all measures it is still there. Genetics, personal hygiene and overall health can also be important factors to determine your body odour. The sweat on your skin is fermented by bacteria which creates a distinctive odour on your skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more