For Quick Alerts
ALLOW NOTIFICATIONS  
For Daily Alerts

ಆಫೀಸ್ ನಲ್ಲಿ ತಿಂಡಿ ತಿಂದ್ರೆ ದಪ್ಪಗಾಗ್ತೀರಂತೆ!

|
ಆಫೀಸ್ ನಲ್ಲಿ ಬೋರ್ ಹೊಡೆದಾಗಲೆಲ್ಲಾ ಏನಾದರೂ ತಿಂಡಿಯನ್ನ ಬಾಯಿಗೆ ಹಾಕಿಕೊಂಡು ರುಚಿ ನೋಡ್ತೀರಾ? ಹಾಗಾದರೆ ಇನ್ನು ನೀವು ಅದಕ್ಕೆ ಕಡಿವಾಣ ಹಾಕಬೇಕಾದ ಪ್ರಸಂಗ ಬರಬಹುದು.

ಆಫೀಸ್ ನಲ್ಲಿ ಕೂತು ಕುರುಕಲು ತಿಂಡಿಯನ್ನು ಆಗಾಗ್ಗೆ ತಿನ್ನುವುದರಿಂದ ನಿಮ್ಮ ದೇಹದ ತೂಕ ಗೊತ್ತೇ ಆಗದಂತೆ ಹೆಚ್ಚಾಗುತ್ತೆ ಎಂದಿದೆ ಇತ್ತೀಚಿನ ಅಧ್ಯಯನ.

ಚಾಕಲೆಟ್, ಸ್ವೀಟ್, ಕ್ಯಾಂಡಿ ಮುಂತಾದ ಕುರುಕಲು ತಿಂಡಿಗಳ ವಾಸನೆ ಸುಳಿಯುತ್ತಿದ್ದಂತೆ ಅದನ್ನು ತಿನ್ನುವ ಬಯಕೆಯೂ ಹೆಚ್ಚಾಗಿ ಡಯಟ್ ಮರೆತು ಹೆಚ್ಚು ತಿನ್ನಲು ಆರಂಭಿಸುತ್ತೀರ. ಆದರೆ ಈ ಕುರುಕಲು ತಿಂಡಿಗಳನ್ನು ಕೂತಲ್ಲೇ ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಆರಾಮವಾಗಿ ಬಂದು ಸೇರಿಕೊಳ್ಳುತ್ತೆ. ಇದೇ ಕ್ರಮೇಣ ಅಭ್ಯಾಸವಾಗಿ ಈ ಅಭ್ಯಾಸ ದಪ್ಪಗಾಗಲು ದೇಹಕ್ಕೆ ಪ್ರಚೋದನೆ ನೀಡುತ್ತೆ ಎಂದಿದೆ ಅಧ್ಯಯನ.

ಕುರುಕಲು ತಿಂಡಿ ಸೇವಿಸಿದರೆ, ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಿದರೆ ಅದು ಕರಗಿಹೋಗುವುದು ಎಂದು ನೀವೆಂದುಕೊಳ್ಳಬಹುದು. ಆದರೆ ದಿನಕ್ಕೆ 2 ಕ್ಯಾಂಡಿ ತಿಂದರೆ ಒಟ್ಟಾರೆ 480 ಕ್ಯಾಲೋರಿ ಹೆಚ್ಚಾಗುತ್ತೆ. 160 ಪೌಂಡ್ಸ್ ಕರಗಿಸಲು 157 ನಿಮಿಷ ನಡಿಗೆ ಅವಶ್ಯಕವಿದೆ. ಆದರೆ ನೀವು ಆಫೀಸ್ ನಲ್ಲಿದ್ದ ಕಾರಣ ವ್ಯಾಯಾಮಕ್ಕೆ ಸಮಯ ಸಿಗದೆ ತಿಂದು ಹೆಚ್ಚಿಸಿಕೊಂಡ ಕ್ಯಾಲೊರಿ ಕರಗದೆ ಹಾಗೇ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚು ಎಂದಿದೆ ಅಧ್ಯಯನ.

ಅಷ್ಟೇ ಅಲ್ಲ, ನಾಲಗೆ ಇಷ್ಟ ಪಟ್ಟು ತಿನ್ನುವ ಈ ಸಿಹಿ ತಿಂಡಿಗಳು ದೇಹಕ್ಕೆ ಉಪಯುಕ್ತವಲ್ಲ, ಇವು ಬೊಜ್ಜು, ಹೃದಯದ ತೊಂದರೆ, ಮಧುಮೇಹ ಮತ್ತು ಹಲ್ಲಿನ ಸಮಸ್ಯೆಯನ್ನು ತಂದೊಡ್ಡುವ ಡ್ರಗ್ ಇದ್ದಂತೆ ಎಂದು ಸಂಶೋಧನೆ ಎಚ್ಚರಿಸಿದೆ.

English summary

Snacks and Health | Eating Snacks in Office Can lead to Obesity | ತಿಂಡಿ ಮತ್ತು ಆರೋಗ್ಯ | ಆಫೀಸ್ ನಲ್ಲಿ ತಿಂಡಿ ಸೇವನೆ ಬೊಜ್ಜಿಗೆ ದಾರಿ

Eating snacks in office can make you feel relax, but they are not good for your health and may bring obesity problem, a new study says.
Story first published: Friday, September 23, 2011, 16:19 [IST]
X
Desktop Bottom Promotion