For Quick Alerts
ALLOW NOTIFICATIONS  
For Daily Alerts

Year Ender 2022: ಈ ವರ್ಷ ಜನಪ್ರಿಯವಾದ ಟಾಪ್ 5 ತೂಕ ಇಳಿಕೆ ಡಯಟ್‌ಗಳಿವು

|

ಹೆಚ್ಚಾಗುತ್ತಿರುವ ಮೈ ತೂಕ ಬಹುತೇಕ ಜನರ ಸಮಸ್ಯೆಯಾಗಿದೆ. ತೂಕ ಹೆಚ್ಚಾದವರು ತೂಕ ಕಡಿಮೆ ಮಾಡಿಕೊಳ್ಳುವ ಡಯಟ್‌ ಬಗ್ಗೆ ತಿಳಿಯ ಬಯಸುತ್ತಾರೆ, ಕೆಲವೊಂದು ಡಯಟ್‌ ತೂಕ ಇಳಿಕೆಗೆ ತುಂಬಾನೇ ಸಹಕಾರಿ, ಅಲ್ಲದೆ ಈ ಡಯಟ್‌ ಪಾಲಿಸಿದರೆ ಒಟ್ಟು ಮೊತ್ತ ಆರೋಗ್ಯ ಕೂಡ ವೃದ್ಧಿಸುವುದು.

Yearender

2022ರಲ್ಲಿ ತೂಕ ಇಳಿಕೆಗೆ ಜನರು ಈ ಡಯಟ್‌ಗಳ ಬಗ್ಗೆ ತಿಳಿಯಲು ಆಸಕ್ತಿ ತೋರಿಸಿದ್ದಾರೆ ನೋಡಿ:

 1. ಕೀಟೋ ಡಯಟ್: ನಾನ್‌ವೆಜ್‌ ಪ್ರಿಯರಿಗೆ ತೂಕ ಇಳಿಕೆಗೆ ಬೆಸ್ಟ್

1. ಕೀಟೋ ಡಯಟ್: ನಾನ್‌ವೆಜ್‌ ಪ್ರಿಯರಿಗೆ ತೂಕ ಇಳಿಕೆಗೆ ಬೆಸ್ಟ್

ಕೀಟೋ ಡಯಟ್‌ ವಿಶೇಷತೆ ಎಂದರೆ ಇದರಲ್ಲಿ ಕಾರ್ಬ್ಸ್‌ ತಿನ್ನುವ ಬದಲು ಪ್ರೊಟೀನ್ ಹಾಗೂ ಕೊಬ್ಬಿನ ಆಹಾರಗಳನ್ನು ತಿಂದು ಮೈ ಬೊಜ್ಜು ಕರಗಿಸಲಾಗುವುದು.

ಈ ಕೀಟೋ ಡಯಟ್‌ ನಾನ್‌ವೆಜ್‌ ಪ್ರಿಯರಿಗೆ ತುಂಬಾ ಇಷ್ಟವಾಗುವ ತೂಕ ಇಳಿಕೆಯ ಡಯಟ್‌ ಆಗಿದೆ. ಈ ಡಯಟ್‌ ಮಾಡುವುದಾದರೆ ನೀವು ಚಿಕನ್‌ ಹಾಗೂ ಮೀನನ್ನು ಗ್ರಿಲ್ಡ್ ಮಾಡಿ ಸವಿಯುತ್ತಾ ಮೈತೂಕ ಕಡಿಮೆ ಮಾಡಬಹುದು.

ಕೀಟೋ ಡಯಟ್‌ ಬೇಗನೆ ತೂಕ ಕಡಿಮೆ ಮಾಡುವುದರಿಂದ ಕೆಲವೇ ತಿಂಗಳಿನಲ್ಲಿ ನೀವು ಬಯಸಿದ ಮೈ ಮಾಟ ಪಡೆಯಬಹುದು. ಕೀಟೊ ಡಯಟ್ ಪಾಲಿಸುವುದಾದರೆ ಅತ್ಯಂತ ಕಡಿಮೆ ಕಾರ್ಬೋಹೈಡ್ರೇಟ್‌ ಇರುವ ಆಹಾರ ಮಾತ್ರ ತಿನ್ನಬೇಕು. ಈ ಆಹಾರಕ್ರಮದದಲ್ಲಿ ಕಾರ್ಬ್ಸ್ ಕಡಿಮೆ ಮಾಡಿ ಕೊಬ್ಬಿನಂಶದ ಆಹಾರಗಳನ್ನು ಹೆಚ್ಚಾಗಿ ಸೇವಿಸಲಾಗುವುದು.

ಯಾವ ಆಹಾರ ಸೇವನೆ ಮಾಡಬಹುದು?

ಚಿಕನ್, ಮೀನು, ಪನ್ನೀರ್‌, ಸಮುದ್ರಾಹಾರ, ಹೂಕೋಸು, ಬ್ರೊಕೋಲಿ, ಚೀಸ್, ಸೋರೆಕಾಯಿ, ಬೆಣ್ಣೆಹಣ್ಣು, ಮೊಟ್ಟೆಯ ಬಿಳಿ, ತೆಂಗಿನೆಣ್ಣೆ, ಆಲೀವ್ ಎಣ್ಣೆ, ಮೊಸರು, ನಟ್ಸ್, ಬೆಣ್ಣೆ, ಕಾಫಿ ಡಾರ್ಕ್ ಚಾಕಲೇಟ್‌ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಬಹುದು. ಆದರೆ ಅನ್ನ ಮುಂತಾದ ಕಾರ್ಬೋಹೈಡ್ರೇಟ್ಸ್ ಆಹಾರ ಸೇವಿಸುತ್ತಿಲ್ಲ.

ಕೀಟೋ ಡಯಟ್‌ ತೂಕ ಇಳಿಕೆಗೆ ಹೇಗೆ ಸಹಕಾರಿ?

ಸಾಮಾನ್ಯವಾಗಿ ನಾವು ಕಡಿಮೆ ಪ್ರಮಾಣದ ಕಾರ್ಬ್ಸ್ ತಿಂದಾಗ ಲಿವರ್‌ನಲ್ಲಿ ಕೆಟೋನ್ಸ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ದೇಹಕ್ಕೆ ಅಗ್ಯತವಿರುವ ಶಕ್ತಿಯನ್ನು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಿ ಪಡೆದುಕೊಳ್ಳುತ್ತದೆ. ಹೀಗಾಗಿ ಮೈ ಬೊಜ್ಜು ಬೇಗನೆ ಕರಗುತ್ತದೆ.

 2. ಡ್ಯಾಶ್‌ ಡಯಟ್‌ : ಅಧಿಕ ರಕ್ತದೊತ್ತಡ ಇರುವವರಿಗೆ ಈ ಡಯಟ್ ಒಳ್ಳೆಯದು

2. ಡ್ಯಾಶ್‌ ಡಯಟ್‌ : ಅಧಿಕ ರಕ್ತದೊತ್ತಡ ಇರುವವರಿಗೆ ಈ ಡಯಟ್ ಒಳ್ಳೆಯದು

ಅಧಿಕ ರಕ್ತದೊತ್ತಡ ಇರುವವರು ಆಹಾರಕ್ರಮದ ಕಡೆ ಗಮನ ನೀಡಬೇಕು. ಸೋಡಿಯಂ ಕಡಿಮೆ ಸೇವಿಸಿ ಆಹಾರದಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಷ್ಯಿಯಂ ಅಧಿಕವಿರುವ ಆಹಾರ ಸೇವಿಸಿದರೆ ಅಧಿಕ ರಕ್ತದೊತ್ತಡ ನಿಯಂತ್ರಿಸಬಹುದು.

ಡ್ಯಾಶ್‌ ಡಯಟ್‌ನಲ್ಲಿ ಆಹಾರಕ್ರಮ ಹೀಗಿರಲಿ

ತರಕಾರಿಗಳು: ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ತರಕಾರಿಯನ್ನು ಬೇಯಿಸಿ ತಿನ್ನಬಹುದು, ಹಸಿ ತಿನ್ನುವ ತರಕಾರಿಯನ್ನು ಹಾಗೇ ತಿನ್ನಬಹುದು. ಬೆಳ್ಳುಳ್ಳಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

ಹಣ್ಣುಗಳು : ದಿನದಲ್ಲಿ 4 ರಿಂದ 5 ಬಾರಿ ಹಣ್ಣುಗಳನ್ನು ಸೇವಿಸಬೇಕು. ಅರ್ಧ ಕಪ್ ತಾಜಾ ಹಣ್ಣುಗಳನ್ನು ಸೇವಿಸಬೇಕು ಅಥವಾ ಹಣ್ಣಿನ ಜ್ಯೂಸ್ ಸೇವಿಸಿದರೂ ಕೂಡ ಉತ್ತಮ

ಹಾಲಿನ ಉತ್ಪನ್ನಗಳು : ಹಾಲಿನ ಉತ್ಪನ್ನಗಳು ಕೂಡ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ.

ಮಾಂಸ ಸೇವನೆ : ನೀವು ಬಿಪಿ ನಿಯಂತ್ರಣ ಮಾಡಲು ಒಮೆಗಾ 3 ಕೊಬ್ಬಿನಂಶವಿರುವ ಆಹಾರ ಹಾಗೂ ತೆಳು ಮಾಂಸಾಹಾರ ಸೇವಿಸಬಹುದು.

ದ್ವಿದಳ ಧಾನ್ಯಗಳು : ನವಣೆ, ಬಾರ್ಲಿ, ಧಾನ್ಯಗಳು, ಮೊಳಕೆ ಕಾಳುಗಳು ನಿಮ್ಮ ಆಹಾರದಲ್ಲಿ ಇರಲಿ.

ಸೋಡಿಯಂ ಅಧಿಕವಿರುವ ಆಹಾರಗಳು, ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ.

3. ಅಟ್ಕಿನ್ಸ್ ಡಯಟ್: ಈ ಡಯಟ್‌ನಲ್ಲಿ ಹೃದಯದ ಆರೋಗ್ಯಕ್ಕೆ ಒತ್ತು ನೀಡಲಾಗಿದೆ

3. ಅಟ್ಕಿನ್ಸ್ ಡಯಟ್: ಈ ಡಯಟ್‌ನಲ್ಲಿ ಹೃದಯದ ಆರೋಗ್ಯಕ್ಕೆ ಒತ್ತು ನೀಡಲಾಗಿದೆ

ಈ ಡಯಟ್‌ ಪ್ರಕಾರ ಮೈ ತೂಕ ಹೆಚ್ಚಾಗಲು ಕೊಬ್ಬಿನಂಶ ಕಾರಣವಲ್ಲ ಬದಲಿಗೆ ಕಾರ್ಬ್ಸ್ ಕಾರಣವಾಗಿದೆ. ಆದ್ದರಿಂದ ಈ ಡಯಟ್‌ನಲ್ಲಿ ಅಧಿಕಕೊಬ್ಬಿನಂಶ ಸೇವಿಸಬಹುದು ಆದರೆ ಕಾರ್ಬ್ಸ್ ತುಂಬಾ ಕಡಿಮೆ ಸೇವಿಸಬೇಕು. ಈ ಡಯಟ್‌ನಲ್ಲಿ ಕ್ಯಾಲೋರಿ ಅಳತೆ ಮಾಡಬೇಕಾಗಿಲ್ಲ, ಕಾರ್ಬ್ಸ್ ಮಾತ್ರ ಕಡಿಮೆ ಸೇವಿಸಿದರೆ ಸಾಕು.

4. ಡಿಟಾಕ್ಸ್ ಡಯಟ್‌

4. ಡಿಟಾಕ್ಸ್ ಡಯಟ್‌

ದೇಹವನ್ನು ಶುದ್ಧ ಮಾಡಿ ಮೈ ತೂಕ ಕಡಿಮೆ ಮಾಡುವಲ್ಲಿ ಈ ಡಯಟ್‌ ಪರಿಣಾಮಕಾರಿ. ನಮ್ಮ ದೇಹದಲ್ಲಿ ಕಶ್ಮಲಗಳು ಹೆಚ್ಚಾಗುತ್ತಾ ಹೋದಂತೆ ಕಾಯಿಲೆ ಹೆಚ್ಚಾಗುವುದು. ಈ ಡಿಟಾಕ್ಸ್ ಡಯಟ್‌ ದೇಹದ ಕಶ್ಮಲಗಳನ್ನು ಹೊರಹಾಕಿ ದೇಹದ ಅಂಗಾಂಗಗಳ ಆರೋಗ್ಯ ಹೆಚ್ಚಿಸಲು ಸಹಕಾರಿ. ಈ ಡಿಟಾಕ್ಸ್ ಮಾಡುವಾಗ ಫಾಸ್ಟ್‌ಫುಡ್ ಸೇವಿಸುವಂತಿಲ್ಲ. ವಾರಕ್ಕೊಮ್ಮೆ ಅಥವಾ ತಿಂಗಳಿನಲ್ಲಿ ಕೆಲವು ದಿನಗಳು ಡಿಟಾಕ್ಸ್ ಡಯಟ್ ಮಾಡಿ ದೇಹವನ್ನು ಶುದ್ಧ ಮಾಡಿದರೆ ಆರೋಗ್ಯ ವೃದ್ಧಿಸುವುದು.

5. ಮೆಡಿಟೇರಿಯನ್ ಡಯಟ್

5. ಮೆಡಿಟೇರಿಯನ್ ಡಯಟ್

ಮೆಡಿಟರೇನಿಯನ್ ಆಹಾರ ಸೇವನೆ ಮಾಡುವವರು ತೂಕವನ್ನು ನಿಯಂತ್ರಣದಲ್ಲಿರಿಸಿ ಬೊಜ್ಜನ್ನು ಕರಗಿಸಬಹುದು. ಇದು ರಕ್ತದಲ್ಲಿ ಫಾಲಿಪಿನಾಲ್ ಅನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯ ಶಕ್ತಿಯನ್ನು ವೃದ್ಧಿಸುತ್ತದೆ. ಮುಂದಿನ 20-30 ವರ್ಷಗಳಲ್ಲಿ ವಯಸ್ಸಾಗುವವರ ಸಂಖ್ಯೆಯು ಹೆಚ್ಚಾಗುತ್ತದೆ. ಇದರಿಂದ ಈ ಬಗ್ಗೆ ಸಂಶೋಧನೆ ನಡೆಸುವುದು ತುಂಬಾ ಮುಖ್ಯವಾಗುತ್ತದೆ ಎಂದು ಅಧ್ಯಯನವು ಹೇಳಿದೆ.

ಒಳ್ಳೆಯ ಜೀವನ ಶೈಲಿಗಾಗಿ ಮೆಡಿಟರೇನಿಯನ್ ನಂತಹ ಆಹಾರಕ್ರಮವನ್ನು ಅನುಸರಿಸಿಕೊಂಡು ಹೋಗುವುದು ತುಂಬಾ ಮುಖ್ಯ. ಇದರಿಂದ ಅರಿವಿನ ಸಮಸ್ಯೆಯಿಂದ ಉಂಟಾಗುವಂತಹ ಸಾಮಾಜಿಕ ಹಾಗೂ ಆರ್ಥಿಕ ಹೊರೆಯು ಕಡಿಮೆಯಾಗುತ್ತದೆ ಎಂದು ಅಧ್ಯಯನವು ಸಲಹೆ ಮಾಡಿದೆ.

ಮೆಡಿಟೇರಿಯನ್ ಡಯಟ್‌ನಲ್ಲಿ ಕಾರ್ಬ್ಸ್ ತಿನ್ನಬಹುದು, ಪ್ರೊಟೀನ್, ಅಧಿಕ ನಾರಿನಂಶವಿರುವ ಆಹಾರ, ಆರೋಗ್ಯಕರ ಕೊಬ್ಬಿನಂಶವಿರುವ ಆಹಾರ, ಮಸಾಲೆ ಪದಾರ್ಥಗಳನ್ನು ಬಳಸಬಹುದು. ಅಲ್ಲದೆ ಈ ಡಯಟ್‌ನಲ್ಲಿ ನೀವು ಸಾಕಷ್ಟು ನೀರು ಕುಡಿಯಬೇಕೆಂದು ಹೇಳಲಾಗಿದೆ.

ಮಲಗುವ ಸ್ವಲ್ಪ ಮುಂಚೆ ಉಟ ಮಾಡುವುದು, ಬೆಳಗ್ಗೆ ಏನೂ ತಿನ್ನದೇ ಹೋಗುವುದು ಮುಂತಾದ ಅಭ್ಯಾಸ ಮೈ ತೂಕವನ್ನು ಹೆಚ್ಚು ಮಾಡುತ್ತದೆ. ಬೆಳಗ್ಗಿನ ಉಪಾಹಾರ ಚೆನ್ನಾಗಿ ಸೇವಿಸಿ, ನಂತರ ಮಧ್ಯಾಹ್ನ ಹಾಗೂ ರಾತ್ರಿ ಲಘ ಆಹಾರ ಸೇವಿಸಿ. ಇನ್ನು ಮೂರು ಹೊತ್ತು ಆಹಾರ ಸೇವಿಸುವ ಬದಲು ಸ್ವಲ್ಪ-ಸ್ವಲ್ಪ ಆಹಾರದಂತೆ 4-5 ಬಾರಿ ತೆಗೆದುಕೊಳ್ಳಿ. ಉದಾಹರಣೆಗೆ ನೀವು 3 ಚಪಾತಿ ತಿನ್ನುವುದಾದರೆ ಒಂದೂವರೆ ಚಪಾತಿ ತಿಂದು ನಂತರ ಎರಡು ಗಂಟೆ ಬಿಟ್ಟು ಉಳಿದ ಚಪಾತಿ ತಿನ್ನಿ. ಈ ರೀತಿಯ ಆಹಾರಕ್ರಮದಿಂದ ಸಮತೂಕದ ಮೈಕಟ್ಟು ನಿಮ್ಮದಾಗಿಸಿಕೊಳ್ಳಬಹುದು.

English summary

Year ender 2022: These Are The Top Weight Loss Diets In 2022

eople want to know these 5 diet in 2022, read on..
X
Desktop Bottom Promotion