For Quick Alerts
ALLOW NOTIFICATIONS  
For Daily Alerts

2023ರಲ್ಲಿ ನೀವು ಬೆಳಗ್ಗೆ ಹೀಗೆ ಮಾಡಿ, ಬದುಕೇ ಬದಲಾಗುವುದು

|

ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆ ನಿರೀಕ್ಷಿಸುತ್ತಿದ್ದೀರಾ? ಹೊಸ ವರ್ಷದಲ್ಲಿ ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಒಳ್ಳೆಯ ಬದಲಾವಣೆ ಕಾಣಲು ಬಯಸುವುದಾದರೆ ಬೆಳಗ್ಗೆ ಈ ಅಭ್ಯಾಸ ರೂಢಿಸಿ, ನಿಮ್ಮ ಬದುಕಿನಲ್ಲಿ ತುಂಬಾ ಬದಲಾವಣೆಯಾಗುವುದು:

New Year 2023
1. ಒಳ್ಳೆಯ ನಿದ್ದೆ

1. ಒಳ್ಳೆಯ ನಿದ್ದೆ

ನಿದ್ದೆ ತುಂಬಾನೇ ಮುಖ್ಯ, ದಿನದಲ್ಲಿ 8 ತಾಸು ನಿದ್ದೆ ಮಾಡಿ. ನಿದ್ದೆ ಮಾಡುವುದರಲ್ಲಿ ಶಿಸ್ತು ಪಾಲಿಸಿ, ಅಂದ್ರೆ ದಿನಾ ಒಂದೇ ಸಮಯಕ್ಕೆ ನಿದ್ದೆ ಮಾಡಿ, ಆದಷ್ಟು 10 ಗಂಟೆಯ ಒಳಗಡೆ ನಿದ್ದೆ ಮಾಡಲು ಪ್ರಯತ್ನಿಸಿ.

ನಿದ್ದೆ ಸರಿಯಾಗಿ ಮಾಡದಿದ್ದರೆ, ನಿದ್ರಾ ಹೀನತೆ ಸಮಸ್ಯೆಯಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಆದ್ದರಿಂದ ನಿದ್ದೆಗೆ ತುಂಬಾನೇ ಪ್ರಾಮುಖ್ಯತೆ ಕೊಡಬೇಕು. ಮಲಗಲು ಹೋಗುವಾಗ ಮೊಬೈಲ್ ಹಿಡಿದುಕೊಂಡು ಹೋಗಬೇಡಿ, ಮೊಬೈಲ್‌ ಎಲ್ಲಾ ದೂರವಿಟ್ಟು ಮಲಗಲು ಹೋಗಿ. ಮಲಗುವ ಮುಂಚೆ ಒಳ್ಳೆಯ ಪುಸ್ತಕ ಓದಿ ಅಥವಾ ಮ್ಯೂಸಿಕ್ ಕೇಳಿ ಈ ಅಭ್ಯಾಸದಿಂದ ನೆನಪಿನ ಶಕ್ತಿ ಹೆಚ್ಚುವುದು, ಕಣ್ಣಿಗೆ ಚೆನ್ನಾಗಿ ನಿದ್ದೆ ಬರುವುದು.

2. ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡಬೇಡಿ

2. ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡಬೇಡಿ

ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸವಿರುತ್ತದೆ. ಈ ಅಭ್ಯಾಸವನ್ನು ಇಂದೇ ನಿಲ್ಲಿಸಿ, ಬೆಳಗ್ಗೆ ಎದ್ದು ವಾಕಿಂಗ್ ಅಥವಾ ಧ್ಯಾನದ ಕಡೆ ಗಮನ ನೀಡಿ. ನಂತರವಷ್ಟೇ ಮೊಬೈಲ್‌ ನೋಡಿ.

ಫೋನ್ ಡಿಟಾಕ್ಸ್ ಮಾಡಿ:ಅಂದರೆ ಬೆಳಗ್ಗೆ ಎದ್ದ ತಕ್ಷಣ ಫೋನ್‌ ಮಾಡುವುದು, ರಾತ್ರಿ ಮಲಗುವಾಗ ಫೋನ್ ನೋಡುವುದು ಮಾಡಬೇಡಿ, ಹೀಗೆ ಮಾಡಿ ನೋಡಿ ಅದರ ಬದಲಾವಣೆ ನಿಮ್ಮ ಅನುಭವಕ್ಕೆ ಬರುತ್ತದೆ.

3. 15 ನಿಮಿಷ ಧ್ಯಾನ ಮಾಡಿ

3. 15 ನಿಮಿಷ ಧ್ಯಾನ ಮಾಡಿ

ಬೆಳಗ್ಗೆ ಎದ್ದ ಮೇಲೆ 15 ನಿಮಿಷ ಪ್ರಾಣಯಾಮ ಹಾಗೂ ಧ್ಯಾನ ಮಾಡಿ, ಇವು ಮಾನಸಿಕ ಒತ್ತಡ ಹೊರಹಾಕುವುದರ ಜೊತೆಗೆ ಆರೋಗ್ಯ ವೃದ್ಧಿಸುವುದು.

ದಿನಾ ನೀವು 15 ನಿಮಿಷ ಧ್ಯಾನಕ್ಕೆ ಮೀಸಲಿಡಿ, ಇದರಿಂದ ನೀವು ತುಂಬಾನೇ ಪ್ರಯೋಜನ ಪಡೆಯುವಿರಿ. ಮನಸ್ಸು ತುಂಬಾ ಶಾಂತವಾಗಿರುತ್ತದೆ, ಕೋಪವನ್ನು ನಿಯಂತ್ರಿಸಬಹುದು, ಯಾವುದೇ ವಿಷಯದಲ್ಲಿ ಗೊಂದಲವಿಲ್ಲದೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು.

4. ವ್ಯಾಯಾಮ

4. ವ್ಯಾಯಾಮ

ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಿ. ನಿಮಗಿಷ್ವವಾದ ವ್ಯಾಯಾಮ ಮಾಡಿ. ಇದರಿಂದ ದೇಹಕ್ಕೆ, ಮನಸ್ಸಿಗೆ ಒಳ್ಳೆಯದು.

ನಾವು ದೈಹಿಕ ಕೆಲಸ ಮಾಡುವವರಾದರೆ ವ್ಯಾಯಾಮ ಮಾಡದಿದ್ದರೂ ದೇಹಕ್ಕೆ ವ್ಯಾಯಾಮ ಸಿಗುತ್ತದೆ, ಆದರೆ ದೈಹಿಕ ವ್ಯಾಯಾಮ ಕಡಿಮೆ ಇರುವ ಕೆಲಸ ಮಾಡುವವರಾದರೆ ವ್ಯಾಯಾಮದ ಬಗ್ಗೆ ಗಮನ ನೀಡಲೇಬೇಕು. ವ್ಯಾಯಾಮ ಮಾಡುವುದರಿಂದ ಕೊಲೆಸ್ಟ್ರಾಲ್, ಹೃದಯಾಘಾತ, ಮಧುಮೇಹದಂಥ ಸಮಸ್ಯೆ ತಡೆಗಟ್ಟಬಹುದು.

5. ಆರೋಗ್ಯಕರ ಆಹಾರದತ್ತ ಗಮನ ನೀಡಿ

5. ಆರೋಗ್ಯಕರ ಆಹಾರದತ್ತ ಗಮನ ನೀಡಿ

ಹೊಟ್ಟೆ ತುಂಬಿಸಲು ಆಹಾರ ತಿನ್ನುವ ಬದಲಿಗೆ ಪೋಷಕಾಂಶಗಳಿರುವ ಆಹಾರ ನಿಮ್ಮ ಹೊಟ್ಟೆ ತುಂಬಲಿ. ಆದಷ್ಟು ಜಂಕ್‌ ಫುಡ್ಸ್ ಹಾಗೂ ಸಂಸ್ಕರಿಸಿದ ಆಹಾರಗಳಿಂದ ದೂರವಿರಿ.

ನೀವು ತಿನ್ನುವ ಆಹಾರಶೈಲಿಯಂತೆ ಇರುತ್ತದೆ ನಿಮ್ಮ ಆರೋಗ್ಯ. ನೀವು ಪೋಷಕಾಂಶಗಳಿರುವ ಆಹಾರ ಅಧಿಕ ತಿಂದಷ್ಟೂ ಆರೋಗ್ಯ ಚೆನ್ನಾಗಿರುತ್ತದೆ. ನಿಮ್ಮ ಆಹಾರದಲ್ಲಿ ಒಳ್ಳೆಯ ಕೊಬ್ಬಿನಂಶ, ಕಾರ್ಬ್ಸ್, ನಾರಿನಂಶ ಅಧಿಕವಿರಲಿ. ನೀವು ದಿನಾ 2-3 ಬಗೆಯ ಹಣ್ಣುಗಳನ್ನು ತಿನ್ನಿ, ಅದರಲ್ಲೂ ಸೀಸನಲ್ ಹಣ್ಣುಗಳನ್ನು ಸೇವಿಸಿ. ಸೀಸನಲ್ ತರಕಾರಿ, ನಟ್ಸ್‌ ನಿಮ್ಮ ಆಹಾರಕ್ರಮದಲ್ಲಿರಲಿ.

6. ಸಾಕಷ್ಟು ನೀರು ಕುಡಿಯಿರಿ

6. ಸಾಕಷ್ಟು ನೀರು ಕುಡಿಯಿರಿ

ದಿನದಲ್ಲಿ 8 ಲೋಟ ನೀರು ಕುಡಿಯಿರಿ. ನೀರಿಗೆ ಅಶ್ವಗಂಧ ಅಥವಾ ಅರಿಶಿಣ ಸೇರಿಸಿ ಕುಡಿಯಬಹುದು. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿದರೆ ಒಳ್ಳೆಯದು.

ನಿಮಗೆ ಬರೀ ನೀರು ಕುಡಿಯಲು ಬೋರ್ ಅನಿಸಿದರೆ ಹಣ್ಣಿನ ಜ್ಯೂಸ್‌ ಮಾಡಿ ಕುಡಿಯಿರಿ. ಆದರೆ ಹಣ್ಣಿನ ಜ್ಯೂಸ್‌ ಅನ್ನು ಸಕ್ಕರೆ ಹಾಕದೆ ಕುಡಿದರೆ ಆರೋಗ್ಯಕರ.

ಹೀಗೆ ಹೊಸ ವರ್ಷದಲ್ಲಿ ಈ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿದರೆ ಸಾಕು, ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಕಂಡು ಬರುವುದು ನೋಡಿ.

English summary

New Year 2023: These Healthy Habits Change your life

New Year 2023: Practice these healthy habits in the morning for better health, read on....
X
Desktop Bottom Promotion