For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ: ಇಲ್ಲಿದೆ ಸಂಪೂರ್ಣ ಮಾಹಿತಿ

|

ಕೋವಿಡ್ 19 ಲಸಿಕೆಯ ಮೂರನೇ ಹಂತ ಏಪ್ರಿಲ್‌ನಿಂದ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದರೆ ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಆರೋಗ್ಯ ಸಮಸ್ಯೆ ಇರುವ 45 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿತ್ತು.

ಇದೀಗ ಮೂರನೇಯ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಈ ಲಸಿಕೆಯನ್ನು ಆರೋಗ್ಯವಂತರು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವವರು ಕೂಡ ತೆಗೆದುಕೊಳ್ಳಬಹುದು.

ಲಸಿಕೆಗೆ ನೋಂದಣಿ ಮಾಡುವುದುಕೊಳ್ಳುವುದು ಹೇಗೆ?

ಲಸಿಕೆಗೆ ನೋಂದಣಿ ಮಾಡುವುದುಕೊಳ್ಳುವುದು ಹೇಗೆ?

ಆನ್‌ಲೈನ್‌ ಮೂಲಕ ಮಾಡಬಹುದು ಅಥವಾ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಬಹುದು.

ನೀವು ಆನ್‌ಲೈನ್‌ನಲ್ಲಿ ನೋಂದಣಿ ಮಾಡುವುದಾದರೆ cowin.gov.in ವೆಬ್‌ಸೈಟ್ ಅಥವಾ Aarogya Setu appಗೆ ಹೋಗಿ ನೋಂದಣಿ ಮಾಡಬಹುದು (ಇದು iOS ಮತ್ತು Android ಮೊಬೈಲ್ ಸೆಟ್‌ನಲ್ಲಿರುತ್ತದೆ)

ಸೂಚನೆ: ಈ ಆ್ಯಪ್ ಗೂಗಲ್‌ ಪ್ಲೇ ಅಥವಾ ಆ್ಯಪಲ್‌ ಸ್ಟೋರ್‌ಗೆ ಬಿಟ್ಟಿಲ್ಲ, ಆದ್ದರಿಂದ ಒಂದು ವೇಳೆ ಲಸಿಕೆಗೆ ಸಂಬಂಧಿಸಿದ ಆ್ಯಪ್ ಅಲ್ಲಿ ಲಭ್ಯವಿದ್ದರೆ ಅವುಗಳನ್ನು ಡೌನ್‌ಲೋಡ್‌ ಮಾಡಬೇಡಿ, ಏಕೆಂದರೆ ಅವು ನಿಮ್ಮ ಮಾಹಿತಿ ಕದಿಯಬಹುದು).

ಆನ್‌ಲೈನ್ ರಿಜಿಸ್ಟರ್ ಹೇಗೆ?

ಆನ್‌ಲೈನ್ ರಿಜಿಸ್ಟರ್ ಹೇಗೆ?

ಆ್ಯಪ್‌ನಲ್ಲಿ ನೀವು ರಿಜಿಸ್ಟರ್ ಮಾಡುವುದಾದರೆ ನಿಮ್ಮ ಮೊಬೈಲ್‌ ನಂಬರ್ ಕೊಡಬೇಕು ಆಗ ಒನ್‌ಟೈಮ್ ಪಾಸ್‌ವರ್ಡ್ ಬರುತ್ತದೆ, ಅದನ್ನು ನಮೂದಿಸಬೇಕು. ನಂತರ ಐಡಿ ಫೋಟೋ, ಅದರ ನಂಬರ್, ಲಿಂಗ, ವಯಸ್ಸು ನಮೂದಿಸಬೇಕು. ನೀವು ಐಡಿ ಕಾರ್ಡ್ ಆಗಿ ಡ್ರೈವಿಂಗ್ ಲೈಸೆನ್ಸ್, ಆದಾರ್ ಕಾರ್ಡ್, ಪ್ಯಾನ್ ಕಾರ್ಡ್ ಇತರ ಗುರುತಿನ ಕಾರ್ಡ್ ನೀಡಬಹುದು.

ನಂತರ ನೀವು ನಿಮ್ಮ ಪ್ರದೇಶ, ಬ್ಲಾಕ್, ಪಿನ್‌ಕೋಡ್, ನಿಮ್ಮ ಸಮೀಪದ ಲಸಿಕೆ ಕೇಂದ್ರ ಹಾಕಬೇಕು, ನಂತರ ನೀವು ಲಸಿಕೆ ಪಡೆಯುವ ದಿನಾಂಕವನ್ನು ಆಯ್ಕೆ ಮಾಡಬಹುದು. ಒಂದು ಸಲ ರಿಜಿಸ್ಟರ್ ಮಾಡಿದ ಬಳಿಕ ನಿಮ್ಮ ಅಪಾಯಿಂಟ್‌ಮೆಂಟ್‌ ಬೇಕಾದರೆ ರಿಶೆಡ್ಯೂಲ್ ಅಂದ್ರೆ ಮೊದಲು ಆಯ್ಕೆ ಮಾಡಿದ ದಿನಾಂಕ ಸಾಧ್ಯವಾಗದಿದ್ದರೆ ಮತ್ತೊಂದು ದಿನಾಂಕಕ್ಕೆ ಬದಲಾಯಿಸಬಹುದು.

ಸ್ಥಳಕ್ಕೆ ಹೋಗಿ ನೋಂದಣಿ ಮಾಡುವುದಾದರೆ

ನೀವು ಸಮೀಪದ ಲಸಿಕೆ ಕೇಂದ್ರಕ್ಕೆ 3 ಗಂಟೆಯ ಬಳಿಕ ಹೋಗಿ ಅಗ್ಯತವಿರುವ ದಾಖಲೆ ನೀಡಿ ನೋಂದಣಿ ಮಾಡಬಹುದು.

ಎರಡನೇ ಡೋಸ್‌ ಯಾವಾಗ ತೆಗೆದುಕೊಳ್ಳಬೇಕು?

ಎರಡನೇ ಡೋಸ್‌ ಯಾವಾಗ ತೆಗೆದುಕೊಳ್ಳಬೇಕು?

ಕೊರೊನಾ ಲಸಿಕೆಯನ್ನು ಎರಡು ಡೋಸ್‌ನಲ್ಲಿ ತೆಗೆದುಕೊಳ್ಳಬೇಕು. ಮೊದಲ ಡೋಸ್‌ ಪಡೆದ 6 ರಿಂದ 8 ವಾರಗಳ ಬಳಿಕ ಎರಡನೇ ಡೋಸ್‌ ತೆಗೆದುಕೊಳ್ಳಬೇಕು. ಮೊದಲು ಯಾವ ಲಸಿಕೆ ತೆಗೆದುಕೊಂಡಿದ್ದೀರೋ ಅದರ ಎರಡನೇ ಡೋಸ್‌ ಪಡೆದುಕೊಳ್ಳಬೇಕು, ಔಷಧಿ ಬದಲಾಗಬಾರದು.

ಭಾರತದಲ್ಲಿ ಕೊವಾಕ್ಸಿನ್ ಹಾಗೂ ಕೋವಿಡ್ ಶೀಲ್ಡ್ ಎರಡು ಬಗೆಯ ಲಸಿಕೆ ದೊರೆಯುತ್ತಿದ್ದು ಎರಡು ಕೂಡ ಕೊರೊನಾ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ.

ಲಸಿಕೆ ಪಡೆದ ಬಳಿಕ ಕೂಡ ಎಚ್ಚರಿಕೆ ಅಗ್ಯತ:

ಲಸಿಕೆ ಪಡೆದ ಬಳಿಕ ಕೂಡ ಎಚ್ಚರಿಕೆ ಅಗ್ಯತ:

ನೀವು ಲಸಿಕೆ ಪಡೆದ ತಕ್ಷಣ ನಿಮ್ಮ ದೇಹ ಕೊರೊನಾ ತಡೆಗಟ್ಟಲು ಸಮರ್ಥವಾಗುವುದಿಲ್ಲ. ದೇಹಕ್ಕೆ ಆ ಸಾಮರ್ಥ್ಯ ಬರಲು ಕೆಲ ವಾರಗಳು ಬೇಕಾಗುವುದು, ಆದ್ದರಿಂದ ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿ.

English summary

COVID-19 Vaccine For 45 Years and Above Starts April 1: How To Register Via CoWin And Aarogya Setu App In Kannada

COVID-19 Vaccine for 45 years and above starts April 1: how to register via CoWin and Aarogya Setu app in Kannada.
X
Desktop Bottom Promotion