For Quick Alerts
ALLOW NOTIFICATIONS  
For Daily Alerts

ಚೀನಾದಲ್ಲಿ ಕೇಕೆ ಆಗುತ್ತಿರುವ ವೈರಸ್‌ ಭಾರತದಲ್ಲಿಯೂ ಪತ್ತೆ: BF.7 ಕೊರೊನಾ ರೂಪಾಂತರ ಲಕ್ಷಣಗಳೇನು, ತಡೆಗಟ್ಟಲು ಏನು ಮಾಡಬೇಕು?

|

ಚೀನಾದಲ್ಲಿ ಮತ್ತೆ ಕೊರೊನಾದ ಭೀಕರತೆ ಹೆಚ್ಚಾಗಿದೆ, ಇನ್ನು ಕೆಲವೇ ದಿನಗಳಲ್ಲಿ ಶೇ. 60ರಷ್ಟು ಚೀನಾಕ್ಕೆ ಕೊರೊನಾ ಹರಡಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಚೀನಾದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಇತರ ರಾಷ್ಟ್ರಗಳಿಗೆ ಆತಂಕ ಹೆಚ್ಚಾಗಿದೆ, ಭಾರತದಲ್ಲಿ ಚೀನಾದಲ್ಲಿ ಆರ್ಭಟಿಸುತ್ತಿರುವ ಕೊರೊನಾ BF.7 ರೂಪಾತರ 3 ಕೇಸ್‌ಗಳು ಪತ್ತೆಯಾಗಿದೆ.

Suspected case of BF.7 variant found in Gujarat; All you need to know about the new omicron variant BF.7

ಏಕೆ BF.7 ಕೊರೊನಾ ರೂಪಾಂತರ ತುಂಬಾನೇ ಅಪಾಯಕಾರಿಯಾಗಿದೆ, ಇದನ್ನು ತಡೆಗಟ್ಟಲು ನಾವೇನು ಮುನ್ನೆಚ್ಚರಿಕೆವಹಿಸಬೇಕು ಎಂದು ನೋಡೋಣ ಬನ್ನಿ:

BF.7 ಕೊರೊನಾ ರೂಪಾಂತರ

2020ರ ನಂತರ ಹಲವಾರು ಕೊರೊನಾ ರೂಪಾಂತರಗಳು ಬಂದೆವು, ಕೆಲವೊಂದು ಕೊರೊನಾ 1ನೇ, 2ನೇ ಅಲೆಯನ್ನು ಉಂಟು ಮಾಡಿತು ಕೂಡ, ಆದರೆ ಅದಾದ ಬಳಿಕ ಬಂದ ಒಮಿಕ್ರಾನ್‌ ಅಷ್ಟೇ ನು ದೊಡ್ಡ ಪ್ರಭಾವ ಬೀರಿರಲಿಲ್ಲ. ಒಮಿಕ್ರಾನ್‌ನ ಹಲವಾರು ರೂಪಾಂತರಗಳು ಪತ್ತೆಯಾಗಿದ್ದೆವು, ಆದರೆ ಅವುಗಳು ಅಷ್ಟು ಭೀಕರವಾಗಿ ಕಾಡಿರಲಿಲ್ಲ, ಆದರೆ ಒಮಿಕ್ರಾನ್‌ BF.7 ಕೊರೊನಾ ರೂಪಾಂತರ ಜಗತ್ತಿಗೆ ಆತಂಕ ಸೃಷ್ಟಿಸಿದೆ.

ಚೀನಾದಲ್ಲಿ ಕೆಲವೇ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ
ಮಿತಿಮೀರಿದ್ದು ಜನ ಆಸ್ಪತ್ರೆ ಸಿಗದೆ ಪರದಾಡುತ್ತಿದ್ದಾರೆ. ಚೀನಾದಲ್ಲಿ ಮತ್ತೆ ಕೊರೊನಾ ಅಲೆಗೆ ಕಾರಣವಾಗಿರುವುದು ಈ BF.7 ಕೊರೊನಾ ರೂಪಾಂತರ.

ಲಸಿಕೆ ಪಡೆದವರಿಗೂ ಬಾಧಿಸುತ್ತಿದೆ BF.7 ಕೊರೊನಾ ರೂಪಾಂತರ

ಕೊರೊನಾ ರೂಪಾಂತರ ಪ್ರತಿಯೊಬ್ಬರಿಗೂ ಅಪಾಯಕಾರಿಗೆ. ಈ ರೂಪಾಂತರ ಲಸಿಕೆ ಪಡೆಯದವರಲ್ಲಿ ಮಾತ್ರವಲ್ಲ ಲಸಿಕೆ ಪಡೆದವರಲ್ಲೂ ಗಂಭೀರ ಪರಿಣಾಮ ಬೀರುತ್ತಿದೆ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ರೂಪಾಂತಾರ ತುಂಬಾನೇ ಅಪಾಯಕಾರಿಯಾಗಿದೆ.

BF.7 ಕೊರೊನಾ ರೂಪಾಂತರದ ಲಕ್ಷಣಗಳು

ಈ ಕೊರೊನಾ ರೂಪಾಂತರ ಶ್ವಾಸಕೋಶದ ಮೇಲ್ಭಾಗದ ಮೇಲೆ ದಾಳಿ ಮಾಡುತ್ತಿದೆ, ಇದರ ಲಕ್ಷಣಗಳು ಇತರ ಕೊರೊನಾ ವೈರಸ್‌ನ ಲಕ್ಷಣಗಳಂತೆಯೇ ಇದೆ

* ಜ್ವರ
* ಕೆಮ್ಮು
* ಗಂಟಲು ಕೆರೆತ, ನೀವು
ಶೀತ

ಒಬ್ಬರಿಗೆ ಬಂದರೆ 10-18 ಜನರಿಗೆ ಕಾಯಿಲೆ ಹರಡುವುದು

ತಜ್ಞರ ಪ್ರಕಾರ ಈ ವೈರಸ್‌ ಒಬ್ಬರಿಗೆ ಬಂದ್ರೆ 10-18 ಜನರಿಗೆ ಹರಡುವುದು ಎಂದು ಹೇಳಲಾಗುತ್ತಿದೆ. ಚೀನಾದಲ್ಲಿ 3 ತಿಂಗಳಿಗೆ ಸುಮಾರು ಶೇ. 60ರಷ್ಟು ಜನರಿಗೆ ಹರಡಿದೆ. ಒಮಿಕ್ರಾನ್‌ನ ಇತರ ವೈರಸ್‌ಗಳಿಗಿಂತ ತುಂಬಾ ವೇಗವಾಗಿ ಈ ವೈರಸ್‌ ಹರಡುತ್ತಿದೆ.

2019ರಲ್ಲಿ ಉಂಟಾದ ಸ್ಥಿತಿಯೇ ಮರು ಸೃಷ್ಟಿಯಾಗಿದೆ

ಚೀನಾದಲ್ಲಿ 2019 ಡಿಸೆಂಬರ್‌ನಲ್ಲಿ ಕೊರೊನಾ ಹೇಗೆ ಆರ್ಭಟಿಸಿತ್ತೋ ಅದೆ ಪರಿಸ್ಥಿತಿ ಮತ್ತೆ ಬಂದಿದೆ. ಆದ್ದರಿಂದ ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಮತ್ತೆ ವಿಶ್ವಕ್ಕೆ ಕಂಟಕ ಎದುರಾಗಬಹುದು. ಈ ಕಾರಣಕ್ಕೆ ಸರ್ಕಾರ ಹಾಗೂ ಜನ ಸಾಮಾನ್ಯರು ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ.

BF.7 ಕೊರೊನಾ ರೂಪಾಂತರರ ಅಲೆಯಿಂದ 1ಮಿಲಿಯನ್ ಸಾವು ಸಂಭವಿಸಬಹುದು

ಈ ರೂಪಾಂತರ ತುಂಬಾನೇ ಅಪಾಯಕಾರಿಯಾಗಿದ್ದು ಸುಮಾರು 1 ಮಿಲಿಯನ್ ಜನರು ಈ ವೈರಸ್‌ಗೆ ಬಲಿಯಾಗಬಹುದು ಎಂದು ತಜ್ಞರು ಊಹಿಸಿದ್ದಾರೆ.

ಬೂಸ್ಟರ್‌ನಿಂದ ಸಾವಿನ ಅಪಾಯ ತಗ್ಗಿಸಬಹುದು

ತುಂಬಾ ಜನ 3ನೇ ಡೋಸ್ ಅಂದರೆ ಬೂಸ್ಟರ್ ಕೂಡ ಪಡೆದುಕೊಂಡಿದ್ದಾರೆ ಅಂಥವರು ನಾಲ್ಕನೇ ಡೋಸ್‌ ಪಡೆಯಿರಿ, ಇನ್ನೂ ಬೂಸ್ಟರ್ ಪಡೆದುಕೊಳ್ಳದಿದ್ದರೆ ಬೂಸ್ಟರ್ ಪಡೆಯಿರಿ ಎಂದು ತಜ್ಞರು ಹೇಳುತ್ತಿದ್ದಾರೆ.
ಕೊರೊನಾ ನಿಯಮಗಳನ್ನು ಮರೆಯಬೇಡಿ
* ಮತ್ತೆ ಮಾಸ್ಕ್ ಧರಿಸಿ
* ಸ್ಯಾನಿಟೈಸರ್ ಬಳಸಿ
* ಸಾಮಾಜಿಕ ಅಂತರ ಕಾಯ್ದುಕೊಳ್ಳಿ
* ಶೀತ, ಕೆಮ್ಮು, ಜ್ವರ ಈ ಬಗೆಯ ಅನಾರೋಗ್ಯ ಕಂಡು ಬಂದರೆ ಅಂತರ ಕಾಯ್ದುಕೊಳ್ಳಿ.
* ಜನರು ಗುಂಪು ಅಧಿಕವಿರುವ ಕಡೆ ಓಡಾಡಬೇಡಿ

ಉಸಿರಾಟದಲ್ಲಿ ತೊಂದರೆ, ಗೊಂದಲ, ತಲೆಸುತ್ತು, ಮೈಕೈ ನೋವು, ಗಂಟಲು ನೋವು, ಮೂಗು ಕಟ್ಟುವುದು, ವಾಂತಿ, ಬೇಧಿ ಈ ಬಗೆಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಇವರುಗಳು ತುಂಬಾನೇ ಎಚ್ಚರವಹಿಸಬೇಕು

* ಇದುವರೆಗೆ ಒಂದೂ ಲಸಿಕೆ ಪಡೆಯದಿದ್ದರೆ
* ಎರಡು ಡೋಸ್‌ ಪೂರ್ಣವಾಗದಿದದ್ದರೆ
* ಗರ್ಭಿಣಿಯರು
* ಮಕ್ಕಳು
* ರೋಗ ನಿರೋಧಕ ಶಕ್ತಿ ಕಡಿಮೆ ಇರುವ
* ಮಧುಮೇಹಿಗಳು
* ಹೃದಯ ಸಮಸ್ಯೆ ಇರುವವರು
* ಕ್ಯಾನ್ಸರ್‌ ರೋಗಿಗಳು
* ಗರ್ಭಿಣಿಯರು

ಬೂಸ್ಟರ್‌ ಪಡೆದರೆ ಸಾವಿನ ಸಂಖ್ಯೆ ತಗ್ಗಿಸಬಹುದಾಗಿದೆ. ಬೂಸ್ಟರ್‌

ಪಡೆಯುವುದರಿಂದ 3-59 ವರ್ಷದೊಳಗಿನವರಿಗೆ ಕೊರೊನಾವೈರಸ್‌ ಗಂಭೀರ ಪರಿಣಾಮ ಬೀರುವುದನ್ನು ತಡೆಗಟ್ಟಬಹುದು.

ಭಾರತದಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯವಿದೆ ಅಲ್ಲದೆ ಬೂಸ್ಟರ್‌ ಕೂಡ ಲಭ್ಯವಿದೆ. ನೀವು ಲಸಿಕೆ ಪಡೆದಿದ್ದಿರೆ ಬೂಸ್ಟರ್ ಪಡೆಯಿರಿ. ಕೊರೊನಾ ತಡೆಗಟ್ಟಲು ಸರ್ಕಾರ ಮಾತ್ರ ಪ್ರಯತ್ನಿಸಿದರೆ ನಾವು ಕೂಡ ಮುನ್ನೆಚ್ಚರಿಕೆವಹಿಸಬೇಕು. ಈಗಾಗಲೇ ಕೊರೊನಾದಿಂದಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿ ಆಗಿದೆ, ಆದ್ದರಿಂದ ಕೊರೊನಾ ತಡೆಗಟ್ಟಲು ಈ ಮೊದಲು ವಹಿಸಿದಂತೆಯೇ ಮುನ್ನೆಚ್ಚರಿಕೆವಹಿಸಿ, ನಿರ್ಲಕ್ಷ್ಯ ಬೇಡ.

English summary

Suspected case of BF.7 variant found in Gujarat; All you need to know about the new omicron variant BF.7

BF.7 variant: Why this is dangerous, what are the symptoms, how to prevent it?
Story first published: Thursday, December 22, 2022, 18:15 [IST]
X
Desktop Bottom Promotion