Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಒಮಿಕ್ರಾನ್ ರೂಪಾಂತರ ವೈರಸ್‌ನ ಹೊಸ ರೋಗ ಲಕ್ಷಣಗಳಿವು, ಈ ಲಕ್ಷಣಗಳ ಬಗ್ಗೆ ಎಚ್ಚರವಹಿಸಿ
ಬದುಕು ನಿಧಾನಕ್ಕೆ ಹಿಂದಿನ ಸ್ಥಿತಿಗೆ ಮರಳಿದೆ, ವ್ಯಾಪಾರ ವಹಿವಾಟುಗಳು, ಶಾಲಾ ಕಾಲೇಜುಗಳು, ವರ್ಕ್ ಫ್ರಂ ಆಫೀಸ್ ಇವೆಲ್ಲಾ ಪ್ರಾರಂಭವಾದರೂ ಜನರಲ್ಲಿ ಈ ಕೊರೊನಾ ಬಗ್ಗೆ ಚಿಕ್ಕದೊಂದು ಆತಂಕವಿದ್ದೇ ಇದೆ. ಏಕೆಂದರೆ ಈ ಕೊರೊನಾ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಒಮಿಕ್ರನ್ ಹಲವು ರೂಪಾಂತರಗಳು ಪತ್ತೆಯಾಗುತ್ತಿದ್ದು XBB ರೂಪಾಂತರ ತುಂಬಾನೇ ಅಪಾಯಕಾರಿಯಾಗಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಏಕೆಂದರೆ ಇದು ಎರಡು ಡೋಸ್ ಲಸಿಕೆ ತೆಗೆದವರಿಗೂ ಕಂಡು ಬರುವುದು.

ಇದೀಗ 300ಕ್ಕೂ ಅಧಿಕ ಒಮಿಕ್ರಾನ್ ರೂಪಾಂತರಗಳು ಅವುಗಳ ಲಕ್ಷಣಗಳು ಬಹುತೇಕ ಒಂದೇ ರೀತಿ ಎಂದು ಗ್ಲೋಬಲ್ ಹೆಲ್ತ್ ಸ್ಟ್ರಾಟಜಿ ಹೇಳಿದೆ.
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಕೋವಿಡ್ 19 ರೋಗ ಲಕ್ಷಣಗಳಲ್ಲೂ ವ್ಯತ್ಯಾಸ ಕಂಡು ಬಂದಿದೆ. ಚಳಿ ಜ್ವರ, ಮೂಗಿಗೆ ವಾಸನೆ ಸಿಗದಿರುವುದು, ಬಾಯಿಗೆ ಆಹಾರ ರುಚಿಸದೇ ಇರುವುದು, ವಿಪರೀತ ಕೆಮ್ಮು ಇವೆಲ್ಲಾ ಪ್ರಮುಖ ಲಕ್ಷಣಗಳಾಗಿವೆ.
ಇತ್ತೀಚಿನ ದಿನಗಳಲ್ಲಿ ಈ ಕೆಳಗಿನ ಲಕ್ಷಣಗಳೂ ಕಂಡು ಬರುತ್ತಿದ್ದು, ಈ ಲಕ್ಷಣಗಳು ಕಂಡು ಬಂದರೆ ಕೋವಿಡ್ 19 ಪರೀಕ್ಷೆ ಮಾಡಿಸಿ:
ಸಾಮಾನ್ಯವಾಗಿ ಕಂಡು ಬರುತ್ತಿರುವ ಲಕ್ಷಣಗಳು
* ವಿಪರೀತ ಕೆಮ್ಮು
* ತುಂಬಾ ಸುಸ್ತು
* ತಲೆನೋವು
* ಚಳಿಜ್ವರ
* ಮೂಗು ಸೋರುವುದು
* ಗಂಟಲಿನಲ್ಲಿ ಕೆರೆತ
* ಮೈಕೈ ನೋವು
ವಿಶ್ವ ಆರೋಗ್ಯ ಸಮಸ್ಯೆಯ ಪ್ರಕಾರ ಕೋವಿಡ್ 19 ಹೊಸ ರೂಪಾಂತರ ಲಕ್ಷಣಗಳು
* ಶೀತ, ಕೆಮ್ಮು
* ಗಂಟಲು ಕೆರೆತ
* ಜ್ವರ
* ತಲೆನೋವು
* ಸುಸ್ತು
* ಉಸಿರಾಡಲು ಕಷ್ಟ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


