Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮತ್ತೆ ಕಾಡಿದೆ ಕೊರೊನಾ ಆತಂಕ? JN.1 ಕೋವಿಡ್ 19 ಲಕ್ಷಣಗಳೇನು? ತಡೆಗಟ್ಟಲು ಹೇಗೆ ಜಾಗ್ರತೆವಹಿಸಬೇಕು?
ಕೊರೊನಾ ಎಂಬ ಹೆಸರು ನಾವೆಲ್ಲಾ ಮರೀತಾ ಬಂದಿದ್ವಿ... ಈ ಒಂದು ವರ್ಷ ಅಂತೂ ಸ್ವಲ್ಪ ಹಾಯಾಗಿ ಇದ್ವಿ, ಕೊರೊನಾ ಎಂಬ ಮಹಾಮಾರಿ ಕಾಟ ಇನ್ನಿರಲ್ಲ ಎಂದು ಖುಷಿಯಲ್ಲಿರುವಾಗಲೇ ಮತ್ತೆ ಕೊರೊನಾ ಭೀತಿ ಆವರಿಸಿದೆ. 2019ರಲ್ಲಿ ಬಂದಂತೆಯೇ ಈ ವರ್ಷವೂ ಡಿಸೆಂಬರ್‌ನಲ್ಲಿಯೇ ಈ ಭೀತಿ ಶುರುವಾಗಿದೆ.

ಕೊರೊನಾ ರೂಪಾಂತರ JN.1 ಕೋವಿಡ್ 19
ಕೊರೊನಾದ ಹಲವಾರು ರೂಪಾಂತರಗಳನ್ನು ನೋಡಿದ್ದೇವೆ. ಅವುಗಳಲ್ಲಿ ಡೆಲ್ಟಾ ರೂಪಾಂತರ ತುಂಬಾನೇ ನಷ್ಟವನ್ನು ಉಂಟು ಮಾಡಿತು. ಈ ಅವಧಿಯಲ್ಲಿ ಹಲವಾರು ಸಾವು-ನೋವುಗಳು ಉಂಟಾಯಿತು. ಜನರು ಆರ್ಥಿಕವಾಗಿ, ಮಾನಸಿಕವಾಗಿ ತುಂಬಾ ಸಂಕಷ್ಟ ಅನುಭವಿಸಿದರು. 2022ರಿಂದ ಕೊರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಾ ಬಂತು, 2023ರಲ್ಲಿ ನಾವು ಕೊರೊನಾ ಎಂಬ ಸಾಂಕ್ರಾಮಿಕ ರೋಗವನ್ನು ಸಂಪೂರ್ಣ ಮರೆತ್ತಿದ್ವಿ, ಆದರೆ ವರ್ಷ ಕೊನೆಯಲ್ಲಿ ಮತ್ತೆ ಕೊರೊನಾ ಭೀತಿ ಶುರುವಾಗಿದೆ.
JN.1 ಕೋವಿಡ್ 19ನಿಂದ ಭಾರತಕ್ಕೆ ಅಪಾಯವಿದೆಯೇ?
JN.1 ಕೋವಿಡ್ 19 ರೂಪಾಂತಾರ ವಿಶ್ವದೆಲ್ಲಡೆ ಹೆಚ್ಚಾಗುತ್ತಿದೆ. ಹಾಗಾಗಿ ಭಾರತದಲ್ಲಿಯೂ ಕುರಿತು ಎಚ್ಚರಿಕೆವಹಿಸಬೇಕಾಗಿದೆ, ಒಮಿಕ್ರಾನ್‌ನ ರೂಪಾಂತರವಾಗಿರುವ ಈ ಕೋವಿಡ್ ಭಾರತದಲ್ಲಿ ಮತ್ತೊಮ್ಮೆ ಅಪಾಯವನ್ನು ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿರುವುದರಿಮದ ಸರ್ಕಾರ ಹಾಗೂ ಜನರು ಈ ಕುರಿತು ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ.
JN.1 ಕೋವಿಡ್ 19
ಆರೋಗ್ಯ ತಜ್ಞರ ಪ್ರಕಾರ JN.1 ಕೋವಿಡ್ 19 ಲಕ್ಷಣಗಳು
* ಜ್ವರ
* ಕೆಮ್ಮು
* ಸುಸ್ತು
* ಮೂಗು ಕಟ್ಟುವುದು
* ಶೀತ
* ಬೇಧಿ
*ತಲೆನೋವು
ಈ ರೂಪಾಂತರದಲ್ಲಿ ಏನಾದರೂ ವಿಶೇಷ ಲಕ್ಷಣಗಳು ಕಂಡು ಬಂದಿದೆಯೇ?
ಆರೋಗ್ಯ ತಜ್ಞರ ಪ್ರಕಾರ ಇದುವರೆಗೆ ಈ ಕೋವಿಡ್ ರೂಪಾಂತರದಿಂದ ಯಾವುದೇ ಹೊಸ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಈ ಕುರಿತು ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ.
ಕೆಲವರಲ್ಲಿ ಅಲರ್ಜಿ ಸಮಸ್ಯೆ ಕಂಡು ಬರುವುದು, ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೋವಿಡ್ ಪರೀಕ್ಷೆ ಮಾಡಿಸಿ,
ಕೋವಿಡ್ 19 ತಡೆಗಟ್ಟಲು ಏನು ಮಾಡಬೇಕು?
ಕೊರೊನಾವನ್ನು ಹೇಗೆ ನಿಯಂತ್ರಿಸಬೇಕು ಎಂದು ನಮ್ಮೆಲ್ಲರಿಗೂ ಗೊತ್ತಿದೆ. ಹಾಗಾಗಿ ಈ ಬಾರಿ ಕೊರೊನಾ ತಡೆಗಟ್ಟಲು ಈ ಹಿಂದೆ ಮಾಡಿದ ಉಪಾಯಗಳನ್ನೇ ಮಾಡುವುದು ಒಳ್ಳೆಯದು
* ಮಾಸ್ಕ್ ಧರಿಸಿ: ಮತ್ತೆ ಮಾಸ್ಕ್ ಧರಿಸಿ, ಅದರಲ್ಲೂ ಚಳಿಗಾಲ ಜನರು ಗುಂಪಿನಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸಿ, ಡಬಲ್ ಮಾಸ್ಕ್ ಧರಿಸಿ.
* ಸ್ಯಾನಿಟೈಸರ್ ಬಳಸಿ
* ಸಾಧ್ಯವಾದರೆ ಸಾಮಾಜಿಕ ಅಂತರ ಕಾಪಾಡಿಗೊಳ್ಳಿ
* ಅಫೀಸ್‌ನಲ್ಲಿ ಗಎಸಿ ರೂಮ್‌ಗಿಂತ ಗಾಳಿ ಚೆನ್ನಾಗಿ ಓಡಾಡುವಂತೆ ಇದ್ದರೆ ಒಳ್ಳೆಯದು
* ಕೆಮ್ಮು, ಶೀತ, ಜ್ವರವಿದ್ದರೆ ಮನೆಯಲ್ಲಿಯೇ ರೆಸ್ಟ್ ಮಾಡಿ, ಹೊರಗಡೆ ಓಡಾಡಬೇಡಿ. ಮನೆಯಲ್ಲಿಯೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಅಂದರೆ ಮಕ್ಕಳು, ಗರ್ಭಿಣಿ, ವಯಸ್ಸಾದವರು ಇದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಿ.
ಮತ್ತೊಮ್ಮೆ ಕೊರೊನಾ ಸಂಕಷ್ಟಕ್ಕೆ ಒಳಗಾಗುವುದು ಬೇಡ, ದೂರದ ದೇಶಗಳಲ್ಲಿ ಕೊರೊನಾ ಹೆಚ್ಚಾಗುತ್ತಿದೆ, ನಮ್ಮಲ್ಲಿ ಇಲ್ಲ ಎಂಬ ನಿರ್ಲಕ್ಷ್ಯವೂ ಬೇಡ, ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
