Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮತ್ತೆ ಈ ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ: ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸುವಾಗ ಈ ತಪ್ಪು ಮಾಡದಿರಿ
ಮತ್ತೆ ಹೆಚ್ಚಾಗುತ್ತಿದೆ ಕೊರೊನಾ... ಆದರೂ ಜನರು ಇದರತ್ತ ನಿರ್ಲಕ್ಷ್ಯ ತೋರುತ್ತಿದ್ದರೆ. ಒಮ್ಮೆ ಸ್ವಲ್ಪ ನಿರ್ಲಕ್ಷ್ಯ ತೋರಿದ್ದರಿಂದ ಅದರಿಂದಾಗ ನಷ್ಟ ಅಷ್ಟಿಷ್ಟಲ್ಲ ಎಂಬುವುದು ಎಲ್ಲರಿಗೆ ಗೊತ್ತಿದೆ. ಈ ಸಮಯದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ.
ಮುನ್ನೆಚ್ಚರಿಕೆವಹಿಸುವುದರಿಂದ ಯಾವುದೇ ನಷ್ಟವಾಗಲ್ಲ ಅಲ್ಲದೆ ಕೊರೊನಾವನ್ನು ತಡೆಗಟ್ಟಲು ಕೂಡ ಸಾಧ್ಯವಾಗುವುದು, ಆದ್ದರಿಂದ ನಿರ್ಲಕ್ಷ್ಯ ಮಾಡಲೇಬೇಡಿ. ಕೊರೊನಾ ತಡೆಗಟ್ಟಲು ಮೊದಲ ಮುನ್ನೆಚ್ಚರಿಕೆಕ್ರಮವೆಂದರೆ ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದು.

ಈಗಾಗಲೇ ದೇಶದ 3 ರಾಜ್ಯಗಳಲ್ಲಿ ಈಗಾಗಲೇ ಕಡ್ಡಾಯ ಮಾಸ್ಕ್ ಬಂದಿದೆ. ಕೇರಳ, ಪುದುಚೇರಿ, ಹರ್ಯಾಣದಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಗಿದೆ. ಕೊರೊನಾ ತಡೆಗಟ್ಟುವಲ್ಲಿ ಈ ಮಾಸ್ಕ್ ಪ್ರಮುಖ ಪಾತ್ರವಹಿಸುತ್ತದೆ. ಮಾಸ್ಕ್ ಧರಿಸುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು. ಆದರೆ ಕೆಲವರು ಮಾಸ್ಕ್ ಧರಿಸಲು ಸರ್ಕಾರ ಕಡ್ಡಾಯ ಮಾಡಿದೆ ಎಂಬ ಕಾರಣಕ್ಕೆ ಮಾಸ್ಕ್ ಧರಿಸುತ್ತಾರೆ. ಆದರೆ ಮಾಸ್ಕ್ ಧರಿಸುವುದರಿಂದ ಈ ತಪ್ಪುಗಳನ್ನು ಮಾಡಿದರೆ ಕೊರೊನಾ ತಡೆಗಟ್ಟಲು ಸಾಧ್ಯವಿಲ್ಲ:
ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸುವಾಗ ಈ ತಪ್ಪುಗಳನ್ನು ಮಾಡದಿರಿ
* ಮಾಸ್ಕ್ ಸರಿಯಾಗಿ ಧರಿಸದೇ ಇರುವುದು: ಮಾಸ್ಕ್ ಧರಿಸುವಾಗ ಅದು ನಿಮ್ಮ ಮುಖಕ್ಕೆ ಫಿಟ್ ಆಗಿ ನಿಲ್ಲಬೇಕು. ಮಾಸ್ಕ್ ವಿವಿಧ ಸೈಜ್‌ನಲ್ಲಿ ದೊರೆಯಲಿದೆ, ಸಡಿಲವಾದ ಮಾಸ್ಕ್ ಧರಿಸುವುದರಿಂದ ವೈರಾಣುಗಳು ನಮ್ಮ ದೇಹವನ್ನು ಸೇರುತ್ತದೆ. ಆದ್ದರಿಂದ ಮೂಗು ಹಾಗೂ ಬಾಯಿಯನ್ನು ಮುಚ್ಚುವಂತೆ ಮಾಸ್ಕ್ ಧರಿಸಬೇಕು. ಮೂಗಿನ ಕೆಳಗಡೆ ಧರಿಸುವುದು, ಗಲ್ಲದ ಕೆಳಗಡೆ ಹಾಕುವುದು ಮಾಡಿದರೆ ಮಾಸ್ಕ್ ಧರಿಸಿ ಪ್ರಯೋಜನವಿಲ್ಲ.
ಮಾಸ್ಕ್ ಅನ್ನು ಸರಿಯಾಗಿ ತೆಗೆಯದಿರುವುದು
ಶೇ.80ರಷ್ಟು ಜನ ಮಾಸ್ಕ್ ಅನ್ನು ಸರಿಯಾಗಿ ತೆಗೆಯುವುದೇ ಇಲ್ಲ. ಮಾಸ್ಕ್ ಮುಂಭಾಗ ಹಿಡಿದು ತೆಗೆಯುವುದು ಅಥವಾ ಮಾಸ್ಕ್ ತೆಗೆದು ಟೇಬಲ್, ಕಿಟಕಿಯಲ್ಲಿ ಇಡುವುದು ಮಾಡುತ್ತಾರೆ. ಈ ಅಭ್ಯಾಸದಿಂದ ರೋಗಾಣುಗಳು ಹರಡುವ ಸಾಧ್ಯತೆ ಹೆಚ್ಚು. ಸಿಂಗಲ್ ಯೂಸ್ ಮಾಸ್ಕ್ ಅನ್ನು ತುಂಬಾ ಬಳಸುತ್ತಾರೆ. ಈ ತಪ್ಪು ಮಾಡಲೇಬೇಡಿ. ಇದರಿಂದ ಬೇರೆ ಕಾಯಿಲೆ ಬರುವ ಸಾಧ್ಯತೆ ಇದೆ. ನೀವು ಮಾಸ್ಕ್ ಅನ್ನು ತೆಗೆಯುವಾಗ ಕಿವಿಯಿಂದ ತೆಗೆದು ಬಟ್ಟೆಯ ಮಾಸ್ಕ್ ಆದರೆ ಬಿಸಿ ನೀರಿಗೆ ಹಾಕಿ, ಇಲ್ಲದಿದ್ದರೆ ಕಸದ ಬುಟ್ಟಿಗೆ ಹಾಕಿ. ಪ್ರತಿಬಾರಿ ಮಾಸ್ಕ್ ಅನ್ನು ತೊಳೆದು ಧರಿಸಬೇಕು.
ಮಾಸ್ಕ್ ಅನ್ನು ಪದೇ ಪದೇ ಮುಟ್ಟುತ್ತಿರುವುದು
ಮಾಸ್ಕ್ ಅನ್ನು ಪದೇ ಪದೇ ಮುಟ್ಟಬೇಡಿ, ಇದರಿಂದ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚು. ನೀವು ಮಾಸ್ಕ್ ಹಾಕಿದ ಮೇಲೆ ಮುಟ್ಟಲು ಹೋಗಬೇಡಿ, ಕೈ ತೊಳೆದು ಮಾಸ್ಕ್ ಧರಿಸಬೇಕು. ನಂತರ ಮಾಸ್ಕ್ ತೆಗೆದ ಬಳಿಕ ಕೈತೊಳೆಯಬೇಕು. ಮಾಸ್ಕ್ ತೆಗೆಯುವುದು, ಹಾಕುವುದು ಮಾಡಬೇಡಿ.
ಮಾತನಾಡಲು ಮಾಸ್ಕ್ ಧರಿಸಬೇಡಿ
ಪರಿಚಿತರು ಕಂಡ ತಕ್ಷಣ ಮಾಸ್ಕ್ ತೆಗೆದು ಮಾತನಾಡುವ ಅಭ್ಯಾಸ ತುಂಬಾ ಜನರಿಗಿದೆ. ಒಮ್ಮೆ ಮಾಸ್ಕ್ ಧರಿಸಿದ ಮೇಲೆ, ತಿನ್ನುವಾಗ, ಕುಡಿಯುವಾಗ ಮಾತ್ರ ಮಾಸ್ಕ್ ತೆಗೆಯಿರಿ, ಅದರಲ್ಲೂ ಜನರ ಗುಂಪು ಇರುವ ಕಡೆ ತೆಗೆಯಬೇಡಿ. ಈ ಸಮಯದಲ್ಲಿ ಸ್ವಲ್ಪ ಮುನ್ನೆಚ್ಚರಿಕೆವಹಿಸಿ.
ಇತರ ಟಿಪ್ಸ್:
* ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ.
* ಹೊರಗಡೆ ಹೋಗುವಾಗ ಸ್ಯಾನಿಟೈಸರ್ ಹಚ್ಚಿ ತೊಳೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

