For Quick Alerts
ALLOW NOTIFICATIONS  
For Daily Alerts

ಲೆಮನ್‌ ಥೆರಪಿ: ನಿಂಬೆರಸ ಬಳಸಿ ಕೊರೊನಾವೈರಸ್‌ ನಾಶಪಡಿಸಬಹುದೇ?

|

ಚೀನಾದಲ್ಲಿ ಪುನಃ ಕೊರೊನಾದ ಭೀಕರ ಆರ್ಭಟ ಶುರುವಾಗಿದೆ. ಚೀನಾದಲ್ಲಿ ಕೊರೊನಾ ಹೆಚ್ಚಾಗಿರುವುದರಿಂದ ಇತರ ರಾಷ್ಟ್ರಗಳಿಗೆ ಆತಂಕ ಹೆಚ್ಚಾಗಿದೆ, ಕೊರೊನಾ ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕೆಕ್ರಮಗಳನ್ನು ಅನುಸರಿಸುತ್ತಿದೆ.

ಇನ್ನು ಜನರು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಕಡೆ ತುಂಬಾನೇ ಗಮನ ಹರಿಸುತ್ತಿದ್ದಾರೆ. ಅದರಲ್ಲಿ ತುಂಬಾ ಸದ್ದು ಮಾಡುತ್ತಿರುವುದು ಸಿಟ್ರಸ್‌ ಆಹಾರಗಳು ಅದರಲ್ಲೂ ನಿಂಬೆ ಹಣ್ಣು. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ನಿಂಬೆಹಣ್ಣು ಪರಿಣಾಮಕಾರಿ. ಆದರೆ ಲೆಮನ್‌ ಥೆರಪಿ ಕೊರೊನಾ ತಡೆಗಟ್ಟುತ್ತದೆ ಎಂಬ ಸುದ್ದಿ ಹರಡುತ್ತಿದೆ, ಈ ಸುದ್ದಿಯಲ್ಲಿ ಸತ್ಯಾಂಶವಿದೆಯೇ? ಇದಕ್ಕೆ ಏನಾದರೂ ಪುರಾವೆಗಳಿವೆಯೇ? ಎಂಬೆಲ್ಲಾ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ಲೆಮನ್‌ ಥೆರಪಿ ಎಂದರೇನು?

ಲೆಮನ್‌ ಥೆರಪಿ ಎಂದರೇನು?

ಲೆಮನ್‌ ಥೆರಪಿ ಪ್ರಕಾರ ಎರಡು ಹನಿ ನಿಂಬೆರಸವನ್ನು ನಿಮ್ಮ ಮೂಗಿಗೆ ಹಾಕುವುದು. ಇದರಿಂದ ಮೂಗಿನಲ್ಲಿರುವ ಕೊರೊನಾ ಸೋಂಕಾಣುಗಳು ಸಾಯುತ್ತದೆ ಎಂದು ಎಂದು ಹೇಳಲಾಗುವುದು. ಈ ಕುರಿತು ವೀಡಿಯೋಗಳು ಹಾಗೂ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಯಾರಿಗೆ ಶೀತದ ಸಮಸ್ಯೆ ಇದೆಯೋ ಅವರು ಕೂಡ ಈ ರೀತಿ ಮಾಡುವುದರಿಂದ ರಿಲೀಫ್‌ ಪಡೆಯಬಹುದು ಎಂಬ ವೀಡಿಯೋ ಹರಿದಾಡುತ್ತಿದೆ.

PIB ಫ್ಯಾಕ್ಟ್ ಚೆಕ್‌ ಏನು ಹೇಳುತ್ತದೆ?

PIB ಫ್ಯಾಕ್ಟ್ ಚೆಕ್‌ ಏನು ಹೇಳುತ್ತದೆ?

ಈ ರೀತಿ ಹರಿದಾಡುತ್ತಿರುವ ವೀಡಿಯೋದಲ್ಲಿ ಸತ್ಯಾಂಶವಿದೆಯೇ ಎಂದು ಪರೀಕ್ಷಿಸಿದಾಗ ಈ ವೀಡಿಯೋ ಫೇಕ್‌ ಎಂದು PIB ಫ್ಯಾಕ್ಟ್ ಚೆಕ್‌ ಹೇಳಿದೆ.

ನಿಂಬೆರಸದಲ್ಲಿರುವ ಆಮ್ಲ ದೇಹವನ್ನು ಸೇರಿದ ಕೊರೊನಾವೈರಸ್‌ ಕೊಲ್ಲಲ್ಲ

ನಿಂಬೆರಸವನ್ನು ಮೂಗಿಗೆ ಹಾಕಿದರೆ ಅದು ಕೊರೊನಾವೈರಸ್‌ ಕೊಲ್ಲುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕವಾದ ಪುರಾವೆಗಳಿಲ್ಲ.

ನಿಂಬೆರಸಕ್ಕೆ ಅಡುಗೆ ಸೋಡಾ ಬೆರೆಸಿ ಕುಡಿದರೆ ಕೊರೊನಾವೈರಸ್ ನಾಶವಾಗಲ್ಲ

ನಿಂಬೆರಸಕ್ಕೆ ಅಡುಗೆ ಸೋಡಾ ಬೆರೆಸಿ ಕುಡಿದರೆ ಕೊರೊನಾವೈರಸ್ ನಾಶವಾಗಲ್ಲ

ನಿಂಬೆರಸದಲ್ಲಿ pH ಪ್ರಮಾಣ ಹೆಚ್ಚಿಸಿದರೆ ನೋವೆಲ್‌ ಕೊರೊನಾವೈರಸ್‌ ಕೊಲ್ಲುತ್ತದೆ ಎಂಬುವುದು ಸುಳ್ಳು. ಇನ್ನು ಕೆಲವರು ನಿಂಬೆಹಣ್ಣಿನ ಸಿಪ್ಪೆ ನೀರಿಗೆ ಹಾಕಿ ಕುದಿಸಿ ಸ್ಟೀಮ್‌ ತೆಗೆದರೆ ಕೊರೊನಾವೈರಸ್‌ ಸಾಯುತ್ತದೆ ಎಂದು ಹೇಳುತ್ತಾರೆ, ಆದರೆ ಇದಕ್ಕೂ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ನಿಂಬೆಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ನಿಂಬೆಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧ ಶಕ್ತಿ ಹೆಚ್ಚುವುದು. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಕೊರೊನಾ ವೈರಸ್‌ ನಮ್ಮ ದೇಹವನ್ನು ಹೊಕ್ಕರೂ ಗಂಭೀರ ಪರಿಣಾಮ ಬೀರಲ್ಲ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಕೊರೊನಾವೈರಸ್‌ ತುಂಬಾನೇ ಪರಿಣಾಮ ಬೀರುವುದು, ಆದ್ದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುವಲ್ಲಿ ನಿಂಬೆಹಣ್ಣು ಸಹಕಾರಿಯಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆಹಣ್ಣು ಹೇಗೆ ಸೇವಿಸಬೇಕು?

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಂಬೆಹಣ್ಣು ಹೇಗೆ ಸೇವಿಸಬೇಕು?

ಬೆಳಗ್ಗೆ ಬಿಸಿ ನೀರಿಗೆ ಅರ್ಧ ನಿಂಬೆ ರಸ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಪ್ರತಿದಿನ ಹೀಗೆ ಕುಡಿಯುವುದರಿಂದ ಕೆಮ್ಮು, ಶೀತ, ಅಲರ್ಜಿ ಸಮಸ್ಯೆ ಕಡಿಮೆಯಾಗುವುದು. ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಕೂಡ ಈ ಪಾನೀಯಗಿದೆ.

ನಿಂಬೆಹಣ್ಣಿನಿಂದ ಈ ಪ್ರಯೋಜನಗಳಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ

ನಿಂಬೆಹಣ್ಣಿನಿಂದ ಈ ಪ್ರಯೋಜನಗಳಿವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ

1. ನಿಂಬೆಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಇದರಲ್ಲಿರುವ ವಿಟಮಿನ್‌ ಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

2. ತೂಕ ನಿಯಂತ್ರಣಕ್ಕೆ ಸಹಕಾರಿ: ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ತೂಕವನ್ನು ಕೂಡ ನಿಯಂತ್ರಣದಲಲ್ಇಡಬಹುದು.

3. ಕಿಡ್ನಿ ಸ್ಟೋನ್‌ ತಡೆಗಟ್ಟುತ್ತದೆ: ನಿಂಬು ಪಾನೀಯ ಕುಡಿಯುವುದರಿಂದ ಕಿಡ್ನಿಯಲ್ಲಿರುವ ಕಲ್ಲಿನ ಸಮಸ್ಯೆ ಕಡಿಮೆಯಾಗುವುದು.

4. ರಕ್ತಹೀನತೆ ಕಡಿಮೆಯಾಗುತ್ತದೆ: ನಿಂಬು ಒಆನೀಯ ಕುಡಿದರೆ ದೇಹವು ಆಹಾರದಲ್ಲಿನ ಕಬ್ಬಿಣದಂಶ ಚೆನ್ನಾಗಿ ಹೀರಿಕೊಳ್ಳುವುದರಿಂದ ರಕ್ತಹೀನತೆ ಸಮಸ್ಯೆ ಕಡಿಮೆಯಾಗುವುದು.

5. ಕ್ಯಾನ್ಸರ್ ಅಪಾಯ ತಡೆಗಟ್ಟುತ್ತದೆ: ಬಿಸಿ ನೀರಿಗೆ ನಿಂಬೆರಸ ಸೇರಿಸಿದಾಗ ಡಿ ಲೆಮೋನೈನೆ ಎಂಬ ಅಂಶ ದೊರೆಯುತ್ತದೆ, ಇದು ಕ್ಯಾನ್ಸರ್‌ ಕಣಗಳನ್ನು ತಡೆಗಟ್ಟುತ್ತದೆ.

ಅತಿಯಾಗಿ ಸೇವಿಸಬೇಡಿ

ನಿಂಬು ಪಾನೀಯವನ್ನು ಅತಿಯಾಗಿ ತೆಗೆದುಕೊಂಡರೂ ದೇಹದ ಮೇಲೆ ಅಡ್ಡಪರಿಣಾಮ ಉಂಟಾಗುವುದು, ಆದ್ದರಿಂದ ದಿನದಲ್ಲಿ ಒಂದು ಲೋಟ ನಿಂಬು ಪಾನೀಯ ಕುಡಿದರೆ ಸಾಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿಯುವುದು ಬೆಸ್ಟ್.

English summary

What is lemon therapy and is it effective in curing COVID-19, Myth Debunked

Lemon Therapy: Is it effective in curing COVID-19, How to use lemon to increase immunity?
Story first published: Wednesday, December 21, 2022, 15:03 [IST]
X
Desktop Bottom Promotion