Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೇರಳದಲ್ಲಿ 280 ಜನರಿಗೆ ಕೊರೊನಾ, ಕರ್ನಾಟಕದಲ್ಲಿ ನಿರ್ಲಕ್ಷ್ಯ ಮಾಡಿದರೆ ತಪ್ಪಿದ್ದಲ್ಲ ಅಪಾಯ
ಕೊರೊನಾ ಭಾರತಕ್ಕೂ ಬಂದಿದೆ. ಅದರಲ್ಲೂ ಡಿಸೆಂಬರ್ 17ರಷ್ಟರಲ್ಲಿ 312 ಕೇಸ್‌ಗಳು ಪತ್ತೆಯಾಗದ್ದು 280 ಕೇಸ್‌ಗಳು ಕೇರಳದಲ್ಲಿಯೇ ಪತ್ತೆಯಾಗಿರುವುದು ಕರ್ನಾಟಕಕ್ಕೆ ಆತಂಕ ಹೆಚ್ಚಿಸಿದೆ.
ಕರ್ನಾಟಕದ ಗಡಿರಾಜ್ಯ ಕೇರಳ. ಕೇರಳದಲ್ಲಿ ಕೊರೊನಾ ಸೋಂಕು ಕಾಣಿಸಿದೆ ಎಂದ ಮೇಲೆ ಭಾರತಕ್ಕೆ ಹರಡುವ ಸಾಧ್ಯತೆ ಹೆಚ್ಚಿದೆ. ಕೇರಳದಿಂದ ಕರ್ನಾಟಕಕ್ಕೆ, ಕರ್ನಾಟಕದಿಂದ ಕೇರಳಕ್ಕೆ ಸಾವಿರಾರು ಜನರು ಓಡಾಡುತ್ತಿರುತ್ತದೆ. ಅದರಲ್ಲೂ ಮಂಗಳೂರು-ಬೆಂಗಳೂರಿನಲ್ಲಿ ಈ ರೀತಿ ಓಡಾಟ ಅಧಿಕವಿರುತ್ತದೆ, ಹಾಗಾಗಿ ಇನ್ನು ನಿರ್ಲಕ್ಷ್ಯ ಮಾಡಿದರೆ ಎರಡು ವರ್ಷದ ಅಪಾಯ ಮರುಕಳಿಸಬಹುದು ಜಾಗ್ರತೆ!

ನೆನ್ನೆ ದಿನ 24 ಗಂಟೆಗಳಲ್ಲಿ 17,605 ಜನರನ್ನು ಪರೀಕ್ಷೆ ಮಾಡಲಾಯಿತು. ಅದರಲ್ಲಿ 312 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ ಎಂದು ಡಾ. ರಾಜೀವ್ ಜಯದೇವನ್ (co-chairman, National Indian Medical Association Covid force)ಹೇಳಿದ್ದಾರೆ.
ಈಗ ಕಂಡು ಬಂದಿರುವ ಕೊರೊನಾ ಕೇಸ್‌ಗಳಲ್ಲಿ ಲಕ್ಷಣಗಳು ಅಷ್ಟೇನು ಗಂಭೀರವಾಗಿಲ್ಲ
312 ಕೇಸ್‌ಗಳನ್ನು ಪರೀಕ್ಷೆ ಮಾಡಿದಾಗ ಅವರಲ್ಲಿ ರೋಗ ಲಕ್ಷಣಗಳು ಅಷ್ಟೇನು ಗಂಭೀರವಾಗಿಲ್ಲ ಎಂಬುವುದಾಗಿ ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಕೊರೊನಾ ಗಂಭೀರ ಪ್ರಭಾವ ಬೀರುವುದೇ, ಇಲ್ಲವೇ ಎಂದು ಪಿನ್‌ಪಾಯಿಂಟ್ ಮಾಡಿ ಹೇಳುವುದು ಕಷ್ಟು. ಇಲ್ಲಿಂದ ಹೊರ ದೇಶಕ್ಕೆ, ಹೊರದೇಶದಿಂದ ಇಲ್ಲಿಗೆ ಬರುವವರ ಸಂಖ್ಯೆ ಅಧಿಕವಾಗಿದೆ. ಹೊಸದಾಗಿ ಪತ್ತೆಯಾಗಿರುವ JN.1 ಪ್ರಬಾವ ಹೇಗಿರಲಿದೆ ಎಂಬುವುದರ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ ಎಂಬುವುದಾಗಿ ಅವರು ತಿಳಿಸಿದ್ದಾರೆ.
ನಿರ್ಲಕ್ಷ್ಯ ಅಪಾಯ ಹೆಚ್ಚಿಸಬಹುದು
ಈಗೀನ ಕೋವಿಡ್ ಪ್ರಕರಣಗಳನ್ನು ನೋಡುವಾಗ ಕೊರೊನಾ ಪ್ರಾರಂಭದಲ್ಲಿನ ಘಟನೆಗಳೇ ಮರುಕಳಿಸುತ್ತಿದೆ. ಭಾರತದಲ್ಲಿ ಮೊಟ್ಟ ಮೊದಲಿಗೆ ಕೊರೊನಾ ವೈರಸ್ ಕೇರಳದ ಯುವತಿಯಲ್ಲಿ ಕಂಡು ಬಂದಿತ್ತು. JN.1 ರೂಪಾಂತರ ವಿಶ್ವದೆಲ್ಲಡೆ ಹರಡುತ್ತಿರುವಾಗ ಅತೀ ಹೆಚ್ಚಿನ ಪ್ರಕರಣಗಳು ಕೇರಳದಲ್ಲಿ ಕಂಡು ಬಂದಿದೆ. ಇದರಿಂದಾಗಿ ಕರ್ನಾಟಕದಲ್ಲಿರುವವರು ಮುಂಜಾಗ್ರತೆವಹಿಸಬೇಕು.
ಕೋವಿಡ್ ತಡೆಗಟ್ಟಲು ಈ ಮುಂಜಾಗ್ರತೆ ಪಾಲಿಸಿ
ಮಾಸ್ಕ್ ಧರಿಸಿ
ಕೋವಿಡ್ ತಡೆಗಟ್ಟುವಲ್ಲಿ ಮಾಸ್ಕ್ ಪರಿಣಾಮಕಾರಿ ಎಂಬುವುದು ಸಾಬೀತಾಗಿದೆ. ಆದ್ದರಿಂದ ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಿ. ಬಸ್, ಮೆಟ್ರೋ, ಟ್ರೈನ್, ಏರೋಪ್ಲೇನ್‌ನಲ್ಲಿ ಪ್ರಯಾಣ ಮಾಡುವಾಗ ಡಬಲ್ ಮಾಸ್ಕ್ ಧರಿಸಿ.
ಸ್ಯಾನಿಟೈಸರ್ ಬಳಸಿ: ಕೈಗಳನ್ನು ಆಗಾಗ ಸೋಪು ಹಾಕಿ ತೊಳೆಯಿರಿ, ಹೊರಗಡೆ ಓಡಾಡುವಾಗ ಸ್ಯಾನಿಟೈಸರ್ ಬಳಸಿ.
ಬೂಸ್ಟರ್ ತೆಗೆದುಕೊಳ್ಳಿ: ಬೂಸ್ಟರ್ ತೆಗೆದುಕೊಳ್ಳಿ, ಇದು ಕೊರೊನಾ ವಿರುದ್ಧ ಹೋರಾಡಲು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಾಯಿಲೆ ಬಂದರೆ ಬೇರೆಯವರಿಗೆ ಹರಡದಂತೆ ಜಾಗ್ರತೆವಹಿಸಿ
ಜ್ವರ, ಉಸಿರಾಟದ ತೊಂದರೆ, ತಲೆನೋವು ಮುಂತಾದ ಲಕ್ಷಣಗಳು ಕಂಡು ಬಂದರೆ ಐಸೋಲೇಟ್ ಆಗಿ, ಕೋವಿಡ್ ಪರೀಕ್ಷೆ. ಈ ಮೊದಲು ನೀವು ತೆಗೆದುಕೊಂಡಂತೆಯೇ ಈ ಬಾರಿಯೂ ಮುನ್ನೆಚ್ಚರಿಕೆ ವಹಿಸಿದರೆ ಕೊರೊನಾ ತಡೆಗಟ್ಟಬಹುದು. ಅದೇನೂ ದೊಡ್ಡ ಸಮಸ್ಯೆ ತರಲ್ಲ ಎಂದು ನಿರ್ಲಕ್ಷ್ಯ ಮಾಡಲೇಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications