Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಲಸಿಕೆ ಪಡೆದವರಿಗೂ ಹರಡುತ್ತಿದೆ XBB ಒಮಿಕ್ರಾನ್ ರೂಪಾಂತರ, ಇದರ ಲಕ್ಷಣಗಳೇನು?
ಕೊರೊನಾ ಕಾಟ ಸದ್ಯಕ್ಕೆ ದೂರಾಗುವಂತೆ ಕಾಣುತ್ತಿಲ್ಲ, ಬೇರೆ-ಬೇರೆ ರೂಪದಲ್ಲಿ ಇನ್ನೂ ಭಯ ಹುಟ್ಟಿಸುತ್ತಲೇ ಇದೆ. ಒಮಿಕ್ರಾನ್ನ ಹಲವಾರು ರೂಪಾಂತರುಗಳು ಪತ್ತೆಯಾಗಿವೆ, ಆದರೆ ಈ ಎಲ್ಲಾ ರೂಪಾಂತರಗಳಿಗಿಂತ ಈಗ ಬಂದಿರುವ XBB ರೂಪಾಂತರ ತುಂಬಾನೇ ಅಪಾಯಕಾರಿ ಎಂದು ಹೇಳಲಾಗುತ್ತಿದೆ, ಏಕೆಂದರೆ ಲಸಿಕೆ ಪಡೆದವರಿಗೂ ಈ ವೈರಸ್ ತಗುಲುವುದರಿಂದ ಈ ವೈರಸ್ ಮತ್ತೊಂದು ಕೊರೊನಾ ಅಲೆ ಸೃಷ್ಟಿಸುವ ಅಪಾಯವಿದೆ ಎನ್ನುತ್ತಿದ್ದಾರೆ ತಜ್ಞರು.

ಈ ಹೊಸ ರೂಪಾಂತರ ವೇಗವಾಗಿ ಹರಡುತ್ತಿದ್ದು ಇದರ ಲಕ್ಷಣಗಳೇನು ಎಂದು ನೋಡೋಣ:

ವೇಗವಾಗಿ ಹರಡುತ್ತಿದೆ
ಜಗತ್ತಿನಾದ್ಯಂತ ಈ ರೂಪಾಂತರ ತುಂಬಾ ವೇಗವಾಗಿ ಹರಡುತ್ತಿದೆ, ಆದರೆ ಇದರಿಂದ ಜನರಲ್ಲಿ ಗಂಭೀರ ರೋಗ ಲಕ್ಷಣಗಳು ಕಂಡು ಬರುತ್ತಿಲ್ಲ ಅಲ್ಲದೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಕಡಿಮೆ ಇದೆ. ಭಾರತದಲ್ಲಿ ಈ ಕಾಯಿಲೆ ಗಂಭೀರ ಸ್ವರೂಪ ಬೀರುತ್ತಿಲ್ಲ, ಆದರೆ ಅತೀ ಹೆಚ್ಚಿನ ಜನರಿಗೆ ಹರಡುವ ಸಾಧ್ಯತೆ ಇದೆ.

ಲಸಿಕೆ ಪಡೆದವರ ಮೇಲೂ ದಾಳಿ ಮಾಡುತ್ತಿದೆ
ಈ ಒಮಿಕ್ರಾನ್ ರೂಪಾಂತರ ಕೊರೊನಾ ಲಸಿಕೆ ಪಡೆದವರಲ್ಲೂ ಕಂಡು ಬರುತ್ತಿದೆ, ಲಸಿಕೆ ಪಡೆದವರಲ್ಲಿ ರೋಗ ಲಕ್ಷಣದ ತೀವ್ರತೆ ಕಡಿಮೆ ಇದೆ. ಈಗಾಗಲೇ 35 ರಾಷ್ಟ್ರಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ಬಾರತದಲ್ಲಿ ಮೊದಲಿಗೆ ಮಹಾರಾಷ್ಟ್ರದಲ್ಲಿ ಕಂಡು ಬಂತು. 32 ರೋಗಿಗಳಲ್ಲಿ 4 ಜನರಷ್ಟೇ ಆಸ್ಪತ್ರೆಗೆ ದಾಖಲಾಗಬೇಕಾಯಿತು, ಉಳಿದವರು ಮನೆಯಲ್ಲಿಯೇ ಐಸೋಲೇಷನ್‌ನಲ್ಲಿ ಇದ್ದು ಚೇತರಿಸಿಕೊಂಡಿದ್ದಾರೆ.

XBB ಒಮಿಕ್ರಾನ್ ರೂಪಾಂತರ ಲಕ್ಷಣಗಳೇನು?
* ಬೇಧಿ
* ಜ್ವರ
* ಚಳಿ-ಜ್ವರ
* ತಲೆಸುತ್ತು
* ಗಂಟಲು ಕೆರೆತ
* ಉಸಿರಾಡಲು ತೊಂದರೆ
* ವಾಸನೆ , ರುಚಿ ತಿಳಿಯಲ್ಲ

ಕೊರೊನಾ ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸಿ
ಆಹಾರ ಹಾಗೂ ವ್ಯಾಯಾಮದಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಈ ಆಹಾರಗಳನ್ನು ಸೇವಿಸಿ.
ಗ್ರೀನ್ ಟೀ: ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ.
ಮೊಸರು: ಇದರಲ್ಲಿ ಹೊಟ್ಟೆಗೆ ಆರೋಗ್ಯಕರವಾದ ಬ್ಯಾಕ್ಟಿರಿಯಾ ಇರುತ್ತದೆ
ಹಣ್ಣು, ತರಕಾರಿ, ನಟ್ಸ್ ಸೇವಿಸಿ.



Click it and Unblock the Notifications
