Latest Updates
-
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ?
ಹೆಚ್ಚುತ್ತಿರುವ ಕೊರೊನಾ: ಈಗ ಬಂದಿರುವ ಕೊರೊನಾ ರೂಪಾಂತರ JN.1 ಅಪಾಯಕಾರಿಯೇ?
ಕೊರೊನಾ...ಕೊರೊನಾ ಈಗ ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಇದ್ದರದ್ದೇ ಸುದ್ದಿ. ದಿನದಿಂದ ದಿನಕ್ಕೆ ಕೇಸ್‌ಗಳು ಹೆಚ್ಚಾಗುತ್ತಿದೆ, ಕೋವಿಡ್ 19 ರೂಪಾಂತರ JN.1 ವೇಗವಾಗಿ ಹಬ್ಬುತ್ತಿದೆ. ಕೇರಳದಲ್ಲಿ ಕೋವಿಡ್ ಕೇಸ್‌ಗಳು ದಿನದಿಂದ ದಿನಕ್ಕೆ ವೇಗವಾಗಿ ಹಬ್ಬುತ್ತಿದೆ, ಈ ರೂಪಾಂತರ ಅಪಾಯಕಾರಿಯೇ, ಇದರ ಬಗ್ಗೆ ತುಂಬಾನೇ ಮುನ್ನೆಚ್ಚರಿಕೆ ಅಗ್ಯತವಿದೆಯೇ? ಎಂಬುವುದರ ಬಗ್ಗೆ ತಜ್ಞರು ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ:

ಕೋವಿಡ್ ರೂಪಾಂತರ JN.1 ಲಕ್ಷಣಗಳೇನು?
ಇದೀಗ ಕೋವಿಡ್‌ಬಂದಿರುವ ರೋಗಿಗಳಲ್ಲಿ ಈ ಲಕ್ಷಣಗಳು ಕಂಡು ಬರುವುದು:
* ಜ್ವರ, ಶೀತ, ಗಂಟಲು ನೋವು, ತಲೆನೋವು, ಕೆಮ್ಮು, ಮೂಗು ಕಟ್ಟಿದಂತಾಗುವುದು ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಏನಾದರೂ ಇತರ ಲಕ್ಷಣಗಳು ಕಂಡು ಬಂದಿದೆಯೇ?
ಇದುವರೆಗೆ ಯಾವುದೇ ಪ್ರತ್ಯೇಕ ಲಕ್ಷಣಗಳು ಕಂಡುಬಂದಿಲ್ಲ, ಈ ಹಿಂದೆ ಕೋವಿಡ್ ಬಂದಾಗ ಜನರಿಗೆ ಕಾಣಿಸಿಕೊಂಡಂಥ ರೋಗ ಲಕ್ಷಣಗಳೇ ಈ ರೂಪಾಂತರದಲ್ಲಿಯೂ ಕಂಡು ಬರುತ್ತಿದೆ. ಆದರೆ ಕೆಲವರಲ್ಲಿ ಜೀರ್ಣಾಂಗವ್ಯೂಹದ ಸಮಸ್ಯೆಗಳು ಕಂಡು ಬರುತ್ತಿದೆ.
ಈ ರೂಪಾಂತರ ಬಂದ ಮೇಲೆ ಭಾರತದಲ್ಲಿ ಇದುವರೆಗೆ ಎಷ್ಟು ಕೇಸ್‌ಗಳು ಪತ್ತೆಯಾಗಿವೆ?
JN.1 ರೂಪಾಂತರ ಕೋವಿಡ್ ಕೇಸ್‌ಗಳು ಭಾರತದಲ್ಲಿ ಇದೀಗ 1,828 ಜನರಲ್ಲಿ ಪತ್ತೆಯಾಗಿದೆ, ಕೇರಳದಲ್ಲಿ ಕೋವಿಡ್‌ಗೆ 5 ಜನರು ಪ್ರಾಣ ಬಿಟ್ಟಿದ್ದಾರೆ.
ಈ ಹೊಸ ರೂಪಾಂತರ ಅಪಾಯಕಾರಿಯೇ?
* ಸಿಡಿಸಿ ( The Centers for Disease Control and Prevention) ಪ್ರಕಾರ ಇದುವರೆಗೆ ಪತ್ತೆಯಾಗಿರುವ ಕೇಸ್‌ಗಳಿಂದ ನೋಡುವುದಾದರೆ ಈ ರೂಪಾಂತರ ಅಷ್ಟೇನು ಗಂಭೀರವಲ್ಲ ಎಂದು ಹೇಳಲಾಗುವುದು. ಈ ರೂಪಾಂತರದಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.
* ಜನರು ಆತಂಕ ಪಡಬೇಕಾಗಿಲ್ಲ
ಈ ಕೋವಿಡ್ ರೂಪಾಂತರ ಕುರಿತು ಜನರು ಹೆಚ್ಚೇನು ಆತುರಪಡಬೇಕಾಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲಾ ರೀತಿಯ ಮುನ್ನೆಚ್ಚರಿಕೆವಹಿಸಲಾಗಿದೆ ಎಂಬುವುದಾಗಿ ರಾಜ್ಯ ಸರ್ಕರ ಹೇಳಿದೆ.
ಯಾರಿಗೆ ಈ ಕೋವಿಡ್ JN.1 ರೂಪಾಂತರ ಹರಡುವ ಸಾಧ್ಯತೆ ಹೆಚ್ಚು?
ಈ ಮೊದಲು ಯಾರಿಗೆ ಕೊರೊನಾ ಸೋಂಕು ತಗುಲಿತ್ತೋ ಅವರಿಗೆ ಹಾಗೂ ಕೊರೊನಾ ಲಸಿಕೆ ಪಡೆಯದೇ ಇರುವವರಿಗೆ ಹರಡುವ ಸಾಧ್ಯತೆ ಇದೆ. ಆದ್ದರಿಂದ ಕೊರೊನಾ ಲಸಿಕೆ ಪಡೆಯದೇ ಇರುವವರು ಲಸಿಕೆಯನ್ನು ಪಡೆಯಿರಿ, ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುವವರು ಈ ಕುರಿತು ಜಾಗ್ರತೆವಹಿಸಬೇಕಾಗಿದೆ.
ಹಿರಿಯ ನಾಗರಿಕರಿಗೆ ಮಾಸ್ಕ್ ಕಡ್ಡಾಯ ಎಂಬ ಸೂಚನೆ ನೀಡಿದ ರಾಜ್ಯ ಸರ್ಕಾರ
ಹಿರಿಯ ನಾಗರಿಕರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದ್ದರಿಂದ ರಾಜ್ಯ ಸರ್ಕಾರ 60 ವರ್ಷ ಮೇಲ್ಪಟ್ಟವರು ಹೊರಗಡೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಿದೆ. 60 ವರ್ಷ ಮೇಲ್ಪಟ್ಟವರಷ್ಟೇ ಅಲ್ಲ ಈ ಸಮಯದಲ್ಲಿ ಎಲ್ಲರೂ ಮಾಸ್ಕ್ ಧರಿಸಿದರೆ ತುಂಬಾ ಒಳ್ಳೆಯದು.
ಡಾ. ಕೆವಿ ರವಿಯವರ ಸಲಹೆಯೇನು?
ಬೆಂಗಳೂರು ಮೆಡಿಕಲ್ ಕಾಲೇಜ್‌ನ ಮುಖ್ಯಸ್ಥರಾಗಿರುವ ಡಾ. ಕೆ ರವಿಯವರು ' ಆಪತ್ತು ಬಾರದಂತೆ ತಡೆಯಲು ನಾವು ಸಿದ್ಧತೆ ಮಾಡಿಕೊಂಡಿರಬೇಕು, ಈ ಹಿಂದೆ ನಾವು ಸಿದ್ದತೆ ಮಾಡಿಕೊಂಡಿರಲಿಲ್ಲ, ಹೀಗಾಗಿ ತುಂಬಾ ಅನುಭವಿಸಿದ್ದೆವು, ಆದರೆ ಈಗ ಎಲ್ಲಾ ಸಿದ್ಧತೆ ಮಾಡುಕೊಳ್ಳಬೇಕು' ಎಂಬುವುದಾಗಿ ಹೇಳಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications