For Quick Alerts
ALLOW NOTIFICATIONS  
For Daily Alerts

ಭಾರತಕ್ಕೆ BF.7 ಕೊರೊನಾ ರೂಪಾಂತರದ ಭಯವಿಲ್ಲ, ಏಕೆ?

|

ಚೀನಾದಲ್ಲಿ ಕೊರೊನಾ ಆರ್ಭಟ ಎಂಬ ಸುದ್ದಿ ಬರುತ್ತಿದ್ದಂತೆ ಭಾರತ ಸೇರಿ ಇತರ ರಾಷ್ಟ್ರಗಳು ತುಂಬಾನೇ ಅಲರ್ಟ್‌ ಆಗಿವೆ. ಮತ್ತೆ ಮಾಸ್ಕ್ ಧರಿಸುವಂತಾಗಿದೆ. ಜನರು ಕೊರೊನಾ ನಿಯಮಗಳನ್ನು ಪಾಲಿಸುವಂತೆ ಸರ್ಕಾರ ಸೂಚಿಸುತ್ತಿದೆ. ಕೋವಿಡ್‌ ಲಕ್ಷಣಗಳು ಕಂಡು ಬಂದರೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ.

BF.7 ಕೊರೊನಾ ರೂಪಾಂತರ ಭಾರತದ ಮೇಲೆ ಪರಿಣಾಮ ಬೀರುವುದೇ? ಈ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿದೆ ಅಲ್ವೇ? ಇದಕ್ಕೆ ಉತ್ತರ ಸ್ವಲ್ಪ ಸಮಧಾನ ತರುವಂತಿದೆ, ಹೌದು ಭಾರತದಲ್ಲಿ ಈ ಕೊರೊನಾ ರೂಪಾಂತರ ವೈರಸ್‌ ಅಲೆ ಅಷ್ಟಾಗಿ ಇರಲ್ಲ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಕೊರೊನಾ ರೂಪಾಂತರ BF.7 ಅಪಾಯ ಕಡಿಮೆ

ಭಾರತಕ್ಕೆ ಕೊರೊನಾ ರೂಪಾಂತರ BF.7 ಅಪಾಯ ಕಡಿಮೆ

ಬೆಂಗಳೂರಿನ ಟಾಟಾ ಮೆಡಿಕಲ್‌ ಮತ್ತು ಡಯೋಗ್ನಿಷ್ಟಿಕ್‌ನ ವೈರಾಣುಗಳ ತಜ್ಞ ಡಾ. ವಿ ರವಿಯವರು ಹೇಳಿರುವ ಪ್ರಕಾರ BF.7 ರೂಪಾಂತರ ಅಪಾಯ ಕಡಿಮೆ ಇದೆ. ಭಾರತದ ಜನಸಂಖ್ಯೆ ಮೇಲೆ ಈ ವೈರಸ್‌ ತುಂಬಾ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ. ಕೆಲವರಲ್ಲಿ ಚಿಕ್ಕ ಪುಟ್ಟ ಲಕ್ಷಣಗಳು ಕಂಡು ಬರಬಹುದು' ಎಂಬುವುದಾಗಿ ಹೇಳಿದ್ದಾರೆ.

BF.7 ರೂಪಾಂತರ ಮೊದಲಿಗೆ ಗುಜರಾತಿನಲ್ಲಿ ಸೆಪ್ಟೆಂಬರ್‌ನಲ್ಲೇ ಕಂಡು ಬಂತು

BF.7 ರೂಪಾಂತರ ಮೊದಲಿಗೆ ಗುಜರಾತಿನಲ್ಲಿ ಸೆಪ್ಟೆಂಬರ್‌ನಲ್ಲೇ ಕಂಡು ಬಂತು

ಚೀನಾದಲ್ಲಿ ಕೊರೊನಾ ಅಲೆಗೆ ಸೃಷ್ಟಿಸಿದೆ ಎಂದು ಹೇಳಲಾಗುತ್ತಿರುವ BF.7 ಭಾರತದಲ್ಲಿ ಸೆಪ್ಟೆಂಬರ್‌ 17ಕ್ಕೇ ಕಂಡು ಬಂತು. 61 ವರ್ಷದ ಮಹಿಳೆಗೆ ಈ ಸೋಂಕು ಕಂಡು ಬಂದಿತ್ತು. ವಡೋದರಾ ಮುನ್ಸಿಪಾಲ್ ಕಾರ್ಪೋರೇಷನ್ ನೀಡಿರುವ ಮಾಹಿತಿ ಪ್ರಕಾರ ಆ ಮಹಿಳೆ ಸೆಪ್ಟೆಂಬರ್‌ 11ಕ್ಕೆ ಆಸ್ಪತ್ರೆಗೆ ಬಂದಿದ್ದರು. ಅವರಿಗೆ BF.7 ಕೊರೊನಾ ಪಾಸಿಟಿವ್ ಕಂಡು ಬಂತು, ಆಕೆಯ ಪ್ರಾಥಮಿಕ ಸಂಪರ್ಕದಲ್ಲಿ ಇರುವವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.

ಭಾರತದಲ್ಲಿ BF.7 ರೂಪಾಂತರದ ಅಪಾಯವಿಲ್ಲ

ಭಾರತದಲ್ಲಿ BF.7 ರೂಪಾಂತರದ ಅಪಾಯವಿಲ್ಲ

ಭಾರತದಲ್ಲಿ ಕೊರೊನಾ BF.7 ಒಮಿಕ್ರಾನ್‌ ರೂಪಾಂತರ ಯಾವುದೇ ಕೊರೊನಾ ಅಲೆ ಉಂಟು ಮಾಡಲ್ಲ, ಆದ್ದರಿಂದ ಈ ವೈರಸ್‌ ಬಗ್ಗೆ ಭಾರತೀಯರು ಆತಂಕ ಪಡಬೇಕಾಗಿಲ್ಲ ಎಂದು ತಜ್ಞೆ ಹೇಳುತ್ತಿದ್ದಾರೆ. ಭಾರತದ ಶೇ. 99ಷ್ಟು ಜನಸಂಖ್ಯೆ ಕೊರೊನಾ ಲಸಿಕೆ ಪಡೆದಿದೆ. ಅಲ್ಲದೆ ಈ ಹಿಂದೆ ಬಂದಂಥ ರೂಪಾಂತರಗಳಿಂದ ನಮ್ಮ ದೇಹದಲ್ಲಿ ಆ್ಯಂಟಿಬಾಡಿಗಳು ಉತ್ಪತ್ತಿಯಾಗಿರುವುದರಿಂದ ಭಯಪಡಬೇಕಾಗಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.

ಚೀನಾದಲ್ಲಿ BF.7 ಕೊರೊನಾ ಅಲೆ ಸೃಸ್ಟಿಸಿರುವುದೇಕೆ?

ಚೀನಾದಲ್ಲಿ BF.7 ಕೊರೊನಾ ಅಲೆ ಸೃಸ್ಟಿಸಿರುವುದೇಕೆ?

ಚೀನಿಯರು ಕೊರೊನಾ ಲಸಿಕೆ ಪಡೆದಿಲ್ಲ ಅಲ್ಲದೆ ಅವರು ಇತರ ಕೊರೊನಾ ರೂಪಾಂತರಗಳಿಗೆ ತೆರೆದುಕೊಂಡಿಲ್ಲ, ಈ ಕಾರಣದಿಂದಾಗಿ ಚೀನಾದಲ್ಲಿ ಈಗ ಕೊರೊನಾ ಸಂಖ್ಯೆ ಹೆಚ್ಚಾಗಿದೆ.

ಕೊರೊನಾ ಎದುರಿಸಲು ಸಿದ್ಧವಾಗಿರಬೇಕು, ಆತಂಕ ಬೇಡ: ಕೆ ಸುಧಾಕರ್

ಕೊರೊನಾ ಎದುರಿಸಲು ಸಿದ್ಧವಾಗಿರಬೇಕು, ಆತಂಕ ಬೇಡ: ಕೆ ಸುಧಾಕರ್

ನಮ್ಮ ಆರೋಗ್ಯ ಸಚಿವ ಕೆ ಸುಧಾಕರ್ ಅವರು ನಾವು ಕೊರೊನಾ ಎದುರಿಸಲು ಸಿದ್ಧರಾಗಿರಬೇಕು, ಆದರೆ ಆತಂಕ ಪಡಬೇಕಾಗಿಲ್ಲ. 220 ಕೋಟಿ ಜನರು 2 ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ನಮ್ಮಲ್ಲಿ ಅನೇಕರಿಗೆ ಈ ಹಿಂದೆ ಕೊರೊನಾ ಬಂದಿದೆ, ಈ ಎಲ್ಲಾ ಕಾರಣಗಳಿಂದಾಗಿ ಕೊರೊನಾವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಅಲ್ಲದೆ BF.7 ರೂಪಾಂತರ ಸೆಪ್ಟೆಂಬರ್‌ ತಿಂಗಳಿನಲ್ಲಿಯೇ ಭಾರತದಲ್ಲಿ ಪತ್ತೆಯಾದರೂ ಕೇಸ್‌ಗಳು ಅಧಿಕವಾಗಿಲ್ಲ, ಆದ್ದರಿಂದ ಭಾರತದಲ್ಲಿ ಈ ವೈರಸ್‌ ಪ್ರಭಾವ ಬೀರಲು ಸಾಧ್ಯವಿಲ್ಲ' ಎಂಬುವುದಾಗಿ ಹೇಳಿದ್ದಾರೆ.

 ಮುನ್ನೆಚ್ಚರಿಕೆ ಇರಲಿ

ಮುನ್ನೆಚ್ಚರಿಕೆ ಇರಲಿ

BF.7 ರೂಪಾಂತರದ ಅಪಾಯ ಭಾರತಕ್ಕಿಲ್ಲ ಎಂದು ನಿರ್ಲಕ್ಷ್ಯ ಮಾಡಬಾರದು. ಕೊರೊನಾ ನಿಯಮಗಳನ್ನು ಈ ಹಿಂದೆ ಪಾಲಿಸಿದಂತೆಯೇ ಪಾಲಿಸಿದರೆ ಕೊರೊನಾದಿಂದ ಹೆಚ್ಚಿನ ಸುರಕ್ಷಿತ ಸಿಗುವುದು. ಮಾಸ್ಕ್‌ ಧರಿಸಿ, ಅನಗ್ಯತ ಪ್ರಯಾಣ ಮಾಡಬೇಡಿ. ಸಾವರ್ಜನಿಕ ಸ್ಥಳಗಳಲ್ಲಿ ಜನರ ಗುಂಪು ಇರುವ ಕಡೆ ಹೋಗಬೇಡಿ, ಡಬಲ್ ಮಾಸ್ಕ್ ಧರಿಸುವುದು ಸುರಕ್ಷಿತ.

BF.7 ರೂಪಾಂತರದ ಲಕ್ಷಣಗಳು

ಶೀತ

ಗಂಟಲು ನೋವು, ಕೆರೆತ

ಜ್ವರ

ಮೂಗು ಕಟ್ಟುವುದು. ತಲೆಸುತ್ತು

ಸುಸ್ತು

ಬೇಧಿ

ಯಾರು ತುಂಬಾ ಎಚ್ಚರಿಕೆಯಿಂದಿರಬೇಕು?

* ಯಾರಿಗೆ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೋ ಅವರು ಎಚ್ಚರವಹಿಸಬೇಕು.

* ಗರ್ಭಿಣಿಯರು ತುಂಬಾ ಎಚ್ಚರವಹಿಸಬೇಕು.

* ಕ್ಯಾನ್ಸರ್ ಚಿಕಿತ್ಸೆ ಪಡೆಯುವವರು ಹಾಗೂ ಇತರ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು ನಿರ್ಲಕ್ಷ್ಯ ಮಾಡಬೇಡಿ.

ಕೊನೆಯದಾಗಿ ಹೇಳುವುದಾದರೆ ಕೊರೊನಾ ಬಗ್ಗೆ ಆತಂಕ ಪಡಬೇಡಿ, ಪರಿಸ್ಥಿತಿ ಕೆಟ್ಟದಾಗದಿರಲು ಮುನ್ನೆಚ್ಚರಿಕೆವಹಿಸಿ.

English summary

BF.7 Covid outbreak : New variant will not lead to another major wave in India says Experts

BF.7 Covid outbreak: Does it get worry to India, what expert says read on...
Story first published: Monday, December 26, 2022, 12:31 [IST]
X
Desktop Bottom Promotion