Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಕೊರೊನಾಗೆ ಕೇರಳದಲ್ಲಿ 5 ಬಲಿ, ದೇಶದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಆತಂಕ
ಮತ್ತೆ ಕೊರೊನಾ ಭೀತಿ ಶುರುವಾಗಿದೆ, ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹರಡುತ್ತಿರುವ ಸ್ಪೀಡ್ ನೋಡಿದರೆ ಮತ್ತೆ ಈ ಹಿಂದಿನ ಪತಿಸ್ಥಿತಿ ಬರಬಹುದೇ ಎಂಬ ಆತಂಕ ಕಾಡುತ್ತಿದೆ.
JN.1 ಕೋವಿಡ್ ರೂಪಾಂತರ ಹೆಚ್ಚೇನು ಅಪಾಯಕಾರಿ ಅಲ್ಲ ಎಂದು ಭಾವಿಸಲಾಗಿತ್ತು, ಆದರೆ ಈಗಾಗಲೇ 5 ಜನರುJN.1 ಕೋವಿಡ್ ರೂಪಾಂತರಕ್ಕೆ ಬಲಿಯಾಗಿದ್ದಾರೆ. ಭಾನುವಾರ ಮತ್ತೆ 335 ಕೇಸ್ ಪತ್ತೆಯಾಗಿದೆ, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,701ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಕೇರಳದಲ್ಲಿಯೇ 5 ಸಾವು ಸಂಭವಿಸಿದೆ
ಭಾರತದಲ್ಲಿ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯ ಕೇರಳ. ಇಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿರಿ ನಿಯಂತ್ರಣ ಮೀರುತ್ತಿರುವಂತೆ ತೋರುತ್ತಿದೆ. ಕೇರಳದಲ್ಲಿ 5 ಜನರು ಕೋವಿಡ್‌ಗೆ ಬಲಿಯಾಗಿರುವುದು ಆತಂಕ ಹೆಚ್ಚಿಸಿದ್ದು ಕರ್ನಾಟ ಸೇರಿ ಎಲ್ಲಾ ಕಡೆ ಕೊರೊನಾ ಬಗ್ಗೆ ತೀವ್ರ ಕಟ್ಟೆಚ್ಚರವಹಿಸಲು ಮುಂದಾಗಿದೆ.
ಕೊರೊನಾ ಸೋಂಕಿನ ಅಂಕಿಅಂಶ
ಕೊರೊನಾ ಬಂದಾಗಿನಿಂದ ಇಲ್ಲಿಯವರೆಗೆ 4.46 ಕೋಟಿ ಜನರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ, 5,33,316 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಈ ಹಿಂದಿನ ಕೊರೊನಾ ಅಂಕಿಅಂಶ ಹೇಳುತ್ತದೆ.
ಆರೋಗ್ಯ ಇಲಾಖೆ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ , 220.67 ಕೋಟಿ ಜನರು ಕೊರೊನಾ ಲಸಿಕೆ ಪಡೆದಿದ್ದಾರೆ.
JN.1 ಕೊರೊನಾ ರೂಪಾಂತರ
ಈಗ ಕಂಡು ಬಂದಿರುವ ಕೊರೊನಾ ಕೇಸ್‌ಗಳಲ್ಲಿ ಲಕ್ಷಣಗಳು ಅಷ್ಟೇನು ಗಂಭೀರವಾಗಿಲ್ಲ ಎಂದು ಹೇಳಲಾಗುತ್ತಿದೆ. ನೆನ್ನೆ ವರದಿ ಪ್ರಕಾರ 312 ಕೇಸ್‌ಗಳನ್ನು ಪರೀಕ್ಷೆ ಮಾಡಿದಾಗ ಅವರಲ್ಲಿ ರೋಗ ಲಕ್ಷಣಗಳು ಅಷ್ಟೇನು ಗಂಭೀರವಾಗಿಲ್ಲ ಎಂಬುವುದಾಗಿ ಆರೋಗ್ಯ ತಜ್ಞರು ತಿಳಿಸಿದ್ದಾರೆ. ಕೊರೊನಾ ಗಂಭೀರ ಪ್ರಭಾವ ಬೀರುವುದೇ, ಇಲ್ಲವೇ ಎಂದು ಪಿನ್‌ಪಾಯಿಂಟ್ ಮಾಡಿ ಹೇಳುವುದು ಕಷ್ಟ, ಆದ್ದರಿಂದ ಈ ಅವಧಿಯಲ್ಲಿ ಮುಂಜಾಗ್ರತೆಯೇ ಮುಖ್ಯ.
ನಿರ್ಲಕ್ಷ್ಯ ಅಪಾಯ ಹೆಚ್ಚಿಸಬಹುದು ಈಗೀನ ಕೋವಿಡ್ ಪ್ರಕರಣಗಳನ್ನು ನೋಡುವಾಗ ಕೊರೊನಾ ಪ್ರಾರಂಭದಲ್ಲಿನ ಘಟನೆಗಳೇ ಮರುಕಳಿಸುತ್ತಿದೆ. ಭಾರತದಲ್ಲಿ ಮೊಟ್ಟ ಮೊದಲಿಗೆ ಕೊರೊನಾ ವೈರಸ್ ಕೇರಳದ ಯುವತಿಯಲ್ಲಿ ಕಂಡು ಬಂದಿತ್ತು. JN.1 ರೂಪಾಂತರ ವಿಶ್ವದೆಲ್ಲಡೆ ಹರಡುತ್ತಿರುವಾಗ ಅತೀ ಹೆಚ್ಚಿನ ಪ್ರಕರಣಗಳು ಕೇರಳದಲ್ಲಿ ಕಂಡು ಬಂದಿದೆ. ಇದರಿಂದಾಗಿ ಕರ್ನಾಟಕದಲ್ಲಿರುವವರು ಮುಂಜಾಗ್ರತೆವಹಿಸಬೇಕು.
JN.1 ಪ್ರಭಾವ ಹೇಗಿರಲಿದೆ?
ದಿನದಿಂದ ದಿನಕ್ಕೆ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿದೆ, ಆದರೆ ಈ JN.1 ಕೊರೊನಾ ಲಕ್ಷಣಗಳು ಅಷ್ಟೇನು ಗಂಭೀರವಾಗಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುವವರು ಈ ಕುರಿತು ಜಾಗ್ರತೆವಹಿಸಬೇಕು. ನಿರ್ಲಕ್ಷ್ಯ ಅಪಾಯ ಹೆಚ್ಚಿಸಬಹುದು.
ಕರ್ನಾಟಕದ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲಾಗುವುದು
ಎಲ್ಲಾ ಆಸ್ಪತ್ರೆಯಲ್ಲಿ ಬೆಡ್ ಎಷ್ಟಿವೆ, ಐಸಿಯು ಬೆಡ್‌ಗಳು ಎಷ್ಟಿವೆ, ಆಕ್ಸಿಜನ್ ಲಭ್ಯತೆ ಇದೆಯೇ, ಮೆಡಿಕಲ್ ಸಪ್ಲೈ ಇದೆಯೇ ಈ ಕುರಿತು ಪರಿಶೀಲನೆ ಮಾಡಲಾಗುವುದು.
ಇದು ಎಚ್ಚರಿಕೆಯಲ್ಲ, ಸಿದ್ಧತೆ ಅಷ್ಟೇ, ಕೊರೊನಾ ಸಮಯದಲ್ಲಿ ನಾವು ಎಲ್ಲಾ ರೀತಿಯಲ್ಲಿಯೂ ಸಿದ್ಧರಾಗಿರಬೇಕು ಎಂದು ದಿನೇಶ್ ಗುಂಡು ರಾವ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ ನಿರ್ಬಂಧಗಳು ಬರಲಿದೆಯೇ?
ಕೊರೊನಾ ಕೇಸ್‌ಗಳು ಬೇರೆಡೆ ಹೆಚ್ಚಾಗುತ್ತಿರುವುದರಿಂದ ಕರ್ನಾಟಕವೂ ಎಚ್ಚರಿಕೆವಹಿಸುತ್ತಿದೆ. ಮಂಗಳವಾರ ಕೋವಿಡ್ ತಾಂತ್ರಿಕ ಸಲಹಾ ಸಮಿ ಜೊತೆ ಚರ್ಚೆ ನಡೆಸಿ ಕೊರೊನಾ ತಡೆಗಟ್ಟಲು ಏನು ಮಾಡಬೇಕು ಎಂಬುವುದರ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು.
ಭಯಬೇಡ, ಎಚ್ಚರಿಕೆವಹಿಸಿ
ಕೊರೊನಾ ಹೆಚ್ಚಾಗುತ್ತಿದೆ ನಿಜ ಹಾಗಂತ ಭಯ ಪಡಬೇಡಿ, ತುಂಬಾ ಎಚ್ಚರಿಕೆವಹಿಸಿ. ಆದ್ದರಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
