For Quick Alerts
ALLOW NOTIFICATIONS  
For Daily Alerts

ಆರೋಗ್ಯಕರವಾಗಿ ತೂಕ ಇಳಿಕೆಯಾಗಬೇಕೆ? ಡಯಟ್‌ನ ಈ ರಹಸ್ಯ ತಿಳಿದಿರಲೇಬೇಕು

|

ದಪ್ಪ ಇರುವವರಿಗೆ ತೆಳುವಾಗಬೇಕು, ತೆಳು ಇರುವವರಿಗೆ ದಪ್ಪವಾಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯ ಮತ್ತು ದೇಹಸ್ಥಿತಿ ಉತ್ತಮವಾಗಿರಬೇಕು ಎಂದು ಬಯಸುತ್ತಾರೆ. ಆರೋಗ್ಯ ಚೆನ್ನಾಗಿರಬೇಕು ಎಂದರೆ ಆಹಾರ ಚೆನ್ನಾಗಿರಬೇಕು. ಆಹಾರ ಚೆನ್ನಾಗಿರಬೇಕು ಎಂದರೆ ನಾವು ನಮ್ಮ ಆಹಾರದ ಆಯ್ಕೆಯ ಬಗ್ಗೆ ಸರಿಯಾದ ಜ್ಞಾನ ಹೊಂದಿರಬೇಕು. ನಮ್ಮ ದೇಹ ಬಯಸುವುದೇನು, ಎಷ್ಟು ಬಯಸುತ್ತದೆ, ಯಾವಾಗ ಬಯಸುತ್ತದೆ, ಯಾಕೆ ಬಯಸುತ್ತದೆ, ಹೇಗೆ ಬಯಸುತ್ತದೆ ಇತ್ಯಾದಿ ಎಲ್ಲಾ ಪ್ರಶ್ನೆಗಳಿಗೂ ಕೂಡ ಉತ್ತರ ತಿಳಿದಿರಬೇಕು.

ಫಾಸ್ಟ್ ಫುಡ್ ತ್ಯಜಿಸಬೇಕು, ತಾಜಾ ಆಹಾರ ಪದಾರ್ಥಗಳನ್ನೇ ಸೇವಿಸಬೇಕು, ಹಣ್ಣು ತರಕಾರಿಗಳಿಗೆ ಮಹತ್ವ ನೀಡಬೇಕು ಇತ್ಯಾದಿ ಎಲ್ಲವೂ ಸಿಗುತ್ತದೆ. ಆದರೆ ಸುಸ್ಥಿರ ಆಹಾರ ಪದ್ದತಿಯ ಪರಿಕಲ್ಪನೆಯನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ. ಆಹಾರ ಸೇವನೆ ಬಗ್ಗೆ ಮಾತ್ರವಲ್ಲ ಆಹಾರ ಹಾಳಾಗುವ ಬಗ್ಗೆಯೂ ಕೂಡ ಗಮನ ಹರಿಸಬೇಕಾಗಿರುವುದು ಬಹಳ ಮುಖ್ಯ.

ಆಹಾರದ ಕೊರತೆ, ಆಹಾರದ ಪೌಷ್ಟಿಕಾಂಶದ ಮೇಲಿನ ಗಮನ,ಪರಿಸರದ ಮೇಲಿನ ಪರಿಣಾಮಗಳು ಇತ್ಯಾದಿ ಹಲವು ವಿಚಾರಗಳು ಸುಸ್ಥಿರ ಆಹಾರದ ಪರಿಕಲ್ಪನೆಯಲ್ಲಿ ಬರುತ್ತದೆ.ನ್ಯೂಟ್ರಿಯಾಲ್ ಡಯಟ್ ಕ್ಲಿನಿಕ್, ಕ್ಲಿನಿಕಲ್ ನ್ಯೂಟ್ರಿಷನಿಸ್ಟ್, ಲೈಫ್‌ಸ್ಟೈಲ್ ಥೆರಪಿಸ್ಟ್ ಆಗಿರುವ ಡಾ. ಅಲಿಫಿಯಾ ಎಸ್ ಭೋಲ್ ಅವರು ಸುಸ್ಥಿರ ಆಹಾರ ಮತ್ತು ಅದು ತೂಕ ಇಳಿಕೆಯಲ್ಲಿ ಮಾಡುವ ಮಹತ್ವದ ಪರಿಣಾಮದ ಬಗ್ಗೆ ಗಮನ ಹರಿಸಿದ್ದಾರೆ.

ನಮ್ಮ ನಡೆಗಳು ಮುಂದಿನ ಭವಿಷ್ಯವಾಗಿರುತ್ತದೆ. ಆಹಾರ ವ್ಯವಸ್ಥೆಯಲ್ಲಿ ನಾವು ಎದುರಿಸಬೇಕಾಗಿರುವ ಮತ್ತು ಎದುರಿಸುತ್ತಿರುವ ಸಮಸ್ಯೆಗಳು ಹಲವು ಇವೆ. ಉತ್ತಮ ಆಹಾರವು ಪರಿಸರದ ಮೇಲಾಗುವ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಭವಿಷ್ಯದ ಪೀಳಿಗೆಯನ್ನು ಉಳಿಸುತ್ತದೆ. ಡಬ್ಲ್ಯೂ ಹೆಚ್ಓ ಪ್ರಕಾರ ಆಹಾರ ಉತ್ಪಾದನೆಯು ಜಾಗತಿಕ ಹಸಿರು ಮನೆ ಅನಿಲ ಹೊರಸೂಸುವಿಕೆಯ 20% -30% ಮತ್ತು ನೀರಿನ ಬಳಕೆಯ 66% ವರೆಗೆ ಇರುತ್ತದೆ. ಅಂದರೆ ನಮ್ಮ ಆಹಾರ ಕ್ರಮವು ಆರೋಗ್ಯ ಮಾತ್ರವಲ್ಲದೆ ಪರಿಸರದ ಮೇಲೂ ಕೂಡ ಪರಿಣಾಮ ಮಾಡುತ್ತಿರುತ್ತದೆ.

ಹಾಗಾದ್ರೆ ಸುಸ್ಥಿರ ಆಹಾರ ಎಂದರೆ ಏನು?

ಹಾಗಾದ್ರೆ ಸುಸ್ಥಿರ ಆಹಾರ ಎಂದರೆ ಏನು?

ಸುಸ್ಥಿರ ಆಹಾರದಲ್ಲಿ ಏನೆಲ್ಲಾ ಇರುತ್ತದೆ? ತರಕಾರಿಗಳು,ಹಣ್ಣುಗಳು,ಧಾನ್ಯಗಳು,ಬೀಜಗಳು, ಮಾಂಸ,ಸಂಸ್ಕರಿಸಿದ ಆಹಾರಗಳು. ಸಂಸ್ಕರಿಸಿದ ಆಹಾರಗಳು ಇತ್ಯಾದಿಗಳು ಸೇರಿರುತ್ತದೆ.ಸ್ಥಳೀಯ,ಆರ್ಥಿಕ ಮತ್ತು ನೈಸರ್ಗಿಕವಾಗಿ ದೊರೆಯಬಹುದಾದ ಎಲ್ಲಾ ಆಹಾರ ಮೂಲಗಳು ಇದರಲ್ಲಿ ಒಳಗೊಂಡಿರುತ್ತದೆ . ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಸಸ್ಯ ಆಧಾರಿತ ಆಹಾರದ ಮಹತ್ವವನ್ನು ತಿಳಿಸುವ ಸಾಕಷ್ಟು ಸಾಹಿತ್ಯ ಇದರಲ್ಲಿದೆ. ಉದಾಹರಣೆಗೆ ಪ್ರಾಣಿಗಳ ಪ್ರೋಟೀನ್ ಕಡಿಮೆಯಾಗುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ, ಹೀಗಾಗಿ ಅಧಿಕ ರಕ್ತದೊತ್ತಡ, ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಇತ್ಯಾದಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಸ್ಥಳೀಯ ಆಹಾರ ಹೆಚ್ಚು ಸೇವಿಸಿ

ಸ್ಥಳೀಯ ಆಹಾರ ಹೆಚ್ಚು ಸೇವಿಸಿ

ಸ್ಥಳೀಯವಾಗಿ ದೊರೆಯುವ ಆಹಾರಗಳು ಯಾವಾಗಲೂ ಕೂಡ ಹೆಚ್ಚು ಪೌಷ್ಠಿಕಾಂಶ ಹೊಂದಿರುತ್ತದೆ ಮತ್ತು ತಾಜಾತನದಿಂದ ಕೂಡಿರುತ್ತದೆ. ಹಾಗಾಗಿ ಪ್ಯಾಕ್ ಆಗಿರುವ ಆಹಾರ ಪದಾರ್ಥಗಳ ಸೇವನೆ ಅಷ್ಟು ಒಳ್ಳೆಯದಲ್ಲ. ಒಂದು ಉದಾಹರಣೆ ಹೇಳುತ್ತೇವೆ ಕೇಳಿ. ದಕ್ಷಿಣ ಭಾರತದ ಮಹಿಳೆಯೊಬ್ಬರು ತಮಗೆ ಮಧುಮೇಹ ಮಟ್ಟ ಹೆಚ್ಚಿದೆ ಎಂಬ ಕಾರಣಕ್ಕೆ ರಾತ್ರಿಯ ಊಟಕ್ಕೆ ಕ್ವಿನೋವಾ ಪಲಾವ್ ಸೇವಿಸಲು ಪ್ರಾರಂಭಿಸಿದರು.ಆದರೆ ಕ್ವಿನೋವಾ ಸ್ಥಳೀಯವಾಗಿರುವುದಲ್ಲ. ಇದು ಅಗ್ಗವೂ ಅಲ್ಲ ಮತ್ತು ಇದುವೇ ಶ್ರೇಷ್ಟವೂ ಅಲ್ಲ. ಭಾರತೀಯ ಧಾನ್ಯಗಳು ಮತ್ತು ರಾಗಿಗಿಂತ ಇದೇನು ಅತ್ಯುತ್ತಮವಾದುದ್ದಲ್ಲ. ನಿಜವಾದ ಆಕೆಯ ಡಯಟ್ ನಲ್ಲಿ ದೋಸಾ,ಇಡ್ಲಿ ಅದಕ್ಕೆ ತರಕಾರಿ ಮಿಶ್ರತ ಫೈಬರ್ ಪದಾರ್ಥಗಳಿರುವ ಕರಿ, ಅತ್ಯುತ್ತಮ ಕೊಬ್ಬಿನಾಂಶ ಹೊಂದಿರುವ ಆಹಾರಗಳು ಉದಾಹರಣೆಗೆ ಎಳ್ಳು, ಚಟ್ನಿ, ರಾಗಿ ಮತ್ತು ಬಾರ್ಲಿ ನೀರು ಇತ್ಯಾದಿಗಳು ಇರುವುದು ಶ್ರೇಷ್ಠವಾಗಿರುತ್ತಿತ್ತು.

ನೀವು ತೂಕ ಇಳಿಕೆಯಾಗಲು ಆಹಾರಕ್ರಮದ ಕಡೆ ಗಮನ ನೀಡಬೇಕು

ನೀವು ತೂಕ ಇಳಿಕೆಯಾಗಲು ಆಹಾರಕ್ರಮದ ಕಡೆ ಗಮನ ನೀಡಬೇಕು

ನಿಮ್ಮ ತೂಕ ಇಳಿಸುವ ಕಾರ್ಯಕ್ರಮದ ಶೇಕಡಾ 80ರಷ್ಟು ಪ್ರಮಾಣ ನಿಮ್ಮ ಆಹಾರ ಪದ್ದತಿಯಲ್ಲೇ ಇರುತ್ತದೆ.ಹೊಸ ಆಹಾರ ಪದ್ದತಿಯಿಂದ ಅಷ್ಟೇನು ಲಾಭವಾಗದೇ ಇದ್ದಾಗ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ. ಯಾಕೆ ನನ್ನ ಆಹಾರವು ನಾನು ಅಂದುಕೊಂಡ ಫಲಿತಾಂಶವನ್ನು ನೀಡುತ್ತಿಲ್ಲ. ಏನು ತಪ್ಪಾಗಿದೆ ಎಂಬ ಬಗ್ಗೆ ಗುರುತಿಸಿಕೊಳ್ಳಿ. ಅಲ್ಪಾವಧಿಯ ಫಲಿತಾಂಶವನ್ನು ಆಹಾರದಿಂದ ಬಯಸುವುದೇ ತಪ್ಪಾಗುತ್ತದೆ. ಸೂಪರ್ ಫುಡ್ ಸಿದ್ಧಾಂತ ಯಾವಾಗಲೂ ಕೂಡ ತಪ್ಪಾಗಿರುತ್ತದೆ.

ಸೂಪರ್ ಫುಡ್ ಗಳು ಸ್ಥಳೀಯವಾಗಿರುವುದಿಲ್ಲ

ಸೂಪರ್ ಫುಡ್ ಗಳು ಸ್ಥಳೀಯವಾಗಿರುವುದಿಲ್ಲ

ಸೂಪರ್ ಫುಡ್‌ಗಳು ಎಂದು ನೀವು ತಿನ್ನುವ ಆಹಾರಗಳು ಸ್ಥಳೀಯವಾಗಿ ಇಲ್ಲದ ಮೇಲೆ ತಾಜಾವಾಗಿಯೂ ಇರುವುದಿಲ್ಲ. ಸೆಲರಿ ಜ್ಯೂಸ್ ನ್ನು ಪ್ರತಿದಿನ ಬೆಳಿಗ್ಗೆ ಕುಡಿದರೆ ತೂಕ ಇಳಿಯುತ್ತದೆ ಎಂದು ಕೆಲವರು ಅಂದುಕೊಂಡಿರಬಹುದು. ಆದರೆ ಪ್ರತಿದಿನ ಬೆಳಿಗ್ಗೆ ಆಮ್ಲಾ ಜ್ಯೂಸ್ ತಯಾರಿಸುವುದು ಮತ್ತು ಸ್ಥಳೀಯವಾಗಿ ಸಿಗುವ ಹಣ್ಣುಗಳ ಜ್ಯೂಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು.

ವಿಭಿನ್ನ ಡಯಟ್ ಮೂಲಕ ತೂಕ ಇಳಿಕೆ ಬೇಡ

ವಿಭಿನ್ನ ಡಯಟ್ ಮೂಲಕ ತೂಕ ಇಳಿಕೆ ಬೇಡ

ತೂಕ ಇಳಿಸುವ ಆಹಾರವನ್ನು ವಿಭಿನ್ನ ಪ್ರಕಾರದ ಆಹಾರವಾಗಿ ನೋಡಲಾಗುತ್ತದೆ.ಆದರೆ ವಾಸ್ತವವಾಗಿ ಅದು ವಿಭಿನ್ನವಾಗಿ ಇರಬಾರದು. ದೈನಂದಿನ ಆಹಾರ ಕ್ರಮವನ್ನೇ ಅನುಸರಿಸುವ ಮೂಲಕ ಪೋಷಕಾಂಶಗಳ ಪ್ರಮಾಣದಲ್ಲಿ ಏರಿಳಿತ ಕಾಪಾಡಿಕೊಂಡರೆ ಸಾಕಾಗುತ್ತದೆ.

ಕ್ಯಾಲೋರಿಗೆ ಒತ್ತು ನೀಡುವ ಬದಲು ಪೋಷಕಾಂಶಗಳಿಗೆ ಒತ್ತು ನೀಡಿ

ಕ್ಯಾಲೋರಿಗೆ ಒತ್ತು ನೀಡುವ ಬದಲು ಪೋಷಕಾಂಶಗಳಿಗೆ ಒತ್ತು ನೀಡಿ

ಕ್ಯಾಲೋರಿ ಎಣಿಕೆಯ ಬಗ್ಗೆ ಒತ್ತು ನೀಡುವ ಬದಲು ನಾವು ಸೇವಿಸುವ ಆಹಾರದಲ್ಲಿ ಎಷ್ಟು ಪೋಷಕಾಂಶಗಳಿದೆ ಮತ್ತು ಯಾವ ಪೋಷಕಾಂಶಗಳಿದೆ ಎಂಬ ಬಗ್ಗೆ ಜಾಗೃತೆ ವಹಿಸುವುದು ಬಹಳ ಮುಖ್ಯ. ನಮ್ಮ ದೇಹದ ಪೋಷಣೆಗೆ ಸುಸ್ಥಿರ ಆಹಾರ ಪದ್ದತಿ ಬಹಳ ಮುಖ್ಯವಾಗಿರುತ್ತದೆ. ತೂಕದ ನಿರ್ಧಾರವನ್ನು ಆಹಾರವೇ ಮಾಡುವುದೇ ಆದರೂ ದೇಹ ಮತ್ತು ಆಹಾರದ ನಡುವಿನ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

English summary

Understanding the Importance of a Sustainable Diet for Weight Loss

If you want to loose weight Understanding the sustainable diet is very important, how? Read On...
X