Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವ್ಯಾಯಾಮಕ್ಕೂ ಮುನ್ನ ಈ ಆಹಾರಗಳನ್ನು ಎಂದಿಗೂ ಸೇವಿಸಲೇಬೇಡಿ
ವ್ಯಾಯಾಮ ಆರಂಭಿಸುವ ಮುನ್ನ ನಿಮ್ಮ ದೇಹಕ್ಕೆ ಇಂಧನವನ್ನು ಅರ್ಥಾತ್ ಆಹಾರವನ್ನು ನೀಡಬೇಕು ಎಂಬ ಬಗ್ಗೆ ಸಾಮಾನ್ಯ ಜ್ಞಾನವೊಂದು ಎಲ್ಲರಲ್ಲೂ ಇದೆ. ಆದರೆ ನಿಮ್ಮ ಆಯ್ಕೆಯ ಆಹಾರವು ನಿಮ್ಮ ಬೆವರಿಳಿಸುವ ವ್ಯಾಯಾಮ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ವ್ಯಾಯಾಮಕ್ಕೂ ಮುನ್ನ ಏನನ್ನೂ ತಿನ್ನದೇ ಇರುವ ಅಭ್ಯಾಸವೂ ಕೆಲವರಿಗೆ ಇದೆ. ಆದರೆ ಅದು ಹಸಿವೆಯಿಂದ ಅಥವಾ ನಿಶ್ಯಕ್ತಿಯಿಂದ ಹೇಗೆ ಸಮಸ್ಯೆಯನ್ನು ಉಂಟು ಮಾಡುತ್ತದೆಯೋ ಹಾಗೆಯೇ ವ್ಯಾಯಾಮಕ್ಕೂ ಮುನ್ನ ಸೇವಿಸುವ ಕೆಲವು ಆಹಾರವೂ ಕೂಡ ನಿಮಗೆ ಅನಾನುಕೂಲವನ್ನು ಮಾಡುವ ಸಾಧ್ಯತೆ ಇರುತ್ತದೆ.

ಒಂದು ವೇಳೆ ವ್ಯಾಯಾಮದ ಸಂದರ್ಭದಲ್ಲಿ ನಿಮಗೆ ಹೊಟ್ಟೆಯಲ್ಲಿ ಉಬ್ಬಿದಂಥ, ಗ್ಯಾಸ್ ತುಂಬಿದಂತಹ ಅಥವಾ ಒಂದು ಬ್ರೇಕ್ ತೆಗೆದುಕೊಳ್ಳಲೇಬೇಕು ಎಂಬ ಭಾವನೆ ಉಂಟಾದರೆ ವ್ಯಾಯಾಮಕ್ಕೂ ಮುನ್ನ ನೀವು ಏನನ್ನು ಸೇವಿಸಿದ್ದೀರಿ ಎಂಬುದನ್ನು ದೂಷಿಸಬೇಕಾಗುತ್ತದೆ. ವ್ಯಾಯಾಮ ಆರಂಭಿಸುವ ಮುನ್ನ ನೀವು ಸೇವಿಸಲೇಬಾರದ ನಾಲ್ಕು ಪ್ರಮುಖ ಆಹಾರಗಳ ಪಟ್ಟಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

ಕಾರ್ಬೊನೇಟೆಡ್ ಪಾನೀಯಗಳು
ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವುದು ಎಂದಿಗೂ ಒಳ್ಳೆಯದಲ್ಲ. ಇವು ನಿಮ್ಮ ವ್ಯಾಯಾಮದ ಅವಧಿಯಲ್ಲಿ ಹೊಟ್ಟೆಯಲ್ಲಿ ಸೆಳೆತ ಮತ್ತು ವಾಕರಿಕೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಈ ರೀತಿಯ ಪಾನೀಯಗಳು ಸಕ್ಕರೆ ಅಂಶದಿಂದ ಕೂಡಿರುವುದರಿಂದಾಗಿ ಸಕ್ಕರೆ ಸಮಸ್ಯೆಗಳಿಗೂ ಇದು ಕಾರಣವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಮ್ಮ ಸಲಹೆ ಏನೆಂದರೆ ವ್ಯಾಯಾಮಕ್ಕೂ ಮುನ್ನ ಈ ರೀತಿಯ ಜ್ಯೂಸ್ ಗಳ ಸೇವನೆ ಮಾಡುವ ಬದಲು ನೀರು ಕುಡಿಯಿರಿ. ವರ್ಕ್ ಔಟ್ ಮಾಡುವುದಕ್ಕೂ ಎರಡು-ಮೂರು ತಾಸುಗಳ ಮುಂಚೆ ಎರಡರಿಂದ ಮೂರು ಲೋಟದಷ್ಟು ನೀರು ಕುಡಿಯುವುದು ವ್ಯಾಯಾಮದ ಅವಧಿಗೆ ಉತ್ತಮವೆನಿಸುತ್ತದೆ.

ಹಾಲು

ಬೀನ್ಸ್
ದ್ವಿದಳ ಧಾನ್ಯಗಳು ಪ್ರೊಟೀನ್ ನಿಂದ ಸಮೃದ್ಧವಾಗಿರುತ್ತದೆ ಮತ್ತು ಅದು ನಾರಿನಂಶವನ್ನು ಹೆಚ್ಚು ಹೊಂದಿರುವುದರಿಂದಾಗಿ ಜೀರ್ಣವಾಗುವುದಕ್ಕೆ ಕೂಡ ಹೆಚ್ಚು ಸಮಯ ಹಿಡಿಯುತ್ತದೆ. ಇದು ವ್ಯಾಯಾಮ ಪ್ರಕ್ರಿಯೆ ವೇಳೆ ನಿಮ್ಮ ಜೀರ್ಣಕ್ರಿಯೆ ಸಮಸ್ಯೆಯನ್ನು ಮತ್ತು ಹೊಟ್ಟೆ ಉಬ್ಬರಿಸುವಂತ ಉಂಟುಸಾಧ್ಯತೆ ಇರುತ್ತದೆ. ಹಾಗಾಗಿ ವ್ಯಾಯಾಮ ಮಾಡುವಾಗ ಸರಿಯಾದ ಅಂದರೆ ಆರಾಮದಾಯಕವಾಗಿರುವ ನಿಖರವಾದ ಸ್ಥಾನದಲ್ಲಿ ವ್ಯಾಯಾಮ ಮಾಡುವುದಕ್ಕೆ ಸಾಧ್ಯವಾಗದೇ ಇರಬಹುದು.

ಖಾರದ ಆಹಾರಗಳು
ಬುದ್ಧಿವಂತರಾಗಿರುವ ಪ್ರತಿಯೊಬ್ಬರಿಗೂ ಖಂಡಿತ ಈ ಮಾಹಿತಿ ತಿಳಿದೇ ಇರುತ್ತದೆ. ನಾವು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಆದರೂ ಜಿಮ್ ಗೆ ತೆರಳುವ ವೇಳೆ ದಾರಿಯಲ್ಲಿ ಕಾಣುವ ಚಿಲ್ಲಿ-ನೂಡಲ್ಸ್ ನ ವಾಸನೆ ನಿಮ್ಮನ್ನು ಸೆಳೆಯಿತು ಎಂದಾದರೆ ಖಂಡಿತ ನಿಮ್ಮ ವ್ಯಾಯಾಮ ಪ್ರಕ್ರಿಯೆ ಉತ್ತಮವಾಗಿರಲು ಸಾಧ್ಯವೇ ಇಲ್ಲ. ನೀವು ಇಂತಹ ಖಾರದ ಆಹಾರವನ್ನು ವ್ಯಾಯಾಮದ ಮುನ್ನ ಸೇವಿಸಲೇಬಾರದು. ಮಸಾಲೆಯುಕ್ತ ಖಾರದ ಆಹಾರಗಳು ಕೇವಲ ಎದೆಯುರಿ ಮತ್ತು ಸಾಮಾನ್ಯ ಅಸ್ವಸ್ಥತೆಯನ್ನು ಮಾತ್ರವೇ ಮಾಡುವುದಿಲ್ಲ ಬದಲಾಗಿ ಸೆಳೆತದಂತಹ ಸಮಸ್ಯೆಗೂ ಕೂಡ ಕಾರಣವಾಗಬಹುದು. ಇದೆಲ್ಲವೂ ಅಂತಿಮವಾಗಿ ನಿಮ್ಮ ವ್ಯಾಯಾಮದ ದೈನಂದಿನ ಪ್ರಕ್ರಿಯೆಯನ್ನು ನಿಧಾನಗತಿಗೆ ತಳ್ಳುತ್ತದೆ. ಹಾಗಾಗಿ ದೇಹವು ವ್ಯಾಯಾಮದ ಲಾಭವನ್ನು ಸರಿಯಾಗಿ ಪಡೆಯದೇ ಇರುವ ಸಾಧ್ಯತೆಯನ್ನು ಹೆಚ್ಚು ಮಾಡುತ್ತದೆ.



Click it and Unblock the Notifications
