For Quick Alerts
ALLOW NOTIFICATIONS  
For Daily Alerts

ಭುಜ, ಕೈ ತೋಳುಗಳ ಬಲವೃದ್ಧಿಗೆ-ಪಿಂಚ ಮಯೂರಾಸನ

By Hemanth
|

ಆರೋಗ್ಯ ಬೇಕೆಂದರೆ ಯೋಗ ಮಾಡಬೇಕು ಎನ್ನುವ ಮಾತು ಇಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ. ಯೋಗದ ವಿವಿಧ ರೀತಿಯ ಆಸನಗಳಿಂದ ದೇಹದ ವಿವಿಧ ಭಾಗಗಳಿಗೆ ಆಗುವಂತಹ ಲಾಭವನ್ನು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಗರಿಗೆದರಿದ ನವಿಲಿನಂತಿರುವ ಪಿಂಚ ಮಯೂರಾಸನವು ಆಧುನಿಕ ಆಸನಗಳಲ್ಲಿ ಒಂದಾಗಿದೆ ಮತ್ತು ಇದು ಕೈಗಳ ತೋಳುಗಳನ್ನು ಮತ್ತು ಭುಜಗಳನ್ನು ಬಲಗೊಳಿಸುತ್ತದೆ. ಮುಂಗೈ- ಮಣಿಕಟ್ಟುಗಳ ದೃಢತೆಗೆ-ಮಯೂರಾಸನ ಅನುಸರಿಸಿ

ದೇಹವು ಬಲಿಷ್ಠವಾಗಿರಲು ಕೈ ಹಾಗೂ ಭುಜಗಳನ್ನು ಹೊಂದಿರುವುದು ಅತೀಅಗತ್ಯ. ಕೈಗಳ ತೋಳುಗಳನ್ನು ಮತ್ತು ಭುಜವನ್ನು ಬಲಿಷ್ಠಗೊಳಿಸಲು ವಿವಿಧ ರೀತಿಯ ವ್ಯಾಯಮ ಹಾಗೂ ಕಸರತ್ತುಗಳು ಇದ್ದರೂ ಯೋಗವು ಇದರಲ್ಲಿ ಪ್ರಮುಖವಾಗಿರುವಂತಾದ್ದಾಗಿದೆ. ಯೋಗದಲ್ಲೂ ಹಲವಾರು ಆಸನಗಳು ಕೈ ಹಾಗೂ ಭುಜವನ್ನು ಬಲಗೊಳಿಸುತ್ತದೆ. ಆದರೆ ಪಿಂಚ ಮಯೂರಾಸನವು ಕೈ ಹಾಗೂ ಭುಜಗಳನ್ನು ಬಲಗೊಳಿಸುವಲ್ಲಿ ಮೊದಲ ಸ್ಥಾನದಲ್ಲಿದೆ.

Pincha Mayurasana To Strengthen Arms And Shoulders

ಪಿಂಚ ಮಯೂರಾಸನವನ್ನು ಮಾಡುವುದರಿಂದ ಕೈಗಳ ತೋಳುಗಳು ಹಾಗೂ ಭುಜಗಳನ್ನು ಬಲಿಷ್ಠಗೊಳಿಸಬಹುದಾದರೂ ಆರಂಭದಲ್ಲಿ ಇದನ್ನು ಮಾಡಲು ಬೆಂಬಲವು ಬೇಕಾಗುತ್ತದೆ. ಈ ಆಸನ ಮಾಡಲು ಹೆಚ್ಚಿನ ಸಮತೋಲನ ಕೂಡ ಬೇಕಾಗುತ್ತದೆ. ನಿರಂತರ ಅಭ್ಯಾಸ ಮಾಡಿಕೊಂಡರೆ ಈ ಆಸನವನ್ನು ಸುಲಭವಾಗಿ ಮಾಡಬಹುದಾಗಿದೆ. ಸಂಧಿವಾತ ವಿರುದ್ಧ ಹೋರಾಡಲು ಬಳಸಿ 'ಗರುಡಾಸನ' ಎಂಬ ಅಸ್ತ್ರ!

ಪಿಂಚ ಮಯೂರಾಸನವನ್ನು ಮಾಡುವ ವಿಧಾನ ಹೇಗೆ? ಕೈಗಳ ತೋಳುಗಳು ಹಾಗೂ ಭುಜವನ್ನು ಬಲಪಡಿಸುವುದು ಹೇಗೆ ಎಂದು ತಿಳಿದುಕೊಳ್ಳಿ.
1.ತಾಡಾಸನದೊಂದಿಗೆ ಮೊದಲು ನಿಂತುಕೊಳ್ಳಿ.
2.ದೇಹದ ಮೇಲ್ಭಾಗವನ್ನು ನಿಧಾನವಾಗಿ ಅಧೋ ಮುಖ ಶವಾಸನದಂತೆ ಬಗ್ಗಿಸಿಕೊಳ್ಳಿ.
3.ಎರಡೂ ಅಂಗೈಗಳು ಸಮಾನಾಂತರವಾಗಿ ಭೂಮಿ ಮೇಲಿರಲಿ.


4.ಬೆನ್ನು ಮತ್ತು ಸೊಂಟ ದೃಢವಾಗಿರಲಿ.
5.ದೀರ್ಘವಾಗಿ ಉಸಿರನ್ನು ಪಡೆದುಕೊಂಡು ಒಂದು ಕಾಲನ್ನು ಗೋಡೆಯ ನೆರವಿನಿಂದ ಮೇಲಕ್ಕೆ ಎತ್ತಿಕೊಳ್ಳಿ.
6.ನಿಧಾನವಾಗಿ ಮತ್ತೊಂದು ಕಾಲನ್ನು ಮೇಲಕ್ಕೆತ್ತಿ.
7.ದೇಹದ ಸಮತೋಲವನ್ನು ಕಾಪಾಡಿಕೊಂಡು ಎಳೆದುಕೊಳ್ಳಿ.
8.ಆಸನವನ್ನು ಸರಿಯಾಗಿ ಮಾಡಿಕೊಂಡ ಬಳಿಕ ಕೆಲವು ಸೆಕೆಂಡುಗಳ ಕಾಲ ಹಾಗೆ ಇರಿ.
9.ಈಗ ಮೊದಲಿನ ಸ್ಥಾನಕ್ಕೆ ಬನ್ನಿ

ಪಿಂಚ ಮಯೂರಾಸನದ ಇತರ ಲಾಭಗಳು
*ಒತ್ತಡ ನಿವಾರಣೆಗೆ ಸಹಕಾರಿ.
*ಏಕಾಗ್ರತೆಯನ್ನು ಸುಧಾರಿಸಲು ನೆರವಾಗುತ್ತದೆ.
*ಕೈಗಳು ಹಾಗೂ ಕಾಲನ್ನು ಬಲಗೊಳಿಸುವುದು. ರಕ್ತ ಪರಿಚಲನೆಗೆ ಇದು ನೆರವಾಗುವುದು.
*ಬೆನ್ನೆಲುಬನ್ನು ದೃಢವಾಗಿಸುತ್ತದೆ.


*ಮನಸ್ಸನ್ನು ಶಾಂತವಾಗಿರಿಸುವುದು.
*ದೇಹದ ಸಮತೋಲನ ಕಾಪಾಡಲು ನೆರವಾಗುವುದು.
*ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಸ್ತಮಾವನ್ನು ಹದ್ದುಬಸ್ತಿನಲ್ಲಿಡುವ ಶಕ್ತಿ ಅರ್ಧ ಮತ್ಸೇಂದ್ರಾಸನಕ್ಕೆ ಇದೆ

ಎಚ್ಚರಿಕೆ


*ಗರಿಗೆದರಿದ ನವಿಲಿನ ಆಸನವಾಗಿರುವ ಪಿಂಚ ಮಯೂರಾಸನವು ಕೈ ಹಾಗೂ ಭುಜಗಳನ್ನು ಬಲಗೊಳಿಸುತ್ತದೆ. ಆದರೆ ಇದನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕು.
*ಬೆನ್ನು, ಕುತ್ತಿಗೆ ಮತ್ತು ಭುಜದ ನೋವನ್ನು ಹೊಂದಿರುವವರು ಇದನ್ನು ಮಾಡಬಾರದು. ಇಂತಹ ಸಮಸ್ಯೆ ಇರುವವರು ಯೋಗ ಗುರುಗಳ ಉಪಸ್ಥಿತಿಯಲ್ಲಿ ಮಾತ್ರ ಇದನ್ನು ಮಾಡಬಹುದು.
English summary

Pincha Mayurasana To Strengthen Arms And Shoulders

Pincha Mayurasana is helpful in strengthening the arms and shoulders, initially it is tough for a beginner and requires support to perform the asana. It also requires a lot of balance. However, with continuous practise one can perform it easily.
X
Desktop Bottom Promotion