For Quick Alerts
ALLOW NOTIFICATIONS  
For Daily Alerts

ಸಂಧಿವಾತ ವಿರುದ್ಧ ಹೋರಾಡಲು ಬಳಸಿ 'ಗರುಡಾಸನ' ಎಂಬ ಅಸ್ತ್ರ!

By manu
|

ಆರೋಗ್ಯವೇ ಭಾಗ್ಯ ಎಂಬ ಎರಡೇ ಪದಗಳ ಈ ಗಾದೆ ಬಹಳ ಅರ್ಥಗರ್ಭಿತವಾಗಿದೆ. ನಾಗರೀಕತೆಯೊಂದಿಗೆ ಸವಲತ್ತುಗಳು ಹೆಚ್ಚುತ್ತಾ ಹೋದಂತೆಯೇ ಅನಾರೋಗ್ಯವೂ ಹೆಚ್ಚುತ್ತಾ ಹೋಗುತ್ತಿರುವುದು ಮಾತ್ರ ವ್ಯಂಗ್ಯವಾಗಿದೆ. ಇಂದಿನ ದಿನಗಳಲ್ಲಿ ಯಾವುದೇ ರೋಗವನ್ನು ಹೊಂದಿರದವರೇ ನಿಜವಾದ ಐಶ್ವರ್ಯವಂತರು. ಏಕೆಂದರೆ ಯಾವುದೇ ಕಾಯಿಲೆಗಳನ್ನು ಗುಣಪಡಿಸಲು ನಮ್ಮಲ್ಲಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ.

Garudasana Or Eagle Pose To Fight Against Sciatica & Rheumatism

ಆದರೆ ಆರೋಗ್ಯವನ್ನು ಮರಳಿಸಲು ನಿಮ್ಮ ಸಂಪತ್ತನ್ನು ಮಾತ್ರ ಕರಗಿಸಲೇಬೇಕಾಗುತ್ತದೆ! ಕಾಯಿಲೆಗಳು ನೋವು ಅನುಭವಿಸುವ ನರಕಯಾತನೆ ಬೇರೆ. ಸಂಧಿವಾತ ಮತ್ತು ಕಟಿವಾಯು (Sciatica), ಅಂದರೆ ಬೆನ್ನುಮೂಳೆಯ ನಡುವೆ ಹಾದು ಹೋಗಿರುವ ರಕ್ತನಾಳಗಳು ಎರಡು ಜರಿದ ಮೂಳೆಗಳ ನಡುವೆ ಸಿಲುಕಿ ಎದುರಾಗುವ ನೋವು ಇಂತಹ ಯಾತನಮಯ ಕಾಯಿಲೆಗಳಾಗಿದ್ದು ಇದರ ಚಿಕಿತ್ಸೆಗೆ ಫಿಸಿಯೋಥೆರಪಿಗೆ ಮೊರೆಹೋಗುವ ರೋಗಿಗಳು ಅಪಾರ ಪ್ರಮಾಣದ ಹಣವನ್ನೂ ವ್ಯಯಿಸಬೇಕಾಗುತ್ತದೆ. ಜಾಣತನದ ಕ್ರಮವೆಂದರೆ ಈ ಸ್ಥಿತಿ ಬರದಿರುವಂತೆ ನೋಡಿಕೊಳ್ಳುವುದು. ವೀರಭದ್ರಾಸನ: ಕುರ್ಚಿ-ಮೇಜು ಆಧಾರಿತ ಉದ್ಯೋಗಿಗಳಿಗೆ ವರದಾನ
ಒಂದು ವೇಳೆ ನೀವು ಜಾಣರಾದರೆ ನಿಮಗೆ ಸೂಕ್ತವಾದ ಕ್ರಮ ಎಂದರೆ ಯೋಗಾಸನಗಳನ್ನು ನಿಯಮಿತವಾಗಿ ಅನುಸರಿಸುವುದು. ಗರುಡನನ್ನು ಅನುಸರಿಸುವ ಗರುಡಾಸನದಿಂದ ಬೆನ್ನುನೋವು, ಸಂಧಿವಾತದಿಂದ ಬಳಲುತ್ತಿರುವ ರೋಗಿಗಳಿಗೆ ನಿಜವಾಗಿಯೂ ಉತ್ತಮ ಪರಿಹಾರ ದೊರಕುತ್ತದೆ.

ವೈದ್ಯರು ನೀಡುವ ಗುಳಿಗೆಗಳಿಂದ ಈ ನೋವಿಗೆ ತಾತ್ಕಾಲಿಕ ಪರಿಹಾರ ದೊರಕಬಹುದಾದರೂ ಇದರ ಅಡ್ಡಪರಿಣಾಮಗಳು ಭೀಕರವಾಗಿರಬಹುದು. ಆದ್ದರಿಂದ ನಿಸರ್ಗವೇ ಇದನ್ನು ಸರಿಪಡಿಸಲು ಗರುಡಾಸನದ ಮೂಲಕ ಸಾಧ್ಯವಿದೆ. ಬನ್ನಿ ಈ ಆಸನವನ್ನು ಅನುಸರಿಸುವ ಬಗೆಯನ್ನು ಹಂತಹಂತವಾಗಿ ಕಲಿಯೋಣ: ರಕ್ತ ಪರಿಚಲನೆಯ ಕ್ಷಮತೆಗೆ ಅನುಸರಿಸಿ ಸಾಲಂಭ ಭುಜಂಗಾಸನ

ಹಂತ 1. ಮೊದಲು ತಾಡಾಸನದಲ್ಲಿ ನೆಟ್ಟಗೆ ನಿಂತು ಮುಂದಕ್ಕೆ ದಿಟ್ಟಿಸಿ
ಹಂತ 2. ಈ ಆಸನವನ್ನು ಯಾವುದೇ ಕಾಲು ಮೊದಲಾಗಿ ಪ್ರಾರಂಭಿಸಬಹುದು. ಬಲಗೈ ಅಭ್ಯಾಸವುಳ್ಳವರು ತಮ್ಮ ಮೈಭಾರವನ್ನೆಲ್ಲಾ ಬಲಗಾಲ ಮೇಲೆ ಇರಿಸಿ ಎಡಗಾಲನ್ನು ಹಿಂಬದಿಯಿಂದ ಬಲಬಾಲ ಮೀನಖಂಡವನ್ನು ತಬ್ಬುವಂತೆ ತನ್ನಿ. ಇದಕ್ಕಾಗಿ ಕೊಂಚವೇ ಬಗ್ಗಬೇಕಾಗಿ ಬರುತ್ತದೆ.
ಹಂತ 3. ಎಡತೊಡೆ ಬಲತೊಡೆಯ ಮೇಲೆ ಆದಷ್ಟು ಹತ್ತಿರ ಬರುವಂತೆ ಒತ್ತಡ ನೀಡಿ. ಈ ಹಂತದಲ್ಲಿ ಕಾಲಬೆರಳುಗಳು ನೆಲ ನೋಡುವಂತಿರಬೇಕು. ಮುಂಗೈ- ಮಣಿಕಟ್ಟುಗಳ ದೃಢತೆಗೆ-ಮಯೂರಾಸನ ಅನುಸರಿಸಿ
ಹಂತ 4. ಈಗ ಎರಡೂ ಕೈಗಳನ್ನು ಮುಂದೆ ಚಾಚಿ, ಬೆರಳುಗಳು ನೇರವಾಗಿದ್ದು ಕೈಗಳು ನೆಲಕ್ಕೆ ಸಮಾನಾಂತರವಾಗಿರಲಿ.
ಹಂತ 5. ಕಾಲುಗಳನ್ನು ಹೇಗೆ ಬಳ್ಳಿಯಂತೆ ತಬ್ಬಿಸಿದ್ದಿರೋ ಹಾಗೇ ಈಗ ಕೈಗಳನ್ನೂ ಬಳ್ಳಿಯಂತೆ ತಬ್ಬಿಕೊಳ್ಳಿ. ಇದಕ್ಕಾಗಿ ಎಡಮೊಣಕೈಯನ್ನು ಬಲಮೊಣಕೈ ಮೇಲೆ ಇರಿಸಿ ಬಲಹಸ್ತವನ್ನು ಹಿಂದಕ್ಕೂ, ಎಡಹಸ್ತವನ್ನು ಮುಂದಕ್ಕೂ ಚಾಚಿ ಬಳಿಕ ಬಲಗೈ ಬೆರಳುಗಳಿಂದ ಎಡಗೈ ಹೆಬ್ಬೆರಳು ಮುಟ್ಟುವಂತೆ ಬಳಸಿ. ಕೈಗಳು ನೆಟ್ಟಗಿದ್ದು ಬೆರಳುಗಳು ನಿಮ್ಮ ತಲೆಯಿಂದ ಕೊಂಚ ಮೇಲೆ ಇರಬೇಕು.
ಹಂತ 6. ಈ ಹಂತದಲ್ಲಿ ಸೆಳೆತ ಹೆಚ್ಚಿಸಿ ಎರಡೂ ಹಸ್ತಗಳು ತಾಕುವಂತೆ ಮಾಡಿ. ಇದಕ್ಕಾಗಿ ಭುಜಗಳನ್ನು ಮುಂದಕ್ಕೆ ಸೆಳೆಯಿರಿ.


ಹಂತ 7. ನಂತರ ಹಸ್ತಗಳು ಒಂದಕ್ಕೊಂದು ತಾಕಿರುವಂತೆ ಕೈಬೆರಳುಗಳನ್ನು ಬಿಡಿಸಿ ಕೈಮುಗಿಯಿರಿ. ಹಸ್ತಗಳಿಗೆ ಆದಷ್ಟು ಒತ್ತಡ ನೀಡಿ. ಹಂತ 8. ಈ ಹಂತದಲ್ಲಿ ಪೂರ್ಣವಾಗಿ ಉಸಿರೆಳೆದುಕೊಂಡು ಒಂದರಿಂದ ಹತ್ತರವರೆಗೆ ಎಣಿಸುತ್ತಾ ಉಸಿರುಕಟ್ಟಿ
ಹಂತ 9. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲಿದ್ದ ಸ್ಥಿತಿಗೆ ಬಂದ ಹಾಗೇ ಹಿಂದಿರುಗಿ ಮತ್ತೊಮ್ಮೆ ನೆಟ್ಟಗೆ ನಿಲ್ಲಿ
ಹಂತ 10. ಇದೇ ಕ್ರಿಯೆಯನ್ನು ಈಗ ಎಡಗಾಲಿಗೆ ಅನ್ವಯಿಸುವಂತೆ ಪುನರಾವರ್ತಿಸಿ. ಹೀಗೇ ನಿಮಗೆ ಸಾಧ್ಯವಾದಷ್ಟು ಬಾರಿ ಎರಡೂ ಕಾಲುಗಳಿಗೆ ವ್ಯಾಯಾಮ ನೀಡಿ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯೋಗಾಭ್ಯಾಸ

ಗರುಡಾಸನದ ಪ್ರಯೋಜನಗಳು:
• ಸಾಮಾನ್ಯವಾಗಿ ಸೆಳೆತ ಪಡೆಯದ ತೊಡೆಗಳು, ಸೊಂಟದ ಮೂಳೆ, ಮೇಲ್ಬೆನ್ನು, ಭುಜ ಕೆಳಬೆನ್ನುಗಳು ಈ ಆಸನದಲ್ಲಿ ಉತ್ತಮ ಸೆಳೆತ ಪಡೆಯುತ್ತವೆ.
• ಕಾಲಿನ ಮೀನಖಂಡ ಅತಿ ಹೆಚ್ಚು ಹುರಿಗಟ್ಟುತ್ತದೆ.
• ಶರೀರವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.
• ಕೆಳಬೆನ್ನಿನ ಮೂಳೆಗಳನ್ನು ವಿರುದ್ದ ದಿಕ್ಕಿನಲ್ಲಿ ಸೆಳೆಯುವ ಮೂಲಕ ಸದಾ ಒತ್ತಡದಲ್ಲಿಯೇ ಇದ್ದು ನೋವಿಗೆ ಕಾರಣವಾದ ಸ್ನಾಯುಗಳು ಮತ್ತು ನರಗಳು ಸಡಿಲಗೊಂಡು ಇಲ್ಲಿನ ನೋವು ಕಡಿಮೆಯಾಗಲು ನೆರವಾಗುತ್ತದೆ.
• ಸಂಧಿವಾತಕ್ಕೂ ಈ ಆಸನ ಅತ್ಯುತ್ತಮವಾಗಿದೆ.
• ಶರೀರ ಹೆಚ್ಚು ಸೆಳೆತಪಡೆಯಲು ನೆರವಾಗುತ್ತದೆ.

ಎಚ್ಚರಿಕೆ:
ಒಂದು ವೇಳೆ ಮೊಣಕೈ, ಮೊಣಕಾಲುಗಳಿಗೆ ಪೆಟ್ಟಾಗಿದ್ದರೆ ಈ ಆಸನ ಅನುಸರಿಸಕೂಡದು. ಈ ಆಸನದಲ್ಲಿ ಒಂದು ಕಾಲಿನ ಮೇಲೆ ಇಡಿಯ ಶರೀರದ ಭಾರ ಹಾಕುವ ಮೂಲಕ ಆ ಭಾಗದ ಸೊಂಟಕ್ಕೂ ಹೆಚ್ಚಿನ ಒತ್ತಡ ನೀಡಿದಂತಾಗುತ್ತದೆ. ಒಂದು ವೇಳೆ ಈ ಭಾಗದಲ್ಲಿ ಹೆಚ್ಚಿನ ನೋವು ಇದ್ದರೆ ನಿಮ್ಮ ವೈದ್ಯರ ಮತ್ತು ಯೋಗಶಿಕ್ಷಕರ ಸಲಹೆ ಮೇರೆಯ ಹೊರತು ಈ ಆಸನವನ್ನು ಅನುಸರಿಸಕೂಡದು.

English summary

Garudasana Or Eagle Pose To Fight Against Rheumatism

We all want to be disease free and want to lead and live a happy life. Though, nowadays, there are various super specialty hospitals, diseases too are at par with the treatment. Sciatica and Rheumatism are such problems that are troublesome for the patients and they end up in spending from both the hands on physiotherapy and other treatments with the doctors.
X
Desktop Bottom Promotion