Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 12 (March 12 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನವು ಸಮಸ್ಯೆಗಳಿವೆ. ನೀವು ಯಾವುದಾದರು ವಸ್ತು ಖರೀದಿಸಲು ಹಲವು ದಿನದಿಂದ ಹಣ ಒಟ್ಟು ಮಾಡಿದ್ದರೆ ಅದನ್ನು ಬೇರೆ ಕೆಲಸಗಳಿಗೆ ವಿನಿಯೋಗಿಸಬಹುದು. ಯಾರಿಂದಾದರು ಹಣ ಪಡೆಯುವ ಪ್ರಯತ್ನದಲ್ಲಿ ವಿಫಲ ಯತ್ನ ಇರಲಿದೆ.
ವೃಷಭ ರಾಶಿ
ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಇಂದು ಬದಲಾವಣೆಯಿದೆ. ಇದರಿಂದ ನಿಮಗೆ ಸಂತಸ ಹಾಗೂ ನೆಮ್ಮದಿ ಸಿಗಲಿದೆ. ಪ್ರಯಾಣಗಳಿಗೆ ಪೂರ್ವ ಸಿದ್ದತೆ ಮಾಡಿಕೊಳ್ಳಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಗೃಹಿಣಿಯರಿಗೆ ಈ ದಿನವು ಅನುಕೂಲಕರ. ಹಲವು ದಿನದ ಬಾಕಿ ಉಳಿದ ಕೆಲಸ ಪೂರ್ಣವಾಗಲಿದೆ. ದೊಡ್ಡ ಸಾಲದಲ್ಲಿ ಇಳಿಮುಖವಾಗಲಿದೆ. ಬ್ಯಾಂಕಿಂಗ್ ವಿಚಾರವಾಗಿ ನಿಮಗೆ ಶುಭ ಸಮಯ ಆಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಮಿಶ್ರಫಲವಿದೆ. ವಾಹನ ವಿಚಾರದಲ್ಲಿ ಎಚ್ಚರ ವಹಿಸಿ. ವ್ಯಾಪಾರಿಗಳಿಗೆ ನಷ್ಟವಾಗುವ ಸಾಧ್ಯತೆ ಇದೆ. ಹೂಡಿಕೆಗಳಲ್ಲಿ ಎಚ್ಚರವಿಡಿ. ಶುಭ ಸಮಾರಂಭಗಳಲ್ಲಿ ಭಾಗಿಯಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನವು ಅನುಕೂಲವಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರವಹಿಸಿ. ಅಪರೂಪದ ವ್ಯಕ್ತಿಗಳ ಭೇಟಿಯಿಂದ ನಿಮಗೆ ಹೊಸ ವಿಚಾರವೊಂದು ನಿಮಗೆ ಒಲಿಯಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ಯಾರಿಂದಾದರು ಹಣ ಪಡೆಯುವುದು ಬಾಕಿ ಉಳಿದರೆ ಇಂದು ಪ್ರಯತ್ನ ಮಾಡುವುದು ಉತ್ತಮ. ನಿಮ್ಮ ಸಹೋದರರೊಂದಿಗಿನ ಹಣಕಾಸು ವ್ಯವಹಾರದಲ್ಲಿ ಮನಸ್ತಾಪಗಳು ಮೂಡಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಆಪ್ತರಿಂದ ಹಣಕಾಸಿನ ವಿಚಾರದಲ್ಲಿ ಮನವಿಗಳು ಬರಬಹುದು. ನಿಮ್ಮ ದೇವಾಲಯ ಭೇಟಿಯನ್ನು ಮತ್ತೆ ಮುಂದೂಡಬಹುದು. ಪ್ರಯಾಣಗಳಲ್ಲಿ ನಿಮಗೆ ಸುಖವಿದೆ. ಬಹುಸಮಯದ ನಿಮ್ಮ ಕೆಲಸವೊಂದನ್ನು ಪೂರ್ಣ ಮಾಡುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಮಿಶ್ರಫಲ. ಯಾರಿಗಾದರು ಸಾಲ ನೀಡಬಹುದು. ದೂರ ಪ್ರಯಾಣದಲ್ಲಿ ನಿಮಗೆ ಸಮಸ್ಯೆಗಳಿವೆ. ಹಣಕಾಸು ಸ್ಥಿತಿ ಯಥಾವತ್ತಾಗಿ ಇರಲಿದೆ. ಯಾರ ಬಳಿಯೂ ಸಹಾಯ ಬೇಡುವುದು ಸಮಸ್ಯೆ ತರಬಹುದು.
ಧನು ರಾಶಿ
ಧನು ರಾಶಿ ಜನರಲ್ಲಿ ಈ ದಿನ ಉತ್ತಮವಾಗಿರಲಿದೆ. ಹೊಸ ವ್ಯವಹಾರದಲ್ಲಿ ನಿಮಗೆ ಲಾಭ ನೋಡಬಹುದು. ಧಾರ್ಮಿಕ ಕಾರ್ಯಗಳಲ್ಲಿ ನೀವು ಭಾಗಿಯಾಗಬೇಕಾಗುತ್ತದೆ. ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬಹುದು.
ಮಕರ ರಾಶಿ
ಮಕರ ರಾಶಿಯ ಜನರಿಗೆ ಈ ದಿನವು ಅನುಕೂಲ ತರಲಿದೆ. ನೀವು ಸಮಯದೊಳಗೆ ಕೆಲಸಗಳ ಮುಗಿಸುವಿರಿ. ಪ್ರೇಮಿಗಳಿಗೆ ಈ ದಿನ ಶುಭ ತರಲಿದೆ. ಪಂಚೇಂದ್ರಿಯ ಸಂಬಂಧಿತ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ಗೃಹಿಣಿಯರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ನಿರುದ್ಯೋಗಿಗಳಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ, ಹೀಗಾಗಿ ನೀವು ಹೊಸ ಕೆಲಸಗಳಲ್ಲಿ ಭಾಗಿಯಾಗಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಇಂದು ಪ್ರಯಾಣಗಳ ಮಾಡುವ ದಿನ. ದಿನದ ಅಂತ್ಯದಲ್ಲಿ ನೀವು ಬಯಸಿದ ಕೆಲಸವು ಪೂರ್ಣವಾಗಲಿದೆ. ಸ್ನೇಹಿತರ ಭೇಟಿಯಾಗುವಿರಿ. ಆಯಾಸ ಕಾಡಬಹುದು. ಮಕ್ಕಳ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ.



Click it and Unblock the Notifications
