For Quick Alerts
ALLOW NOTIFICATIONS  
For Daily Alerts

ಅಸ್ತಮಾವನ್ನು ಹದ್ದುಬಸ್ತಿನಲ್ಲಿಡುವ ಶಕ್ತಿ ಅರ್ಧ ಮತ್ಸೇಂದ್ರಾಸನಕ್ಕೆ ಇದೆ

By Deepak
|

ಅಸ್ತಮಾ ಒಂದು ಮಾರಕ ಕಾಯಿಲೆ. ಇದು ಗಾಳಿಯ ಮೂಲಕ ಆಗಮಿಸಿ ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಅಸ್ತಮಾ ಬಂದವರಿಗೆ ಅಲರ್ಜಿಗಳ ಕಾಟವೇ ಕಾಟ. ಉರಿಯೂತ, ಊದಿಕೊಳ್ಳುವುದು, ಶ್ವಾಸಕೋಶದ ಸಮಸ್ಯೆಗಳು ಎಲ್ಲವೂ ಅಸ್ತಮಾದಲ್ಲಿ ಸಾಮಾನ್ಯವಾಗಿರುತ್ತದೆ.

ಇದರ ಫಲಿತಾಂಶವಾಗಿ ನಿಮ್ಮ ಶ್ವಾಸಕೋಶಗಳು ಕಟ್ಟಿಕೊಂಡು, ನೀವು ಹೆಚ್ಚು ಕೆಮ್ಮತ್ತಾ ಇರುತ್ತೀರಿ. ಉಸಿರಾಟವು ಏರು ಪೇರಾಗುತ್ತದೆ. ಉಬ್ಬಸವು ಸಹ ಅಸ್ತಮಾ ಬಂದ ಮೇಲೆ ಬರುತ್ತದೆ. ಹಾಗೆಂದು ಈ ಎಲ್ಲಾ ಸಮಸ್ಯೆಗಳನ್ನು ನೀವು ಎದುರಿಸುತ್ತೀರಿ ಎಂದಲ್ಲ, ನಿಮ್ಮ ವೈದ್ಯಕೀಯ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ರೋಗ ಲಕ್ಷಣಗಳು ಬದಲಾಗಬಹುದು. ಮುಂಗೈ- ಮಣಿಕಟ್ಟುಗಳ ದೃಢತೆಗೆ-ಮಯೂರಾಸನ ಅನುಸರಿಸಿ

Ardha Matsyendrasana (Sitting Half Spinal Twist) To Relieve Asthma

ಅಸ್ತಮಾ ಬಂದು ಬಿಟ್ಟಿತು ಎಂದು ಈಗ ಪಶ್ಚಾತ್ತಾಪಡಬೇಡಿ ಎದ್ದೇಳಿ. ವೈದ್ಯರು ಅವರು ನೀಡುವ ಚಿಕಿತ್ಸೆಯನ್ನು ನೀಡಲಿ. ನಿಮ್ಮ ಪಾಡಿಗೆ ನೀವು ಒಬ್ಬ ಯೋಗ ಗುರುವಿನ ಬಳಿಯೋ ಅಥವಾ ಚೆನ್ನಾಗಿ ಯೋಗ ಬಲ್ಲ ನಿಮ್ಮ ಸ್ನೇಹಿತರ ಬಳಿಗೆ ಹೋಗಿ. ಅವರು ನಿಮಗೆ ಅರ್ಧ ಮತ್ಸೇಂದ್ರಾಸನವನ್ನು ಹೇಳಿ ಕೊಡೂತ್ತಾರೆ. ಇದು ಅಸ್ತಮಾಗೆ ರಾಮಬಾಣವಾಗಿ ಬಳಸಲ್ಪಡುತ್ತದೆ. "ಅರ್ಧ ಮತ್ಸೇಂದ್ರಾಸನ" ಎಂಬ ಪದವು ಅರ್ಧ, ಮತ್ಸ್ಯ (ಮೀನು) ಮತ್ತು ಇಂದ್ರ ಪದಗಳು ಸೇರಿ ಆಗಿದೆ. ಇಲ್ಲಿ ಇಂದ್ರ ಎಂದರೆ ಪ್ರಜ್ಞೆ ಎಂದರ್ಥ. ಅಸ್ತಮಾ ನಿವಾರಿಸುವ ಮನೆಮದ್ದನ್ನು ನೀವೂ ಟ್ರೈ ಮಾಡಿ

ಈ ಆಸನವನ್ನು ಮಾಡುವ ವಿಧಾನ
ಹಂತ 1:
ನಿಮ್ಮ ಕಾಲುಗಳನ್ನು ನೇರವಾಗಿ ಚಾಚಿಕೊಂಡು, ಕುಳಿತುಕೊಳ್ಳಿ. ಪಾದಗಳು ಒಟ್ಟಿಗೆ ಇರಲಿ ಮತ್ತು ಬೆನ್ನು ಮೂಳೆ ನೇರವಾಗಿರಲಿ.
ಹಂತ 2:
ನಂತರ ನಿಮ್ಮ ಎಡಗಾಲನ್ನು ಮಡಿಚಿ ಮತ್ತು ನಿಮ್ಮ ಎಡಗಾಲಿನ ಹಿಮ್ಮಡಿಯನ್ನು ಬಲ ಪೃಷ್ಠದ ಕೆಳಗೆ ಇರಿಸಿ.


ಹಂತ 3:
ನಿಮ್ಮ ಬಲಗಾಲನ್ನು ಎಡ ಮೊಣಕಾಲಿನ ಕೆಳಗೆ ಇರಿಸಿ.
ಹಂತ 4:
ನಿಮ್ಮ ಬಲಗೈಯನ್ನು ನಿಮ್ಮ ಎಡ ಮೊಣಕಾಲಿನ ಮೇಲೆ ಇರಿಸಿ ಮತ್ತು ನಿಮ್ಮ ಎಡಗೈ ನಿಮ್ಮ ಬೆನ್ನ ಹಿಂದೆ ಇರಬೇಕಾಗುತ್ತದೆ.
ಹಂತ 5:
ಈಗ ನಿಮ್ಮ ಹೊಟ್ಟೆ, ಕತ್ತು, ಭುಜದ ಭಾಗವನ್ನು ಸ್ಥಿತಿಯಿಂದ ವಿರುದ್ಧ ದಿಕ್ಕಿಗೆ ಸ್ವಲ್ಪ ತಿರುಗಿಸಿ. ಆ ದಿಕ್ಕಿನತ್ತಲೇ ನೋಡಿ.
ಹಂತ 6:
ನಿಮ್ಮ ಬೆನ್ನು ಮೂಳೆಯನ್ನು ನೇರವಾಗಿ ಇರಿಸಿ.
ಹಂತ 7:
ಇದೇ ಸ್ಥಿತಿಯಲ್ಲಿ ಸುಮಾರು 60 ಸೆಕೆಂಡ್ ಇರಿ ಅಥವಾ ನಿಮಗೆ ಅನುಕೂಲವಾದಷ್ಟು ಹೊತ್ತು ಇರಿ.
ಹಂತ 8:
ಈಗ ಉಸಿರುಬಿಡುತ್ತಾ ನಿಮ್ಮ ಬೆನ್ನಿನ ಭಾಗವನ್ನು ಮೊದಲು ಬಿಡುಗಡೆ ಮಾಡಿ, ಆಮೇಲೆ ಒಂದೊಂದೆ ಅಂಗಗಳನ್ನು ಕ್ರಮವಾಗಿ ಸ್ಥಿತಿಗೆ ತನ್ನಿ. ಮತ್ತೆ ಯಥಾ ಸ್ಥಿತಿ ಆಸನಕ್ಕೆ ಮೊದಲು ಯಾವ ಭಂಗಿಯಲ್ಲಿದ್ದಿರೋ ಆ ಭಂಗಿಗೆ ಬನ್ನಿ.
ಹಂತ 9:
ಇದೇ ಆಸನವನ್ನು ಮತ್ತೆ ವಿರುದ್ಧ ಕಾಲು ಮತ್ತು ಕೈಗಳನ್ನು ಬಳಸಿ ಮಾಡಿ. ಸುಖ ನಿದ್ದೆಗಾಗಿ ಅನುಸರಿಸಿ ಸುಪ್ತ ಬದ್ಧ ಕೋನಾಸನ

ಈ ಆಸನದ ಪ್ರಯೋಜನಗಳು
*ಹಸಿವನ್ನು ಹೆಚ್ಚಿಸುತ್ತದೆ.
*ಋತುಚಕ್ರದ ಸಮಸ್ಯೆಗಳನ್ನು ನಿವಾರಿಸುತ್ತದೆ.
*ಬೆನ್ನು ಮೂಳೆಯನ್ನು ಉದ್ದೀಪಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ.
*ಲಿವರ್ ಮತ್ತು ಮೂತ್ರಪಿಂಡಕ್ಕೆ ಸಹಾಯ ಮಾಡುತ್ತದೆ.
*ನಮ್ಯತೆಗೆ ಸಹಕರಿಸುತ್ತದೆ.

ಎಚ್ಚರಿಕೆ
ಬೆನ್ನು ಮೂಳೆ ಅಥವಾ ದೇಹದ ಇತರೆ ಭಾಗಗಳ ಗಾಯಕ್ಕೆ ಒಳಗಾದವರು ಈ ಆಸನವನ್ನು ಮಾಡಬಹುದು. ಗಾಯ ವಾಸಿಯಾಗುವವರೆಗೆ ಈ ಆಸನ ಮಾಡಬೇಡಿ.

English summary

Ardha Matsyendrasana (Sitting Half Spinal Twist) To Relieve Asthma

Asthma is, as you all know, a chronic disease which directly affects your airways. The main task of your airways is, it's a tube which carries the air in and out of your lungs. In case of asthma, these tubes become sore and swollen. Things become worse when asthma keeps increasing and you start getting allergic to a few things. Have a look at the step-wise procedure and the benefits of this asana if performed regularly.
Story first published: Thursday, June 16, 2016, 20:19 [IST]
X
Desktop Bottom Promotion