For Quick Alerts
ALLOW NOTIFICATIONS  
For Daily Alerts

ಮುಂಗೈ- ಮಣಿಕಟ್ಟುಗಳ ದೃಢತೆಗೆ-ಮಯೂರಾಸನ ಅನುಸರಿಸಿ

By Manu
|

ಮಯೂರ ಅಂದರೆ ನವಿಲು. ನಮ್ಮ ದೇಹ ನವಿಲಿನ ಭಂಗಿಯನ್ನು ಪಡೆದುಕೊಳ್ಳುವ ಕಾರಣ ಈ ಹೆಸರು ಬಂದಿದೆ. ಈ ಆಸನವನ್ನು ಅನುಸರಿಸುವ ಮೂಲಕ ಮಣಿಕಟ್ಟು, ಮೊಣಕೈ, ಹೊಟ್ಟೆ, ತೊಡೆ, ಸೊಂಟ, ಮೀನಖಂಡ ಮತ್ತು ಕುತ್ತಿಗೆಯ ಸ್ನಾಯುಗಳಿಗೆ ಹೆಚ್ಚು ಸೆಳೆತ ನೀಡುತ್ತದೆ. ಇದರೊಂದಿಗೆ ದೇಹದ ಬಹುತೇಕ ಎಲ್ಲಾ ಸ್ನಾಯುಗಳೂ ಕೊಂಚವಾದರೂ ಸೆಳೆತವನ್ನು ಪಡೆಯುವ ಕಾರಣ ಪರಿಪೂರ್ಣ ಆಸನಗಳಲ್ಲಿ ಮಯೂರಾಸನ ಒಂದಾಗಿದೆ ಆದರೆ ಇದನ್ನು ಅನುಸರಿಸುವುದು ಅಷ್ಟು ಸುಲಭವಾದ ಕಾರ್ಯವಲ್ಲ.

ಏಕೆಂದರೆ ಇದನ್ನು ಅನುಸರಿಸಲು ದೇಹ ಇಡಿಯ ಭಾರವನ್ನು ಕೆಲವೇ ಸ್ನಾಯುಗಳ ಮೇಲೆ ತಾಳಿಕೊಳ್ಳಲು ಶಕ್ತವಾಗಿರಬೇಕು. ಆದ್ದರಿಂದ ಇದು ಯೋಗಾಸನವನ್ನು ಹೊಸದಾಗಿ ಪ್ರಾರಂಭಿಸಿದವರು ಅನುಸರಿಸಕೂಡದು. ಆದರೆ ನಿಧಾನವಾಗಿ ಬೇರೆ ಆಸನಗಳ ಮೂಲಕ ಹೊಟ್ಟೆಯ ಮತ್ತು ಮಣಿಕಟ್ಟಿನ ಸ್ನಾಯುಗಳು ಕೊಂಚ ದೃಢಗೊಂಡ ಬಳಿಕವೇ ಅನುಸರಿಸಬಹುದು. ಯೋಗ ಶಿಕ್ಷಕರು ಈ ಬಗ್ಗೆ ಸೂಕ್ತ ಸಲಹೆ ನೀಡಬಲ್ಲರು.

Mayurasana (Peacock Pose) To Strengthen Wrist & Forearms

ವಾಸ್ತವವಾಗಿ ಈ ಆಸನ ಅನುಸರಿಸಲು ದೈಹಿಕ ದಾರ್ಢ್ಯತೆಗೂ ಮೀರಿ ಸತತ ಅಭ್ಯಾಸದ ಅವಶ್ಯಕತೆ ಇದೆ. ಆದರೆ ಈ ಆಸನದಿಂದ ಲಭಿಸುವ ಲಾಭಗಳನ್ನು ಮಾತ್ರ ಅಳೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮಣಿಕಟ್ಟುಗಳಿಗೆ ಅತಿ ಕಡಿಮೆ ವ್ಯಾಯಾಮ ದೊರಕುತ್ತದೆ. ಈ ಆಸನದ ಮೂಲಕ ಮಣಿಕಟ್ಟು ಮತ್ತು ಮುಂಗೈಗಳಿಗೆ ಅತಿ ಹೆಚ್ಚಿನ ಫಲ ದೊರಕುತ್ತದೆ. ಹೊಟ್ಟೆಯ ಸ್ನಾಯುಗಳ ಮೇಲೆ ಬೀಳುವ ಒತ್ತಡದ ಕಾರಣ ಜೀರ್ಣಾಂಗಗಳ ಮೇಲೂ ಕೊಂಚ ಒತ್ತಡಬಿದ್ದು ವಿಷಕಾರಿ ವಸ್ತುಗಳನ್ನು ಹೊರಹಾಕಲು ಸುಲಭವಾಗುತ್ತದೆ.

ಯಕೃತ್ ಮತ್ತು ರಕ್ತಪರಿಚಲನಾ ವ್ಯವಸ್ಥೆಗೂ ಈ ಆಸನ ಉತ್ತಮವಾಗಿದೆ. ಬನ್ನಿ, ಮಯೂರಾಸನ ಅನುಸರಿಸುವ ಬಗೆ ಮತ್ತು ಇದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ: ಮಯೂರಾಸನವನ್ನು ಹಂತಹಂತವಾಗಿ ಅನುಸರಿಸುವ ಬಗೆ: ಕುತ್ತಿಗೆ, ಭುಜಗಳಲ್ಲಿ ನೋವೇ? ಮತ್ಸ್ಯಾಸನ ಅನುಸರಿಸಿ ಸಾಕು

ಹಂತ 1: ಈ ಆಸನವನ್ನು ಅನುಸರಿಸುವುದು ಅಷ್ಟು ಸುಲಭವಲ್ಲ. ಆದರೆ ಸುಲಭಗೊಳಿಸಲು ಚಿಕ್ಕ ತಂತ್ರವನ್ನು ಬಳಸಬಹುದು. ಇದಕ್ಕಾಗಿ ಎರಡು ಚಿಕ್ಕ ಇಟ್ಟಿಗೆಗಳನ್ನು ಬಳಸಿ. ಒಂದನ್ನು ಕಾಲಬುಡದಲ್ಲಿ ಹಾಗೂ ಇನ್ನೊಂದನ್ನು ಕುತ್ತಿಗೆಯ ಮೇಲ್ಭಾಗಕ್ಕೆ ಬರುವಂತೆ ಇರಿಸಿ.

ಹಂತ 2: ಮೊದಲು ಹೊಟ್ಟೆ ಕೆಳಗಿರುವಂತೆ ಮಲಗಿ ಎರಡೂ ಕೈಗಳು ಹೊಟ್ಟೆಯ ಬಳಿ ಇರುವಂತಿರಲಿ.

ಹಂತ 3: ನಿಧಾನವಾಗಿ ಕಾಲಬಳಿಯ ಇಟ್ಟಿಗೆಯ ಮೇಲೆ ಕಾಲಬೆರಳುಗಳನ್ನು ಇರಿಸಿ ಹಾಗೂ ಹಣೆಯನ್ನು ತಲೆಯ ಭಾಗದ ಇಟ್ಟಿಗೆಯ ಮೇಲೆ ಇರಿಸಿ. ಈ ಹಂತದಲ್ಲಿ ಇಡಿಯ ದೇಹ ನೆಟ್ಟಗಿರಬೇಕು. ಅದಕ್ಕೆ ತಕ್ಕಂತೆ ಇಟ್ಟಿಗೆಗಳ ಸ್ಥಾನವನ್ನು ಸರಿಪಡಿಸಿ. ಈಗ ಸೊಂಟವನ್ನು ಕೊಂಚವೇ ಮೇಲೆತ್ತಿ ಎರಡೂ ಕೈಗಳ ಮೊಣಕೈಭಾಗ ಹೊಟ್ಟೆಗೆ ಆನಿಸುವಂತೆ ಮಾಡಿ, ಹಸ್ತಗಳು ನೆಲದ ಮೇಲಿರಲಿ. ಕೈಬೆರಳುಬಳು ಹಿಂದಕ್ಕೆ ಚಾಚಿಕೊಳ್ಳಬೇಕು.

ಹಂತ 4: ಈಗ ನಿಧಾನವಾಗಿ ಉಸಿರನ್ನು ಮೇಲೆಳೆದುಕೊಳ್ಳುತ್ತಾ ಪೂರ್ಣ ಉಸಿರು ಒಳಗೆಳೆದುಕೊಂಡ ಬಳಿಕ ಉಸಿರುಗಟ್ಟಿ ಹೊಟ್ಟೆಯ ಸ್ನಾಯುಗಳನ್ನು ದೃಢಗೊಳಿಸಿ. ಪ್ರಾರಂಭದಲ್ಲಿ ಒಂದೇ ಉಸಿರಿಗೆ ಇದು ಸಾಧ್ಯವಾಗದಿದ್ದರೆ ಇನ್ನೂ ಒಂದೆರಡು ಬಾರಿ ಉಸಿರು ತೆಗೆದುಕೊಳ್ಳಿ.

ಹಂತ 5: ಈಗ ಹೊಟ್ಟೆಯ ಸ್ನಾಯುಗಳಿಗೆ ಗರಿಷ್ಟ ಸೆಳೆತ ನೀಡಿ ಕಾಲುಬೆರಳುಗಳನ್ನು ಮೇಲಕ್ಕೆತ್ತಿ.

ಹಂತ 6: ಬಳಿಕ ನಿಧಾನವಾಗಿ ಹಣೆಯನ್ನೂ ಮೇಲಕ್ಕೆತ್ತಿ ಇಡಿಯ ಶರೀರ ಒಂದು ಸರಳರೇಖೆಯಲ್ಲಿರುವಂತೆ ಮತ್ತು ನೆಲಕ್ಕೆ ಅಡ್ಡಲಾಗಿರುವಂತೆ ಹಾಗೂ ಭಾರವಿಡೀ ಕೈಗಳು ಮಾತ್ರ ಹೊರುವಂತೆ ಸಮತೋಲನದಲ್ಲಿರಿಸಿ. ತಲೆಯನ್ನು ಒಮ್ಮೆಲೇ ಸಮತೋಲದಲ್ಲಿರಿಸಲು ಸಾಧ್ಯವಾಗದಿದ್ದರೆ ಗಲ್ಲವನ್ನು ಇಟ್ಟಿಗೆಯ ಮೇಲಿರಿಸಿ ಯತ್ನಿಸಿ.

ಹಂತ 7: ನಿಮ್ಮ ಗಮನವನ್ನು ಹೊಟ್ಟೆಯ ಸ್ನಾಯುಗಳ ಮೇಲೆ ಕೇಂದ್ರೀಕರಿಸಿ, ಇದರ ಸೆಳೆತ ಕಡಿಮೆಯಾಗಲು ಬಿಡಬೇಡಿ. ಬಿಟ್ಟರೆ ಥಟ್ಟನೇ ಮೈಭಾರವೆಲ್ಲಾ ಹೊಟ್ಟೆಯ ಒಳಗಿನ ಸೂಕ್ಷ್ಮ ಅಂಗಗಳ ಮೇಲೆ ಬಿದ್ದು ಅಪಾಯವಾಗಬಹುದು. ಆದ್ದರಿಂದ ಹೊಟ್ಟೆಯ ಸ್ನಾಯುಗಳು ದೇಹದ ಬಲ ಹೊರುವಷ್ಟು ದೃಢಗೊಳ್ಳುವುದು ಅಗತ್ಯ.

ಹಂತ 8: ಈ ಹಂತದಲ್ಲಿ ಸಾಧ್ಯವಾದಷ್ಟು ಹೊತ್ತು ಹಾಗೇ ಇರಲು ಯತ್ನಿಸಿ. ಉಸಿರು ಕಟ್ಟಿದರೆ ನಿಧಾನವಾಗಿ ಇನ್ನೊಮ್ಮೆ ಎಳೆದುಕೊಳ್ಳಿ.

ಹಂತ 9: ಕಾಲುಗಳು ಒಂದಕ್ಕೊಂದು ತಾಗಿರಬೇಕೇ ವಿನಃ ಕತ್ತರಿಯಾಗಿಸಬೇಡಿ. ಪ್ರಾರಂಭದಲ್ಲಿ ಈ ಆಸನಕ್ಕೆ ಇಟ್ಟಿಗೆಗಳನ್ನು ಬಳಸುವುದು ಈ ಆಸನ ಅನುಸರಿಸುವುದು ಸುಲಭವಾಗಲಿಕ್ಕೇ ಹೊರತು ಇದನ್ನೇ ಅಭ್ಯಾಸವಾಗಿಸಬೇಡಿ. ಕ್ರಮೇಣ ಇಟ್ಟಿಗೆಗಳಲ್ಲದೆಯೂ ಈ ಆಸನವನ್ನು ಅನುಸರಿಸಲು ಸುಲಭಸಾಧ್ಯವಾಗುತ್ತದೆ. ಹೊಟ್ಟೆಯ ಬೊಜ್ಜು ಕರಗಿಸಲು ಪರಿಪೂರ್ಣ 'ನಾವಾಸನ'

ಮಯೂರಾಸನದ ಪ್ರಯೋಜನಗಳು
* ಇದೊಂದು ಪರಿಪೂರ್ಣ ಆಸನವಾಗಿದೆ, ಅಂದರೆ ದೇಹದ ಎಲ್ಲಾ ಅಂಗ ಮತ್ತು ಸ್ನಾಯುಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆಯುತ್ತವೆ.
* ವಿಶೇಷವಾಗಿ ಯಕೃತ್, ಪಿತ್ತಕೋಶ, ಮೇದೋಜೀರಕ ಗ್ರಂಥಿ ಮತ್ತು ಮೂತ್ರಪಿಂಡಗಳ ತೊಂದರೆಗಳಿಂದ ರಕ್ಷಿಸುತ್ತದೆ.
* ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.
* ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.
* ದೇಹಕ್ಕೆ ಹೆಚ್ಚಿನ ಚೈತನ್ಯ ನೀಡುವ ಜೊತೆಗೇ ಮಾನಸಿಕವಾಗಿ ಏಕಾಗ್ರತೆ ಸಾಧಿಸಲು ನೆರವಾಗುತ್ತದೆ.

ಎಚ್ಚರಿಕೆ:
ಸಾಮಾನ್ಯವಾಗಿ ಸ್ಥೂಲದೇಹಿಗಳ ಹೊಟ್ಟೆಯ ಸ್ನಾಯುಗಳು ಅಗಲವಾಗಿ ಹರಡಿಕೊಂಡಿದ್ದು ಅಪಾರ ಪ್ರಮಾಣದ ಕೊಬ್ಬು ಹೊಟ್ಟೆಯಭಾಗದಲ್ಲಿ ಸಂಗ್ರಹವಾಗಿರುವ ಕಾರಣ ಹಾಗೂ ಹೆಚ್ಚಿನ ದೇಹದ ತೂಕ ಈ ಆಸನ ಅನುಸರಿಸಲು ಅಸಾಧ್ಯವಾಗಿಸಬಹುದು. ಆದ್ದರಿಂದ ಹೊಟ್ಟೆಯ ಕೊಬ್ಬು ಕರಗುವವರೆಗೆ ಈ ಆಸನ ಬೇಡ. ಗರ್ಭಿಣಿಯರಿಗೆ ಈ ಆಸನ ಸರ್ವಥಾ ತರವಲ್ಲ.
ಸಂಧಿವಾತ, ಮಣಿಕಟ್ಟಿನ ಮೂಳೆಯ ತೊಂದರೆ ಅಥವಾ ಗಾಯವಾಗಿದ್ದರೆ ಈ ಆಸನ ಅನುಸರಿಸಬಾರದು. ಇನ್ನುಳಿದಂತೆ ಎಲ್ಲರೂ ಈ ಆಸನವನ್ನು ಅನುಸರಿಸಲು ಖಂಡಿತಾ ಯತ್ನಿಸಬೇಕು. ಲವಲವಿಕೆಯ ಜೀವನ ಶೈಲಿಗೆ- ದಿನನಿತ್ಯ ಮಾಡಿ ಹಾಲಾಸನ

English summary

Mayurasana (Peacock Pose) To Strengthen Wrist & Forearms

Mayurasana, also known the peacock pose, is related to being close spiritually. Also, practicing the pose helps in toning your arms, wrist, hands and abdominal muscles and increases your vitality. This is one of the most challenging poses in yoga, so you must not think of giving it an immediate start. Take your time and slowly try to perform this asana; however, we would advice to consult a yoga expert before attempting to perform the asana. It requires great perseverance to start with this pose.
X
Desktop Bottom Promotion